ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಅಮೆರಿಕ ಮೂಲದ ಜೀಪ್ ಕಂಪನಿಯ ಸರಣಿಯಲ್ಲಿ ಕಂಪಾಸ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟದಲ್ಲಿರುವ ಮಾದರಿಯಾಗಿದೆ. ಇದೀಗ ಈ ಜೀಪ್ ಕಂಪಾಸ್ ಎಸ್‍ಯುವಿಯ 7-ಸೀಟರ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯು ವಿದೇಶಿ ರಸ್ತೆಗಳಲ್ಲಿ ರೋಡ್ ಟೆಸ್ಟ್ ಅನ್ನು ಮಾಡಿದ್ದಾರೆ. ಇನ್ನು ಈ ಹೊಸ ಎಸ್‍ಯುವಿ ಮುಂಬರುವ ತಿಂಗಳುಗಳಲ್ಲಿ ಅಧಿಕೃತವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗಲಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಜೀಪ್ ಗ್ರ್ಯಾಂಡ್ 7-ಸೀಟರ್ ಎಸ್‍ಯುವಿ ಈ ವರ್ಷದ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಭಾರತವು ಜೀಪ್‌ಗೆ ಪ್ರಮುಖ ಮಾರುಕಟ್ಟೆಯಾಗಿದೆ.

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಆದರೆ ಭಾರತದಲ್ಲಿ ಜೀಪ್ ಸರಣಿಯಲ್ಲಿ ವೈವಿಧ್ಯತೆಯ ಕೊರತೆ ಮತ್ತು ಕಂಪಾಸ್ ಎಸ್‌ಯುವಿಗೆ ನವೀಕರಣಗಳ ಕೊರತೆಯಿಂದಾಗಿ, ಭಾರತೀಯ ಗ್ರಾಹಕರು ಬ್ರ್ಯಾಂಡ್‌ನಲ್ಲಿ ಆಸಕ್ತಿಯನ್ನು ಸ್ಥಿರವಾಗಿ ಕಳೆದುಕೊಳ್ಳುತ್ತಿದ್ದಾರೆ. 2020ರ ವರ್ಷದ ಮಾರಾಟವನ್ನು ಅದರ ಹಿಂದಿನ 2019ರ ವರ್ಷಕ್ಕೆ ಹೋಲಿಸಿದರೆ ಶೇ.52 ರಷ್ಟು ಕುಸಿತವನ್ನು ಕಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಇನ್ನು ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಕಂಪಾಸ್ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಮಾದರಿಯು ಮಾರಾಟದಲ್ಲಿ ಜೀಪ್ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡಬಹುದು.

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ವರದಿಗಳ ಪ್ರಕಾರ, ಜೀಪ್ ಗ್ರ್ಯಾಂಡ್ 7-ಸೀಟರ್ ಎಸ್‍ಯುವಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಂಪಾಸ್ ಫೇಸ್‌ಲಿಫ್ಟ್‌ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ. ಹೊಸ ಎಸ್‍ಯುವಿಯಲ್ಲಿ ಎಸಿ ವೆಂಟ್ಸ್, ಸ್ಪೀಕರ್‌ಗಳು, ಡೋರ್ ಹ್ಯಾಂಡಲ್ಸ್ ಫ್ರೇಮ್ ಮತ್ತು ಇತರ ಭಾಗಗಳ ಸುತ್ತಲೂ ಕ್ರೋಮ್ ಔಟ್ ಲೈನ್ ಅನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಇನ್ನು ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯಲ್ಲಿ ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯಲಿದ್ದು, ಇದು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುತ್ತದೆ.

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಇನ್ನು 7-ಸೀಟರ್ ಎಸ್‍ಯುವಿಯಲ್ಲಿ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಕ್ರೂಸ್ ಕಂಟ್ರೋಲ್, ಫುಲ್ ಎಲ್ಇಡಿ ಆಟೋ ಹೆಡ್‌ಲ್ಯಾಂಪ್‌ಗಳು, ಅಪ್‌ಡೇಟೆಡ್ ಯುಕನೆಕ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಕಾರ್ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಇತರ ಉನ್ನತ ಫೀಚರ್ ಗಳನ್ನು ಹೊಂದಿರಲಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಹೊಸ ಜೀಪ್ ಗ್ರ್ಯಾಂಡ್ 7-ಸೀಟರ್ ಎಸ್‍ಯುವಿಯಲ್ಲಿ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 173 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಫಾರ್ಚೂನರ್ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಂಪಾಸ್ 7-ಸೀಟರ್ ಎಸ್‍ಯುವಿ

ಇದರೊಂದಿಗೆ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಕೂಡ ಪಡೆಯುವ ಸಾಧ್ಯತೆಯಿದೆ. ಇದು 200 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುವುದು.

Most Read Articles

Kannada
Read more on ಜೀಪ್ jeep
English summary
Jeep Grand Compass (7-Seater) Launching In Mid-2021. Read In Kannada.
Story first published: Friday, January 29, 2021, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X