ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಜೀಪ್ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ಮೇಡ್ ಇನ್ ಇಂಡಿಯಾ ನಿರ್ಮಾಣದ ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಗಾಗಿ ಹಲವಾರು ಪ್ರೀಮಿಯಂ ಆಕ್ಸೆಸರಿಸ್ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಅನ್‌ಲಿಮಿಟೆಡ್ ಮತ್ತು ರೂಬಿಕಾನ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಪಡೆದುಕೊಂಡಿರುವ 2021ರ ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾದರಿಗಾಗಿ ಜೀಪ್ ಕಂಪನಿಯೇ ಹೆಚ್ಚುವರಿ ಫೀಚರ್ಸ್ ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಆಸಕ್ತ ಗ್ರಾಹಕರು ಹೊಸ ಕಾರು ಮಾದರಿಗಾಗಿ ಎಸೆನ್ಷಿಯಲ್ಸ್, ಎಕ್ಸ್‌ಪ್ಲೋರರ್, ನೈಟ್ ಅಲ್ಟ್ರಾ ವಿಷನ್ ಮತ್ತು ಸ್ಪೋರ್ಟ್ಸ್ ಆಕ್ಸೆಸರಿಸ್ ಪ್ಯಾಕೇಜ್‌ಗಳನ್ನು ಬಿಡುಗಡೆ ಮಡಲಾಗಿದ್ದು, ವಿವಿಧ ಪ್ಯಾಕೇಜ್‌ನಲ್ಲಿ ಆಕ್ಸಸರಿಸ್‌ಗಳಿಗೆ ಅನುಗುಣವಾಗಿ ಬೆಲೆ ನಿರ್ಧಾರವಾಗುತ್ತದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಒಟ್ಟು 120 ಬಿಡಿಭಾಗಗಳನ್ನು ಜೋಡಿಸಲಿದ್ದು, ಹೈ ಎಂಡ್ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಹೆಚ್ಚಿನ ಮಟ್ಟದ ಬಿಡಿಭಾಗಗಳು ದೊರೆಯಲಿದ್ದರೆ ಬೆಸ್ ಪ್ಯಾಕೇಜ್‌ನಲ್ಲಿ ಅವಶ್ಯಕವಾಗಿರುವ ಕೆಲವೇ ಬಿಡಿಭಾಗಗಳು ಲಭ್ಯವಿರಲಿವೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಹೊಸ ಕಾರಿನಲ್ಲಿ ಫ್ರಂಟ್ ಗ್ರ್ಯಾಬ್ ಹ್ಯಾಂಡಲ್, ಹಿಂಭಾಗದ ಬಾಗಿಲು, ಮುಂಭಾಗದ ಮತ್ತು ಹಿಂಭಾಗದ ಸ್ಪ್ಲಾಶ್ ಗಾರ್ಡ್, ಮ್ಯಾಟ್ ಬ್ಲ್ಯಾಕ್ ಫ್ರಂಟ್ ಗ್ರಿಲ್, ಸೈಡ್ ವಿಂಡೋ ಏರ್ ಡಿಫ್ಲೆಕ್ಟರ್, ಫ್ರಂಟ್ ಏರ್ ಡಿಫ್ಲೆಕ್ಟರ್, ಹಿಂಭಾಗದಲ್ಲಿ ಮತ್ತು ಎರಡುಬದಿಯಲ್ಲಿ ಕ್ರೋಮ್ ಸೈಡ್ ಸ್ಟೆಪ್, ವಿಂಡ್‌ಶೀಲ್ಡ್ ಟೈ ಡೌನ್ ಸ್ಟ್ರಾಪ್, ರೂಫ್ ರಾಕ್ ಮತ್ತು ಫ್ರಂಟ್ ಸ್ಕಿಡ್ ಪ್ಲೇಟ್ ಜೋಡಣೆ ಮಾಡಲಾಗಿದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಇದರೊಂದಿಗೆ ಗ್ರಾಹಕರು ಹೆಚ್ಚುವರಿಯಾಗಿ ಐದು ಅಥವಾ ಏಳು ಇಂಚುಗಳಷ್ಟು ಲೈಟ್‍ಗಳನ್ನು ಬಾನೆಟ್‌ ಬದಿಯಲ್ಲಿ ಅಥವಾ ಮುಂಭಾಗದ ಬಾನೆಟ್‌ನಲ್ಲಿ ಸ್ಥಾಪಿಸಬಹುದ್ದು, ಆಕರ್ಷಕ ಸ್ಪೇರ್ ವೀಲ್ ಕವರ್ ಮತ್ತು ಜೀಪ್ ಬ್ಯಾಡ್ಜ್‌ಗಳನ್ನು ಸಹ ಪಡೆದುಕೊಳ್ಳಬಹುದು.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಕಾರಿನ ಒಳಭಾಗದಲ್ಲಿ ಎಲ್ಲಾ ಹವಾಮಾನಗಳಿಗೂ ಸೂಕ್ತವಾದ ಮ್ಯಾಟ್ಸ್, ಕಾರ್ಪೆಟ್ ಫ್ಲೋರ್ ಮ್ಯಾಟ್ಸ್ ಮತ್ತು ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಡಿಸ್ಪ್ಲೇಗೆ ಸ್ಕ್ರೀನ್ ಪ್ರೊಟೆಕ್ಟರ್, ಪ್ರಯಾಣದಲ್ಲಿ ಆಸಕ್ತಿ ಹೊಂದಿರುವವರಿಗೆ ಕ್ಯಾರಿಯರ್ ಕಿಟ್, ಕಾರ್ಗೋ ನೆಟ್, ಟೈಲ್‌ಗೇಟ್ ಟೇಬಲ್, ಲ್ಯಾಪ್‌ಟಾಪ್ / ಟ್ಯಾಬ್ಲೆಟ್ ಹೋಲ್ಡರ್ ಒದಗಿಸಲಾಗಿದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಹಾಗೆಯೇ ನೆಕ್ ರೆಸ್ಟ್, ಕಾರ್ ಪರ್ಫ್ಯೂಮ್, ಟಿಶ್ಯೂ ಬಾಕ್ಸ್‌ಗಳನ್ನು ನೀಡಲಾಗಿದ್ದು, ಆಕ್ಸೆಸರಿಸ್ ಬಿಡಿಭಾಗಗಳು ವಿವಿಧ ಪ್ಯಾಕೇಜ್‌ಗಳಿಗೆ ಅನುಗುಣವಾಗಿ ಒದಗಿಸಲಾಗುತ್ತದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಇನ್ನು ಆಫ್ ರೋಡ್ ಕೌಶಲ್ಯತೆಗಾಗಿ ಹೊಸ ಕಾರು ಮಾದರಿಯಲ್ಲಿ ವೆರಿಯೆಂಟ್ ಅನುಗುಣವಾಗಿ ಸೆಲೆಕ್ಟ್ ಟ್ರಾಕ್ ಮತ್ತು ರಾಕ್ ಟ್ರಾಕ್ ಎನ್ನುವ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಟೆಕ್ನಾಲಜಿಯನ್ನು ನೀಡಲಾಗಿದ್ದು, ಪರ್ಫಾಮೆನ್ಸ್ ಸಸ್ಷೆಷನ್‌ಗಳು ಕಠಿಣ ಭೂಪ್ರದೇಶಗಳಲ್ಲೂ ಕಾರನ್ನು ಸರಾಗವಾಗಿ ನುಗ್ಗಲು ಸಹಕಾರಿಯಾಗಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ದೇಶಿಯ ಮಾರುಕಟ್ಟೆಯಲ್ಲಿ ಅಭಿವೃದ್ದಿಗೊಂಡಿರುವ 2021ರ ರ‍್ಯಾಂಗ್ಲರ್ ಎಸ್‌ಯುವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 53.90 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 57.9 ಲಕ್ಷ ಬೆಲೆ ಹೊಂದಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಅಡಿ ನಿರ್ಮಾಣವಾಗಿರುವ ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ರೂ. 10 ಲಕ್ಷದಿಂದ ರೂ. 11 ಲಕ್ಷದಷ್ಟು ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಹೊಸ ಕಾರಿನಲ್ಲಿ ಜೀಪ್ ಕಂಪನಿಯು 2.0-ಲೀಟರ್, ಫೋರ್ ಸಿಲಿಂಡರ್ ಪ್ರೇರಣೆಯ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 268-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ರ‍್ಯಾಂಗ್ಲರ್ ಎಸ್‌ಯುವಿ ಕಾರು ಮಾದರಿಗಾಗಿ ಆಕ್ಸೆಸರಿಸ್ ಬಿಡುಗಡೆ ಮಾಡಿದ ಜೀಪ್ ಇಂಡಿಯಾ

ಟಾಪ್ ಎಂಡ್ ಆವೃತ್ತಿಯಾದ ರೂಬಿಕಾನ್ ಆವೃತ್ತಿಯು ಬೆಸ್ ಮಾದರಿಗಿಂತಲೂ ಇನ್ನು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಕಾರು ಚಾಲನೆಯನ್ನು ಸುಲಭಗೊಳಿಸಲಿದ್ದು,ಹೊಸ ಕಾರು ಇತ್ತೀಚೆಗೆ ಬಿಡುಗಡೆಯಾಗಿರುವ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಮಾದರಿಗೆ ಉತ್ತಮ ಪೈಪೋಟಿ ನೀಡಲು ಸಿದ್ದವಾಗಿದೆ.

Most Read Articles

Kannada
Read more on ಜೀಪ್ jeep
English summary
2021 Jeep Wrangler Accessories Details Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X