ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಮಹೀಂದ್ರಾ ಕಂಪನಿಯು ಪ್ರದರ್ಶಿಸಲಾಗಿತ್ತು.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಕಾಣುತ್ತಿದೆ. ದರಗಳು ಏರುವ ಮೂಲಕ ಪ್ರತಿನಿತ್ಯ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಹೊಸ ದರದ ದಾಖಲೆ ಸೃಷ್ಟಿಯಾಗುತ್ತಿದೆ. ಇದರಿಂದ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ, ಇದರಿಂದ ಮಹಿಂದ್ರಾ ಕಂಪನಿಯು ಕೂಡ ಹೊಸ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಮಹೀಂದ್ರಾ ಎಕ್ಸ್‌ಯುವಿ300 ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಮಹೀಂದ್ರಾ ಕಂಪನಿಯು ಈ ಹೊಸ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು. ವರದಿಗಳ ಪ್ರಕಾರ ಹೊಸ ಮಹೀಂದ್ರಾ ಎಕ್ಸ್‌ಯುವಿ 300 ಎಲೆಕ್ಟ್ರಿಕ್ ಎಸ್‍ಯುವಿಯು ಸಿಂಗಲ್ ಚಾರ್ಜ್‌ನಲ್ಲಿ 375 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಈ ಎಲೆಕ್ಟ್ರಿಕ್ ಎಸ್‍ಯುವಿಯು ಎರಡು ರೂಪಾಂತರಗಳಲ್ಲಿ ಬರಲಿದ್ದು, ಸ್ಟ್ಯಾಂಡರ್ಡ್ ರೂಪಾಂತರವು ಸುಮಾರು 200 ಕಿ.ಮೀ ಮೈಲೇಜ್ ನೀಡಿದರೆ, ಲಂಗ್ ರೇಂಜ್ ರೂಪಾಂತರವು 375 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯು ತನ್ನ ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್ ಇವಿಗಿಂತ ಉತ್ತಮವಾಗಿದೆ. ಟಾಟಾ ನೆಕ್ಸಾನ್ ಇವಿ ಮಾದರಿಯು ಸಿಂಗಲ್ ಚಾರ್ಜ್‌ನಲ್ಲಿ 312 ಕಿಲೋಮೀಟರ್ ಚಲಿಸುತ್ತದೆ.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಅಧಿಕೃತ ಅಂಕಿಅಂಶಗಳಿಗಾಗಿ ಮಹೀಂದ್ರಾ ಇಎಕ್ಸ್‌ಯುವಿ 300 ಅನ್ನು ಎಆರ್‌ಎಐ ಪರೀಕ್ಷೆಯನ್ನು ನಡೆಸಬೇಕು. ಎಕ್ಸ್‌ಯುವಿ 300 ಎಲೆಕ್ಟ್ರಿಕ್ ಅನ್ನು ಮೆಸ್ಮಾ 350 (ಮಹೀಂದ್ರಾ ಎಲೆಕ್ಟ್ರಿಕ್ ಸ್ಕೇಲೆಬಲ್ ಮತ್ತು ಮಾಡ್ಯುಲರ್ ಆರ್ಕಿಟೆಕ್ಚರ್ 350)ನಲ್ಲಿ ನಿರ್ಮಿಸಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 50-ವೋಲ್ಟ್ ಪವರ್‌ಟ್ರೇನ್ 60 ಕಿ.ವ್ಯಾಟ್‌ನಿಂದ 280 ಕಿ.ವ್ಯಾಟ್ ಉತ್ಪಾಸುತ್ತದೆ. ಡ್ಯುಯಲ್ ಮೋಟಾರ್ ಸೆಟಪ್ ಮತ್ತು 80 ಕಿ.ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಮಹೀಂದ್ರಾ ಎಲೆಕ್ಟ್ರಿಕ್ ಕಾರಿನ ಕಾರ್ಯಕ್ಷಮತೆ ಆಧಾರಿತ ರೂಪಾಂತರವನ್ನು ಸಹ ಪರಿಚಯಿಸಬಹುದು.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯು ವಿಶಿಷ್ಟವಾದ ಹೆಡ್‍‍ಲ್ಯಾಂಪ್‍ ಮತ್ತು ಮುಂಭಾಗದಲ್ಲಿ ಗ್ರಿಲ್ ಅನ್ನು ಅಳವಡಿಸಲಾಗಿದೆ. ಮುಂಭಾಗದ ಹೆಡ್‍‍ಲ್ಯಾಂಪ್‍ಗಳ ಮೇಲೆ ನೀಲಿ ಎಕ್ಸೆಟ್ ಗಳು ಸುತ್ತುವರೆದಿದೆ. ಮುಂಭಾಗದಲ್ಲಿ ಲಿಪ್ ಸ್ಪಾಯ್ಲರ್‍‍ಗಳನ್ನು ಅಳವಡಿಸಲಾಗಿದೆ. ಹಿಂಭಾಗವು ಸಮಾನ್ಯ ಎಸ್‍ಯುವಿ ಮಾದರಿಯಂತಿದೆ. ಆದರೆ ಎಲ್ಇಡಿ ಟೇಲ್ ಲ್ಯಾಂಪ್ ಮಾತ್ರ ವಿಭಿನ್ನವಾಗಿದೆ.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಇಕೆ‍‍ಯುವಿ 100ನಂತೆ ಈ ಎಸ್‍ಯುವಿಯು ನೀಲಿ ಎಕ್ಸೆಟ್ ಗಳನ್ನು ಹೊಂದಿದೆ. ಇನ್ನು ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್, ಲಿಪ್ ಸ್ಪಾಯ್ಲರ್ ಮತ್ತು ಟೇಲ್ ಲ್ಯಾಂಪ್‍ಗೆ ಬ್ಲ್ಯಾಕ್ ಬಣ್ಣದ ಅಂಶಗಳು ಆಕರ್ಷಕವಾಗಿದೆ. ಇನ್ನೂ ಡ್ಯಾಶ್‍ ಬೋರ್ಡ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಎಸಿ ವೆಂಟ್ಸ್ ಗಳಿವೆ.

ಬಿಡುಗಡೆಯಾಗಲಿದೆ 375 ಕಿ.ಮೀ ಮೈಲೇಜ್ ನೀಡುವ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿ

ಸಾಮಾನ್ಯ ಮಹೀಂದ್ರಾ ಎಕ್ಸ್‌ಯುವಿ300ಗೆ ಹೋಲಿಸದರೆ ಎಲೆಕ್ಟ್ರಿಕ್ ಮಾದರಿಯ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ. ಮಹೀಂದ್ರಾ ಇಎಕ್ಸ್‌ಯುವಿ300 ಎಲೆಕ್ಟ್ರಿಕ್ ಎಸ್‍ಯುವಿಯು ಬಿಡುಗಡೆಯಾದ ಬಳಿಕೆ ಟಾಟಾ ನೆಕ್ಸಾನ್ ಇವಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Mahindra XUV300 Electric To Offer 375km Range On Single Charge. Read In Kananda.
Story first published: Friday, February 26, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X