ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಕಳೆದ ವರ್ಷದಿಂದ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಕಾರುಗಳು ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಸ್ವದೇಶಿ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಸರಣಿಯಲ್ಲಿ ಹಲವಾರು ಹ್ಯಾಚ್‌ಬ್ಯಾಕ್ ಮತ್ತು ಎಸ್‍ಯುವಿಗಳು ಸೇರಿಂತೆ ಮಾದರಿಗಳನ್ನು ಒಳಗೊಂಡಿವೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಟಾಟಾ ಕಾರುಗಳು ಸುರಕ್ಷತೆ ಮತ್ತು ಗುಣಮಟ್ಟ(ಬಿಲ್ಡ್ ಕ್ವಾಲಿಟಿ) ಗಳಿಗೆ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇನ್ನು ಕೆಲವು ವಾರಗಳ ಹಿಂದೆ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಅವರು ಕೆಲವು ಟಾಟಾ ಕಾರುಗಳಲ್ಲಿ ಫಾಕ್ಟರಿ ಪಿಟಡ್ ಸಿಎನ್‌ಜಿ ಕಿಟ್‌ಗಳೊಂದಿಗೆ ಪರಿಚಯಿಸಲಿದೆ ಎಂದು ಹೇಳಿದರು. ಈ ಮಾದರಿಗಳು 2022ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಕುತೂಹಲಕಾರಿ ಅಂದರೆ ಟಾಟಾದ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಂಪನಿಗಳು ತಮ್ಮ ಜನಪ್ರಿಯ ಮಾದರಿಗಳಲ್ಲಿ ಫಾಕ್ಟರಿ ಪಿಟಡ್ ಸಿಎನ್‌ಜಿ ಕಿಟ್‌ಗಳೊಂದಿಗ್ ಬಿಡುಗಡೆಗೊಳಿಸಲಾಗುತ್ತದೆ. ಇದರಿಂದ ಜನಪ್ರಿಯ ಕಾರುಗಳ ನಡುವೆ ಹೆಚ್ಚಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಇನ್ನು ಟಾಟಾದ ಸಿಎನ್‌ಜಿ ಕಾರುಗಳ ವಿಭಾಗದಲ್ಲಿ ಯಾವ ಮಾದರಿಗೆ ಫಾಕ್ಟರಿ ಪಿಟಡ್ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸುತ್ತಾರೆ ಎಂಬುದು ಮಾಹಿತಿ ಇಲ್ಲ. ಆದರೆ ಟಾಟಾದ ಎಂಟ್ರಿ ಲೆವೆಲ್ ಮಾದರಿಗಳಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮತ್ತು ಟಿಗೋರ್ ಸಬ್-ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಇತ್ತೀಚೆಗೆ ಟಾಟಾ ಟಿಯಾಗೋ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇದರಿಂದ ಶೀಘ್ರದಲ್ಲೇ ಟಾಟಾ ಟಿಯಾಗೋ ಕಾರು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಟಿಯಾಗೊದ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಹ್ಯುಂಡೈ ಸ್ಯಾಂಟ್ರೊಗಳನ್ನು ಈಗಾಗಲೇ ಸಿಎನ್‌ಜಿ ಕಿಟ್‌ಗಳೊಂದಿಗೆ ನೀಡಲಾಗಿದೆ ಎಂಬುದನ್ನು ಗಮನಿಸಬೇಕು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಟಾಟಾ ಟಿಯಾಗೋ ಸಿಎನ್‌ಜಿಗೆ 12 ಕೆಜಿ ಅಥವಾ 60-ಲೀಟರ್ ಸಿಎನ್‌ಜಿ ಟ್ಯಾಂಕ್ ಅಳವಡಿಸಲಾಗಿದ್ದು, ಅದನ್ನು ಬೂಟ್‌ನಲ್ಲಿ ಇರಿಸಲಾಗುತ್ತದೆ. ಟಿಯಾಗೋ ಸಿಎನ್‌ಜಿ ಪ್ರತಿ ಕೆಜಿ ಸಿಎನ್‌ಜಿಗೆ 30-35 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಬೂಟ್ ನಲ್ಲಿ ಸಿಎನ್‌ಜಿ ಟ್ಯಾಂಕ್ ಅಳವಡಿಸುವುದರಿಂದ ಬೂಟ್ ನಲ್ಲಿ ಇತರ ವಸ್ತುಗಳನ್ನು ಇರಿಸಲು ಸ್ಪೇಸ್ ಇರುವುದಿಲ್ಲ. ಆದರೆ ಇತ್ತೀಚೆಗೆ ದಿನದಿಂದ ದಿನಕ್ಕೆ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಇಂತಹ ಹೆಚ್ಚಿನ ಮೈಲೇಜ್ ನೀಡುವ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೆಚ್ಚು ಮೈಲೇಜ್ ಅನ್ನು ನೀಡುವುದರಿಂದ ಹೆಚ್ಚಾಗಿ ನಗರ ಪ್ರದೇಶದ ಜನರನ್ನು ಆಕರ್ಷಿಸುತ್ತದೆ. ಮುಂಭಾರುವ ಫಾಕ್ಟರಿ ಫಿಟೆಡ್ ಸಿಎನ್‌ಜಿ ಮಾದರಿಗಳು ಟಾಟಾದ 1.2 ಎಲ್, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರಲಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ ಅಧಿಕ ಮೈಲೇಜ್ ನೀಡುವ ಟಾಟಾ ಟಿಯಾಗೋ ಸಿಎನ್‌ಜಿ ಕಾರು

ಈ ಎಂಜಿನ್ 86 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿರುವ ಟಿಯಾಗೋ ಮಿಡ್-ಸ್ಪೆಕ್ ಎಕ್ಸ್‌ಟಿ ರೂಪಾಂತರವಾಗಿದೆ. ಮಾರುತಿ ಮತ್ತು ಹ್ಯುಂಡೈಗಿಂತ ಭಿನ್ನವಾಗಿ, ಟಾಟಾ ಮೋಟಾರ್ಸ್ ಸಿಎನ್‌ಜಿ ಕಿಟ್ ಅನ್ನು ಟಾಪ್-ಸ್ಪೆಕ್ ಎಕ್ಸ್‌ ಝಡ್ ರೂಪಾಂತರದಲ್ಲಿ ನೀಡುವ ನಿರೀಕ್ಷೆಯಿದೆ.

Most Read Articles

Kannada
English summary
Tata Tiago Cng Spied Testing. Read In Kannada.
Story first published: Saturday, May 8, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X