ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಭಾರತದಲ್ಲಿ 2020ರ ಡಿಸೆಂಬರ್‌ ತಿಂಗಳಿನಲ್ಲಿ ರೂ.2,303.79 ಕೋಟಿ ಟೋಲ್‌ಗೇಟ್ ಶುಲ್ಕವನ್ನು ಸಂಗ್ರಹಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹವಾಗಿರುವುದು ಫಾಸ್ಟ್‌ಟ್ಯಾಗ್ ಮೂಲಕ ಎಂಬುದು ವಿಶೇಷ.

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

2020ರ ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣವು ಸುಮಾರು ರೂ.201 ಕೋಟಿಗಳಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನವರಿ 5ರಂದು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಅಂಕಿ ಅಂಶಗಳು ಬಹಿರಂಗವಾಗಿವೆ.

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಭಾರತದಲ್ಲಿ 2021ರ ಜನವರಿ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಟೋಲ್ ಶುಲ್ಕ ಪಾವತಿಸಲು ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಈ ಹಿಂದೆಯೇ ತಿಳಿಸಲಾಗಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಈ ಕಾರಣಕ್ಕೆ ಬಹುತೇಕ ಜನರು ನಗದು ಪಾವತಿಗೆ ಬದಲು ಫಾಸ್ಟ್‌ಟ್ಯಾಗ್ ಪಾವತಿಗೆ ಮೊರೆ ಹೋಗಿದ್ದಾರೆ. ಇದರಿಂದಾಗಿ ಫಾಸ್ಟ್‌ಟ್ಯಾಗ್ ಮೂಲಕ ಸಂಗ್ರಹವಾಗುತ್ತಿರುವ ಆದಾಯವು ಏರಿಕೆಯಾಗಿದೆ. ಈ ಹಿಂದೆ ಎಲ್ಲಾ ವಾಹನಗಳು ಜನವರಿ 1ರಿಂದ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳಬೇಕೆಂದು ಸೂಚಿಸಲಾಗಿತ್ತು.

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಆದರೆ ಇನ್ನೂ ಅನೇಕ ಜನರು ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳದ ಕಾರಣ ಈ ಗಡುವನ್ನು ವಿಸ್ತರಿಸಲಾಗಿದೆ. ಈಗ ಫೆಬ್ರವರಿ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಟೋಲ್‌ಗೇಟ್‌ಗಳಲ್ಲಿ ನಗದು ಮೂಲಕವೇ ಟೋಲ್ ಶುಲ್ಕವನ್ನು ಪಾವತಿಸಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಇದಾದ ನಂತರ ಮತ್ತೆ ಗಡುವನ್ನು ವಿಸ್ತರಿಸುವ ಸಾಧ್ಯತೆಗಲಿಲ್ಲ. ಆದ್ದರಿಂದ ಫೆಬ್ರವರಿ 15ಕ್ಕೂ ಮೊದಲು ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಒಳ್ಳೆಯದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಪ್ರತಿ ತಿಂಗಳು ಫಾಸ್ಟ್‌ಟ್ಯಾಗ್ ನಿಂದ ಬರುವ ಆದಾಯದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ನಿನ್ನೆ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ 2020ರ ನವೆಂಬರ್ ತಿಂಗಳಿಗಿಂತ ಡಿಸೆಂಬರ್ ತಿಂಗಳಿನಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ರೂ.201 ಕೋಟಿ ಹೆಚ್ಚು ಟೋಲ್ ಶುಲ್ಕವನ್ನು ಸಂಗ್ರಹಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ಸಂಗ್ರಹವು ಹೆಚ್ಚುತ್ತಿರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಉತ್ತೇಜನವನ್ನು ನೀಡಿದಂತಾಗಿದೆ. ಈ ಅಂಕಿ ಅಂಶವು ಭಾರತದಲ್ಲಿ ಹೆಚ್ಚುತ್ತಿರುವ ಫಾಸ್ಟ್‌ಟ್ಯಾಗ್ ಬಳಕೆಯನ್ನು ತೋರಿಸುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಶುಲ್ಕ ಪಾವತಿಸುವುದರಿಂದ ಟೋಲ್‌ಗೇಟ್‌ಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವುದು ತಪ್ಪುತ್ತದೆ. ನಗದು ಮೂಲಕ ಪಾವತಿಸುವಾಗ ಹೆಚ್ಚು ಸಮಯ ಕಾಯಬೇಕಾಗುವುದರಿಂದ ಟೋಲ್‌ಗೇಟ್‌ಗಳಲ್ಲಿ ಸಂಚಾರ ದಟ್ಟಣೆ ಅನಿವಾರ್ಯವಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಈ ಕಾರಣಕ್ಕಾಗಿಯೇ ಫಾಸ್ಟ್‌ಟ್ಯಾಗ್ ಗಳನ್ನು ಪರಿಚಯಿಸಲಾಗಿದೆ. ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದರಿಂದ ವಾಹನಗಳು ಅಡೆತಡೆಯಿಲ್ಲದ ಚಲಿಸಬಹುದು. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಸಮಯ ಹಾಗೂ ಇಂಧನದ ಉಳಿತಾಯವಾಗುತ್ತದೆ.

ಫಾಸ್ಟ್‌ಟ್ಯಾಗ್ ಮೂಲಕ 2 ಸಾವಿರ ಕೋಟಿಗೂ ಹೆಚ್ಚು ಟೋಲ್ ಶುಲ್ಕ ಸಂಗ್ರಹಿಸಿದ ಎನ್‌ಹೆಚ್‌ಎಐ

ಜೊತೆಗೆ ಟೋಲ್‌ಗೇಟ್‌ಗಳಲ್ಲಿ ಪಾವತಿಸಲು ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ. ಇದರಿಂದ ಕರೋನಾ ವೈರಸ್ ಹರಡುವ ಸಾಧ್ಯತೆಯನ್ನು ಸಹ ಫಾಸ್ಟ್‌ಟ್ಯಾಗ್ ಇಲ್ಲವಾಗಿಸುತ್ತದೆ.

Most Read Articles

Kannada
English summary
NHAI collects more than two crore rupees toll through Fastag. Read in Kannada.
Story first published: Wednesday, January 6, 2021, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X