ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ಅಧಿಕೃತವಾಗಿ ಮಾರಾಟ ಆರಂಭಿಸಿದ್ದು, ವಿಶೇಷವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಸೇನಾಧಿಕಾರಿಗಳಿಗಾಗಿ ವಾಹನ ವಿತರಣೆ ಶುರು ಮಾಡಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲಿ ಕೇಂದ್ರ ಸರ್ಕಾರವು ಸೇನಾಧಿಕಾರಿಗಳಿಗಾಗಿಯೇ ವಿಶೇಷ ರಿಯಾಯತಿ ದರದಲ್ಲಿ ದಿನನಿತ್ಯದ ಸಾಮಾಗ್ರಿಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಹೊಂದಿದ್ದು, ನಿಸ್ಸಾನ್ ಕಂಪನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ಹೊಸ ಒಪ್ಪಂದದೊಂದಿಗೆ ತನ್ನ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ಮಾಗ್ನೈಟ್ ಮತ್ತು ಕಿಕ್ಸ್ ಕಾರುಗಳು ಸಾಮಾನ್ಯ ಡೀಲರ್ಸ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮಾದರಿಗಿಂತ ತುಸು ರಿಯಾಯ್ತಿ ದರ ಖರೀದಿ ಲಭ್ಯವಿದ್ದು, ಇಂದಿನಿಂದ ಸಿಎಸ್‌ಡಿ ಮಳಿಗೆಗಳಲ್ಲಿ ವಿತರಣೆಗೆ ಚಾಲನೆ ನೀಡಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಸಿಎಸ್‌ಡಿ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುವ ಕಾರುಗಳು ಸೇನೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಗಳು ಮತ್ತು ಅವರು ಕುಟುಂಬದವು ಮಾತ್ರ ಖರೀದಿಸಬಹುದಾಗಿದ್ದು, ಸಾಮಾನ್ಯ ಮಾರಾಟ ಮಳಿಗೆಗಳಿಂತ ಸಿಎಸ್‌ಡಿಯಲ್ಲಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ರೂ. 77 ಸಾವಿರದಿಂದ ರೂ. 1.49 ಲಕ್ಷದಷ್ಟು ಕಡಿಮೆ ಬೆಲೆ ಹೊಂದಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ನಿಸ್ಸಾನ್ ಕಂಪನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರಿನ ಕೆಲವೇ ಆಯ್ದ ವೆರಿಯೆಂಟ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಮ್ಯಾಗ್ನೈಟ್ ಕಾರಿನ ಐದು ವೆರಿಯೆಂಟ್‌ಗಳು ಮತ್ತು ಕಿಕ್ಸ್ ಕಾರಿನ ಐದು ವೆರಿಯೆಂಟ್‌ಗಳು ಖರೀದಿಗೆ ಲಭ್ಯವಿವೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿರುವ ಮ್ಯಾಗ್ನೈಟ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.82 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8.20 ಲಕ್ಷಕ್ಕೆ ಮತ್ತು ಕಿಕ್ಸ್ ಕಾರು ಆರಂಭಿಕವಾಗಿ ರೂ.8.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.83 ಲಕ್ಷ ಬೆಲೆ ಹೊಂದಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಕಿಕ್ಸ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಆವೃತ್ತಿಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ಸಾಮರ್ಥ್ಯದ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಹಾಗೆಯೇ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಾಗ್ನೈಟ್ ಕಾರು ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.

ಸಿಎಸ್‌ಡಿ ಕ್ಯಾಂಟಿನ್ ಮೂಲಕ ಕಾರು ವಿತರಣೆ ಆರಂಭಿಸಿದ ನಿಸ್ಸಾನ್

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

Most Read Articles

Kannada
English summary
Nissan Magnite First CSD Delivered. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X