Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Movies
ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ನಿಸ್ಸಾನ್ ಪಾಥ್‌ಫೈಂಡರ್ ಎಸ್‍ಯುವಿಯ ಟೀಸರ್ ಬಿಡುಗಡೆ
ನಿಸ್ಸಾನ್ ಕಂಪನಿಯು ತನ್ನ 2022ರ ಪಾಥ್‌ಫೈಂಡರ್ ಎಂಬ ಹೊಸ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ನಿಸ್ಸಾನ್ ಕಂಪನಿಯ ಈ ಹೊಸ ಪಾಥ್‌ಫೈಂಡರ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ನಿಸ್ಸಾನ್ ಪಾಥ್‌ಫೈಂಡರ್ ಎಸ್‍ಯುವಿ ಇದೇ ತಿಂಗಳ 4 ರಂದು ಬಿಡುಗಡೆಯಾಗಲಿದೆ. ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಹೊಸ ಟೀಸರ್ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 6 ಸೆಕೆಂಡುಗಳ ಟೀಸರ್ ವೀಡಿಯೋದಲ್ಲಿ ಹೊಸ ಪಾಥ್‌ಫೈಂಡರ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ಈ ಟೀಸರ್ ವೀಡಿಯೋದಲ್ಲಿ ಮುಂಭಾಗದ ಮತ್ತು ಹಿಂಭಾಗದ ಲುಕ್ ಅನ್ನು ಪ್ರದರ್ಶಿಸಲಾಗಿದೆ. ನಿಸ್ಸಾನ್ ಪಾಥ್‌ಫೈಂಡರ್ ಎಸ್‌ಯುವಿ ಮುಂಭಾಗವು ನಿಸ್ಸಾನ್ ರೋಗ್ ಮಾದರಿಯಲ್ಲಿರುವಂತ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಅಳವಡಿಸಲಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಇನ್ನು ಪಾಥ್‌ಫೈಂಡರ್ ಎಸ್‍ಯುವಿಯ ಹಿಂಭಾಗ ನೇರವಾದ ಡೋರ್ ಮತ್ತು ಬಾಕ್ಸೀ ಟೈಲ್‌ಗೇಟ್ ಅನ್ನು ಹೊಂದಿದೆ. ಇನ್ನು ಹಿಂಭಾಗದಲ್ಲಿ ದೊಡ್ಡದಾಗಿ ಕ್ರೋಮ್ ಫಿನಿಶಿಂಗ್ ನಿಂದ ಕೂಡಿದ ಪಾಥ್‌ಫೈಂಡರ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಇನ್ನು ಟೀಸರ್ ವೀಡಿಯೋದಲ್ಲಿ ಪವರ್ ಫುಲ್ ಎಂಜಿನ್ ನಿಂದ ರೇಸಿಂಗ್ ರೀತಿಯ ಶಬ್ಬದೊಂದಿಗೆ ಡರ್ಟ್ ಟ್ರ್ಯಾಕ್ ವೇಗವಾಗಿ ಚಲಿಸುವ ಪಾಥ್‌ಫೈಂಡರ್ ಎಸ್‍ಯುವಿಯ ದೃಶ್ಯವನ್ನು ಪ್ರದರ್ಶಿಸಿದ್ದಾರೆ. ಧೋಳಿನಿಂದ ಕೂಡಿದ ದೃಶ್ಯವಾಗಿರುವುದರಿಂದ ಹೊಸ ಪಾಥ್‌ಫೈಂಡರ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಈ ಹೊಸ ನಿಸ್ಸಾನ್ ಪಾಥ್‌ಫೈಂಡರ್ ಎಸ್‍ಯುವಿಯಲ್ಲಿ ಹೊಸ ಪವರ್ ಫುಲ್ ಎಂಜಿನ್ ಅನ್ನು ಅಳವಡಿಸಳಾಗಿದೆ. ಈ ಎಸ್‍ಯುವಿಯಲ್ಲಿ ಹೊಸದಾಗಿ 3.5-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಳಾಗುತ್ತದೆ.

ಈ ಎಂಜಿನ್ 270 ಬಿಹೆಚ್‍ಪಿ ಪವರ್ ಮತ್ತು 40 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಇದರೊಂದಿಗೆ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಹೊಸ ನಿಸ್ಸಾನ್ ಪಾಥ್‌ಫೈಂಡರ್ ಎಸ್‍ಯುವಿಯ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಪಾಥ್‌ಫೈಂಡರ್ ಎಸ್‍ಯುವಿಯಲಿ ಹೊಸ ಕಾಸ್ಮೆಟಿಕ್ ಅಪ್ಡೇಟ್ ಜೊತೆಗೆ ಹೆಚ್ಚಿನ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ನಿರೀಕ್ಷಿಗಳಿವೆ.

ಇನ್ನು ಈ ಹೊಸ ಸ್ಸಾನ್ ಪಾಥ್‌ಫೈಂಡರ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆದರೆ ಈ ಜನಪ್ರಿಯ ಪಾಥ್‌ಫೈಂಡರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.