ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

ಈ ವರ್ಷ ಹಬ್ಬದ ಸೀಸನ್ ಆರಂಭವಾಗಿದೆ. ಸಾಮಾನ್ಯವಾಗಿ ಜನರು ಹಬ್ಬದ ಸೀಸನ್ ನಲ್ಲಿ ಹೊಸ ವಾಹನಗಳನ್ನು ಖರೀದಿಸುತ್ತಾರೆ. ಹೊಸ ಗ್ರಾಹಕರನ್ನು ಸೆಳೆಯಲು ವಾಹನ ತಯಾರಕ ಕಂಪನಿಗಳು ವಿವಿಧ ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡುತ್ತವೆ. ಭಾರತೀಯ ಮೂಲದ ಎಸ್‌ಯುವಿ ತಯಾರಕ ಕಂಪನಿಯಾದ Mahindra and Mahindra ಸಹ ತನ್ನ ಕಾರುಗಳ ಮೇಲೆ ನಗದು ರಿಯಾಯಿತಿ ಹಾಗೂ ಇತರ ಕೊಡುಗೆಗಳನ್ನು ನೀಡುತ್ತಿದೆ. ಯಾವ Mahindra ಕಾರಿನ ಖರೀದಿಯ ಮೇಲೆ ಎಷ್ಟು ಕೊಡುಗೆಗಳನ್ನು ನೀಡಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

1. Mahindra KUV 100 NXT

ಇದು Mahindra ಕಂಪನಿಯ ಎಂಟ್ರಿ ಲೆವೆಲ್ ಕಾರ್ ಆಗಿದ್ದು, ಕಂಪನಿಯು ಈ ಕಾರಿನ ಮೇಲೆ ರೂ. 41,000 ಗಳವರೆಗೆ ಕೊಡುಗೆಗಳನ್ನು ನೀಡುತ್ತಿದೆ. ಈ ಕಾರಿನ ಮೇಲೆ ರೂ. 38,055 ನಗದು ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ಈ ಕಾರಿಗಾಗಿ ರೂ. 3,000 ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಕಾರಿನ ಮೇಲೆ ಬೇರೆ ಯಾವುದೇ ರೀತಿಯ ರಿಯಾಯಿತಿ ಲಭ್ಯವಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

2. Mahindra XUV 300

Mahindra ಕಂಪನಿಯ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯು‌ವಿಯಾದ Mahindra XUV 300 ಮೇಲೆ ರೂ. 31,628 ರವರೆಗಿನ ಕೊಡುಗೆಗಳನ್ನು ನೀಡಲಾಗುತ್ತದೆ. ಈ ಕಾರಿನ ಮೇಲೆ ರೂ. 20,000 ವರೆಗಿನ ಒಟ್ಟು ವಿನಿಮಯ ಬೋನಸ್ ಅನ್ನು ನೀಡಲಾಗುತ್ತದೆ. ಇದರ ಜೊತೆಗೆ ಈ ಕಾರಿನ ಮೇಲೆ ರೂ. 11,628 ಗಳ ಕಾರ್ಪೊರೇಟ್ ಬೋನಸ್ ಅನ್ನು ನೀಡಲಾಗುತ್ತದೆ. ಈ ಕಾರಿನ ಮೇಲೆ ಯಾವುದೇ ರೀತಿಯ ನಗದು ರಿಯಾಯಿತಿ ಲಭ್ಯವಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

3. Mahindra Scorpio

Mahindra Scorpio ಕೂಡ ಕಂಪನಿಯ ಜನಪ್ರಿಯ ಎಸ್‌ಯುವಿಯಾಗಿದ್ದು, ಅದರ ಮೇಲೆ ಕಂಪನಿಯು ರೂ. 57,135 ವರೆಗೆ ಕೊಡುಗೆಗಳನ್ನು ನೀಡುತ್ತದೆ. ಈ ಕಾರಿನ ಮೇಲೆ ರೂ. 20,000 ವರೆಗಿನ ನಗದು ರಿಯಾಯಿತಿ, ರೂ. 5,000 ವಿನಿಮಯ ಬೋನಸ್, ರೂ. 10,135 ಕಾರ್ಪೊರೇಟ್ ಬೋನಸ್ ಹಾಗೂ ರೂ. 22,000 ವರೆಗಿನ ಇತರ ಪ್ರಯೋಜನಗಳನ್ನು ನೀಡಲಾಗುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

4. Mahindra Bolero

Mahindra Bolero ಕಾರ್ ಅನ್ನು ಭಾರತದಲ್ಲಿ ಎಂಪಿವಿಯಾಗಿ ಬಳಸಲಾಗುತ್ತದೆ. ಕಂಪನಿಯು ಅಕ್ಟೋಬರ್‌ ತಿಂಗಳಿನಲ್ಲಿ ಈ ಕಾರಿನ ಮೇಲೆ ಒಟ್ಟು ರೂ. 30,450 ಗಳವರೆಗೆ ಕೊಡುಗೆಗಳನ್ನು ನೀಡುತ್ತದೆ. ಈ ಕಾರಿಗೆ ರೂ. 19,000 ವರೆಗೆ ನಗದು ರಿಯಾಯಿತಿ ಹಾಗೂ ರೂ. 11,450 ಕಾರ್ಪೊರೇಟ್ ಬೋನಸ್ ನೀಡಲಾಗುತ್ತದೆ. ಈ ಕಾರಿನ ಮೇಲೆ ಯಾವುದೇ ನಗದು ರಿಯಾಯಿತಿ ಲಭ್ಯವಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

5. Mahindra XUV 500

Mahindra ಕಂಪನಿಯು ತನ್ನ ಪೂರ್ಣ ಗಾತ್ರದ ಎಸ್‌ಯುವಿಯಾದ XUV 500 ಮೇಲೆ ರೂ. 2,63,314 ಗಳ ಕೊಡುಗೆಗಳನ್ನು ನೀಡುತ್ತದೆ. ಇದರಲ್ಲಿ ರೂ. 1,79,800 ವರೆಗಿನ ನಗದು ರಿಯಾಯಿತಿ, ರೂ. 50,000 ವರೆಗಿನ ವಿನಿಮಯ ಬೋನಸ್, ರೂ. 13,514 ವರೆಗಿನ ಕಾರ್ಪೊರೇಟ್ ಬೋನಸ್ ಹಾಗೂ ರೂ. 20,000 ಮೌಲ್ಯದ ಇತರ ಕೊಡುಗೆಗಳು ಸೇರಿವೆ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

6. Mahindra Marazzo

ಕಂಪನಿಯು ತನ್ನ Mahindra Marazzo ಎಂಪಿವಿಯ ಮೇಲೆ ರೂ. 38,793 ಗಳ ಕೊಡುಗೆಗಳನ್ನು ನೀಡುತ್ತಿದೆ. ಈ ಕಾರಿನ ಮೇಲೆ ರೂ. 13,000 ವರೆಗಿನ ನಗದು ರಿಯಾಯಿತಿ, ರೂ. 13,793 ಕಾರ್ಪೊರೇಟ್ ಬೋನಸ್ ಹಾಗೂ ರೂ. 12,000 ಗಳವರೆಗೆ ಇತರ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಎಂಪಿವಿಯ ಮೇಲೆ ಬೇರೆ ಯಾವುದೇ ಕೊಡುಗೆಗಳನ್ನು ನೀಡಲಾಗುವುದಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

7. Mahindra Alturas G 4

Mahindra Alturas G 4 ಮಾರಾಟವು ತುಂಬಾ ಕಡಿಮೆಯಾಗಿರುವುದರಿಂದ ಈ ಪೂರ್ಣ ಗಾತ್ರದ ಎಸ್‌ಯುವಿಯ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಈ ಕಾರಿನ ಮೇಲೆ ರೂ. 66,667 ಗಳವರೆಗೆ ಕೊಡುಗೆಗಳನ್ನು ನೀಡುತ್ತಿದೆ. ಈ ಕಾರಿನ ಮೇಲೆ ರೂ. 50,000 ವರೆಗಿನ ವಿನಿಮಯ ಬೋನಸ್, ರೂ. 16,667 ವರೆಗೆ ಕಾರ್ಪೊರೇಟ್ ಬೋನಸ್ ನೀಡಲಾಗುತ್ತದೆ. ಈ ಎಸ್‌ಯುವಿಯ ಮೇಲೆ ಯಾವುದೇ ನಗದು ರಿಯಾಯಿತಿ ನೀಡಲಾಗುವುದಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

ಗಮನಿಸಬೇಕಾದ ಸಂಗತಿಯೆಂದರೆ Mahindra ಕಂಪನಿಯ ಕಾರುಗಳ ಮೇಲೆ ನೀಡಲಾಗುತ್ತಿರುವ ಈ ಎಲ್ಲಾ ಕೊಡುಗೆಗಳು ಅಕ್ಟೋಬರ್ 31 ರವರೆಗೆ ಮಾತ್ರ ಲಭ್ಯವಿರಲಿವೆ. ಕಂಪನಿಯು ತನ್ನ ಹೊಸ ವಾಹನಗಳಾದ Mahindra XUV 700, Mahindra Thar ಹಾಗೂ Mahindra Bolero Neo ವಾಹನಗಳ ಮೇಲೆ ಯಾವುದೇ ಕೊಡುಗೆಗಳನ್ನು ನೀಡುತ್ತಿಲ್ಲ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

ಇತ್ತೀಚಿಗಷ್ಟೇ ಬಿಡುಗಡೆಯಾದ Mahindra XUV 700 ಎಸ್‌ಯುವಿಯು ಭಾರತದ ಆಟೋ ಉದ್ಯಮದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಈ ಎಸ್‌ಯುವಿಯು ಬುಕ್ಕಿಂಗ್ ಪ್ರಕ್ರಿಯೆ ಆರಂಭವಾದ ಕೇವಲ 2 ದಿನಗಳಲ್ಲಿ 50 ಸಾವಿರ ಯುನಿಟ್‌ ಬುಕ್ಕಿಂಗ್ ಗಳನ್ನು ಪಡೆದಿದೆ. ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 700 ಎಸ್‌ಯುವಿಗಾಗಿ ಅಕ್ಟೋಬರ್ 7 ರಿಂದ ಬುಕ್ಕಿಂಗ್ ಗಳನ್ನು ಆರಂಭಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ Mahindra ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು

ಗ್ರಾಹಕರು ರೂ. 50 ಸಾವಿರ ಪಾವತಿಸಿ ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಆರಂಭವಾದ ಕೇವಲ 57 ನಿಮಿಷಗಳಲ್ಲಿ ಸುಮಾರು 25 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಮೊದಲ ದಿನ 25 ಸಾವಿರ ಬುಕ್ಕಿಂಗ್ ಸ್ವೀಕರಿಸಿದ ನಂತರ Mahindra ಕಂಪನಿಯು ಈ ಎಸ್‌ಯುವಿಯ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಎರಡನೇ ಹಂತದ ಬುಕ್ಕಿಂಗ್ ಆರಂಭವಾದ ನಂತರ ಮತ್ತೆ 25 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.

Most Read Articles

Kannada
English summary
Offers available on mahindra cars in october 2021 details
Story first published: Saturday, October 9, 2021, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X