ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ಕೋವಿಡ್ -19 ಲಸಿಕೆ ಸಾಗಿಸಲು ಒಮೆಗಾ ಸೈಕಿ ಮೊಬಿಲಿಟಿ ಕಂಪನಿಯು, ರೇಜ್ ಪ್ಲಸ್ ಫ್ರಾಸ್ಟ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ. ಈ ವಾಹನವು ಕೋವಿಡ್ -19 ಲಸಿಕೆ ಹಾಗೂ ಇತರ ಔಷಧಿಗಳನ್ನು ಸುರಕ್ಷಿತವಾಗಿ ಸಾಗಿಸಲಿದೆ.

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ಈ ತ್ರಿಚಕ್ರ ವಾಹನವನ್ನು ಉತ್ಪಾದಿಸಿರುವ ಉದ್ದೇಶವು ಕೋವಿಡ್ - 19 ಲಸಿಕೆಯನ್ನು ದೇಶದ ಮೂಲೆ ಮೂಲೆಗೆ ಸಾಗಿಸುವುದು ಎಂದು ಕಂಪನಿ ತಿಳಿಸಿದೆ. ಬ್ಯಾಟರಿ ಚಾಲಿತ ಈ ವಾಹನವು ಕೋವಿಡ್ - 19 ಲಸಿಕೆಯನ್ನು -22 ಡಿಗ್ರಿ ತಾಪಮಾನದಲ್ಲಿ 72 ಗಂಟೆಗಳ ಕಾಲ ಇರಿಸಿಕೊಳ್ಳಲಿದೆ. ಈ ವಾಹನದ ಅನುಕೂಲಗಳ ಬಗ್ಗೆ ವಿವರಿಸಿದ ಕಂಪನಿಯು ಈ ತ್ರಿಚಕ್ರ ವಾಹನವು ಬ್ಯಾಟರಿ ಮೂಲಕ ಚಲಿಸುವುದರಿಂದ ಪರಿಸರ ಸ್ನೇಹಿಯಾಗಿರಲಿದೆ ಎಂದು ಹೇಳಿದೆ.

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ಹಳ್ಳಿಗಳು, ನಗರಗಳು ಹಾಗೂ ಕರೋನಾ ವ್ಯಾಕ್ಸಿನೇಷನ್ ಕೇಂದ್ರಗಳಿಂದ ಹೆಚ್ಚು ದೂರವಿರುವ ಸ್ಥಳಗಳಿಗೆ ಈ ವಾಹನವು ಚಲಿಸಲಿದೆ. ಈ ತ್ರಿಚಕ್ರ ವಾಹನವು ಸಂಪೂರ್ಣ ಬ್ಯಾಟರಿ ಚಾಲಿತವಾಗಿರುವುದರಿಂದ ಇದನ್ನು ಚಲಾಯಿಸುವ ವೆಚ್ಚ ತುಂಬಾ ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ಈ ವಾಹನದ ಚಾಲನೆಗೆ ಪ್ರತಿ ಕಿ.ಮೀಗೆ 50 ಪೈಸೆ ವೆಚ್ಚವಾಗುತ್ತದೆ. ಈ ವಾಹನದಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ವಾಹನವು 70 ಕಿ.ಮೀಗಳವರೆಗೆ ಚಲಿಸುತ್ತದೆ.

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

960 ಕೆಜಿ ತೂಕವನ್ನು ಹೊಂದಿರುವ ಈ ಲಸಿಕೆ ವಾಹನದ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 50 ಕಿ.ಮೀಗಳಾಗಿದೆ. ಈ ವಾಹನದಲ್ಲಿರುವ ವ್ಯಾಕ್ಸಿನ್ ಕಂಟೇನರ್, 1340 ವ್ಯಾ ಕೂಲಿಂಗ್ ಸಾಮರ್ಥ್ಯವನ್ನು ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ಈ ಕಂಟೇನರ್, ಲಸಿಕೆಯನ್ನು -20 ° ಸೆಲ್ಸಿಯಸ್ ತಾಪಮಾನದಲ್ಲಿ 72 ಗಂಟೆಗಳವರೆಗೆ ತಂಪಾಗಿಡಬಲ್ಲದು. ಈ ಎಲೆಕ್ಟ್ರಿಕ್ ತ್ರಿಚಕ್ರ ವಾಹನದಲ್ಲಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಬ್ರೇಕಿಂಗ್ ಮಾಡುವಾಗ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ದೇಶದಲ್ಲಿನ ವ್ಯಾಕ್ಸಿನೇಷನ್ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಈ ವಾಹನದ ಬಿಡುಗಡೆ ಸಮಾರಂಭದಲ್ಲಿ ಒಮೆಗಾ ಸೈಕಿ ಮೊಬಿಲಿಟಿ ತಿಳಿಸಿದೆ. ಈ ವಾಹನವು ಎಂಜಿನ್ ಹೊಂದಿಲ್ಲವಾದ್ದರಿಂದ ಡೀಸೆಲ್ ತ್ರಿಚಕ್ರ ವಾಹನಗಳಂತೆ ಯಾವುದೇ ಮಾಲಿನ್ಯವನ್ನು ಹೊರಸೂಸುವುದಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೋವಿಡ್ -19 ಲಸಿಕೆ ಸಾಗಾಣಿಕೆಗೆ ಬಂತು ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನ

ಒಮೆಗಾ ಸೈಕಿ ಮೊಬಿಲಿಟಿ ಕಂಪನಿಯ ಎಂಡಿ ಡಾ.ಡೆಬ್ ಮುಖರ್ಜಿ ಮಾತನಾಡಿ, ಈ ವಾಹನವು ದೂರದ ಪ್ರದೇಶಗಳಿಗೆ ಲಸಿಕೆಯನ್ನು ಸುಲಭವಾಗಿ ತಲುಪಿಸುತ್ತದೆ.ಇದರ ಜೊತೆಗೆ ಈ ವಾಹನವನ್ನು ಇತರ ಲಸಿಕೆ ಹಾಗೂ ಆಹಾರ ಪದಾರ್ಥಗಳನ್ನು ಸಾಗಿಸಲು ಸಹ ಬಳಸಬಹುದು ಎಂದು ಹೇಳಿದರು.

Most Read Articles

Kannada
English summary
Omega Seiki launches new electric three wheeler to transport Covid 19 vaccine. Read in Kannada.
Story first published: Wednesday, February 17, 2021, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X