Just In
Don't Miss!
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಎಸ್ 6 ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಹೆಚ್ಚಿದ ಬೇಡಿಕೆ
ದೇಶದಲ್ಲಿ ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಯಾದ ನಂತರ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಿಎಸ್ 6 ಮಾಲಿನ್ಯ ನಿಯಮ ಜಾರಿಗೆ ಬರುವ ಮುನ್ನವೇ ಪೆಟ್ರೋಲ್ ಕಾರುಗಳ ಮಾರಾಟವು ಹೆಚ್ಚಾಗಿತ್ತು.

2012ರಿಂದ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು ಕಡಿಮೆಯಾಗಿದೆ. 2020ರಲ್ಲಿ ಒಟ್ಟಾರೆಯಾಗಿ ಮಾರಾಟವಾದ ಕಾರುಗಳ ಪೈಕಿ ಪೆಟ್ರೋಲ್ ಕಾರುಗಳ ಮಾರಾಟ ಪ್ರಮಾಣವು 83%ನಷ್ಟಿದೆ. ಇದರಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಸಂಖ್ಯೆಯೇ ಹೆಚ್ಚಾಗಿದೆ.

ಬಿಎಸ್ 6 ಮಾಲಿನ್ಯ ನಿಯಮ ಜಾರಿಯಾದ ನಂತರ ಪೆಟ್ರೋಲ್ ಕಾರುಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದೆಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬಹುತೇಕ ಒಂದೇ ಆಗಿದೆ. ಬಿಎಸ್ 6 ಅಪ್‌ಡೇಟ್ ನಂತರ ಡೀಸೆಲ್ ಕಾರುಗಳ ಬೆಲೆ ದುಬಾರಿಯಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರಣಕ್ಕೆ ಹೊಸ ಗ್ರಾಹಕರು ಪೆಟ್ರೋಲ್ ವಾಹನಗಳನ್ನು ಖರೀದಿಸುತ್ತಿದ್ದಾರೆ. 2012ರಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಇದ್ದಾಗ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು 54%ನಷ್ಟಾಗಿತ್ತು. ನಂತರ ಈ ಪ್ರಮಾಣವು ಕಡಿಮೆಯಾಗುತ್ತಾ ಸಾಗಿತು.

2013ರಲ್ಲಿ 52%, 2014ರಲ್ಲಿ 48%, 2015ರಲ್ಲಿ 44% ಹಾಗೂ 2016ರಲ್ಲಿ 40%ಗಳಾಗುತ್ತಾ ಸಾಗಿತು. 2017ರಲ್ಲಿ 39%, 2018ರಲ್ಲಿ 37%, 2019ರಲ್ಲಿ 33%ನಷ್ಟಿದ್ದ ಡೀಸೆಲ್ ಕಾರುಗಳ ಮಾರಾಟ ಪ್ರಮಾಣವು 2020ರ ಏಪ್ರಿಲ್ - ಡಿಸೆಂಬರ್ ನಡುವಿನ ಅವಧಿಯಲ್ಲಿ 17%ಗಳಿಗೆ ಇಳಿಕೆಯಾಯಿತು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿಎಸ್ 6 ನಿಯಮಗಳಿಗೆ ಅಪ್ ಡೇಟ್ ಮಾಡುವ ವೆಚ್ಚವು ದುಬಾರಿ ಎಂಬ ಕಾರಣಕ್ಕೆ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳು ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದವು.

ಮಾರುತಿ ಸುಜುಕಿ ಕಂಪನಿಯ ಜೊತೆಗೆ ಫೋಕ್ಸ್‌ವ್ಯಾಗನ್, ಸ್ಕೋಡಾ, ದಟ್ಸನ್ ಹಾಗೂ ನಿಸ್ಸಾನ್ ಕಂಪನಿಗಳು ಪೆಟ್ರೋಲ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿವೆ. ಟಾಟಾ ಮೋಟಾರ್ಸ್ ಕಂಪನಿಯೂ ಸಣ್ಣ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ನಿಲ್ಲಿಸಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯು ಎಸ್‌ಯುವಿ ಸೆಗ್ ಮೆಂಟಿನಲ್ಲಿ ಮಾತ್ರ ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಸದ್ಯಕ್ಕೆ ಎಸ್‌ಯುವಿ, ಎಂಯುವಿ ಸೆಗ್ ಮೇಂಟಿನಲ್ಲಿರುವ ಡೀಸೆಲ್ ಎಂಜಿನ್ ಕಾರುಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ.

ಈ ಕಾರಣಕ್ಕೆ ಮಹೀಂದ್ರಾ ಕಂಪನಿಯು ತನ್ನ ಒಟ್ಟಾರೆ ವಾಹನದ 88%ನಷ್ಟು ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಫೋರ್ಡ್ ಕಂಪನಿಯು 62%, ಜೀಪ್ ಕಂಪನಿಯು 60%, ಟೊಯೊಟಾ 53%, ಎಂಜಿ ಮೋಟಾರ್ 45%, ಕಿಯಾ ಮೋಟಾರ್ಸ್ 41%ನಷ್ಟು ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇನ್ನು ಹ್ಯುಂಡೈ ಕಂಪನಿಯು 24%, ಟಾಟಾ ಮೋಟಾರ್ಸ್ 17% ಹಾಗೂ ಹೋಂಡಾ ಕಂಪನಿಯು 13%ನಷ್ಟು ಡೀಸೆಲ್ ಎಂಜಿನ್ ವಾಹನಗಳನ್ನು ಮಾರಾಟ ಮಾಡುತ್ತಿವೆ. ಡೀಸೆಲ್ ಬೆಲೆ ಹೆಚ್ಚಳದಿಂದಾಗಿ, ಡೀಸೆಲ್ ಕಾರುಗಳ ಬೇಡಿಕೆಯು ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ.

ಡೀಸೆಲ್ ಮಾತ್ರವಲ್ಲ, ಪೆಟ್ರೋಲ್ ಬೆಲೆ ಸಹ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ಈ ಕಾರಣಕ್ಕೆ ಪರ್ಯಾಯ ಇಂಧನಗಳಾದ ಸಿಎನ್‌ಜಿ, ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳಿಗೆ ಬೇಡಿಕೆ ಮೊದಲಿಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ವಾಹನಗಳ ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ರಿಯಾಯಿತಿಗಳನ್ನು ಸಹ ನೀಡುತ್ತಿವೆ. ಈಗ ಇವುಗಳನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ಆಟೋಪಂಡಿಟ್ಜ್ ವರದಿ ಪ್ರಕಟಿಸಿದೆ.