ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಪ್ರಾಕ್ಸೆಕ್ಟೊ ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಆದ ಹೆಚ್‌ಎವಿ ಎಸ್ 1ಯನ್ನು ಇಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟ್ರಾಕ್ಟರ್ ಸುಧಾರಿತ ಫೀಚರ್ ಹಾಗೂ ತಂತ್ರಜ್ಞಾನವನ್ನು ಹೊಂದಿದೆ.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಕಂಪನಿಯ ಪ್ರಕಾರ ಈ ಹೈಬ್ರಿಡ್ ಟ್ರಾಕ್ಟರ್‌ನಲ್ಲಿ ಇಂತಹ 12ಕ್ಕೂ ಹೆಚ್ಚು ಫೀಚರ್'ಗಳನ್ನು ನೀಡಲಾಗಿದೆ. ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿ ಈ ರೀತಿ ಫೀಚರ್'ಗಳನ್ನು ನೀಡಲಾಗಿದೆ. ಪ್ರಾಕ್ಸೆಕ್ಟೊ ಈ ಹೈಬ್ರಿಡ್ ಟ್ರಾಕ್ಟರ್ ಅನ್ನು 2019ರಲ್ಲಿ ಜರ್ಮನಿಯಲ್ಲಿ ನಡೆದ ಅಗ್ರಿಟೆಕ್ನಿಕಾ ಪ್ರದರ್ಶನದಲ್ಲಿ ಪರಿಚಯಿಸಿತ್ತು.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಹೆಚ್‌ಎವಿ ಎಸ್ 1, ಬ್ಯಾಟರಿ ಪ್ಯಾಕ್ ಹೊಂದಿಲ್ಲದೇ ಭಾರತದಲ್ಲಿ ಬಿಡುಗಡೆಯಾದ ಮೊದಲ ಟ್ರಾಕ್ಟರ್ ಆಗಿದೆ. ಈ ಟ್ರಾಕ್ಟರ್ ವಿಶೇಷ ಪರಿಸರ ಸ್ನೇಹಿ ಟೆಕ್ನಾಲಜಿಯನ್ನು ಹೊಂದಿದ್ದು, ಭಾರತದಲ್ಲಿ ಚಲಾಯಿಸಲು ಸಿದ್ಧವಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಈ ಟ್ರಾಕ್ಟರ್‌ಗೆ ವಿದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಾಕ್ಸೆಕ್ಟೊ ಎಂಜಿನಿಯರಿಂಗ್ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹೆಚ್‌ಎವಿ ಟ್ರಾಕ್ಟರ್ಸಂಸ್ಥಾಪಕರಾದ ಅಂಕಿತ್ ತ್ಯಾಗಿ ಈ ಟ್ರಾಕ್ಟರ್ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಮಾನವ ಶಕ್ತಿ, ಪೂರೈಕೆ ಸರಪಳಿ, ಲಾಜಿಸ್ಟಿಕ್ಸ್, ವಿತರಣೆ ಹಾಗೂ ಪೂರೈಕೆಯಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ತ್ಯಾಗಿ ಹೇಳಿದರು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಈ ಎಲ್ಲಾ ತೊಂದರೆಗಳ ಹೊರತಾಗಿಯೂ ನಾವು ಈ ಟ್ರಾಕ್ಟರ್ ಅನ್ನು ಬಿಡುಗಡೆಗೊಳಿಸಲು ಯಶಸ್ವಿಯಾಗಿದ್ದೇವೆ. ದೇಶದಲ್ಲಿ ಬಿಡುಗಡೆಯಾದ ಮೊದಲ ಪೂರ್ಣ ಪ್ರಮಾಣದ ಆಟೋಮ್ಯಾಟಿಕ್ ಟ್ರಾಕ್ಟರ್ ಇದಾಗಿದೆ ಎಂದು ಅವರು ಹೇಳಿದರು.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಈ ಟ್ರ್ಯಾಕ್ಟರ್‌ನಲ್ಲಿ ಕಂಪನಿಯು ಆಲ್ ವ್ಹೀಲ್ ಎಲೆಕ್ಟ್ರಿಕ್ ಡ್ರೈವ್ (ಎಡಬ್ಲ್ಯೂಇಡಿ) ತಂತ್ರಜ್ಞಾನವನ್ನು ಬಳಸಿದೆ.ಈ ಟ್ರ್ಯಾಕ್ಟರ್‌ನಲ್ಲಿ ಗೇರ್ ಹಾಗೂ ಕ್ಲಚ್ ನೀಡಲಾಗಿಲ್ಲ. ಚಾಲನೆಯನ್ನು ಸುಲಭಗೊಳಿಸಲು ಈ ಟ್ರಾಕ್ಟರ್‌ನಲ್ಲಿ ಫಾರ್ವರ್ಡ್, ನ್ಯೂಟ್ರಲ್ ಹಾಗೂ ರಿವರ್ಸ್ ಎಂಬ 3 ಸರಳ ವಿಧಾನಗಳನ್ನು ನೀಡಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಕಂಪನಿಯು ಈ ಟ್ರ್ಯಾಕ್ಟರ್‌ನ ಎರಡು ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಸಾಂಪ್ರದಾಯಿಕ ಟ್ರಾಕ್ಟರಿಗೆ ಹೋಲಿಸಿದರೆ 50 ಎಸ್ 1 ಡೀಸೆಲ್ ಹೈಬ್ರಿಡ್ ಮಾದರಿಯು 28%ನಷ್ಟು ಇಂಧನವನ್ನು ಉಳಿಸುತ್ತದೆ.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಇನ್ನು 50 ಎಸ್ 2 ಸಿಎನ್‌ಜಿ ಹೈಬ್ರಿಡ್ ಮಾದರಿಯು ಸಾಂಪ್ರದಾಯಿಕ ಟ್ರಾಕ್ಟರ್‌ಗೆ ಹೋಲಿಸಿದರೆ 50%ನಷ್ಟು ಇಂಧನವನ್ನು ಉಳಿಸುತ್ತದೆ. ಎತ್ತರಕ್ಕೆ ಅನುಗುಣವಾಗಿಯೇ ಹೊಂದಿಕೊಳ್ಳಲು ವ್ಹೀಲ್'ಗಳಿಗೆ ಸ್ವತಂತ್ರವಾದ ಸಸ್ಪೆಂಷನ್ ನೀಡಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಈ ಟ್ರಾಕ್ಟರ್ ಮ್ಯಾಕ್ಸ್ ಕವರ್ ಸ್ಟೀಯರಿಂಗ್ (ಎಂಸಿಎಸ್) ನೊಂದಿಗೆ ವಿಶೇಷವಾದ ಸ್ಟೀಯರಿಂಗ್ ಸಿಸ್ಟಂ ಸಹ ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಟ್ರಾಕ್ಟರ್‌ಕೇವಲ 2.7 ಮೀ ಟರ್ನಿಂಗ್ ರೇಡಿಯಸ್ ಹೊಂದಿದೆ.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಫೀಚರ್'ಗಳನ್ನು ಅಪ್ ಡೇಟ್ ಮಾಡಲು ಈ ಟ್ರಾಕ್ಟರ್‌ನಲ್ಲಿ ಸ್ಟೀಯರಿಂಗ್ ಮೌಂಟೆಡ್ ಹೆಚ್‌ಎಂಐ ಡಿಸ್ ಪ್ಲೇ ನೀಡಲಾಗಿದೆ. ಈ ಟ್ರಾಕ್ಟರ್‌ನಲ್ಲಿರುವ ಕೆಲವು ವಿಶೇಷ ಫೀಚರ್'ಗಳು ರೈತರ ಕೆಲಸವನ್ನು ಸುಲಭವಾಗಿಸುತ್ತವೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಈ ಟ್ರಾಕ್ಟರ್‌ಗೆ ಕಂಪನಿಯು 10 ವರ್ಷಗಳ ವಾರಂಟಿ ನೀಡುತ್ತದೆ. ಹೆಚ್‌ಎವಿ ಎಸ್ 1 50 ಹೆಚ್‌ಪಿ ಟ್ರಾಕ್ಟರ್‌ನ ಆರಂಭಿಕ ಬೆಲೆ ರೂ.9.49 ಲಕ್ಷಗಳಾಗಿದೆ. ಟಾಪ್ ಎಂಡ್ ಮಾದರಿಯಾದ ಎಸ್ 1 ಪ್ಲಸ್ ಮಾದರಿಯ ಬೆಲೆ ರೂ.11.99 ಲಕ್ಷಗಳಾಗಿದೆ.

ದೇಶದ ಮೊದಲ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಬಿಡುಗಡೆಗೊಳಿಸಿದ ಪ್ರಾಕ್ಸೆಕ್ಟೊ

ಈ ಟ್ರಾಕ್ಟರ್‌ನ ಎಸ್ 1 45 ಹೆಚ್‌ಪಿ ಮಾದರಿಯ ಬೆಲೆ ರೂ.8.49 ಲಕ್ಷಗಳಾಗಿದೆ. ಈ ಟ್ರಾಕ್ಟರ್ ಅನ್ನು ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಬಹುದು.

Most Read Articles

Kannada
English summary
Proxecto launches India's first hybrid tractor. Read in Kannada.
Story first published: Friday, May 7, 2021, 20:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X