Just In
- 2 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 3 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 4 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 4 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹತ್ತು ಲಕ್ಷ ಸವಾರಿ ಪೂರ್ಣಗೊಳಿಸಿದ ರ್‍ಯಾಪಿಡೋ ಆಟೋ ಟ್ಯಾಕ್ಸಿ
ಬೈಕ್ ಟ್ಯಾಕ್ಸಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರ್‍ಯಾಪಿಡೋ ಕಂಪನಿಯು ತನ್ನ ಆಟೋ ಟ್ಯಾಕ್ಸಿ ಪ್ಲಾಟ್‌ಫಾರಂನಲ್ಲಿ ಹತ್ತು ಲಕ್ಷ ಸವಾರಿಗಳನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ. ರ್‍ಯಾಪಿಡೋ ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ ಆಟೋ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಿತು.

ರ್‍ಯಾಪಿಡೋ ಕಂಪನಿಯು 25 ನಗರಗಳಲ್ಲಿ ಆಟೋ ಟ್ಯಾಕ್ಸಿ ಸೇವೆಗಳನ್ನು ನೀಡುತ್ತದೆ. ಆರಂಭವಾದ 5 ತಿಂಗಳುಗಳಲ್ಲಿ ಕಂಪನಿಯು 10 ಲಕ್ಷ ಸವಾರಿಯ ಪ್ರಮುಖ ಸಾಧನೆಯನ್ನು ಪೂರ್ಣಗೊಳಿಸಿದೆ. ರ್‍ಯಾಪಿಡೋ ಕಂಪನಿಯು ತನ್ನ ಆಟೋ ಟ್ಯಾಕ್ಸಿ ಸೇವೆಗಾಗಿ 70,000ಕ್ಕೂ ಹೆಚ್ಚು ಆಟೋ ಡ್ರೈವರ್‌ಗಳನ್ನು ನೇಮಿಸಿಕೊಂಡಿದೆ. ಮುಂದಿನ ಆರು ತಿಂಗಳುಗಳಲ್ಲಿ 5 ಲಕ್ಷ ಹೊಸ ಆಟೋ ಚಾಲಕರನ್ನು ನೇಮಿಸಿಕೊಳ್ಳಲು ಕಂಪನಿಯು ನಿರ್ಧರಿಸಿದೆ.

ಕಂಪನಿಯು ಮಹಿಳಾ ಸಬಲೀಕರಣದ ಬಗ್ಗೆಯೂ ಗಮನ ಹರಿಸುತ್ತಿದ್ದು, ತರಬೇತಿ ಪಡೆದ ಮಹಿಳಾ ಚಾಲಕರನ್ನು ನೇಮಿಸಿಕೊಂಡಿದೆ. ರ್‍ಯಾಪಿಡೋ ಆಟೋ ಟ್ಯಾಕ್ಸಿ ಸುರಕ್ಷಿತವಾದ, ಕೈಗೆಟುಕುವ ಬೆಲೆಯ ಸೇವೆಯನ್ನು ಒದಗಿಸುತ್ತದೆ. ಹೈದರಾಬಾದ್, ಚೆನ್ನೈ, ದೆಹಲಿಯಂತಹ ನಗರಗಳಲ್ಲಿ ಟ್ಯಾಕ್ಸಿ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕಂಪನಿ ಹೇಳಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರ್‍ಯಾಪಿಡೋ ಆಟೋದ ಈ ಸಾಧನೆಯ ಕುರಿತು ಮಾತನಾಡಿರುವ ಕಂಪನಿಯ ಸಹ-ಸಂಸ್ಥಾಪಕ ಅರವಿಂದ್ ಶಂಕಾ, ಕರೋನಾ ಅವಧಿಯಲ್ಲಿ ರ್‍ಯಾಪಿಡೋ ಸುರಕ್ಷಿತ ಸಾರಿಗೆ ಸಾಧನವಾಗಿ ಹೊರಹೊಮ್ಮಿದೆ. ರ್‍ಯಾಪಿಡೋ ಆಟೋ ಟ್ಯಾಕ್ಸಿ ತನ್ನ ಗ್ರಾಹಕರಿಗೆ ಸುರಕ್ಷಿತ ಸವಾರಿಯನ್ನು ಒದಗಿಸುವ ವಿಶ್ವಾಸವನ್ನು ಹೊಂದಿದೆ.

ಕರೋನಾ ಸಾಂಕ್ರಾಮಿಕದ ಅವಧಿಯಲ್ಲಿ ದೇಶದಲ್ಲಿ ವೈಯಕ್ತಿಕ ಸಾರಿಗೆ ಸಂಪನ್ಮೂಲಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ರ್‍ಯಾಪಿಡೋ ಬೈಕ್ ಹಾಗೂ ಆಟೋಗಳು ಜನರಿಗೆ ಸುರಕ್ಷಿತ ಸಾರಿಗೆಯನ್ನು ಒದಗಿಸುತ್ತಿವೆ. ರ್‍ಯಾಪಿಡೋದಲ್ಲಿರುವ ಪ್ರತಿ ಆಟೋ ಟ್ಯಾಕ್ಸಿ ಹಾಗೂ ಬೈಕುಗಳಲ್ಲಿ ಜಿಪಿಎಸ್ ಆಧಾರಿತ ರೈಡ್ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರ್‍ಯಾಪಿಡೋ ಬಳಕೆದಾರರು ತಮ್ಮ ಸವಾರಿಗಳ ಬಗೆಗಿನ ವಿವರಗಳನ್ನು ಆ್ಯಪ್ ಮೂಲಕ ಶೇರ್ ಮಾಡಿಕೊಳ್ಳಬಹುದು. ಸವಾರಿಯ ನಂತರ ಕಂಪನಿಯು ಪ್ರತಿ ಗ್ರಾಹಕರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತದೆ. ಇದರಿಂದ ತಾನು ನೀಡುವ ಸೇವೆಯ ಬಗೆಗಿನ ಮಾಹಿತಿಯನ್ನು ಕಂಪನಿಯು ಪಡೆಯಬಹುದು. ರ್‍ಯಾಪಿಡೋ ಕಂಪನಿಯು 2015ರಲ್ಲಿ ಬೈಕ್ ಟ್ಯಾಕ್ಸಿ ಪರಿಕಲ್ಪನೆಯನ್ನು ಭಾರತದಲ್ಲಿ ಪರಿಚಯಿಸಿತು.

ರ್‍ಯಾಪಿಡೋ ಭಾರತದ ಅತಿದೊಡ್ಡ ಬೈಕ್ ಟ್ಯಾಕ್ಸಿ ಸೇವಾ ಪೂರೈಕೆದಾರ ಕಂಪನಿಯಾಗಿದೆ. ಕಂಪನಿಯು ಹತ್ತುಲಕ್ಷಕ್ಕೂ ಹೆಚ್ಚಿನ ಸವಾರಿ ಪಾಲುದಾರರೊಂದಿಗೆ 100 ನಗರಗಳಲ್ಲಿ ಸೇವೆಯನ್ನು ನೀಡುತ್ತಿದೆ. ರ್‍ಯಾಪಿಡೋ ಕಂಪನಿಯು ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಂಪನಿಯು ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಪುಣೆ ಸೇರಿದಂತೆ 100 ನಗರಗಳಲ್ಲಿ ತನ್ನ ಬೈಕ್ ಸೇವೆಯನ್ನು ನೀಡುತ್ತಿದೆ. ಸದ್ಯಕ್ಕೆ 25 ನಗರಗಳಲ್ಲಿ ಆಟೋ ಸೇವೆಯನ್ನು ಆರಂಭಿಸಲಾಗಿದೆ. ರ್‍ಯಾಪಿಡೋ ಆ್ಯಪ್ ಮೂಲಕ ಬುಕ್ಕಿಂಗ್ ಮಾಡುವವರಿಗೆ ಹಲವು ರಿಯಾಯಿತಿ ಹಾಗೂ ಕೂಪನ್'ಗಳನ್ನು ನೀಡಲಾಗುತ್ತದೆ. ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡಲಾಗುತ್ತದೆ.

ಲಾಕ್‌ಡೌನ್ ಅವಧಿಯಲ್ಲಿ ರ್‍ಯಾಪಿಡೋ ಕಂಪನಿಯು ಬಿಗ್ ಬಾಸ್ಕೆಟ್, ಬಿಗ್ ಬಜಾರ್ ಹಾಗೂ ಸ್ಪೆನ್ಸರ್'ನಂತಹ ಮಾರಾಟ ಮಳಿಗೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿತು. ರ್‍ಯಾಪಿಡೋ ಕಂಪನಿಯ ಡೋರ್ ಡೆಲಿವರಿ ಸರ್ವೀಸ್ ದೇಶದ 90 ನಗರಗಳಲ್ಲಿ ಲಭ್ಯವಿದೆ. ಡೆಲಿವರಿ ಸರ್ವೀಸ್'ಗಾಗಿ 70%ನಷ್ಟು ಚಾಲಕರು ಲಭ್ಯವಿದ್ದಾರೆ. ಕಂಪನಿಯು ತನ್ನ ವಿತರಣಾ ಸೇವೆಗಳನ್ನು ವಿಸ್ತರಿಸಲು ಗ್ರೋಫರ್ಸ್, ಡಂಜೊ, ಫ್ರೆಶ್‌ಹೋಮ್‌ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಳ್ಳಲಿದೆ.