ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಧರ್ಮೇಂದ್ರ, ಖ್ಯಾತ ಬಾಲಿವುಡ್ ನಟರಲ್ಲಿ ಒಬ್ಬರು. ಅವರು 15 ನೇ ಲೋಕ ಸಭಾ ಚುನಾವಣೆಯಲ್ಲಿ ರಾಜಸ್ತಾನದ ಬಿಕಾನೇರ್ ಲೋಕ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಗ ಅವರ ಪುತ್ರ ಸನ್ನಿ ಡಿಯೋಲ್ ಸಹ ಲೋಕಸಭಾ ಸದಸ್ಯರಾಗಿದ್ದಾರೆ. ಹಿರಿಯ ನಟ ಧರ್ಮೇಂದ್ರ ತಮ್ಮ ಬಳಿ ಇರುವ ಒಂದು ವಿಶಿಷ್ಟ ಕಾರಿನ ವೀಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಧರ್ಮೇಂದ್ರರವರು ಶೇರ್ ಮಾಡಿರುವುದು ಫಿಯೆಟ್ (Fiat) 1100 ಕಾರಿನ ಚಿತ್ರವನ್ನು. ಈ ಕಾರು 60 ವರ್ಷ ಹಳೆಯದು ಧರ್ಮೇಂದ್ರರವರು ವೀಡಿಯೊದಲ್ಲಿ ತಿಳಿಸಿದ್ದಾರೆ. ಇದು ಅವರ ಮೊದಲ ಕಾರು ಎಂದು ಹೇಳಲಾಗಿದೆ. ಈ ಕಾರಣಕ್ಕೆ ಧರ್ಮೇಂದ್ರರವರು ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅವರು 1960 ರಲ್ಲಿ ಈ ಕಾರನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಈ ಕಾರ್ ಅನ್ನು ರೂ. 18,000 ನೀಡಿ ಖರೀದಿಸಿದ್ದಾಗಿ ಹೇಳಿದ್ದಾರೆ. ಇತ್ತೀಚಿಗೆ ದೂರದರ್ಶನದ ಸಂದರ್ಶನವೊಂದರಲ್ಲಿ ಅವರು ಇದರ ಬಗ್ಗೆ ಹೇಳಿದ್ದರು. ಆ ಸಮಯದಲ್ಲಿ ರೂ. 18,000 ದೊಡ್ಡ ಮೊತ್ತವಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಕಾರು ಅವರ ಮೊದಲ ಕಾರು ಜೊತೆಗೆ ನೆಚ್ಚಿನ ವಾಹನವಾಗಿರುವುದರಿಂದ ಈ ಕಾರ್ ಅನ್ನು ಹೊಸದರಂತೆನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಈ ಕಾರಣಕ್ಕೆ 1960 ರ ಮಾದರಿಯಾದರೂ ಈ ಕಾರು ಇನ್ನೂ ಹೊಸದರಂತೆ ಕಾಣುತ್ತದೆ. ಈ ಕಾರ್ ಅನ್ನು ತಾವು ಎಂದಿಗೂ ಮಾರಾಟ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ. ಫಿಯೆಟ್ 1100 ಭಾರತೀಯ ಮಾರುಕಟ್ಟೆಯಲ್ಲಿದ್ದ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಇಟಲಿ ಮೂಲದ ಫಿಯೆಟ್ ಕಂಪನಿಯು ಭಾರತದಲ್ಲಿ ಜನಪ್ರಿಯವಾಗಲು ಈ ಕಾರು ಸಹ ಕಾರಣವಾಗಿತ್ತು.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಈ ಕಾರು ಭಾರತದಲ್ಲಿ ಕುಟುಂಬ ಸ್ನೇಹಿ ವಾಹನವಾಗಿ ಮಾರಾಟವಾಗುತ್ತಿತ್ತು. ಈ ಕಾರು ಹಲವರ ಮೊದಲ ಕಾರು ಎಂಬುದು ಗಮನಾರ್ಹ. ಈ ಕಾರಿನ ಮೇಲಿರುವ ಕ್ರೇಜ್‌ನಿಂದಾಗಿ ಹಲವಾರು ಇನ್ನೂ ನಟ ಧರ್ಮೇಂದ್ರ ಅವರಂತೆ ಹೊಸದರಂತೆ ನಿರ್ವಹಿಸುತ್ತಿದ್ದಾರೆ. ಈ ಕಾರಿನಲ್ಲಿ 1,089 ಸಿಸಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 36 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಫಿಯೆಟ್ 1100 ಕಾರ್ ಅನ್ನು ಮುಂಬೈನಲ್ಲಿ ಹೆಚ್ಚಾಗಿ ಟ್ಯಾಕ್ಸಿಗಳಾಗಿ ಬಳಸಲಾಗುತ್ತಿತ್ತು. ಹಳೆಯ ವಾಹನಗಳ ಬಳಕೆಯನ್ನು ನಿಷೇಧಿಸಿದ ನಂತರ ಫಿಯೆಟ್ 1100 ಕಾರುಗಳನ್ನು ಟ್ಯಾಕ್ಸಿಗಳಾಗಿ ಬಳಸುವುದನ್ನು ನಿಲ್ಲಿಸಲಾಗಿದೆ. ನಟ ಧರ್ಮೇಂದ್ರ ಕಾರುಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಅವರ ಗ್ಯಾರೇಜ್ ನಲ್ಲಿ ಹಲವಾರು ಐಷಾರಾಮಿ ಕಾರುಗಳಿವೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಅವರು Land Rover Range Rover, Mercedes Benz SL 500 , Mercedes Benz S Class S 550, Porsche 911, Porsche Caynne,Hyundai Santa FE, Audi Q 5, BMW X 6, BMW X 5 ಹಾಗೂ ಹಳೆಯ Pajero SFX ಕಾರುಗಳನ್ನು ಹೊಂದಿದ್ದಾರೆ. ಧರ್ಮೇಂದ್ರರವರು ತಮ್ಮ ಫಿಯೆಟ್1100 ಕಾರ್ ಅನ್ನು ತಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬನಂತೆ ನೋಡುತ್ತಾರೆ ಎಂದು ಹೇಳಲಾಗಿದೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಧರ್ಮೇಂದ್ರರವರ ಪುತ್ರ ಸನ್ನಿ ಡಿಯೋಲ್ ರವರು ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಪಂಜಾಬ್‌ನ ಗುರುದಾಸ್‌ಪುರ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿಆಯ್ಕೆಯಾಗಿದ್ದಾರೆ. ಸನ್ನಿ ಡಿಯೋಲ್ ರವರು ಇತ್ತೀಚಿಗೆ ನೀಡಿದ ಶಿಫಾರಸು ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸನ್ನಿ ಡಿಯೋಲ್ ಮಹೀಂದ್ರಾ ಕಾರು ಮಾರಾಟಗಾರರೊಬ್ಬರಿಗೆ ಶಿಫಾರಸು ಪತ್ರವನ್ನು ಬರೆದಿದ್ದರು.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಸಾಮಾನ್ಯವಾಗಿ ರಾಜಕಾರಣಿಗಳು ತಮಗೆ ಪರಿಚಯವಿರುವವರಿಗೆ ಉದ್ಯೋಗ ಕೊಡಿಸುವ ಸಲುವಾಗಿ ಅಥವಾ ಅಧ್ಯಯನಕ್ಕಾಗಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಬೇಗ ಕೆಲಸ ಮುಗಿಸುವ ಸಲುವಾಗಿ ಶಿಫಾರಸು ಪತ್ರಗಳನ್ನು ನೀಡುತ್ತಾರೆ. ಆದರೆ ಸನ್ನಿ ಡಿಯೋಲ್ ಬೇರೆ ಕಾರಣಕ್ಕೆ ಶಿಫಾರಸು ಪತ್ರ ನೀಡಿದ್ದರು. ಸನ್ನಿ ಡಿಯೋಲ್ ತಕ್ಷಣವೇ ಕಾರ್ ಅನ್ನು ವಿತರಿಸುವಂತೆ ಕಾರು ಮಾರಾಟಗಾರರಿಗೆ ಶಿಫಾರಸು ಪತ್ರ ಬರೆದಿದ್ದರು.

ಅವರು ನೀಡಿದ್ದ ಈ ಶಿಫಾರಸು ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಥಾರ್, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅತ್ಯಂತ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಕಾರು ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಕಾರಣಕ್ಕೆ ದೇಶದ ಕೆಲವು ಭಾಗಗಳಲ್ಲಿ ಈ ಎಸ್‌ಯು‌ವಿ ವಿತರಣೆ ಪಡೆಯಲು ಹಲವು ತಿಂಗಳು ಕಾಯಬೇಕಾಗಿದೆ.

ತಮ್ಮ ಮೊದಲ ಕಾರಿನ ವೀಡಿಯೊ ಶೇರ್ ಮಾಡಿದ ಹಿರಿಯ ನಟ

ಇಷ್ಟು ಬೇಡಿಕೆ ಹೊಂದಿರುವ ಎಸ್‌ಯು‌ವಿಯನ್ನು ತಕ್ಷಣವೇ ವಿತರಿಸುವಂತೆ ಸಂಸದ ಸನ್ನಿ ಡಿಯೋಲ್ ಶಿಫಾರಸು ಪತ್ರ ನೀಡಿದ್ದರು. ಈ ಪತ್ರವನ್ನು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೀಂದ್ರಾ ಕಂಪನಿಯ ಶೋರೂಂಗೆ ಬರೆಯಲಾಗಿತ್ತು. ಸನ್ನಿ ಡಿಯೋಲ್ ಈ ಶಿಫಾರಸು ಪತ್ರವನ್ನು ಸುಜನ್‌ಪುರ ಶಾಸಕರಾದ ದಿನೇಶ್ ಸಿಂಗ್ ಠಾಕೂರ್ ರವರ ಪುತ್ರಿ ಸುರ್ಬಿ ಠಾಕೂರ್ ಎಂಬುವವರಿಗಾಗಿ ಬರೆದಿದ್ದರು. ಈ ಪತ್ರದಲ್ಲಿ ಅವರು, ಸುಜಾನ್ ಪುರ ಶಾಸಕರ ಪುತ್ರಿ ಸುರ್ಬಿ ಠಾಕೂರ್ ರವರಿಗೆ ಆದ್ಯತೆಯ ಮೇರೆಗೆ ತಕ್ಷಣವೇ ಥಾರ್ ಎಸ್‌ಯು‌ವಿಯನ್ನು ನೀಡಬೇಕು ಎಂದು ಹೇಳಿದ್ದರು.

Most Read Articles

Kannada
English summary
Senior bollywood actor dharmendra shares video of his first car details
Story first published: Thursday, October 14, 2021, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X