ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

2021 ರ ಆರಂಭದಿಂದ ಜೆಕ್ ಮೂಲದ ಕಾರು ತಯಾರಕ ಕಂಪನಿಯಾದ ಸ್ಕೋಡಾ (Skoda) ಆಟೋ ಇಂಡಿಯಾ ದೇಶದಲ್ಲಿ ತನ್ನ ಮಾರಾಟ ಹಾಗೂ ಸೇವಾ ಟಚ್‌ಪಾಯಿಂಟ್‌ಗಳನ್ನು ವಿಸ್ತರಿಸುತ್ತಿದೆ. ಈಗ 2021 ಬಹುತೇಕ ಅಂತ್ಯವಾಗುತ್ತಿದೆ. ಸ್ಕೋಡಾ ಕಂಪನಿಯು ದೇಶದ ದಕ್ಷಿಣ ರಾಜ್ಯಗಳಲ್ಲಿ ತನ್ನ ಮಾರಾಟ ಜಾಲವನ್ನು 84% ನಷ್ಟು ಹೆಚ್ಚಿಸಲು ಸಮರ್ಥವಾಗಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

2020ರಲ್ಲಿ 38 ಟಚ್‌ಪಾಯಿಂಟ್‌ಗಳಿದ್ದ ಸ್ಕೋಡಾ ಡೀಲರ್ ನೆಟ್‌ವರ್ಕ್ ಸಂಖ್ಯೆ 2021 ರಲ್ಲಿ 79 ಟಚ್‌ಪಾಯಿಂಟ್‌ಗಳಿಗೆ ಏರಿಕೆಯಾಗಿದೆ. ಕಂಪನಿಯು ಬಹುತೇಕ ಎಲ್ಲಾ ಪ್ರಮುಖ ಮೆಟ್ರೋ ನಗರಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಿದೆ. ಶಿವಮೊಗ್ಗ, ಕರೂರ್, ದಿಂಡಿಗಲ್, ಮುವಾಟ್ಟುಪುಳ ಹಾಗೂ ಕಣ್ಣೂರಿನಂತಹ ನಗರಗಳಲ್ಲಿ ಕಂಪನಿಯು ತನ್ನ ಮಾರಾಟ ಜಾಲವನ್ನು ವಿಸ್ತರಿಸಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಮುಂಬರುವ ದಿನಗಳಲ್ಲಿ ಕಂಪನಿಯು ತಿರುಪತಿ, ಕರೀಂನಗರ, ಗುಲ್ಬರ್ಗ, ಬಳ್ಳಾರಿ ಹಾಗೂ ಅನಂತಪುರ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ನಿರೀಕ್ಷೆಗಳಿವೆ. ಹೊಸ ಡೀಲರ್‌ಶಿಪ್‌ಗಳ ಸೇರ್ಪಡೆ ಹಾಗೂ ಹೊಸ ಮಧ್ಯಮ ಗಾತ್ರದ ಎಸ್‌ಯುವಿಯಾದ ಕುಶಾಕ್‌ನ (Kushaq) ಬಿಡುಗಡೆಯೊಂದಿಗೆ, ಕಂಪನಿಯು ಭಾರತದ ದಕ್ಷಿಣ ರಾಜ್ಯಗಳಲ್ಲಿ ತನ್ನ ಮಾರಾಟವನ್ನು 90% ನಷ್ಟು ಹೆಚ್ಚಿಸಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಈ ಬಗ್ಗೆ ಮಾತನಾಡಿರುವ ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಝಾಕ್ ಹೊಲಿಸ್, ದಕ್ಷಿಣ ಭಾರತವು ನಮಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ನಮ್ಮ ಬೆಳವಣಿಗೆಯ ಕಾರ್ಯತಂತ್ರಕ್ಕೆ ನಿರ್ಣಾಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯಮವು ಪ್ರತಿಕೂಲತೆಯನ್ನು ಎದುರಿಸುತ್ತಿದೆ. ಇನ್ನು ಈ ಬೆಳವಣಿಗೆಯು ನಮ್ಮ ಕೇಂದ್ರೀಕೃತ ವಿಸ್ತರಣಾ ಯೋಜನೆಗೆ ಸಾಕ್ಷಿಯಾಗಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಈ ಹೊಸ ಸೌಲಭ್ಯಗಳ ಆರಂಭವು ನಮ್ಮ ವ್ಯಾಪಾರದ ಉದ್ದೇಶಗಳನ್ನು ಪೂರೈಸುವ ಪ್ರಮುಖ ಭಾಗವಾಗಿದೆ. ಇದರಿಂದ ಗ್ರಾಹಕರಿಗೆ ಅವರ ಅನುಕೂಲಕ್ಕೆ ಅನುಗುಣವಾಗಿ ಉತ್ತಮ ದರ್ಜೆಯ ಸೇವೆಗಳನ್ನು ಒದಗಿಸಬಹುದು ಎಂದು ಹೇಳಿದರು. ಇನ್ನು ಸ್ಕೋಡಾ ಕಂಪನಿಯು ತನ್ನ ಮಧ್ಯಮ ಗಾತ್ರದ ಕುಶಾಕ್ ಎಸ್‌ಯುವಿಯನ್ನು ಈ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಬಿಡುಗಡೆಯಾದ ಆರು ತಿಂಗಳೊಳಗೆ ಈ ಎಸ್‌ಯುವಿಯು 20,000 ಬುಕ್ಕಿಂಗ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಸ್ಕೋಡಾ ಕುಶಾಕ್ ಎಸ್‌ಯುವಿಯು ಕಂಪನಿಯ ಸ್ಥಳೀಯ MQB A0 IN ಪ್ಲಾಟ್‌ಫಾರಂ ಅನ್ನು ಆಧರಿಸಿದ ಮೊದಲ ಮಾದರಿಯಾಗಿದೆ. ಈ ಎಸ್‌ಯುವಿಯನ್ನು ಎರಡು ಪೆಟ್ರೋಲ್ ಎಂಜಿನ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಂಜಿನ್‌ಗಳಲ್ಲಿ 1.0 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಹಾಗೂ 1.5 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಎಂಜಿನ್ ಗಳು ಸೇರಿವೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

1.0 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಎಂಜಿನ್ 115 ಬಿ‌ಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುಯಲ್ ಹಾಗೂ 7 ಸ್ಪೀಡ್ ಡಿಸಿಟಿ (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಮತ್ತೊಂದೆಡೆ, 1.5 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುಯಲ್ ಹಾಗೂ 7 ಸ್ಪೀಡ್ ಡಿ‌ಸಿ‌ಟಿ (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್) ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಈ ಎಂಜಿನ್ 150 ಬಿ‌ಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಕೋಡಾ ಕುಶಾಕ್ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 10.50 ಲಕ್ಷಗಳಿಂದ ರೂ. 17.60 ಲಕ್ಷಗಳಾಗಿದೆ. ಈ ಎಸ್‌ಯುವಿಯು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್‌ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಇದರ ಜೊತೆಗೆ ಕುಶಾಕ್ ಎಸ್‌ಯುವಿಯಲ್ಲಿ ಇಎಸ್‌ಸಿ, ಹಿಲ್ ಹೋಲ್ಡ್ ಕಂಟ್ರೋಲ್, ರೇನ್ ಮತ್ತು ಲೈಟ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಫೀಚರ್ ಗಳನ್ನು ನೀಡಲಾಗಿದೆ. ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಈ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಐದು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಸ್ಕೋಡಾ ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಹೊಸ ಶೋರೂಂ ಅನ್ನು ತೆರೆದಿದೆ. ಕಂಪನಿಯು ತನ್ನ ನೆಟ್‌ವರ್ಕ್ ಅನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಸ್ಕೋಡಾ ಕೆಲವು ದಿನಗಳ ಹಿಂದಷ್ಟೇ ಸಿಕಂದರಾಬಾದ್‌ನಲ್ಲಿಯೂ ಹೊಸ ಡೀಲರ್‌ಶಿಪ್‌ಗಳನ್ನು ತೆರೆದಿತ್ತು, ಕಂಪನಿಯು 2022ರ ಅಂತ್ಯದ ವೇಳೆಗೆ 225 ಡೀಲರ್‌ಶಿಪ್‌ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಕಂಪನಿಯು ಇದುವರೆಗೆ ದೇಶದ 100 ನಗರಗಳಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದು ಕಂಪನಿಯ ವ್ಯಾಪ್ತಿಯನ್ನು ತೋರಿಸುತ್ತದೆ. ಈ ಶೋರೂಂ ಅನ್ನು ಮೋದಿ ಇಂಡಿಯಾ ಕಾರ್ಸ್ ಪ್ರೈವೇಟ್ ಲಿಮಿಟೆಡ್, ವಸಂತ ಆರ್ಕೇಡ್ 34 & 35, 21 & 22 ಮನ್ಸೂರಾಬಾದ್ ಗ್ರಾಮ, ಸರೂರ್ನಗರ ಮಂಡಲ್, ಎಲ್‌ಬಿ ನಗರ, ರಂಗಾ ರೆಡ್ಡಿ, ನಾಘೋಲೆ, ಹೈದರಾಬಾದ್‌ನಲ್ಲಿ ತೆರೆಯಲಾಗಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಕಂಪನಿಯು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಜೊತೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗುತ್ತಿದೆ. ಸ್ಕೋಡಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಸ್ಲಾವಿಯಾ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಈ ಕಾರಿನ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಸ್ಕೋಡಾ ಆಟೋ ತನ್ನ ಹೊಸ ಡೀಲರ್‌ಶಿಪ್‌ಗಳನ್ನು ಸಾಂಗ್ಲಿ, ಭಿಲ್ವಾರಾ, ಫರಿದಾಬಾದ್, ಪಂಚಕುಲ, ನವಸಾರಿ, ವಾಪಿ ಹಾಗೂ ಹರ್ದೋಯ್ ಸೇರಿದಂತೆ ಹಲವು ನಗರಗಳಲ್ಲಿ ತೆರೆಯಲಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಕಂಪನಿಯು ಈಗ ಎರಡನೇ ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ 90 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ. ಸ್ಕೋಡಾ ಆಟೋ ಇಂಡಿಯಾ ಈ ವರ್ಷ ಭಾರತದಲ್ಲಿ 30,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದು, ಕುಶಾಕ್ ಎಸ್‌ಯುವಿಯನ್ನು ಪ್ರಮುಖ ಕೊಡುಗೆ ನೀಡುತ್ತಿದೆ. ಕಂಪನಿಯು 2022 ರ ಅಂತ್ಯದ ವೇಳೆಗೆ ಭಾರತದಲ್ಲಿ 60,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ದಕ್ಷಿಣ ಭಾರತದಲ್ಲಿ ಹೆಚ್ಚಾದ Skoda ಟಚ್‌ಪಾಯಿಂಟ್‌ಗಳ ಸಂಖ್ಯೆ

ಸ್ಕೋಡಾ ಆಟೋ ಕಂಪನಿಯು ಸೆಡಾನ್ ಹಾಗೂ ಎಸ್‌ಯುವಿಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಬಲವಾದ ಹಿಡಿತವನ್ನು ಹೊಂದಿದೆ. ಕಂಪನಿಯು ಈ ವರ್ಷ ಭಾರತದಲ್ಲಿ ಎರಡು ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಹೊಸ ಸ್ಕೋಡಾ ಆಕ್ಟೇವಿಯಾ ಹಾಗೂ ಕುಶಾಕ್ ಎಸ್‌ಯುವಿಗಳು ಸೇರಿವೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಕೆಲವು ಮಾದರಿಗಳ ಫೇಸ್‌ಲಿಫ್ಟ್ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda auto india sales touchpoints increased in south india details
Story first published: Monday, December 13, 2021, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X