ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ (Skoda) ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಹೊಸ ಶೋರೂಂ ಅನ್ನು ತೆರೆದಿದೆ. ಕಂಪನಿಯು ತನ್ನ ನೆಟ್‌ವರ್ಕ್ ಅನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಸ್ಕೋಡಾ ಕೆಲವು ದಿನಗಳ ಹಿಂದಷ್ಟೇ ಸಿಕಂದರಾಬಾದ್‌ನಲ್ಲಿಯೂ ಹೊಸ ಡೀಲರ್‌ಶಿಪ್‌ಗಳನ್ನು ತೆರೆದಿತ್ತು, ಕಂಪನಿಯು 2022ರ ಅಂತ್ಯದ ವೇಳೆಗೆ 225 ಡೀಲರ್‌ಶಿಪ್‌ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಕಂಪನಿಯು ಇದುವರೆಗೆ ದೇಶದ 100 ನಗರಗಳಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದು ಕಂಪನಿಯ ವ್ಯಾಪ್ತಿಯನ್ನು ತೋರಿಸುತ್ತದೆ. ಈ ಶೋರೂಂ ಅನ್ನು ಮೋದಿ ಇಂಡಿಯಾ ಕಾರ್ಸ್ ಪ್ರೈವೇಟ್ ಲಿಮಿಟೆಡ್, ವಸಂತ ಆರ್ಕೇಡ್ 34 & 35, 21 & 22 ಮನ್ಸೂರಾಬಾದ್ ಗ್ರಾಮ, ಸರೂರ್ನಗರ ಮಂಡಲ್, ಎಲ್‌ಬಿ ನಗರ, ರಂಗಾ ರೆಡ್ಡಿ, ನಾಘೋಲೆ, ಹೈದರಾಬಾದ್‌ನಲ್ಲಿ ತೆರೆಯಲಾಗಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಕಂಪನಿಯು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಜೊತೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗುತ್ತಿದೆ. ಸ್ಕೋಡಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಸ್ಲಾವಿಯಾ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಈ ಕಾರಿನ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಸ್ಕೋಡಾ ಆಟೋ ತನ್ನ ಹೊಸ ಡೀಲರ್‌ಶಿಪ್‌ಗಳನ್ನು ಸಾಂಗ್ಲಿ, ಭಿಲ್ವಾರಾ, ಫರಿದಾಬಾದ್, ಪಂಚಕುಲ, ನವಸಾರಿ, ವಾಪಿ ಹಾಗೂ ಹರ್ದೋಯ್ ಸೇರಿದಂತೆ ಹಲವು ನಗರಗಳಲ್ಲಿ ತೆರೆಯಲಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಕಂಪನಿಯು ಈಗ ಎರಡನೇ ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ 90 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ. ಸ್ಕೋಡಾ ಆಟೋ ಇಂಡಿಯಾ ಈ ವರ್ಷ ಭಾರತದಲ್ಲಿ 30,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದು, ಕುಶಾಕ್ (Kushaq) ಎಸ್‌ಯುವಿಯನ್ನು ಪ್ರಮುಖ ಕೊಡುಗೆ ನೀಡುತ್ತಿದೆ. ಕಂಪನಿಯು 2022 ರ ಅಂತ್ಯದ ವೇಳೆಗೆ ಭಾರತದಲ್ಲಿ 60,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ ಆಟೋ ಕಂಪನಿಯು ಸೆಡಾನ್ ಹಾಗೂ ಎಸ್‌ಯುವಿಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಬಲವಾದ ಹಿಡಿತವನ್ನು ಹೊಂದಿದೆ. ಕಂಪನಿಯು ಈ ವರ್ಷ ಭಾರತದಲ್ಲಿ ಎರಡು ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಹೊಸ ಸ್ಕೋಡಾ ಆಕ್ಟೇವಿಯಾ ಹಾಗೂ ಕುಶಾಕ್ ಎಸ್‌ಯುವಿಗಳು ಸೇರಿವೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಕೆಲವು ಮಾದರಿಗಳ ಫೇಸ್‌ಲಿಫ್ಟ್ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಲಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಭಾರತದಲ್ಲಿ ಸ್ಕೋಡಾ ಆಟೋ ಕಂಪನಿಯು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿದೆ. ಸ್ಕೋಡಾ ಆಟೋ ಇಂಡಿಯಾ, ಫೋಕ್ಸ್‌ವ್ಯಾಗನ್ ಇಂಡಿಯಾ ಹಾಗೂ ಫೋಕ್ಸ್‌ವ್ಯಾಗನ್ ಗ್ರೂಪ್ ಸೇಲ್ಸ್ ಇಂಡಿಯಾಗಳ ಸಂಯೋಜನೆಯಲ್ಲಿ 2019 ರಲ್ಲಿ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ರಚಿಸಲಾಯಿತು.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಈ ಎರಡೂ ಜರ್ಮನಿ ಕಂಪನಿಗಳು ಭಾರತದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಕ್ರೋಢೀಕರಿಸಲು ಹಾಗೂ ಚಂಚಲತೆಯನ್ನು ನಿಭಾಯಿಸಲು ನೆರವಾಗುವ ಸಲುವಾಗಿ ಈ ಪಾಲುದಾರಿಕೆಯನ್ನು ಮಾಡಿಕೊಂಡಿವೆ. ಫೋರ್ಡ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಸ್ಕೋಡಾ ಕಂಪನಿಯು ಸಹ ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ ಎಂಬ ಊಹಾಪೋಹಗಳು ಹರಡಿದ್ದವು.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸ್ಕೋಡಾ ಇಂಡಿಯಾ ನಿರ್ದೇಶಕ ಜಾಕ್ ಹೋಲಿಸ್, ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ರೂ. 8,000 ಕೋಟಿ ಹೂಡಿಕೆ ಮಾಡಿದೆ. ಕಂಪನಿಯು ಭಾರತದಿಂದ ಹೊರ ಹೋಗುವುದಾದರೆ ಈ ಹೂಡಿಕೆಯನ್ನು ಏಕೆ ಮಾಡುತ್ತದೆ ಎಂದು ಪ್ರಶ್ನಿಸಿದ್ದರು. ಕಂಪನಿಯು ಭಾರತದಲ್ಲಿ ದೀರ್ಘಾವಧಿ ಭವಿಷ್ಯ ಹಾಗೂ ಮುಂಬರುವ ದಿನಗಳಲ್ಲಿ ಹೊಸ ಉತ್ಪನ್ನಗಳನ್ನು ಆರಂಭಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದರು.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ ಆಟೋ ಮೆಟ್ರೋ ಅಲ್ಲದ ನಗರಗಳಲ್ಲಿಯೂ ಕಾಂಪ್ಯಾಕ್ಟ್ ವರ್ಕ್‌ಶಾಪ್‌ಗಳನ್ನು ತೆರೆಯುವುದಾಗಿ ತಿಳಿಸಿದೆ. ಈ ನಗರಗಳಲ್ಲಿನ ಮಾರಾಟ ಹಾಗೂ ಡೀಲರ್ ಶಾಖೆಗಳೊಂದಿಗೆ ಈ ಕಾಂಪ್ಯಾಕ್ಟ್ ಕಾರ್ಯಾಗಾರಗಳನ್ನು ಸಂಯೋಜಿಸಲಾಗುತ್ತದೆ ಹಾಗೂ ಗ್ರಾಹಕರ ಮಾರಾಟದ ನಂತರದ ಸೇವೆಯ ಅಗತ್ಯತೆಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 30 ಕಾಂಪ್ಯಾಕ್ಟ್ ವರ್ಕ್‌ಶಾಪ್‌ಗಳನ್ನು ತೆರೆಯಲು ಸ್ಕೋಡಾ ಸಿದ್ಧತೆ ನಡೆಸಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ ಕುಶಾಕ್‌ನಂತಹ ವಾಹನವನ್ನು ನೀಡುವುದು ಕಂಪನಿಗೆ ಯುದ್ಧದಂತಿದೆ. ಗ್ರಾಹಕರನ್ನು ಉತ್ತಮವಾಗಿ ತಲುಪಲು ಭಾರತದಲ್ಲಿ ಸೇವಾ ನೆಟ್‌ವರ್ಕ್ ಅನ್ನು ವಿಸ್ತರಿಸುವ ಅಗತ್ಯವಿದೆ ಎಂದು ಜಾಕ್ ಹೋಲಿಸ್ ಹಲವು ಬಾರಿ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಕುಶಾಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿದ ನಂತರ ಕಂಪನಿಯ ನೆಟ್‌ವರ್ಕ್ 25% ನಷ್ಟು ಬೆಳೆದಿದೆ ಎಂದು ಸ್ಕೋಡಾ ಕಂಪನಿ ಹೇಳಿಕೊಂಡಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ ಆಟೋ ಇಂಡಿಯಾ ಕೆಲವು ದಿನಗಳ ಹಿಂದಷ್ಟೇ ತನ್ನ ಮಧ್ಯಮ ಗಾತ್ರದ ಕುಶಾಕ್‌ ಎಸ್‌ಯುವಿಯ ಮೂಲ ಮಾದರಿಯಾದ ಆಕ್ಟಿವ್ ಬೆಲೆಯನ್ನು ರೂ. 30,000 ಗಳಷ್ಟು ಏರಿಕೆ ಮಾಡಿತ್ತು. ಈ ಬೆಲೆ ಏರಿಕೆಯ ನಂತರ ಆಕ್ಟಿವ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 10.79 ಲಕ್ಷಗಳಾಗಿದೆ. ಇನ್ನು ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 18 ಲಕ್ಷಗಳಾಗಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ ಕಂಪನಿಯು ಜೂನ್ ತಿಂಗಳಲ್ಲಿ ಕುಶಾಕ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದಾಗಿನಿಂದ ಈ ಎಸ್‌ಯುವಿಯು ಮಾರಾಟದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಕಂಪನಿಯು ಕೇವಲ ನಾಲ್ಕು ತಿಂಗಳಲ್ಲಿ ಈ ಎಸ್‌ಯುವಿಗಾಗಿ 15,000 ಬುಕಿಂಗ್‌ಗಳನ್ನು ಸ್ವೀಕರಿಸಿದ್ದು, ಅದರ ಮಾರಾಟ ಪ್ರಮಾಣವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಸ್ಕೋಡಾ ಕುಶಾಕ್‌ ಎಸ್‌ಯುವಿಯು 15,000 ಕ್ಕೂ ಹೆಚ್ಚು ಯುನಿಟ್‌ ಬುಕಿಂಗ್ ಗಳನ್ನು ಪಡೆದಿರುವುದು ಕಂಪನಿಯ ದೊಡ್ಡ ಸಾಧನೆಯಾಗಿದೆ. ಸ್ಕೋಡಾ ಕುಶಾಕ್ ಅನ್ನು ಕಂಪನಿಯು MQB-A0-IN ಪ್ಲಾಟ್ ಫಾರಂ ಬಳಸಿಕೊಂಡು ಸಿದ್ಧಪಡಿಸಿದೆ. ಈ ಎಸ್‌ಯುವಿಯಲ್ಲಿ ಕಂಪನಿಯು 95% ನಷ್ಟು ಸ್ಥಳೀಕರಣವನ್ನು ಬಳಸಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಕಂಪನಿಯು ಭವಿಷ್ಯದಲ್ಲಿ ಈ ಎಸ್‌ಯುವಿಯ ಎಲ್ಲಾ ಯುನಿಟ್ ಗಳನ್ನು ಭಾರತದಲ್ಲಿಯೇ ಉತ್ಪಾದಿಸಲಿದೆ. ಸ್ಕೋಡಾ ಕುಶಾಕ್‌ ಎಸ್‌ಯುವಿಯಲ್ಲಿ ಸ್ಕೋಡಾ ಕಂಪನಿಯ ಐಕಾನಿಕ್ ಫ್ರಂಟ್ ಗ್ರಿಲ್ ಅಳವಡಿಸಲಾಗಿದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್ ಹಾಗೂ ಎಲ್‌ಇಡಿ ಟೈಲ್ ಲೈಟ್‌ಗಳನ್ನು ನೀಡಲಾಗಿದೆ.

ಮತ್ತೊಂದು ಹೊಸ ಶೋರೂಂ ತೆರೆದ Skoda ಇಂಡಿಯಾ

ಕಾರಿನ ಮುಂಭಾಗವು ದೊಡ್ಡ ಏರ್ ಡ್ಯಾಮ್ ಹೊಂದಿದ್ದರೆ, ಕೆಳ ಭಾಗದಲ್ಲಿ ನೇರವಾದ ಬಾನೆಟ್ ನೀಡಲಾಗಿದೆ. ಇನ್ನು ಈ ಎಸ್‌ಯುವಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್‌, ಇಎಸ್‌ಸಿ, ಹಿಲ್ ಹೋಲ್ಡ್ ಕಂಟ್ರೋಲ್, ರೇನ್ ಹಾಗೂ ಲೈಟ್ ಸೆನ್ಸಾರ್, ಕ್ರೂಸ್ ಕಂಟ್ರೋಲ್ ಹಾಗೂ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಂತಹ ಫೀಚರ್ ಗಳನ್ನು ನೀಡಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda india opens new dealership in hyderabad details
Story first published: Tuesday, November 30, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X