ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಕಾರು ಮಾದರಿಯಾದ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಕಾರಿನ 1.5-ಲೀಟರ್ ಮಾದರಿಯನ್ನು ವಿತರಣೆ ಮಾಡಲು ಸಜ್ಜಾಗುತ್ತಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಸದ್ಯಕ್ಕೆ 1.0-ಲೀಟರ್ ಪೆಟ್ರೋಲ್ ಮಾದರಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆ. 1.5-ಲೀಟರ್ ಮಾದರಿಯ ಬೆಲೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದರೂ ಕಾರಣಾಂತರಗಳಿಂದ ಹೈ ಎಂಡ್ ಮಾದರಿಯ ವಿತರಣೆಯನ್ನು ವಿಳಂಬ ಮಾಡಿದ್ದ ಕಂಪನಿಯು ಇದೀಗ 1.5-ಲೀಟರ್ ಮಾದರಿಯನ್ನು ಸಹ ಮುಂದಿನ ತಿಂಗಳು ವಿತರಣೆ ಮಾಡುವ ಭರವಸೆ ನೀಡಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಸ್ಕೋಡಾ ಕಂಪನಿಯು 1.0-ಲೀಟರ್ ಸಾಮರ್ಥ್ಯದ ಕುಶಾಕ್ ಮಾದರಿಯ ಜೊತೆಯಲ್ಲಿಯೇ ಬೆಲೆ ವಿವರಣೆ ಮತ್ತು ತಾಂತ್ರಿಕ ಸೌಲಭ್ಯಗಳ ಮಾಹಿತಿಯನ್ನು ಹಂಚಿಕೊಂಡಿದ್ದು, ಬುಕ್ಕಿಂಗ್ ಸಹ ಪಡೆದುಕೊಳ್ಳುತ್ತಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

1.0-ಲೀಟರ್ ಮಾದರಿಯ ಜೊತೆಯಲ್ಲಿಯೇ ಬಿಡುಗಡೆಯಾಗಬೇಕಿದ್ದ 1.5-ಲೀಟರ್ ಮಾದರಿಯನ್ನು ಕಾರಣಾಂತರಗಳಿಂದ ತಡೆಹಿಡಿದ್ದು, ಅಗಸ್ಟ್ 11ರಿಂದ ಹೊಸ ಕಾರು ವಿತರಣೆಯಾಗಲಿದೆ ಎಂದು ಸ್ಕೋಡಾ ಇಂಡಿಯಾ ಮುಖ್ಯಸ್ಥರೇ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಕುಶಾಕ್ ಕಾರಿನ 1.5-ಲೀಟರ್ ಮಾದರಿಯ ಬಿಡುಗಡೆಯ ಕುರಿತು ಗ್ರಾಹಕರ ಕೇಳಿರುವ ಪ್ರಶ್ನೆಗಳಿಗೆ ಟ್ವಿಟರ್ ಮೂಲಕವೇ ಪ್ರಕ್ರಿಯೆಸಿರುವ ಜಾಕ್ ಹೊಲಿಸ್ ಅವರು ಅಗಸ್ಟ್ 11ರಿಂದ ಡೀಲರ್ಸ್ ಬಳಿ ಹೊಸ ಕಾರು ಲಭ್ಯವಿರಲಿದೆ ಎನ್ನಲಾಗಿದ್ದು, ಕುಶಾಕ್ ಕಾರಿನ ಮತ್ತೊಂದು ಹೈ ಎಂಡ್ ಮಾದರಿಯಾದ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆಯ ಕುರಿತಾದ ಗ್ರಾಹಕರ ಪ್ರಶ್ನೆಗೆ ಜಾಕ್ ಹೊಲಿಸ್ ಸದ್ಯಕ್ಕೆ ಹೊಸ ಮಾದರಿಯ ಬಿಡುಗಡೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಇನ್ನು ಹೊಸ ಕುಶಾಕ್ ಕಾರು ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಎಂಜಿನ್ ಆಯ್ಕೆಗೆ ಅನುಗುಣವಾಗಿ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆ ಸೇಫ್ಟಿ ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದ್ದು, ಹೊಸ ಕಾರು ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿ 3 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.59 ಲಕ್ಷ ಬೆಲೆ ಹೊಂದಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದ್ದು, ಕಾರಿನ ಒಳಭಾಗದಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಶೀಘ್ರದಲ್ಲೇ ಆರಂಭವಾಗಲಿದೆ 1.5-ಲೀಟರ್ ಸ್ಕೋಡಾ ಕುಶಾಕ್ ಕಾರಿನ ವಿತರಣೆ

ಜೊತೆಗೆ ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಮಲ್ಟಿ ಫಂಕ್ಷನಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಮೈ ಸ್ಕೋಡಾ ಕಾರ್ ಕನೆಕ್ಟ್ ಆ್ಯಪ್, ಸ್ಮಾರ್ಟ್ ಬಾಟಲ್ ಹೋಲ್ಡರ್ ಮತ್ತು ಸ್ಕೋಡಾ ಸೌಂಡ್ ಸಿಸ್ಟಂ ಸೌಲಭ್ಯವಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

Most Read Articles

Kannada
English summary
Skoda Kushaq 1.5L TSI Deliveries To Commence From 11th August. Read in Kannada.
Story first published: Tuesday, July 20, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X