ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ 2022ರ ಕರೋಕ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್(Skoda Karoq Facelift) ಎಸ್‌ಯುವಿಯ ವಿನ್ಯಾಸ ಬದಲಾವಣೆಗಳು, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಂಜಿನ್ ದಕ್ಷತೆಯೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ವಿಡಬ್ಕ್ಯು ಗ್ರೂಪ್‌ಗೆ ಕರೋಕ್ ಅತ್ಯಂತ ಯಶಸ್ವಿ ಉತ್ಪನ್ನವಾಗಿದೆ. ಮಾರಾಟವನ್ನು ಇನ್ನಷ್ಟು ಸುಧಾರಿಸುವ ಸಲುವಾಗಿ ಕರೋಕ್ ಎಸ್‍ಯುವಿಯನ್ನು ಹೊಸ ಬದಲಾವಣೆಗಳೊಂದಿಗೆ ಪರಿಚಯಿಸುತ್ತಿದೆ. ಈ ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್ ಎಸ್‍ಯುವಿಯ ಸ್ಟೈಲಿಂಗ್ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಇದರಲ್ಲಿ ಹೊಸ ಮತ್ತು ಸ್ಲಿಮ್ಮರ್ ಎಲ್ಇಡಿ ಹೆಡ್‌ಲೈಟ್ ಮತ್ತು ಟೈಲ್-ಲೈಟ್ ಮತ್ತು ಪರಿಷ್ಕೃತ ಗ್ರಿಲ್ ಮತ್ತು ಬಾಡಿಯ ಬಣ್ಣದ ಬಂಪರ್‌ಗಳನ್ನು ಪಡೆದುಕೊಂದಿದೆ, ಈ ಹೊಸ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಎಸ್‍ಯುವಿಯ ಹಿಂಭಾಗದಲ್ಲಿ ಉದ್ದವಾದ ಸ್ಪಾಯ್ಲರ್, ಏರ್ ಕರ್ಟನ್‌ಗಳೊಂದಿಗೆ ಮುಂಭಾಗದ ಏಪ್ರನ್ ಮತ್ತು 17, 18 ಮತ್ತು 19-ಇಂಚಿನ ಹೊಸ ಅಲಾಯ್ ವ್ಹೀಲ್ ವಿನ್ಯಾಸಗಳೊಂದಿಗೆ ಬರುತ್ತದೆ. ಇದರ ಜೊತೆಗೆ, ಹೊಸ ಕರೋಕ್ ಎಸ್‍ಯುವಿ ಏರೋಡೈನಾಮಿಕ್ ಆಪ್ಟಿಮೈಸ್ಡ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಈ ಎಸ್‍ಯುವಿಯಲ್ಲಿ ವಿನ್ಯಾಸ ಬದಲಾವಣೆಗಳು ಡ್ರ್ಯಾಗ್ ಅನ್ನು 9 ಪ್ರತಿಶತದಷ್ಟು ಕಡಿಮೆ ಮಾಡಿ 0.30 ಸಿಡಿಗೆ ಇಳಿಸಿದೆ ಎಂದು ಸ್ಕೋಡಾ ಹೇಳಿಕೊಂಡಿದೆ, ಇದು ತನ್ನ ವಿಭಾಗದಲ್ಲಿನ ಅತ್ಯಂತ ಏರೋಡೈನಾಮಿಕ್ ಕಾರುಗಳಲ್ಲಿ ಒಂದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಸ್ಕೋಡಾ ಇಕೋ ಪ್ಯಾಕ್ ಅನ್ನು ಸಹ ಪರಿಚಯಿಸಿದೆ, ಇದು ಕ್ಯಾಬಿನ್ ಒಳಗೆ ಬಹು ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಲೆದರ್ ಸೀಟ್ ಕವರ್‌ಗಳು ಮತ್ತು 'ಸ್ಯೂಡಿಯಾ' (ಮೈಕ್ರೋಸ್ಯೂಡ್) ನಿಂದ ಮಾಡಿದ ಹೊಸ ಡೋರ್ ಟ್ರಿಮ್‌ಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರಲ್ಲಿ 8-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್ ಪ್ಲೇಯೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಇದು ಮ್ಯಾನುವಲ್ ಡಯಲ್‌ಗಳನ್ನು ಬದಲಾಯಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಇದು ಫ್ರಂಟ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಟ್ರಾಫಿಕ್ ಸೈನ್ ರೆಕಗ್ನಿಷನ್‌ನಂತಹ ಟ್ರಾವೆಲ್ ಅಸಿಸ್ಟ್ ಸಿಸ್ಟಮ್‌ಗಳನ್ನು ಸಹ ಪಡೆಯುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಹೊಂದಿಕೊಳ್ಳುತ್ತದೆ. ಇದು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸಹ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಈ ಹೊಸ ಎಸ್‍ಯುವಿಯ ಬಾಡಿ-ಬಣ್ಣ ಸ್ಪಾಯ್ಲರ್, 17-ಇಂಚಿನ ವ್ಹೀಲ್ ಗಳು ಮತ್ತು ಬಾಹ್ಯ ಏರೋ ಟ್ರಿಮ್ ಅನ್ನು ಹೊಂದಿದ್ದು ಅದು ಗಾಳಿಯ ಪ್ರಕ್ಷುಬ್ಧತೆಯನ್ನು ಕಡಿಮೆ ಮಾಡುತ್ತದೆ. ಈ ಎಸ್‍ಯುವಿಯಲ್ಲಿ ಸ್ಪೋರ್ಟ್‌ಲೈನ್ ಟ್ರಿಮ್ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು ಮತ್ತು 18-ಅಲಾಯ್ ವ್ಹೀಲ್ ಗಳನ್ನು ನೀಡುತ್ತದೆ. ಇನ್ನು ವಿಂಡೋ ಫ್ರೇಮ್, ರೂಫ್ ರೈಲ್ಸ್, ಹಿಂಭಾಗದ ಡಿಫ್ಯೂಸರ್ ಮತ್ತು ವ್ಹೀಂಗ್ ಮೀರರ್ಸ್ ಗಳು ಬ್ಲ್ಯಾಕ್ ಟ್ರಿಮ್ನೊಂದಿಗೆ ಸ್ಕೋಡಾದ ಬ್ಲ್ಯಾಕ್ ಪ್ಯಾಕ್ ಅನ್ನು ಸಹ ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

2022ರ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್ 5 ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಇದು ಮೂರು ಪೆಟ್ರೋಲ್ ಮತ್ತು ಎರಡು ಡೀಸೆಲ್. ಪೆಟ್ರೋಲ್ ಎಂಜಿನ್ ಗಳಾಗಿದೆ, ಇದರಲ್ಲಿ 1.0 ಲೀಟರ್ ಟರ್ಬೋ ಎಂಜಿನ್ 110 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 147 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 187 ಬಿಹೆಚ್‍ಪಿ ಪವರ್ ಉತ್ಪಾದಿಸುವ 2.0 ಲೀಟರ್ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಇನ್ನು ಈ ಎಸ್‍ಯುವಿಯ 2.0 ಲೀಟರ್ ಎಂಜಿನ್ 116 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಎಂಜಿನ್ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಗಳು 6-ಮ್ಯಾನುವಲಿ ಮತ್ತು 7-ಸ್ಪೀಡ್ ಡಿಎಸ್ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಒಳಗೊಂಡಿವೆ. ಈ ಎಸ್‍ಯುವಿಯಲ್ಲಿ ಸುರಕ್ಷತಾ ಫೀಚರ್ ಗಳಾಗಿ, 9 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಇಎಸ್‌ಸಿ, ಹಿಲ್-ಸ್ಟಾರ್ಟ್ ಅಸಿಸ್ಟ್ ಫ್ರಂಟ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಸ್ಕೋಡಾ ಕಂಪನಿಯು ಮೊದಲ ಬಾರಿಗೆ ಕರೋಕ್ ಎಸ್‍ಯುವಿಯನ್ನು 2017 ರಲ್ಲಿ ಪರಿಚಯಿಸಲಾಯಿತು, ಕರೋಕ್‌ನ ಐದು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗಿದೆ. ಇದು ಪ್ರಸ್ತುತ 60 ದೇಶಗಳಲ್ಲಿ ಮಾರಾಟದಲ್ಲಿದೆ ಮತ್ತು ಜೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾದಲ್ಲಿ ಹಾಗೂ ರಷ್ಯಾ ಮತ್ತು ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಇನ್ನು ಸ್ಕೋಡಾ ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಹೊಸ ಶೋರೂಂ ಅನ್ನು ತೆರೆದಿದೆ. ಕಂಪನಿಯು ತನ್ನ ನೆಟ್‌ವರ್ಕ್ ಅನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಸ್ಕೋಡಾ ಕೆಲವು ದಿನಗಳ ಹಿಂದಷ್ಟೇ ಸಿಕಂದರಾಬಾದ್‌ನಲ್ಲಿಯೂ ಹೊಸ ಡೀಲರ್‌ಶಿಪ್‌ಗಳನ್ನು ತೆರೆದಿತ್ತು,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ಕಂಪನಿಯು 2022ರ ಅಂತ್ಯದ ವೇಳೆಗೆ 225 ಡೀಲರ್‌ಶಿಪ್‌ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಸ್ಕೋಡಾ ಕಂಪನಿಯು ಇದುವರೆಗೆ ದೇಶದ 100 ನಗರಗಳಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ಹೊಂದಿದೆ. ಇದು ಕಂಪನಿಯ ವ್ಯಾಪ್ತಿಯನ್ನು ತೋರಿಸುತ್ತದೆ. ಸ್ಕೋಡಾ ಕರೋಕ್ ಈ ವರ್ಷದ ಆರಂಭದವರೆಗೂ ಭಾರತದಲ್ಲಿ ಮಾರಾಟವಾಗಿತ್ತು. ಇದನ್ನು CBU (ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್) ಎಂದು ಪ್ರಾರಂಭಿಸಲಾಯಿತು ಬಿಡುಗಡೆಗೊಂಡ ಬಳಿಕ ಆರಂಭಿಕವಾಗಿ ಬಹಳಷ್ಟು ಮಾರಾಟವಾಯಿತು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Skoda Karoq ಫೇಸ್‌ಲಿಫ್ಟ್ ಎಸ್‌ಯುವಿ

ನಂತರ ಕಂಪನಿಯು ಭಾರತದಲ್ಲಿ ಈ ಕರೋಕ್ ಅನ್ನು ಸ್ಥಗಿತಗೊಳಿಸಿತ್ತು. ಏಕೆಂದರೆ ಇದೀಗ ಸ್ಕೋಡಾ ಹೊಸ ಸ್ಕೋಡಾ ಕುಶಾಕ್‌ನತ್ತ ಗಮನ ಹರಿಸಲಾಗಿದೆ.ಇನ್ನು ಹೊಸ ಸ್ಕೋಡಾ ಕರೋಕ್ ಫೇಸ್‌ಲಿಫ್ಟ್‌ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda officially revealed new karoq facelift premium suv details
Story first published: Wednesday, December 1, 2021, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X