ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಭಾರತದಲ್ಲಿ ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆಗೆ ಕಾಯುತ್ತಿದ್ದಂತೆ. ಸ್ಕೋಡಾ ಕಂಪನಿಯು ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಸೆಡಾನ್‌ನ ಪ್ರೊ ಮಾದರಿಯನ್ನು ಪ್ರದರ್ಶಿಸಿದ್ದಾರೆ. ಈ ಹೊಸ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು ಲಿಕ್ವಿಡ್ ಕ್ರಿಸ್ಟಲ್ ಲೈನ್ ವಿನ್ಯಾಸವನ್ನು ಹೊಂದಿದೆ.

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಸ್ಕೋಡಾ ಆಕ್ಟೀವಿಯಾ ಪ್ರೊ ಸೆಡಾನ್‌ನ ಲಾಂಗ್ ವ್ಹೀಲ್‌ಬೇಸ್ ಆವೃತ್ತಿಯಾಗಿದೆ. ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಆಕ್ಟೀವಿಯಾ ಪ್ರೊ ಕಾರು ಖ್ಯವಾಗಿ ಚೀನೀ ಮಾರುಕಟ್ಟೆಗೆ ಸಂಬಂಧಿಸಿದೆ ಮತ್ತು ಅದರ ಗಾತ್ರದಲ್ಲಿ ಮಾತ್ರವಲ್ಲದೆ ಅದರ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿಯೂ ಭಿನ್ನವಾಗಿದೆ. ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು 2,730 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಇನ್ನು ಹೊಸ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು 4,753 ಎಂಎಂ ಉದ್ದವನ್ನು ಹೊಂದಿದೆ. ಇದು ಸಾಮಾನ್ಯ ಆವೃತ್ತಿಗಿಂತ 64 ಎಂಎಂ ಹೆಚ್ಚು ಉದ್ದವಿದೆ. ಇನ್ನು ಸ್ಕೋಡಾ ಆಕ್ಟೀವಿಯಾ ಪ್ರೊ ಕಾರಿನ ಹೆಚ್ಚುವರಿ ವಿನ್ಯಾಸವು ಸಾಮಾನ್ಯ ಆಕ್ಟೀವಿಯಾ ಕಾರಿಗೆ ಹೋಲುವಂತಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಆದರೂ ಇದು ಆರ್ಎಸ್ ಮಾದರಿಗಳಿಗೆ ಹೋಲುವ ಸ್ವಲ್ಪ ವಿಭಿನ್ನವಾಗಿ ಕಾಣುವ ಬಂಪರ್‌ಗಳನ್ನು ಸಂಯೋಜಿಸುತ್ತದೆ. ಇನ್ನು ಈ ಹೊಸ ಆಕ್ಟೀವಿಯಾ ಪ್ರೊ ಕಾರಿನಲ್ಲಿರುವ 18 ಇಂಚಿನ ವ್ಹೀಲ್, ಪ್ಲೋಟಿಂಗ್ ರೂಫ್ ರೈಲ್ ಮತ್ತು ಮೀರರ್ ಗಳು ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಇನ್ನು ಹೊಸ ಕಾರಿನ ಇಂಟಿರಿಯರ್ ನಲ್ಲಿ ಹಲವಾರು ವಿನೂತನ ಫೀಚರ್ಸ್ ಗಳನ್ನು ನೀಡಿದ್ದಾರೆ. ಈ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರಿನಲ್ಲಿ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 12.0-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಹೆಚ್ಚುವರಿ ವೆಚ್ಚದಲ್ಲಿ ಹೆಡ್-ಅಪ್ ಡಿಸ್ ಪ್ಲೇಯನ್ನು ನೀಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಸ್ಕೋಡಾ ಆಕ್ಟೀವಿಯಾ ಪ್ರೊ ಕಾರಿನಲ್ಲಿ 1.4-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಎಂಜಿನ್ ಅನ್ನು 7-ಸ್ಪೀಡ್ ಡಿಎಸ್ಜಿ ಡಬಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೊಸ ಸ್ಕೋಡಾ ಆಕ್ಟೀವಿಯಾ ಪ್ರೊ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಕರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿರುವುದರಿಂದ ಹೊಸ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆಯು ಮತ್ತಷ್ಟು ವಿಳಂಬವಾಗಬಹುದು.

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಸ್ಕೋಡಾ ಕಂಪನಿಯು ಔರಂಗಾಬಾದ್‌ನ ಘಟಕದಲ್ಲಿ ತನ್ನ ಆಕ್ಟೀವಿಯಾ ಕಾರಿನ ಉತ್ಪಾದನೆಯನ್ನು ಈಗಗಾಲೇ ಪ್ರಾರಂಭಿಸಿದೆ. ಈ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಸೈ ಚಿತ್ರಗಳು ಬಹಿರಂಗವಾಗಿವೆ.

ಶಾಂಘೈ ಆಟೋ ಶೋನಲ್ಲಿ ಆಕ್ಟೀವಿಯಾ ಪ್ರೊ ಕಾರನ್ನು ಪ್ರದರ್ಶಿಸಿದ ಸ್ಕೋಡಾ

ಇದರಿಂದ ಈ ಹೊಸ ಆಕ್ಟೀವಿಯಾ ಕಾರು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹಲವರು ನಿರೀಕ್ಷಿಸಿದ್ದರು, ಆದರೆ ಕೊರೋನಾದಿಂದ ಬಿಡುಗಡೆ ತಡವಾಗಲಿದೆ. ನಾಲ್ಕನೇ ತಲೆಮಾರಿ ಸ್ಕೋಡಾ ಆಕ್ಟೀವಿಯಾ ಕಾರು ಹಲವು ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Showcases Octavia Pro At The Shanghai Auto Show. Read In Kananda.
Story first published: Thursday, April 22, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X