ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ 7 ಸೀಟುಗಳ ಹೊಸ ಸಫಾರಿ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.14.69 ಲಕ್ಷಗಳಿಂದ ರೂ.21.45 ಲಕ್ಷಗಳಾಗಿದೆ.

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಹೆಸರನ್ನು ಹೊರತುಪಡಿಸಿ ಈ ಹಿಂದೆ ಮಾರಾಟದಲ್ಲಿದ್ದ ಟಾಟಾ ಸಫಾರಿ ಎಸ್‌ಯುವಿಗೂ, ಈಗ ಮಾರಾಟವಾಗುತ್ತಿರುವ ಹೊಸ ಸಫಾರಿ ಎಸ್‌ಯುವಿಗೂ ಯಾವುದೇ ಸಂಬಂಧವಿಲ್ಲ. 7 ಸೀಟುಗಳ ಹೊಸ ಸಫಾರಿ ಎಸ್‌ಯುವಿಯು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಹೊಸ ತಲೆಮಾರಿನ ಸಫಾರಿ ಎಸ್‌ಯುವಿಯ 10 ಯೂನಿಟ್'ಗಳನ್ನು ಒಂದೇ ಬಾರಿಗೆ ವಿತರಿಸಲಾಗಿದೆ. ಈ ಬಗ್ಗೆ ಸಿಂಕ್ರೋಮೆಶ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಈ ವೀಡಿಯೊದಲ್ಲಿ ಕೇರಳದ ಕೊಚ್ಚಿನ್‌ನಲ್ಲಿರುವ ಶ್ರೀ ಗೊಕುಲಂ ಮೋಟಾರ್ಸ್ ಮೂಲಕ ಗ್ರಾಹಕರಿಗೆ ತಲುಪಿಸಲು ಸಿದ್ಧವಾಗಿರುವ 10 ಸಫಾರಿ ಎಸ್‌ಯುವಿಗಳನ್ನು ಕಾಣಬಹುದು.

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಈ 10 ಸಫಾರಿ ಎಸ್‌ಯುವಿಗಳಲ್ಲಿ ಹೆಚ್ಚಿನವು ಪನೋರಾಮಿಕ್ ಸನ್‌ರೂಫ್ ಹೊಂದಿರುವುದನ್ನು ಸಹ ಕಾಣಬಹುದು. ಗ್ರಾಹಕರೊಬ್ಬರು ಸಫಾರಿ ಎಸ್‌ಯುವಿ ಸ್ಪೋರ್ಟಿ ಆವೃತ್ತಿಯಾದ ಅಡ್ವೆಂಚರ್ ಪರ್ಸೊನಾವನ್ನು ಬುಕ್ಕಿಂಗ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಈ ಮಾದರಿಯು ಟಾಪ್ ಎಕ್ಸ್‌ ಝಡ್ ಪ್ಲಸ್ ಮಾದರಿಯಲ್ಲಿ ಲಭ್ಯವಿದೆ. ಈ ಆವೃತ್ತಿಯ ಇಂಟಿರಿಯರ್ ಅನ್ನು ಗಾಢ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಹ್ಯಾರಿಯರ್‌ ಪ್ಲಾಟ್‌ಫಾರಂನಲ್ಲಿ ವಿನ್ಯಾಸಗೊಳಿಸಲಾಗಿರುವ ಸಫಾರಿ ಎಸ್‌ಯುವಿಯು ಮೂರನೇ ಸಾಲಿನಲ್ಲಿ ಹೆಚ್ಚುವರಿ ಉದ್ದವನ್ನು ಹೊಂದಿದೆ.

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಅಡ್ವೆಂಚರ್ ಪರ್ಸೊನಾ ಆವೃತ್ತಿಯನ್ನು ಹೊರತುಪಡಿಸಿ ಇತರ ಎಲ್ಲಾ ಮಾದರಿಗಳು ಬಿಳಿ ಬಣ್ಣದ ಇಂಟಿರಿಯರ್ ಅನ್ನು ಹೊಂದಿವೆ. ಎಲ್ಲಾ ಮಾದರಿಗಳಲ್ಲಿ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಇವುಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಡಿಮ್ ಐಆರ್‌ವಿಎಂ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಹಾಗೂ ಜೆಬಿಎಲ್ ಸ್ಪಾರ್ಕಲ್'ಗಳು ಸೇರಿವೆ.

7 ಸೀಟುಗಳ ಈ ಎಸ್‌ಯುವಿಯ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಹಾಗೂ ಬೆಂಚ್ ಸೀಟ್ ಆಯ್ಕೆಯನ್ನು ನೀಡಲಾಗಿದೆ. ಹೊಸ ಟಾಟಾ ಸಫಾರಿ ಎಸ್‌ಯುವಿಯಲ್ಲಿ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಂದೇ ಬಾರಿಗೆ 10 ಯುನಿಟ್ ಟಾಟಾ ಸಫಾರಿ ಎಸ್‌ಯುವಿ ವಿತರಿಸಿದ ಟಾಟಾ ಮೋಟಾರ್ಸ್

ಹೊಸ ಟಾಟಾ ಸಫಾರಿ ಎಸ್‌ಯುವಿಯಲ್ಲಿ ಫಿಯೆಟ್‌ನ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್'ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ 167 ಬಿ‌ಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಚಿತ್ರ ಕೃಪೆ: ಸಿಂಕ್ರೋಮೆಶ್

Most Read Articles

Kannada
English summary
Tata Motors delivers 10 Safari SUVs at the same time in Kochi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X