ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆ ಜಾರಿಗೆ ಸಿದ್ದವಾದ ಟಾಟಾ ಮೋಟಾರ್ಸ್

ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಗೆ ಪೂರಕವಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿವೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಉತ್ತೇಜಿಸಲು ವಿವಿಧ ವಾಹನ ಉತ್ಪಾದನಾ ಕಂಪನಿಗಳು ಅಧಿಕೃತ ಡಿಲರ್ಸ್‌ಗಳ ಮೂಲಕ ಗುಜುರಿ ನೀತಿಯ ಪ್ರಕ್ರಿಯೆಗಳನ್ನು ಕೈಗೊಳ್ಳಲು ನಿರ್ಧರಿಸಿದ್ದು, ಗುಜುರಿ ನೀತಿಯೊಂದಿಗೆ ಹೊಸ ವಾಹನಗಳ ಖರೀದಿಯನ್ನು ಹೆಚ್ಚಿಸುವ ತವಕದಲ್ಲಿವೆ. ಟಾಟಾ ಮೋಟಾರ್ಸ್ ಕೂಡಾ ಸ್ಕ್ರ್ಯಾಪೇಜ್ ನೀತಿ ಯೋಜನೆ ಅಡಿ ಹಳೆಯ ವಾಹನಗಳ ಮಾಲೀಕರನ್ನು ಸೆಳೆಯುವ ಮೂಲಕ ಗುಜುರಿ ನೀತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊಸ ಕಾರುಗಳನ್ನು ಖರೀದಿದಾರರನ್ನು ಸೆಳೆಯಲು ಸಿದ್ದವಾಗಿದೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಟಾಟಾ ಮಾತ್ರವಲ್ಲದೆ ಹಲವಾರು ಆಟೋ ಕಂಪನಿಗಳು ತಮ್ಮದೆ ಹಳೆಯ ಬ್ರಾಂಡ್ ಕಾರುಗಳನ್ನು ಗುಜುರಿ ನೀತಿ ಅಡಿ ಸೇರಿಸಲು ಮತ್ತು ಹೊಸ ಕಾರುಗಳನ್ನು ಖರೀದಿಗೆ ಉತ್ತೇಜಿಸಲು ಮುಂದಾಗುತ್ತಿದ್ದು, ಅಧಿಕೃತ ಸ್ಕ್ರ್ಯಾಪೀಂಗ್ ಕಂಪನಿಗಳ ಜೊತೆ ಸಹಭಾಗೀತ್ವದಲ್ಲಿ ಹೊಸ ಯೋಜನೆ ರೂಪಿಸಿವೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹಳೆಯ ವಾಹನಗಳನ್ನು ಯಾವ ಕಾರು ಕಂಪನಿಯಡಿಯಲ್ಲಿ ಗುಜುರಿಗೆ ಹಾಕಲಾಗುತ್ತದೆಯೋ ಆಯಾ ಕಾರು ಕಂಪನಿಗಳು ಗ್ರಾಹಕರಿಗೆ ಹೆಚ್ಚಿನ ಮಟ್ಟದ ಆಫರ್‌ಗಳೊಂದಿಗೆ ಹೊಸ ಕಾರು ಖರೀದಿಗೆ ಸಹಕರಿಸಲಿದ್ದು, ಟಾಟಾ ಮೋಟಾರ್ಸ್ ಕೂಡಾ ಹಳೆಯ ಕಾರುಗಳ ಮಾಲೀಕರನ್ನು ವಿವಿಧ ಆಫರ್‌ಗಳ ಮೂಲಕ ಗಮನಸೆಳೆಯುವ ಸಿದ್ದತೆಯಲ್ಲಿದೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಇನ್ನು ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರವು ಸ್ವಯಂ ಪ್ರೇರಿತ ಸ್ಕ್ರ್ಯಾಪೇಜ್ ನೀತಿಯನ್ನು ಜಾರಿಗೆ ತರುವ ಮಹತ್ವದ ನಿರ್ಣಯ ಪ್ರಕಟಿಸಿದ್ದು, 20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿವೆ. ಹೊಸ ನೀತಿಯಿಂದಾಗಿ ಕೇವಲ ಆಟೋ ಉದ್ಯಮಕ್ಕೆ ಮಾತ್ರವಲ್ಲ ಮಾಲಿನ್ಯ ಮತ್ತು ತೈಲ ಆಮದು ತಗ್ಗಿಸಲು ಪರಿಣಾಮಕಾರಿಯಾದ ನೀತಿಯಾಗಿದೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಅವಧಿ ಮೀರಿದ ಹಳೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಿದ್ದಲ್ಲಿ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯ ಹೊಂದಿರುವ ಹೊಸ ವಾಹನಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದ್ದು, ಸರ್ಕಾರದ ಹೊಸ ಯೋಜನೆ ಅಡಿ ವಿವಿಧ ಆಟೋ ಕಂಪನಿಗಳು ಕೂಡಾ ಅಧಿಕೃತ ಸ್ಕ್ರ್ಯಾಪಿಂಗ್ ಕಂಪನಿಗಳ ಜೊತೆಗೂಡಿ ವಿವಿಧ ಅಭಿಯಾನಗಳನ್ನು ಸಿದ್ದಪಡಿಸುತ್ತಿವೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಸ್ಕ್ರ್ಯಾಪಿಂಗ್ ನೀತಿ ಅಡಿಯಲ್ಲಿ ಹಳೆಯ ವಾಹನಗಳ ಮಾಲೀಕರಿಗೆ ಕೇಂದ್ರ ಸರ್ಕಾರಿದಿಂದ ಸಿಗುವ ಸಬ್ಸಡಿ ಮತ್ತು ಇತರೆ ಲಾಭಗಳ ಜೊತೆಗೆ ಹೆಚ್ಚುವರಿಯಾಗಿ ಆಟೋ ಕಂಪನಿಗಳು ತಮ್ಮದೆ ಆದ ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ನಲ್ಲಿ ಹಳೆಯ ವಾಹನಗಳನ್ನು ನಾಶಪಡಿಸುವ ಪ್ರಕ್ರಿಯೆ ಮತ್ತು ಹೊಸ ವಾಹನ ಖರೀದಿಗೆ ಹೆಚ್ಚಿನ ಮಟ್ಟದ ಕೊಡುಗೆಗಳನ್ನು ನೀಡಲಿದೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ವಾಹನ ಖರೀದಿಸುವ ಹಳೆಯ ವಾಹನಗಳ ಮಾಲೀಕರಿಗೆ ಶೇ.5 ರಷ್ಟು ವಿನಾಯ್ತಿಯ ಜೊತೆಗೆ ಹೊಸ ವಾಹನದ ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ವಿನಾಯ್ತಿ ನೀಡಲು ನಿರ್ಧರಿಸಿದ್ದು, 2022ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ನೀತಿಗೆ ಪೂರಕವಾಗಿ ಆಟೋ ಉತ್ಪಾದನಾ ಕಂಪನಿಗಳು ಈಗಾಗಲೇ ಅಧಿಕೃತ ಸ್ಕ್ರ್ಯಾಪಿಂಗ್ ಸೆಂಟರ್‌ಗಳೊಂದಿಗೆ ಕಾರ್ಯನಿರ್ವಹಿಸಲು ಸಿದ್ದಗೊಂಡಿವೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಕೇಂದ್ರ ಸರ್ಕಾರವು 20 ವರ್ಷ ಮೇಲ್ಪಟ್ಟ ವ್ಯಯಕ್ತಿಯ ಬಳಕೆಯ ವಾಹನಗಳಿಗೆ ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಕಡ್ಡಾಯ ಸ್ಕ್ರ್ಯಾಪಿಂಗ್ ನೀತಿ ಅಡಿ ತರಲಾಗುತ್ತಿದ್ದರೆ 15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಹಸಿರು ತೆರಿಗೆ ನೀತಿ ಅಡಿಯಲ್ಲಿ ತರಲಾಗುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ವಾಹನ ಬಳಕೆದಾರರು ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳಿಗೆ ದುಬಾರಿ ಬೆಲೆ ಹಸಿರು ತೆರಿಗೆ ವಿಧಿಸಲಿದ್ದು, ಮರುನೋಂದಣಿ ಮತ್ತು ಎಫ್‌ಸಿ ನವೀಕರಿಸುವ ಸಂದರ್ಭದಲ್ಲಿ ಈಗಿರುವ ಮೊತ್ತಕ್ಕಿಂತಲೂ ದುಪ್ಪಟ್ಟು ಮೊತ್ತ ಹೆಚ್ಚಿಸಲು ನಿರ್ಧರಿಲಾಗುತ್ತಿದೆ.

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಕೇಂದ್ರ ಸರ್ಕಾರವು ಹೊಸ ಸ್ಕ್ರ್ಯಾಪಿಂಗ್ ನೀತಿ ಮತ್ತು ಹಸಿರು ತೆರಿಗೆ ನೀತಿಯನ್ನು ಪ್ರತ್ಯೇಕ ಪ್ರಕಟಿಸಲಿದ್ದು, ಅವಧಿ ಮೀರುವ ಮುನ್ನವೇ 15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಗುಜುರಿಗೆ ಸೇರಿಸುವ ಗ್ರಾಹಕರಿಗೆ ಹೊಸ ವಾಹನ ಖರೀದಿಸಲು ಹೆಚ್ಚಿನ ಮಟ್ಟದ ಸಬ್ಸಡಿ ನೀಡಲು ಸಾಧ್ಯತೆಗಳಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸ್ಕ್ರ್ಯಾಪೇಜ್ ನೀತಿ ಜಾರಿಯಾಗುತ್ತಿರುವ ಹಿನ್ನಲೆ ಹೊಸ ಯೋಜನೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹೊಸ ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಯ ಪ್ರಕ್ರಿಯೆ ಹೆಚ್ಚಳವಾಗುವುದರಿಂದ ಹೊಸ ವಾಹನಗಳ ಬೆಲೆ ಕೂಡಾ ಕಡಿತವಾಗಲಿದ್ದು, ಸಾರಿಗೆ ಇಲಾಖೆಯ ಸಚಿವರ ಮಾಹಿತಿಯೆಂತೆ ಹೊಸ ವಾಹನಗಳ ಉತ್ಪಾದನಾ ವೆಚ್ಚವು ಪ್ರಸ್ತುತ ಮಾರುಕಟ್ಟೆಗಿಂತಲೂ ಶೇ. 20ರಿಂದ ಶೇ.30 ರಷ್ಟು ಇಳಿಕೆಯಾಗುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
Tata Motors Plans To Set Up Vehicle Scrapyards. Read in Kannada.
Story first published: Monday, April 12, 2021, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X