ಟಾಟಾ ಕಾರುಗಳ ಖರೀದಿಗಾಗಿ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಟಾಟಾ ಮೋಟಾರ್ಸ್ ಕಂಪನಿಯು ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಜೊತೆಗೂಡಿ ವಿವಿಧ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಕರ್ನಾಟಕ ಬ್ಯಾಂಕ್ ಜೊತೆಗೂಡಿ ಗರಿಷ್ಠ ಅವಧಿಗೆ ವಿವಿಧ ಲೋನ್ ಆಫರ್ ನೀಡುತ್ತಿದೆ. ಹೊಸ ಯೋಜನೆಯಿಂದಾಗಿ ಕಾರು ಮಾರಾಟವನ್ನು ಮತ್ತಷ್ಟು ಸರಳಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಕರ್ನಾಟಕ ಬ್ಯಾಂಕ್ ಮೂಲಕ ಆಕರ್ಷಕ ಬಡ್ಡಿದರದಲ್ಲಿ ಲೋನ್ ಆಫರ್‌ಗಳನ್ನು ಖಚಿತಪಡಿಸುತ್ತಿದೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಟಾಟಾ ಕಾರುಗಳ ಖರೀದಿ ಮೇಲೆ ಕರ್ನಾಟಕ ಬ್ಯಾಂಕಿನಿಂದ ಶೇ.85 ರಷ್ಟು ಆನ್ ರೋಡ್ ದರದ ಮೇಲೆ ಸಾಲಸೌಲಭ್ಯ ದೊರೆಯಲಿದ್ದು, ಗರಿಷ್ಠ 7 ವರ್ಷಗಳಿಗೆ(84 ತಿಂಗಳು) ಮರುಪಾವತಿ ಅವಕಾಶ ನೀಡುತ್ತಿದೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಕರ್ನಾಟಕ ಬ್ಯಾಂಕ್ ಜೊತೆಗಿನ ಹೊಸ ಲೋನ್ ಆಫರ್‌ಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ಗ್ರಾಹಕ ಸೇವೆಯ ಉಪಾಧ್ಯಕ್ಷ ರಾಜನ್ ಅಂಬಾ ಅವರು, ಹೊಸ ಸಾಲ ಸೌಲಭ್ಯವು ಗ್ರಾಹಕರ ಆಯ್ಕೆ ಹೆಚ್ಚಿಸುವುದರ ಜೊತೆಗೆ ಕಾರು ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಇನ್ನು ಟಾಟಾ ಕಂಪನಿಯು ಕಳೆದ ವರ್ಷಕ್ಕಿಂತಲೂ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ದಸರಾ ಮತ್ತು ದೀಪಾವಳಿ ನಂತರವೂ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ನವೆಂಬರ್ ಅವಧಿಯಲ್ಲಿ ಮಾರಾಟಕ್ಕಿಂತಲೂ ಡಿಸೆಂಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ. 9ರಷ್ಟು ಮುನ್ನಡೆ ಕಾಯ್ದುಕೊಂಡಿದೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

2019ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟಕ್ಕಿಂತಲೂ 2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಶೇ.84 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಟಾಟಾ ಕಾರುಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಿದೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

2019ರ ಡಿಸೆಂಬರ್ ಅವಧಿಯಲ್ಲಿ 12,785 ಯನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಕಂಪನಿಯು 2020ರ ಡಿಸೆಂಬರ್‌ನಲ್ಲಿ 23,546 ಯುನಿಟ್ ಮಾರಾಟ ಮಾಡುವ ಮೂಲಕ ಶೇ.84 ರಷ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ತಿಂಗಳ ವಾಹನ ಮಾರಾಟದಲ್ಲಿ ಶೇ.9 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಕಂಪನಿಯು 2020 ನವೆಂಬರ್ ಅವಧಿಯಲ್ಲಿ 21,640 ಯನಿಟ್ ಕಾರು ಮಾರಾಟವನ್ನು ಹಿಂದಿಕ್ಕಿ ಡಿಸೆಂಬರ್ ಅವಧಿಯಲ್ಲಿ 23,546 ಯುನಿಟ್ ಮಾರಾಟ ಮಾಡಿದೆ.

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಈ ಮೂಲಕ ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 40 ಸಾವಿರ ಯುನಿಟ್ ಮಾರಾಟ ಗುರಿಹೊಂದಿದೆ. ಟಾಟಾ ಬಿಡುಗಡೆ ಮಾಡುವ ಪ್ರಮುಖ ಕಾರುಗಳಲ್ಲಿ ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್, ಗ್ರಾವಿಟಾಸ್ ಎಸ್‌ಯುವಿ, ಮೈಕ್ರೊ ಎಸ್‌ಯುವಿ ಕಾರುಗಳು ಪ್ರಮುಖವಾಗಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕಾರು ಖರೀದಿಗೆ ವಿಶೇಷ ಲೋನ್ ಆಫರ್ ಘೋಷಣೆ ಮಾಡಿದ ಕರ್ನಾಟಕ ಬ್ಯಾಂಕ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್‌ನಲ್ಲಿ ಪೆಟ್ರೋಲ್ ಟರ್ಬೋ ಆವೃತ್ತಿಯನ್ನು ಇದೇ ತಿಂಗಳು 13ರಂದು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಟೀಸರ್‌ ಅನಾವರಣಗೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದೆ.

Most Read Articles

Kannada
English summary
Tata Motors Signs A MoU With Karnataka Bank. Read In Kannada.
Story first published: Tuesday, January 5, 2021, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X