ವಾರದ ಸುದ್ದಿ: ಸೆಮಿಕಂಡಕ್ಟರ್ ಉತ್ಪಾದನೆಗೆ ಭಾರೀ ಹೂಡಿಕೆ, ಇವಿ ಅಂಗಸಂಸ್ಥೆ ತೆರೆದ ಟಾಟಾ, ಇಟಿ5 ಅನಾವರಣ..

ಸೆಮಿಕಂಡಕ್ಟರ್ ಕೊರತೆಯು ಹೊಸ ವಾಹನಗಳ ಉತ್ಪಾದನೆ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿರುವುದು ಭಾರತೀಯ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದ್ದು, ಸೆಮಿಕಂಡಕ್ಟರ್‌ಗಳನ್ನು ದೇಶದಲ್ಲಿಯೇ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ವಾರದ ಸುದ್ದಿಗಳಲ್ಲಿ ಸೆಮಿಕಂಡಕ್ಟರ್ ವಿಚಾರವು ಆಟೋ ಉದ್ಯಮದ ಪ್ರಮುಖ ವಿಚಾರವಾಗಿದ್ದು, ಸೆಮಿಕಂಡಕ್ಟರ್ ಕೊರತೆ ನಡುವೆಯೂ ಇವಿ ವಾಹನಗಳ ಪ್ರಮುಖ ಕಾರು ಕಂಪನಿಗಳು ಗಮನಹರಿಸುತ್ತಿರುವುದು ಕೂಡಾ ಪ್ರಮುಖವಾಗಿದೆ. ಹಾಗಾದರೆ ವಾರದ ಪ್ರಮುಖ ಸುದ್ದಿಗಳಲ್ಲಿ ಇನ್ನು ಯಾವೆಲ್ಲಾ ಸುದ್ದಿಗಳಿವೆ ಎನ್ನುವುದು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ವಾರದ ಪ್ರಮುಖ ಸುದ್ದಿಗಳು

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಸ್ವಾವಲಂಬಿ ಭಾರತ ಅಭಿಯಾನ

ಸೆಮಿಕಂಡಕ್ಟರ್ ಚಿಪ್ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಮಹತ್ವದ ಕ್ರಮ ಪ್ರಕಟಿಸಿದ್ದು, ಹೊಸ ಯೋಜನೆಗಾಗಿ ರೂ. 76 ಸಾವಿರ ಕೋಟಿಗಳ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್ಐ ಯೋಜನೆ) ಘೋಷಿಸಿದೆ. ಈಗ ಹೊಸದಾಗಿ ಅನುಮೋದಿಸಲಾದ ಪಿಎಲ್ಐ ಯೋಜನೆಯಿಂದಾಗಿ ಚಿಪ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಗಳಿವೆ. ಮುಂದಿನ 2 - 3 ವರ್ಷಗಳಲ್ಲಿ ದೇಶಿಯ ಅಗತ್ಯಕ್ಕಾಗಿ ಸೆಮಿಕಂಡಕ್ಟರ್'ಗಳ ಉತ್ಪಾದನೆಯನ್ನು ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ.

ವಾರದ ಪ್ರಮುಖ ಸುದ್ದಿಗಳು

ಚಿಪ್ ಉತ್ಪಾದನಾ ಉದ್ಯಮದಲ್ಲಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಮುಂದಿನ ವರ್ಷದ ಜನವರಿಯಿಂದ ಪಿ‌ಎಲ್‌ಐ ಯೋಜನೆಯಡಿ ಅರ್ಜಿಗಳನ್ನು ತೆಗೆದುಕೊಳ್ಳಲಿದೆ. ಅನುಮೋದಿತ ಪಿಎಲ್‌ಐ ಯೋಜನೆಯು ಮುಂದಿನ ಐದರಿಂದ ಆರು ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗಾಗಿ ರೂ. 76,000 ಕೋಟಿಗಳ ಹೂಡಿಕೆಯನ್ನು ಕಲ್ಪಿಸುತ್ತದೆ.

ವಾರದ ಪ್ರಮುಖ ಸುದ್ದಿಗಳು

ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು, ವಿನ್ಯಾಸ ಹಾಗೂ ಪ್ಯಾಕೇಜಿಂಗ್ ಕಂಪನಿಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಅನುಮೋದಿಸಲ್ಪಡಲಿವೆ. ಇನ್ನು 2 - 3 ವರ್ಷಗಳಲ್ಲಿ ಸುಮಾರು 10 - 12 ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ವೈಷ್ಣವ್ ಜೈನ್ ಹೇಳಿದ್ದಾರೆ.

ವಾರದ ಪ್ರಮುಖ ಸುದ್ದಿಗಳು

ಸೆಮಿಕಂಡಕ್ಟರ್ ಕೊರೆತೆಯಿಂದ ಬೆಲೆ ಹೆಚ್ಚಳ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ದುಬಾರಿ ಬಿಡಿಭಾಗಗಳ ಪರಿಣಾಮ ಜನವರಿ 1ರಿಂದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

ವಾರದ ಪ್ರಮುಖ ಸುದ್ದಿಗಳು

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸಿದೆ. ವಿದೇಶಿ ಮಾರುಕಟ್ಟೆಗಳಿಂದ ಪ್ರಮುಖವಾಗಿ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ವಾರದ ಪ್ರಮುಖ ಸುದ್ದಿಗಳು

ಇವಿ ಉತ್ಪಾದನೆಗಾಗಿ ಅಂಗಸಂಸ್ಥೆ ತೆರೆದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಆರಂಭಿಸಿದೆ.

ವಾರದ ಪ್ರಮುಖ ಸುದ್ದಿಗಳು

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದೆ.

ವಾರದ ಪ್ರಮುಖ ಸುದ್ದಿಗಳು

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ವಾರದ ಪ್ರಮುಖ ಸುದ್ದಿಗಳು

ಸಾವಿರ ಕಿ.ಮಿ ಮೈಲೇಜ್ ಹೊಂದಿರುವ ಇಟಿ5 ಅನಾವರಣ

ಚೀನಾದ ಕಾರು ತಯಾರಕ ಕಂಪನಿಯಾದ ನಿಯೋ ತನ್ನ ಎರಡನೇ ಆಲ್-ಎಲೆಕ್ಟ್ರಿಕ್ ಇಟಿ5 ಸೆಡಾನ್ ಕಾರನ್ನು ಅನಾವರಣಗೊಳಿಸಿದೆ. ನಿಯೋ ಇಟಿ5 ಎಲೆಕ್ಟ್ರಿಕ್ ಕಾರು ಕಂಪನಿಯ ಹೆಚ್ಚು ದುಬಾರಿ ಇಟಿ7 ಎಲೆಕ್ಟ್ರಿಕ್ ಸೆಡಾನ್ ಅನ್ನು ಅನುಸರಿಸುತ್ತದೆ.

ವಾರದ ಪ್ರಮುಖ ಸುದ್ದಿಗಳು

2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ ವಿತರಣೆ ಆರಂಭವಾಗಲಿದ್ದು, ಟೆಸ್ಲಾ ಮಾಡೆಲ್ 3 ಗೆ ಪ್ರತಿಸ್ಪರ್ಧಿಯಾಗಲಿರುವ ನಿಯೋ ಇಟಿ5 ಎಲೆಕ್ಟ್ರಿಕ್ ಕಾರು ಮೂರು ವಿಭಿನ್ನ ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 75kWh (ಸ್ಟ್ಯಾಂಡರ್ಡ್ ರೇಂಜ್), 100kWh (ಲಾಂಗ್ ರೇಂಜ್) ಮತ್ತು 150kWh (ಅಲ್ಟ್ರಾಲಾಂಗ್ ರೇಂಜ್) ಆಗಿದೆ.

ವಾರದ ಪ್ರಮುಖ ಸುದ್ದಿಗಳು

150kWh ಬ್ಯಾಟರಿ ಪ್ಯಾಕ್‌ನೊಂದಿಗೆ ಒಂದೇ ಚಾರ್ಜ್‌ನಲ್ಲಿ 1,000 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು (CTLC) ರೇಂಜ್ ಅನ್ನು ನೀಡುತ್ತದೆ. ಸಂಪೂರ್ಣ ನಿಯೋ ಇಟಿ5 ರೇಂಜ್ ಸ್ಟ್ಯಾಂಡರ್ಡ್ ಡ್ಯುಯಲ್-ಮೋಟರ್ ಸೆಟಪ್‌ನೊಂದಿಗೆ ಬರುತ್ತದೆ.

ವಾರದ ಪ್ರಮುಖ ಸುದ್ದಿಗಳು

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ಪ್ರೇರಿತ ಟಾಟಾ ನೆಕ್ಸಾನ್ ಇವಿ

ನೆಕ್ಸಾನ್ ಇವಿ ಮಾದರಿಯು 2019ರಲ್ಲಿ ಮೊದಲ ಬಿಡುಗಡೆಯ ನಂತರ ಹಲವಾರು ಹೊಸ ಬದಲವಾಣೆಗಳನ್ನು ಪಡೆದುಕೊಂಡಿದ್ದು, ಇದೀಗ 2022ರ ಮಾದರಿಯೊಂದಿಗೆ ಅಧಿಕ ಮೈಲೇಜ್ ರೇಂಜ್ ಹೊಂದಿರುವ ಹೊಸ ಬ್ಯಾಟರಿ ಪ್ಯಾಕ್ ಜೋಡಣೆ ಪಡೆದುಕೊಳ್ಳಲಿದೆ.

ವಾರದ ಪ್ರಮುಖ ಸುದ್ದಿಗಳು

ನೆಕ್ಸಾನ್ ಇವಿ ಕಾರು ಸದ್ಯ ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 2022ರ ಆವೃತ್ತಿಯಲ್ಲಿ ಮೈಲೇಜ್ ರೇಂಜ್ ಪ್ರಮಾಣವನ್ನು 380 ಕಿ.ಮೀ ನಿಂದ 420 ಕಿ.ಮೀ ಹೆಚ್ಚಿಸುವ ಸಾಧ್ಯತೆಗಳಿವೆ. ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಸಿದ್ದಪಡಿಸುತ್ತಿದೆ.

ವಾರದ ಪ್ರಮುಖ ಸುದ್ದಿಗಳು

ಇಕ್ಯೂಬಿ ಕಾರಿಗೆ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ಸ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಇಕ್ಯೂಬಿ ಎಸ್‌ಯುವಿಯನ್ನು ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಯು ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ವಾರದ ಪ್ರಮುಖ ಸುದ್ದಿಗಳು

ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಸ್‍ಯುವಿಯು ಕೂಡ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತು. ಆದರೆ ಇಕ್ಯೂಬಿ ಐಷಾರಾಮಿ ಎಲೆಕ್ಟ್ರಿಕ್ ಎಸ್‍ಯುವಿಯ ಅಂಕಗಳು ಇಕ್ಯೂಎಸ್ ಮಾದರಿಗೆ ಹೋಲಿಸಿದರೆ ಸಣ್ಣ ಅಂತರವಿದೆ. ಮರ್ಸಿಡಿಸ್ ಬೆಂಝ್ ಇಕ್ಯೂಬಿ ಎಸ್‍ಯುವಿಯು ವಯಾಸ್ಕ ಪ್ರಯಾಣಿಕರ ವಿಭಾಗದಲ್ಲಿ 95 ಪ್ರತಿಶತ ಅಂಕಗಳನ್ನು ಗಳಿಸಿದರೆ, ಮಕ್ಕಳ ವಿಭಾಗದಲ್ಲಿ 91 ಪ್ರತಿಶತ ಅಂಕಗಳನ್ನು ಗಳಿಸಿದೆ. ಈ ಎಸ್‍ಯುವಿಯು ದುರ್ಬಲ ರಸ್ತೆ ಬಳಕೆದಾರರ ಫಲಿತಾಂಶವು ಶೇಕಡಾ 78 ರಷ್ಟಿದೆ ಮತ್ತು ಸುರಕ್ಷತಾ ಅಸಿಸ್ಟ್ ವಿಭಾಗದಲ್ಲಿ ಶೇಕಡಾ 74 ರಷ್ಟು ಅಂಕವನ್ನು ಗಳಿಸಿದೆ.

Most Read Articles

Kannada
English summary
Top auto news of the week semiconductor chips to be produced in india et5 unveiled and more
Story first published: Sunday, December 26, 2021, 8:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X