ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

ಹೊಸ ವರ್ಷದಲ್ಲಿ ಕಾರು ತಯಾರಕ ಕಂಪನಿಗಳು ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ಕಳೆದ ವರ್ಷ ಕೆಲವು ಕಂಪನಿಗಳು ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದರೆ, ಕೆಲವು ಕಂಪನಿಗಳು ಮಾರಾಟದಲ್ಲಿ ಕುಸಿತವನ್ನು ಅನುಭವಿಸಿದ್ದವು.

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

ಕಳೆದ ವಾರ ಕಾರು ತಯಾರಕ ಕಂಪನಿಗಳು ಜನವರಿಯಲ್ಲಿ ಬಿಡುಗಡೆಯಾಗಲಿರುವ ಕಾರುಗಳ ದಿನಾಂಕ, 2020ರ ಡಿಸೆಂಬರ್ ತಿಂಗಳ ಕಾರು ಮಾರಾಟದ ವರದಿ ಹೀಗೆ ಹಲವಾರು ಸಂಗತಿಗಳನ್ನು ಬಹಿರಂಗ ಪಡಿಸಿವೆ. ಕಳೆದ ವಾರ ದೇಶಿಯ ಕಾರು ಮಾರುಕಟ್ಟೆಯಲ್ಲಿ ಸಂಭವಿಸಿದ ಘಟನೆಗಳ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

1. ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಬಿಡುಗಡೆ ದಿನಾಂಕ

ಜೀಪ್ ಕಂಪನಿಯು ತನ್ನ ಕಂಪಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಜನವರಿ 7ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈಗಾಗಲೇ ಜೀಪ್ ಕಂಪಾಸ್ ಫೇಸ್‌ಲಿಫ್ಟ್‌ ಎಸ್‌ಯುವಿಯ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಈ ಎಸ್‌ಯುವಿಯು ಹೊಸ ವಿನ್ಯಾಸ, ಆಕರ್ಷಕವಾದ ಇಂಟಿರಿಯರ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

2. ನಿಸ್ಸಾನ್ ಮ್ಯಾಗ್ನೈಟ್ ಸುರಕ್ಷತಾ ರೇಟಿಂಗ್

ನಿಸ್ಸಾನ್ ಕಂಪನಿಯು ತನ್ನ ಮ್ಯಾಗ್ನೈಟ್ ಕಾರನ್ನು ಒಂದು ತಿಂಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈಗ ಈ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗಗೊಂಡಿದೆ. ಇತ್ತೀಚೆಗೆ ಏಷ್ಯನ್ ಎನ್‌ಸಿಎಪಿ ಈ ಕಾರಿನ ಕ್ರ್ಯಾಶ್ ಟೆಸ್ಟ್ ಮಾಡಿದೆ.

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

ಈ ಟೆಸ್ಟ್'ನಲ್ಲಿ ಮ್ಯಾಗ್ನೈಟ್ ಕಾರು 4-ಸ್ಟಾರ್ ರೇಟಿಂಗ್ ಪಡೆದಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಈ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, 360 ಡಿಗ್ರಿ ಸರೌಂಡ್ ವ್ಯೂ ಮಾನಿಟರ್, ಟಯರ್ ಪ್ರೆಶರ್ ಮಾನಿಟರ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

3. ಕಾರು ಬೆಲೆ ಹೆಚ್ಚಳ

ಕಿಯಾ ಮೋಟಾರ್ಸ್ ಕಂಪನಿಯು ಜನವರಿ 1ರಿಂದ ಜಾರಿಗೆ ಬರುವಂತೆ ತನ್ನ ಸೊನೆಟ್ ಹಾಗೂ ಸೆಲ್ಟೋಸ್ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಈ ಕಾರುಗಳ ಬೆಲೆಯನ್ನು 20 ಸಾವಿರ ರೂಪಾಯಿಗಳಿಂದ 70 ಸಾವಿರ ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ.

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

ಕಿಯಾ ಸೊನೆಟ್ ಕಾರನ್ನು ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. 1.2 ಲೀಟರಿನ ಪೆಟ್ರೋಲ್ ಹೆಚ್‌ಟಿಇ ಮಾದರಿಯ ಬೆಲೆಯನ್ನು ರೂ.8000ಗಳಷ್ಟು ಹೆಚ್'ಟಿಕೆ ಹಾಗೂ ಹೆಚ್'ಟಿಕೆ ಪ್ಲಸ್ ಬೆಲೆಯನ್ನು ರೂ.10,000ಗಳಷ್ಟು ಏರಿಕೆ ಮಾಡಲಾಗಿದ್ದರೆ, 1.0 ಲೀಟರಿನ ಟರ್ಬೊ ಪೆಟ್ರೋಲ್ ಮಾದರಿಯ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

4. 2020ರ ಡಿಸೆಂಬರ್'ನ ಕಾರು ಮಾರಾಟ

2020ರ ಡಿಸೆಂಬರ್‌ ತಿಂಗಳಿನಲ್ಲಿ ಕಾರು ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 2,76,544 ಯುನಿಟ್ ಕಾರುಗಳನ್ನು ಮಾರಾಟ ಮಾಡಿವೆ. 2020ರ ನವೆಂಬರ್‌ ತಿಂಗಳಿನಲ್ಲಿ ಒಟ್ಟು 2,86,436 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು.

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ 1,40,754 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಎರಡನೇ ಸ್ಥಾನದಲ್ಲಿರುವ ಹ್ಯುಂಡೈ 2020ರ ಡಿಸೆಂಬರ್ ತಿಂಗಳಿನಲ್ಲಿ 47,400 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

5. ಫೋರ್ಡ್ ಮತ್ತು ಮಹೀಂದ್ರಾ ಸಹಭಾಗಿತ್ವ

ಕೋವಿಡ್ -19 ಸಾಂಕ್ರಾಮಿಕ ರೋಗವು ಬೇರೆ ಉದ್ಯಮಗಳಂತೆ ಆಟೋ ಮೊಬೈಲ್ ಉದ್ಯಮವನ್ನೂ ಸಹ ತತ್ತರಿಸುವಂತೆ ಮಾಡಿದೆ. ಹಲವಾರು ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಫೋರ್ಡ್ ಮೋಟಾರ್ ಕಂಪನಿಯು ಮಹೀಂದ್ರಾ ಅಂಡ್ ಮಹೀಂದ್ರಾ ಜೊತೆಗಿನ ತನ್ನ ವಾಹನ ಜಂಟಿ ಉದ್ಯಮವನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿದೆ.

ಕಳೆದ ವಾರ ದೇಶಿಯ ಮಾರುಕಟ್ಟೆಯಲ್ಲಿ ಸಂಭವಿಸಿದ ಟಾಪ್ 5 ಕಾರು ಸುದ್ದಿಗಳಿವು

ಕಳೆದ 15 ತಿಂಗಳಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಉಂಟಾದ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎರಡೂ ಕಂಪನಿಗಳು ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿವೆ.

Most Read Articles

Kannada
English summary
Top Five car news of the week in domestic market. Read in Kannada.
Story first published: Monday, January 4, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X