ಹೊಚ್ಚ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಸಾಂಪ್ರಾದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆಯಿಂದ ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸಿದ್ದು, ಜಪಾನ್ ಕಾರು ಉತ್ಪಾದನಾ ಕಂಪನಿ ಟೊಯೊಟಾ ಕೂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಪ್ಲಗ್ ಇನ್ ಹೈಬ್ರಿಡ್ ವಾಹನಗಳ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ಟೊಯೊಟಾ ಕಂಪನಿಯು ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಕುರಿತಾಗಿ ಮೊದಲ ಟೀಸರ್ ಚಿತ್ರವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಎಕ್ಸ್ ಪ್ರೊಲಾಗ್ ಹೆಸರಿನಲ್ಲಿ ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯು ಕಂಪನಿಯ ಹೊಸ ಇ-ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿದ್ದು, ಮಧ್ಯಮ ಕ್ರಮಾಂಕದ ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾದರಿಯಾಗಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಹೊಸ ಕಾರಿನ ವಿನ್ಯಾಸವು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿರುವ ರಾವ್4 ಎಸ್‌ಯುವಿ ಮಾದರಿಯಲ್ಲಿ ಸಿದ್ದಗೊಂಡಿದ್ದು, ಟೊಯೊಟಾ ಕಾರುಗಳಲ್ಲಿ ಇಲ್ಲದೆ ಇರುವ ಪ್ರಮುಖ ತಾಂತ್ರಿಕ ಅಂಶಗಳು ಈ ಕಾರಿನಲ್ಲಿರಲಿವೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಹೊಸ ಕಾರಿನ ಟೀಸರ್ ಹೊರತಾಗಿ ಯಾವುದೇ ತಾಂತ್ರಿಕ ಅಂಶಗಳನ್ನು ಬಿಟ್ಟುಕೊಡದ ಟೊಯೊಟಾ ಕಂಪನಿಯು ಭವಿಷ್ಯ ವಾಹನಗಳ ಅಭಿವೃದ್ದಿಗೆ ಕಂಪನಿಯು ಬದ್ದವಾಗಿದೆ ಎಂಬುವುದನ್ನು ಖಚಿತಪಡಿಸಿದ್ದು, ಇದೇ ತಿಂಗಳು 17ರಂದು ಹೊಸ ಎಲೆಕ್ಟ್ರಿಕ್ ಕಾರಿನ ಉತ್ಪಾದನೆ ಮಾದರಿಯೊಂದಿಗೆ ಮತ್ತಷ್ಟು ಮಾಹಿತಿಗಳನ್ನು ಹಂತ ಹಂತವಾಗಿ ಬಹಿರಂಗಪಡಿಸಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಪ್ರತ್ಯೇಕವಾಗಿ ಸಿದ್ದಗೊಂಡಿರುವ ಇ-ಟಿಎನ್‌ಜಿಎ ಪ್ಲ್ಯಾಟ್‌ಫಾರ್ಮ್‌ನಲ್ಲಿ ಟೊಯೊಟಾ ಕಂಪನಿಯು ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಿದ್ದಪಡಿಸಲಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳು ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂ, ರಿಯರ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಅಭಿವೃದ್ದಿಗೊಳ್ಳಲಿವೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಹಾಗೆಯೇ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿರುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡುವ ಸಂಬಂಧ ಟೊಯೊಟಾ ಕಂಪನಿಯೇ ಸಹಭಾಗಿತ್ವದ ಯೋಜನೆ ಅಡಿ ಬ್ಯಾಟರಿ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಪ್ರಮುಖ ಕಾರು ಮಾದರಿಗಳಿಗೆ ಗ್ರಾಹಕರ ಬೇಡಿಕೆ ವಿವಿಧ ರೇಂಜ್‌ವುಳ್ಳ ಪ್ರಮುಖ ಬ್ಯಾಟರಿ ಮಾದರಿಗಳನ್ನು ಸಿದ್ದಪಡಿಸಲಿರುವ ಟೊಯೊಟಾ ಕಂಪನಿಯು ತನ್ನದೆ ಸ್ವಂತ ಬ್ಯಾಟರಿ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಪರಿಸರ ಪೂರಕವಾಗಿದ್ದರೂ ದುಬಾರಿ ಬೆಲೆಯ ಪರಿಣಾಮ ತೀವ್ರ ಬೆಳವಣಿಗೆ ಸಾಧಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಬ್ಯಾಟರಿ ಸಂಪನ್ಮೂಲಕ್ಕಾಗಿ ಚೀನಿ ಮತ್ತು ತೈವಾನ್ ಮಾರುಕಟ್ಟೆಯನ್ನು ಅವಲಂಭಿಸಿರುವುದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗಾಗಿ ಸಿದ್ದವಾದ ಟೊಯೊಟಾ

ಈ ಹಿನ್ನಲೆಯಲ್ಲಿ ಭವಿಷ್ಯದ ದೃಷ್ಠಿಯಿಂದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಸ್ವಂತ ಬ್ಯಾಟರಿ ಉತ್ಪಾದನಾ ಘಟಕಗಳನ್ನು ತೆರೆಯುವತ್ತ ಯೋಜನೆ ರೂಪಿಸಿದ್ದು, 2022ರ ವೇಳೆಗೆ ಹಲವಾರು ಆಟೋ ಉತ್ಪಾದನಾ ಕಂಪನಿಗಳು ಸ್ವಂತ ಬ್ಯಾಟರಿ ಉತ್ಪಾದನಾ ಘಟಕಗಳ ಕಾರ್ಯಾಚರಣೆ ಹೊಂದಿರಲಿವೆ.

Most Read Articles

Kannada
Read more on ಟೊಯೊಟಾ toyota
English summary
Toyota X Prologue EV Teased Ahead Of Launch. Read in Kannada.
Story first published: Thursday, March 11, 2021, 23:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X