YouTube

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಹಳೆಯ ವಾಹನಗಳಿಂದ ಹೆಚ್ಚು ವಾಯುಮಾಲಿನ್ಯ ಉಂಟಾಗುತ್ತದೆ. ಈ ಕಾರಣಕ್ಕೆ ಹಳೆಯ ವಾಹನಗಳು ರಸ್ತೆಗಿಳಿಯುವುದನ್ನು ತಡೆಯಲು ಕೇಂದ್ರ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು 2021ರ ಕೇಂದ್ರ ಬಜೆಟ್'ನಲ್ಲಿ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಕಟಿಸಿದ್ದಾರೆ. ಈ ನೀತಿಯನ್ವಯ 20 ವರ್ಷ ಹಳೆಯದಾದ ವೈಯಕ್ತಿಕ ಹಾಗೂ 15 ವರ್ಷ ಹಳೆಯದಾದ ಕಮರ್ಷಿಯಲ್ ವಾಹನಗಳು ಫಿಟ್‌ನೆಸ್ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಈಗ ಕೇಂದ್ರ ಸರ್ಕಾರವು ಮತ್ತೊಂದು ಆಘಾತಕಾರಿ ಸುದ್ದಿ ನೀಡಿದೆ. ಹಳೆಯ ವಾಹನಗಳ ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಮರು-ನೋಂದಣಿ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಮರು ನೋಂದಣಿ ಶುಲ್ಕ ಹೆಚ್ಚಳದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಮಾಹಿತಿ ನೀಡಿದೆ. ಮಾಹಿತಿಗಳ ಪ್ರಕಾರ 20 ವರ್ಷ ಹಳೆಯ ದ್ವಿಚಕ್ರ ವಾಹನಗಳಿಗೆ ರೂ.1000 ಹಾಗೂ 15 ವರ್ಷ ಹಳೆಯ ಬಸ್, ಟ್ರಕ್‌ಗಳಿಗೆ ರೂ.12,500 ಮರು ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಈ ಹಿಂದೆ ಹಳೆ ದ್ವಿಚಕ್ರ ವಾಹನಗಳ ಮರು ನೋಂದಣಿಗೆ ರೂ.300 ಶುಲ್ಕ ವಿಧಿಸಲಾಗುತ್ತಿತ್ತು ಎಂಬುದು ಗಮನಾರ್ಹ. ಇದರ ಜೊತೆಗೆ ಭಾರೀ ವಾಹನಗಳ ಶುಲ್ಕವನ್ನು 21%ನಷ್ಟು ಹೆಚ್ಚಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಈ ಸುಂಕ ಹೆಚ್ಚಳದ ಮಾಹಿತಿಯನ್ನು ಕೇಂದ್ರ ಮೋಟಾರು ವಾಹನ (ತಿದ್ದುಪಡಿ) ನಿಯಮಗಳ ಅಡಿಯಲ್ಲಿ ಪ್ರಕಟಿಸಲಾಗಿದೆ. ವಾಹನ ಸ್ಕ್ರ್ಯಾಪೇಜ್ ನೀತಿಯಡಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವವರಿಗೆ ಹೊಸ ವಾಹನ ಖರೀದಿಸುವಾಗ ಹೊಸ ವಾಹನಕ್ಕೆ ನೋಂದಣಿ ಪ್ರಮಾಣಪತ್ರವನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿದೆ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಹಳೆಯ ವಾಹನಗಳ ನೋಂದಣಿ ನವೀಕರಣ ವಿಳಂಬವಾದರೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಒಂದು ತಿಂಗಳು ವಿಳಂಬವಾದರೆ ರೂ.300 ಹಾಗೂ ಎರಡನೇ ತಿಂಗಳಿನಿಂದ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಪ್ರಕಟಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಇದರ ಜೊತೆಗೆ ಸ್ಮಾರ್ಟ್ ಕಾರ್ಡ್ ಆಧಾರಿತ ಆರ್‌ಸಿ ನೀಡಲು ರೂ.200 ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಹಳೆಯ ವಾಹನಗಳು ರಸ್ತೆಗಿಳಿಯುವುದನ್ನು ತಡೆಯಲು ಕೇಂದ್ರ ಸರ್ಕಾರವು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಇತ್ತೀಚೆಗಷ್ಟೇ ವಾಯುಮಾಲಿನ್ಯವನ್ನು ತಡೆಗಟ್ಟಲು ಪೆಟ್ರೋಲ್'ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು.ಸದ್ಯಕ್ಕೆ 90% ಪೆಟ್ರೋಲ್'ನೊಂದಿಗೆ 10% ಎಥೆನಾಲ್ ಬೆರೆಸಲಾಗುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಈಗ 80% ಪೆಟ್ರೋಲ್'ನೊಂದಿಗೆ 20% ಎಥೆನಾಲ್ ಬೆರೆಸಲು ಅನುಮೋದನೆ ನೀಡಲಾಗಿದೆ. ಇದರಿಂದ ವಾಯುಮಾಲಿನ್ಯ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂಬುದು ಸರ್ಕಾರದ ಅಭಿಪ್ರಾಯ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ಹೊಸ ಮರು ನೋಂದಣಿ ಶುಲ್ಕವು 2021ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರಿಂದಾಗಿ ಕಮರ್ಷಿಯಲ್ ಹಾಗೂ ಹಳೆಯ ವಾಹನ ಬಳಕೆದಾರರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

ದಿನೇ ದಿನೇ ಹೆಚ್ಚಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯಿಂದಾಗಿ ವಾಹನ ಸವಾರರು ತತ್ತರಿಸಿದ್ದಾರೆ. ಜನರು ಪೆಟ್ರೋಲ್, ಡೀಸೆಲ್'ಗಾಗಿ ಹೆಚ್ಚು ಬೆಲೆ ತೆರಬೇಕಾಗಿದೆ. ಈ ಸನ್ನಿವೇಶದಲ್ಲಿ ವಾಹನ ಮರು ನೋಂದಣಿ ಶುಲ್ಕದಲ್ಲಿನ ಹೆಚ್ಚಳವು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದು ಸುಳ್ಳಲ್ಲ.

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

2021ರ ಅಕ್ಟೋಬರ್ 1ರಿಂದ ಜಾರಿಯಾಗುವ ವಾಹನ ಮರು ನೋಂದಣಿ ಶುಲ್ಕದ ಬಗ್ಗೆ ನೋಡುವುದಾದರೆ, ದ್ವಿಚಕ್ರ ವಾಹನಗಳು ರೂ.1,000, ತ್ರಿಚಕ್ರ ವಾಹನಗಳು ರೂ.3,500, ಟ್ಯಾಕ್ಸಿಗಳು ರೂ.7,000, ಮಧ್ಯಮ ಗಾತ್ರದ ಹಾಗೂ ಪ್ರಯಾಣಿಕರ ವಾಹನಗಳು - ರೂ.10,000, ಭಾರಿ ಗಾತ್ರದ ಪ್ರಯಾಣಿಕ ವಾಹನಗಳು ರೂ.12,500 ಪಾವತಿಸಬೇಕಾಗುತ್ತದೆ.

Most Read Articles

Kannada
English summary
Union transport ministry increases RC renewal charges. Read in Kannada.
Story first published: Thursday, March 18, 2021, 18:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X