ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಟಿಗ್ವಾನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್(Volkswagen Tiguan) ಎಸ್‍ಯುವಿ ಮಿಡ್-ಲೈಫ್ ಫೇಸ್‌ಲಿಫ್ಟ್‌ ನವೀಕರಣಗಳೊಂದಿಗೆ ಹೊಸ ಅಪ್ದೇಟ್ ಗಳನ್ನು ಪಡೆದುಕೊಂಡಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಇದೀಗ ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್‌ ಎಸ್‍ಯುವಿಗಾಗಿ ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಈ ಟಿವಿಸಿ ವಿಡಿಯೋದಲ್ಲಿ ಟಿಗ್ವಾನ್ ಎಸ್‍ಯುವಿಯ ಎಲ್ಲಾ ಹೊಸ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ. ಇನ್ನು ಈ ಹೊಸ ಫೇಸ್‌ಲಿಫ್ಟ್‌ ಎಸ್‍ಯುವಿಯು ಹಳೆಯ ಮಾದರಿಗಿಂತ ಹೆಚ್ಚು ಆಕರ್ಷಕವಾಗಿದೆ. ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್‌ ಎಸ್‍ಯುವಿಯ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.31.99 ಲಕ್ಷವಾಗಿದೆ. ಈ ಹೊಸ ಟಿಗ್ವಾನ್ 5-ಸೀಟರ್ ಎಸ್‍ಯುವಿ ಖರೀದಿಗಾಗಿ ಬುಕ್ಕಿಂಗ್ ಅನ್ನು ಭಾರತದಾದ್ಯಂತ ಎಲ್ಲಾ ಫೋಕ್ಸ್‌ವ್ಯಾಗನ್ ಡೀಲರ್‌ಶಿಪ್‌ಗಳಲ್ಲಿ ಈಗಾಗಲೇ ಪ್ರಾರಂಭಿಸಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಪ್ರೀಮಿಯಂ ಎಸ್‌ಯುವಿಯ ಟೆಸ್ಟ್ ಡ್ರೈವ್‌ಗಳು ಡಿಸೆಂಬರ್ 10 ರಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಮೊದಲಿಗೆ ಪ್ರಾರಂಭವಾಗಲಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯನ್ನು ಭಾರತದಲ್ಲಿ ಇತ್ತೀಚೆಗೆ ಸ್ಥಗಿತಗೊಳಿಸಿದೆ. ಇದರ ನಂತರ ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಟಿಗ್ವಾನ್ 5-ಸೀಟರ್ ಅನ್ನು ತನ್ನ ಪ್ರಮುಖ ಎಸ್‌ಯುವಿಯನ್ನಾಗಿ ಮಾಡಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಔರಂಗಾಬಾದ್ ನಲ್ಲಿರುವ ಘಟಕದಲ್ಲಿ ಹೊಸ ಟಿಗ್ವಾನ್ ಮಾದರಿಯ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಹೊಸ ಟಿಗ್ವಾನ್ ಫೇಸ್‌ಲಿಫ್ಟ್‌ ಎಸ್‌‍ಯುವಿಯು ತೀಕ್ಷ್ಣವಾದ ವಿನ್ಯಾಸ, ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಮಾದರಿಯಾಗಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಹೊಸ ಎಸ್‌ಯುವಿ ಡೀಸೆಲ್ ಎಂಜಿನ್ ಅನ್ನು ಕೈಬಿಟ್ಟಿದೆ ಮತ್ತು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಈ ಹೊಸ ಎಸ್‍ಯುವಿಯು ಸಣ್ಣ ವಿನ್ಯಾಸ ಬದಲಾವಣೆಗಳನ್ನು ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಸಹ ಸ್ವೀಕರಿಸಿದೆ. ಈ ಹೊಸ ಟಿಗ್ವಾನ್ MQB ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ 5-ಸೀಟರ್ ಎಸ್‍ಯುವಿ ಮಾದರಿಯಾಗಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‌ಲಿಫ್ಟ್‌ ಎಸ್‍ಯುವಿ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ವಲ್ಪ ಇದು ದೇಶದಲ್ಲಿ ಮಾರಾಟವಾಗಿದ್ದ ಅದರ ಹಿಂದಿನ ಮಾದರಿಗೆ ಸ್ವಲ್ಪ ಹೋಲುತ್ತದೆ. ಆದರೆ ಕೆಲವು ಟ್ವೀಕ್‌ಗಳಿವೆ.ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಎಸ್‍ಯುವಿ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಇದು ಎಲ್ಇಡಿ ಮ್ಯಾಟ್ರಿಕ್ಸ್ ತಂತ್ರಜ್ಞಾನದಿಂದ ಕೂಡಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಇನ್ನು ಈ ಎಸ್‍ಯುವಿಯ ಕ್ರೋಮ್ ಫಿನಿಶಿಂಗ್ ಹೊಂದಿರುವ ವಿಂಡೋ ಲೈನ್ ಎಸ್‍ಯುವಿಯ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸಲಾಗಿದೆ. ಈ ಹೊಸ ಎಸ್‍ಯುವಿಯಲ್ಲಿ ಸ್ಪ್ಲಿಟ್-ಸ್ಟೈಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಂಪರ್‌ನಲ್ಲಿ ಕ್ರೋಮ್ ಅಸ್ಸೆಂಟ್ ಗಳು, ದೊಡ್ಡ ಪ್ರತಿಫಲಿತ ಸ್ಟ್ರಿಪ್ ಮತ್ತು ಬೂಟ್ ಲಿಡ್ ಮಧ್ಯದಲ್ಲಿ ವಿಡಬ್ಲ್ಯೂ ಬ್ಯಾಡ್ಜ್ ಅನ್ನು ಇರಿಸಲಾಗಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಟಿಗ್ವಾನ್ ಮಾದರಿಯ ಇಂಟಿರಿಯರ್ ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟ್ ಆಗಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಕಫ್ ಪ್ಲೇಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು 30 ಮಾದರಿಯ ಅಂಬೈಟ್ ಲೈಟ್ ಗಳನ್ನು ಕೂಡ ಇದಲ್ಲಿ ನೀಡಲಾಗಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ನವೀಕರಿಸಿದ ಈ ಎಸ್‍ಯುವಿಯ ಹಿಂಭಾಗದಲ್ಲಿ ಎಸಿ ವೆಂಟ್ಸ್, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಜೊತೆಗೆ ಅನೇಕ ಯುಎಸ್‌ಬಿ ಸ್ಲಾಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಬಳಕೆಯ ಸುಲಭವಾದ ಕನೆಕ್ಟಿವಿಟಿ ಹೊಂದಿರುವ ತಂತ್ರಜ್ಞಾನದವನ್ನು ಕೂಡ ನೀಡಲಾಗಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ನವೀಕರಿಸಿದ ಟಿಗ್ವಾನ್ ಎಸ್‍ಯುವಿಯಲ್ಲಿ 2.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187.34 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ,

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಹೊಸ ಟಿಗ್ವಾನ್ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಎಬಿಎಸ್, ಇಎಸ್‌ಪಿ, ಆಂಟಿ-ಸ್ಪಿಲ್ ಕಂಟ್ರೋಲ್, ಆಟೋ-ಹೋಲ್ಡ್, ಹಿಲ್ ಸ್ಟಾರ್ಟ್ ಅಸಿಸ್ಟ್ & ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಂಭಾಗದಲ್ಲಿ 3 ಹೆಡ್‌ರೆಸ್ಟ್‌ಗಳು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಡ್ರೈವರ್ ಅಲರ್ಟ್ ಸಿಸ್ಟಂ ಮತ್ತು ಎಲ್ಇಡಿ ಕಾರ್ನರಿಂಗ್ ಲ್ಯಾಂಪ್ ಅನ್ನು ನೀಡಲಾಗಿದೆ.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿ ಮಾದರಿಯನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಯಿತು. ಟಿಗ್ವಾನ್ ಆಲ್‌ಸ್ಪೇಸ್ ಎಸ್‍ಯುವಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪ್ರಮುಖ ಎಸ್‍ಯುವಿಯಾಗಿ ಪರಿಚಯಿಸಲಾಯಿತು, ಆದರೆ ಇದೀಗ ಕಂಪನಿಯು ಈ ಎಸ್‍ಯುವಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ಟಿಗ್ವಾನ್ ಆಲ್‌ಸ್ಪೇಸ್ 7-ಸೀಟರ್ ಎಸ್‍ಯುವಿಯ ಕೊನೆಯ ಸಾಲಿನ ಸೀಟುಗಳು ವಯಸ್ಕರಿಗೆ ಬದಲಾಗಿ ಮಕ್ಕಳಿಗೆ ಹೆಚ್ಚು ಸೂಕ್ತವಾಗಿತ್ತು.

ಹೊಸ ಟಿಗ್ವಾನ್ ಎಸ್‍ಯುವಿಯ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯನ್ನು ಭಾರತಕ್ಕೆ ಸಿಕೆಡಿ ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿತ್ತು. ಎರಡನೇ ತಲೆಮಾರಿನ ಫೋಕ್ಸ್‌ವ್ಯಾಗನ್ ಟಿಗ್ವಾನ್ ಜಾಗತಿಕವಾಗಿ ಫೋಕ್ಸ್‌ವ್ಯಾಗನ್‌ನ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ ಮತ್ತು ಇದನ್ನು ಭಾರತದಲ್ಲಿ 2017 ರಲ್ಲಿ ಬಿಡುಗಡೆ ಮಾಡಲಾಯಿತು. ಹೊಸ ಫೇಸ್‌ಲಿಫ್ಟೆಡ್ ಮಾಡೆಲ್ ಪ್ರೀಮಿಯಂ ಐದು-ಸೀಟುಗಳ ಎಸ್‌ಯುವಿಯ ಪ್ರಮುಖ ಇದರ ಪವರ್ ಅನ್ನು ಇನ್ನಷ್ಟು ಉತ್ತಮಗೊಳಿಸಿದೆ.

Most Read Articles

Kannada
English summary
Volkswagen released official tvc of new tiguan suv updated features detailS
Story first published: Friday, December 10, 2021, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X