ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ಅಮೆರಿಕಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ Ford ಇತ್ತೀಚೆಗಷ್ಟೇ ಭಾರತವನ್ನು ತೊರೆಯುವುದಾಗಿ ಘೋಷಿಸಿತ್ತು. Ford ಕಂಪನಿಯ ಈ ನಿರ್ಧಾರವು ಕಾರು ಉತ್ಸಾಹಿಗಳ ಬೇಸರಕ್ಕೆ ಕಾರಣವಾಗಿತ್ತು. ಕಂಪನಿಯ ಈ ನಿರ್ಧಾರದಿಂದ ಸದ್ಯ ಮಾರುಕಟ್ಟೆಯಲ್ಲಿರುವ Ford ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ಇದರ ಜೊತೆಗೆ ಕಂಪನಿಯು ಭವಿಷ್ಯದಲ್ಲಿ ಬಿಡುಗಡೆಗೊಳಿಸ ಬೇಕಿದ್ದ ಮಾದರಿಗಳನ್ನು ಸಹ ರದ್ದುಗೊಳಿಸಲಾಗಿದೆ. Ford ಕಂಪನಿಯ ಗುಜರಾತ್ಹಾಗೂ ಚೆನ್ನೈ ಉತ್ಪಾದನಾ ಘಟಕಗಳು ಶೀಘ್ರದಲ್ಲೇ ಮುಚ್ಚಲ್ಪಡಲಿವೆ. ಚೆನ್ನೈನಲ್ಲಿರುವ Ford ಉತ್ಪಾದನಾ ಘಟಕವನ್ನು ಸ್ವಾಧೀನ ಪಡಿಸಿಕೊಳ್ಳಲು Tata Motors ಕಂಪನಿಯ ಅಧಿಕಾರಿಗಳು ಇತ್ತೀಚಿಗೆ ತಮಿಳುನಾಡಿನ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರುಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದೇ ಇದ್ದ ಕಾರಣಕ್ಕೆ ನಷ್ಟ ಉಂಟಾಗಿದೆ ಎಂದು Ford ಕಂಪನಿ ತಿಳಿಸಿದೆ. 1995 ರಲ್ಲಿ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ Ford ಕಂಪನಿಯು ಭಾರತದಲ್ಲಿ ಉತ್ಪಾದನಾ ಘಟಕ ಹಾಗೂ ಹಲವು ಮಾರಾಟ ಕೇಂದ್ರಗಳನ್ನು ತೆರೆದಿತ್ತು. ಸುಮಾರು 26 ವರ್ಷಗಳ ದೇಶಿಯ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸಿದರೂ Ford ಕಂಪನಿಯು ಭಾರತೀಯ ಗ್ರಾಹಕರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದ ಕಾರಣಕ್ಕೆ ವಿಫಲವಾಯಿತು ಎಂದೇ ಹೇಳಬಹುದು.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

Ford ಕಂಪನಿಯು ಮಾತ್ರವಲ್ಲದೇ Chevrolet ಹಾಗೂ Fiat ನಂತಹ ಕಂಪನಿಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಕಾರುಗಳು ನಿರೀಕ್ಷಿತ ಪ್ರಮಾಣದಲ್ಲಿ ಜನಪ್ರಿಯವಾಗದ ಕಾರಣ ಭಾರತವನ್ನು ತೊರೆದವು. ಜೆಕ್ ರಿಪಬ್ಲಿಕ್ ಮೂಲದ Skoda ಕಂಪನಿಯು ಸಹ ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

Skoda ಕಂಪನಿಯ ಸೇಲ್ಸ್ ಹಾಗೂ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಜಾಕ್ ಹೋಲಿಸ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚಿಗೆ ಟ್ವಿಟರ್ ಬಳಕೆದಾರರೊಬ್ಬರು Ford ಕಂಪನಿಯ ರೀತಿಯಲ್ಲಿ Skoda ಕಂಪನಿಯು ಸಹ ಭಾರತವನ್ನು ತೊರೆಯಲು ನಿರ್ಧರಿಸಿದೆಯೇ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿರುವ ಜಾಕ್ ಹೋಲಿಸ್ ರವರು ಭಾರತೀಯ ಮಾರುಕಟ್ಟೆಯನ್ನು ಬಿಡಲು ನಾವು ಯೋಚಿಸುತ್ತಿದ್ದರೆ, ಕಳೆದ ಮೂರು ವರ್ಷಗಳಲ್ಲಿ ನಾವು ಭಾರತದಲ್ಲಿ ರೂ. 8000 ಕೋಟಿ ಏಕೆ ಹೂಡಿಕೆ ಮಾಡುತ್ತಿದ್ದೆವು.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ನಾವು ಭಾರತದಲ್ಲಿ ದೀರ್ಘಾವಧಿಯ ಭವಿಷ್ಯಕ್ಕಾಗಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. 2019 ರಿಂದ ಸ್ಕೋಡಾ ಆಟೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAIPL), ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (VWIPL) ಹಾಗೂ ಫೋಕ್ಸ್‌ವ್ಯಾಗನ್ ಗ್ರೂಪ್ ಸೇಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (NSC) ನಡುವೆ ಜಂಟಿ ಸಹ ಭಾಗಿತ್ವ ಏರ್ಪಟ್ಟಿದೆ. ಈಗ ಈ ಸಹಭಾಗಿತ್ವವನ್ನು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈ ಲಿಮಿಟೆಡ್ ಎಂದು ಕರೆಯಲಾಗುತ್ತಿದೆ.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

Skoda ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿದ Kushaq ಎಸ್‌ಯುವಿಯಲ್ಲಿ 6-ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಈ Kushaq ಎಸ್‌ಯುವಿಯಲ್ಲಿ ಕೇವಲ 2ಏರ್‌ಬ್ಯಾಗ್‌ಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದೇ ವೇಳೆ ಕೆಲವು Kushaq ಎಸ್‌ಯುವಿಗಳಲ್ಲಿ ಸಮಸ್ಯೆಗಳಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು ಎಂದು ಜಾಕ್ ಹೋಲಿಸ್ ತಿಳಿಸಿದ್ದರು.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ದೇಶಿಯ ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ Rapid ಸೆಡಾನ್ ಕಾರಿಗೆ ಬದಲು ಹೊಸ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಲು Skoda ಕಂಪನಿ ನಿರ್ಧರಿಸಿದೆ. ಜಾಕ್ ಹೋಲಿಸ್ ರವರು ಇತ್ತೀಚೆಗೆ ಟ್ವಿಟರ್‌ನಲ್ಲಿ ತಮ್ಮ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮಾಹಿತಿ ನೀಡಿದ್ದರು. Skoda ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಅವರು ಹೇಳಿದ್ದರು.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

Skoda Auto ಇಂಡಿಯಾ ತನ್ನ ಗ್ರಾಹಕರಿಗೆ ಹಿಂದೆಂದಿಗಿಂತಲೂ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗಿದೆ. ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದಾಗಿ ಭರವಸೆ ನೀಡಿತ್ತು. Skoda Kushaq ಕಾಂಪ್ಯಾಕ್ಟ್ ಎಸ್‌ಯುವಿಯು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. Skoda ಆಟೋ ಇಂಡಿಯಾ ಕಂಪನಿಯು ಮೆಟ್ರೋ ನಗರವಲ್ಲದ ಸ್ಥಳಗಳಲ್ಲಿ ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳನ್ನು ತೆರೆಯುವುದಾಗಿ ಘೋಷಿಸಿದೆ.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ಈ ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳು ಈ ಸ್ಥಳಗಳಲ್ಲಿ ಮಾರಾಟ ಹಾಗೂ ಡೀಲರ್ ಶಾಖೆಗಳೊಂದಿಗೆ ಸಂಯೋಜಿಸಲ್ಪಟ್ಟು ಗ್ರಾಹಕರಿಗೆ ಮಾರಾಟದ ನಂತರದ ಸೇವಾ ಅವಶ್ಯಕತೆಗಳನ್ನು ಪೂರೈಸಲಿವೆ. ಈ ವರ್ಷದ ಅಂತ್ಯದ ವೇಳೆಗೆ Skoda ಕಂಪನಿಯು ಈ 30 ಕಾಂಪ್ಯಾಕ್ಟ್ ವರ್ಕ್ ಶಾಪ್ ಗಳನ್ನು ದೇಶದಲ್ಲಿ ತೆರೆಯಲು ನಿರ್ಧರಿಸಿದೆ. ಇವುಗಳು ನಿಯಮಿತ ಮೆಂಟೆನೆನ್ಸ್ ಹಾಗೂ ಸಾಮಾನ್ಯ ಸರ್ವೀಸ್ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತವೆ.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

ಜೆಕ್ ಮೂಲದ ಕಾರು ತಯಾರಕ ಕಂಪನಿಯಾದ Skoda ಆಟೋ ಈ ಪ್ರತಿಯೊಂದು ಸ್ಥಳಗಳಲ್ಲಿ ಟೂ ಬೇ ಗಳ ಕನಿಷ್ಠ ಸೇವಾ ಸೌಲಭ್ಯವನ್ನು ನೀಡಲಿದೆ. ಈ ಬಗ್ಗೆ ಮಾತನಾಡಿರುವ ಜಾಕ್ ಹೋಲಿಸ್ ರವರು, ಈ ವರ್ಕ್ ಶಾಪ್ ಗಳು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಹಾಗೂ ಸಂಭಾವ್ಯ ಗ್ರಾಹಕರಿಗೆ ಕಂಪನಿಯ ಬಗ್ಗೆ ವಿಶ್ವಾಸ ಮೂಡಿಸಲು ನೆರವಾಗುತ್ತವೆ ಎಂದು ಹೇಳಿದರು.

ದೇಶ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ Skoda ಕಂಪನಿ ನಿರ್ದೇಶಕ

Kushaq ಎಸ್‌ಯುವಿಯನ್ನು ಬಿಡುಗಡೆಯೊಂದಿಗೆ ನಮ್ಮ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಸವಾಲಿನ ನಡುವೆಯೂ ನಾವು ಉಡಾವಣೆಯಲ್ಲಿಯಶಸ್ವಿಯಾಗಿದ್ದೇವೆ ಎಂದು ಹೇಳಿದರು. ನಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ನಮ್ಮ ಗ್ರಾಹಕರ ಅನುಭವವನ್ನು ಹೆಚ್ಚಿಸುವುದು ಸಹ ಮುಖ್ಯವಾಗಿದೆ. ನಮ್ಮ ಗ್ರಾಹಕರ ಕೇಂದ್ರಿತತೆಯ ಪ್ರಯಾಣವು ಭಾರತದಲ್ಲಿ ನಮ್ಮ ಯಶಸ್ಸಿಗೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

Most Read Articles

Kannada
Read more on ಸ್ಕೋಡಾ skoda
English summary
Zac hollis clarifies about skoda leaving indian market details
Story first published: Friday, October 1, 2021, 10:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X