1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಫ್ರೆಂಚ್ ಆಟೋಮೊಬೈಲ್ ಕಂಪನಿಯಾದ ಹೋಪಿಯಂ ತನ್ನ ಹೈಡ್ರೋಜನ್ ಚಾಲಿತ ಮಷಿನಾ ವಿಷನ್ ಕಾನ್ಸೆಪ್ಟ್ ಕಾರನ್ನು ಪ್ಯಾರಿಸ್ ಮೋಟಾರ್ ಶೋನಲ್ಲಿ ಪ್ರದರ್ಶಿಸಿದೆ. ಕಂಪನಿಯು ಹೈ-ಎಂಡ್ ಹೈಡ್ರೋಜನ್-ಚಾಲಿತ ವಾಹನಗಳಲ್ಲಿ ಕೆಲಸ ಮಾಡುತ್ತಿದ್ದು, 2022ರ ಪ್ಯಾರಿಸ್ ಆಟೋಮೋಟಿವ್ ವೀಕ್‌ನಲ್ಲಿ ವಿಶ್ವದ ಮೊದಲ ಹೈಡ್ರೋಜನ್-ಚಾಲಿತ ಸೆಡಾನ್ ಅನ್ನು ಅನಾವರಣಗೊಳಿಸಿತು.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಕಂಪನಿಯ ಸಂಸ್ಥಾಪಕ ಮತ್ತು ಮಾಜಿ ರೇಸ್‌ಕಾರ್ ಚಾಲಕ ಒಲಿವಿಯರ್ ಲೊಂಬಾರ್ಡ್ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮೋಟಾರು ಪ್ರದರ್ಶನದಲ್ಲಿ ಈ ಪರಿಕಲ್ಪನೆಯ ವಾಹನವನ್ನು ಬಹಿರಂಗಪಡಿಸಿದರು. ಈ ಕಾರಿನ ಮುಖ್ಯಾಂಶವೆಂದರೆ ಇದನ್ನು ರೀಚಾರ್ಜ್ ಮಾಡಲು ಕೇವಲ ಮೂರು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಈ ಪೂರ್ಣ ರಿಜಾರ್ಜ್‌ನಲ್ಲಿ ಸುಮಾರು 1,000 ಕಿಲೋಮೀಟರ್ ಪ್ರಯಾಣಿಸಬಹುದು. ಕಂಪನಿಯು ಈಗಾಗಲೇ €656 (54,091 ರೂ.) ಟೋಕನ್ ಮೊತ್ತಕ್ಕೆ ಈ ಐಷಾರಾಮಿ ಸೆಡಾನ್‌ಗಾಗಿ ಪ್ರೀ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ. ಬುಕಿಂಗ್‌ಗಳ ಪ್ರಾರಂಭದೊಂದಿಗೆ ಗ್ರಾಹಕರು ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಬಹುದು.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಕಂಪನಿಯು ಕಾರಿನ ನಿರ್ಮಾಣ ದಿನಾಂಕಕ್ಕೆ ಹತ್ತಿರವಾದಾಗ ಗ್ರಾಹಕರೊಂದಿಗೆ ಸಂಪರ್ಕಕ್ಕೆ ಬರುತ್ತದೆ. Hopium Machina ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗಪಡಿಸಿಲ್ಲವಾದರೂ ಕಾರಿನ ಚಾಸಿ ಉದ್ದಕ್ಕೂ ಸಿಲಿಂಡರಾಕಾರದ ಟ್ಯಾಂಕ್‌ಗಳಲ್ಲಿ ಹೈಡ್ರೋಜನ್ ಅನ್ನು ಸಂಗ್ರಹಿಸುತ್ತದೆ ಎಂದು ತಿಳಿದುಬಂದಿದೆ. ಅಲ್ಲಿಯೇ ಟ್ರಾನ್ಸ್‌ಮಿಷನ್ ಟನ್ನಲ್ ಅದರ ಆಂತರಿಕ ಕಂಬಷನ್ ಅನ್ನು ಒಳಗೊಂಡಿರಲಿದೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಟ್ಯಾಂಕ್‌ಗಳಲ್ಲಿ ಸಂಗ್ರಹವಾದ ಹೈಡ್ರೋಜನ್ ಅನ್ನು ಪವರ್ ಉತ್ಪಾದಿಸಲು ಬಳಸಬಹುದು, ಇದನ್ನು 1,000 ಕಿ.ಮೀ ಅಥವಾ 620 ಮೈಲುಗಳ ವ್ಯಾಪ್ತಿಯನ್ನು ಒದಗಿಸುವ ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಪವರ್ ಜನರೇಟ್ ಮಾಡಲು ಸಣ್ಣ ಬ್ಯಾಟರಿಗಳಲ್ಲಿ ಸಂಗ್ರಹಿಸಬಹುದು. ಈ ಮೋಟಾರ್‌ಗಳು 493 hp (368 kW/ 500 PS) ಉತ್ಪಾದಿಸುತ್ತವೆ ಎನ್ನಲಾಗಿದೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಈ ಕಾರು ಐದು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 62 mph (100 km/ h) ಅನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಒಳಭಾಗದಲ್ಲಿ ಐಷಾರಾಮಿ ನಾಲ್ಕು- ಸೀಟ್‌ಗಳೊಂದಿಗೆ ಫೆಲಿಕ್ಸ್ ಗೊಡಾರ್ಡ್‌ನಿಂದ ಕನಿಷ್ಠ ವಿನ್ಯಾಸವನ್ನು ಹೊಂದಿರಲಿದೆ. ಇದೇ ಗೂಡಾರ್ಡ್ ಕಂಪನಿಯು ಪೋರ್ಷೆ, ಲುಸಿಡ್ಸ್ ಮತ್ತು ಟೆಸ್ಲಾ ವಾಹನಗಳಿಗೂ ಒಳಾಂಗಣ ವಿನ್ಯಾಸ ಮಾಡಿದ್ದಾರೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಕಾರಿನ ಅಂದಾಜು ಬೆಲೆ

€120,000 (97,59,120 ರೂ.) ಇರಬಹುದು ಎನ್ನಲಾಗಿದೆ. ವಾಹನದ ಬೆಲೆಗಳು ನಿರ್ಮಾಣ ವೆಚ್ಚಕ್ಕೆ ತಕ್ಕಂತೆ ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಕಂಪನಿ ಹೇಳಿದೆ. ಈ ವಾಹನದ ಬಳಿಕ ಇನ್ನಷ್ಟು ಹೈಡ್ರೋಜನ್ ವಾಹನಗಳ ತಯಾರಿಗೂ ಯೋಜನೆಗಳನ್ನು ರೂಪಿಸಲಾಗಿದೆ. ಎಸ್‌ಯುವಿಗಳು ಕೂಡ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

2019 ರಲ್ಲಿ ಕಂಪನಿಯ ಸ್ಥಾಪನೆ

2019 ರಲ್ಲಿ ಸ್ಥಾಪಿತವಾದ ಈ ಸ್ಟಾರ್ಟ್-ಅಪ್ ಕಂಪನಿಯನ್ನು ರೇಸಿಂಗ್ ಚಾಲಕ ಒಲಿವಿಯರ್ ಲೊಂಬಾರ್ಡ್ ಸ್ಥಾಪಿಸಿದ್ದಾರೆ. ಇವರು 24 ಗಂಟೆಗಳ ಲೇ ಮ್ಯಾನ್ಸ್ ಸ್ಪರ್ಧೆಯ 2011 ರ ಆವೃತ್ತಿಯ ವಿಜೇತರಾಗಿದ್ದಾರೆ. ಇವರು ವಿಶ್ವದ ಅತ್ಯಂತ ಅನುಭವಿ ಹೈಡ್ರೋಜನ್ ರೇಸರ್ ಎಂದು ಹೇಳಲಾಗುತ್ತದೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಇನ್ನು ಕಾರಿನ ವಿನ್ಯಾಸದ ಕುರಿತು ಹೇಳುವುದಾರೆ ಸ್ಪೋರ್ಟಿ ಲುಕ್‌ನಲ್ಲಿ ಹೆಚ್ಚು ಆಕರ್ಷಕ ಡಿಸೈನ್‌ ಪಡೆದುಕೊಂಡಿದೆ. ಸದ್ಯಕ್ಕಿರುವ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಎಲ್ಲಾ ವಿಧಗಳಲ್ಲೂ ಸಾಮರ್ಥ್ಯವನ್ನು ಹೆಚ್ಚಾಗಿ ಹೊಂದಿದೆ. ರೂಫ್ ಮೇಲೆ ಬೆಳಕಿನ ಪೋರ್ಟಲ್ ಹೋಪಿಯಮ್ ಮಷಿನಾ ವಿಷನ್‌ನ ಆರ್ಗಾನಿಕ್ ಕರ್ವ್‌ಗಳು ಹೊಸ ಲುಕ್ ನೀಡುತ್ತವೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಹೋಪಿಯಮ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಮುಖ್ಯ ಸುಸ್ಥಿರತೆ ಅಧಿಕಾರಿ ಕೆರಿಯನ್ ಜ್ಯಾರಿ, "ಪ್ಯಾರಿಸ್ ಆಟೋಮೋಟಿವ್ ವೀಕ್‌ನಲ್ಲಿ ನಮ್ಮ ಮೊದಲ ಪರಿಕಲ್ಪನೆಯ ಕಾರಿನ ಪ್ರಸ್ತುತಿಯು ಹೋಪಿಯಂಗೆ ಸ್ಪಷ್ಟವಾದ ಆಯ್ಕೆಯಾಗಿದೆ. ಇದು ಮಾನವ ಸಂಪರ್ಕದ ಪ್ರಾಮುಖ್ಯತೆ ನಡುವಿನ ಸಮತೋಲನವನ್ನು ದೃಢವಾಗಿ ನಂಬುತ್ತದೆ ಎಂದರು.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಭಾರತದಲ್ಲೂ ಹೈಡ್ರೋಜನ್ ಚಾಲಿತ ಕಾರು

ಭಾರತ ಸರ್ಕಾರದ ಆಟೋಮೋಟಿವ್ ಟೆಸ್ಟಿಂಗ್ ಏಜೆನ್ಸಿಯಾಗಿರುವ iCAT (ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ), ಟೊಯೊಟಾ ಕಂಪನಿಯ ಮಿರಾಯ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವಾಹನವನ್ನು (ಎಫ್‌ಸಿಇವಿ) ಅಧ್ಯಯನ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಟೊಯೊಟಾದೊಂದಿಗೆ ಕೈ ಜೋಡಿಸಿದೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಐಸಿಎಟಿ ನಡೆಸುತ್ತಿರುವ ಪ್ರಾಯೋಗಿಕ ಯೋಜನೆಯಾದ ಎರಡನೇ ತಲೆಮಾರಿನ ಟೊಯೋಟಾ ಮಿರಾಯ್ ಫ್ಯೂಯಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ಯೋಜನೆಗೆ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ ಚಾಲನೆ ನೀಡಿದ್ದಾರೆ. ಭವಿಷ್ಯದಲ್ಲಿ ನಮ್ಮ ದೇಶದಲ್ಲಿ ಹೈಡ್ರೋಜನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಈ ಮೂಲಕ ಒಂದು ರೂಪಾಯಿಯಲ್ಲಿ ಎರಡು ಕಿಲೋಮೀಟರ್ ಪ್ರಯಾಣಿಸಬಹುದಾಗಿದೆ.

1000 ಕಿ.ಮೀ ಪ್ರಯಾಣಿಸಲು 3 ನಿಮಿಷ ರಿಚಾರ್ಜ್ ಸಾಕು: ಫ್ರೆಂಚ್‌ ತಯಾರಕರಿಂದ ಕಾನ್ಸೆಪ್ಟ್ ಕಾರ್ ಅನಾವರಣ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬ್ಯಾಟರಿ ಚಾಲಿತ ಕಾರುಗಳಿಗಿಂತ ಭಿನ್ನವಾಗಿರುವ ಎಫ್‌ಸಿಇವಿ (ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್) ತಮ್ಮದೇ ಆದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತವೆ. ಭಾರತದಲ್ಲಿ ಶೇಕಡ 50ಕ್ಕಿಂತ ಹೆಚ್ಚು ವಿದ್ಯುತ್ ಕಲ್ಲಿದ್ದಲಿನಿಂದ ಉತ್ಪಾದನೆಯಾಗುತ್ತಿದ್ದು, ಕಲ್ಲಿದ್ದಲಿಗೆ ಹೋಲಿಸಿಕೊಂಡರೆ ಫ್ಯೂಯಲ್ ಸೆಲ್ (ಇಂಧನ ಕೋಶ) ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪರಿಸರ ಸ್ನೇಹಿಯಾಗಿವೆ.

Most Read Articles

Kannada
English summary
3 minutes of recharging is enough to travel 1000 km French manufacturer unveils concept car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X