ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಭಾರತದಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಸಾಮಾನ್ಯ ಇವಿ ಕಾರುಗಳ ಜೊತೆಗೆ ಐಷಾರಾಮಿ ಇವಿ ಕಾರು ಮಾದರಿಗಳು ಸಹ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕಾರು ಕಂಪನಿಗಳು ವಿವಿಧ ಮಾದರಿಯ ಹಲವು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಆಡಿ ಇಂಡಿಯಾ ಕೂಡಾ ಈಗಾಗಲೇ ಇ-ಟ್ರಾನ್ ಸರಣಿಯಲ್ಲಿ ವಿವಿಧ ಮೂರು ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಇವಿ ಕಾರುಗಳ ಬಿಡುಗಡೆಗೂ ಮುನ್ನ ಆಡಿ ಕಂಪನಿಯು ಭಾರತ ಸರ್ಕಾರಕ್ಕೆ ವಿನಾಯ್ತಿ ಕೋರಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಎಲೆಕ್ಟ್ರಿಕ್ ವಾಹನಗಳ ಅವಡಿಕೆಯಲ್ಲಿ ಪ್ರಾಥಮಿಕ ಹಂತದಲ್ಲಿ ಭಾರತದಲ್ಲಿ ವೇಗವಾಗಿ ಇವಿ ವಾಹನಗಳ ಅಳವಡಿಕೆಗೆ ಅನುಕೂಲಕರವಾಗುವಂತೆ ಆರಂಭಿಕ 3ರಿಂದ 5 ವರ್ಷಗಳ ಕಾಲ ತೆರಿಗೆಯಲ್ಲಿ ವಿನಾಯ್ತಿ ನೀಡುವ ಅಶವ್ಯವಿದೆ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

"ಮಧ್ಯಮ ತೆರಿಗೆ ಮತ್ತು ಸ್ಥಿರ ನೀತಿ" ಯೊಂದಿಗೆ ಭಾರತೀಯ ಐಷಾರಾಮಿ ಇವಿ ಮಾರುಕಟ್ಟೆಯು ಪ್ರಸ್ತುತ ಮಟ್ಟಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗುವ ನೀರಿಕ್ಷೆ ವ್ಯಕ್ತಪಡಿಸಿರುವ ಆಡಿ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ನೇರವಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಮಾದರಿಗಳಿಗೂ ಎರಡು ಹಂತದ ಆಮದು ತೆರಿಗೆ ವಿಧಿಸಲಾಗುತ್ತಿದ್ದು, ರೂ.31 ಲಕ್ಷ ಮೇಲ್ಪಟ್ಟ ದರದ ಕಾರುಗಳಿಗೆ ಶೇ. 60ರಷ್ಟು ಮತ್ತು ರೂ. 31 ಲಕ್ಷ ಮೇಲ್ಪಟ್ಟ ಕಾರುಗಳಿಗೆ ಶೇ. 100 ರಷ್ಟು ಆಮದು ಸುಂಕ ವಿಧಿಸಲಾಗುತ್ತದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಅದರಲ್ಲೂ ಎಲೆಕ್ಟ್ರಿಕ್ ಕಾರು ಮಾದರಿಗಳು ಮೊದಲೇ ಇಂಧನ ಚಾಲಿತ ಮಾದರಿಗಿಂತಲೂ ದುಪ್ಟಟ್ಟ ದರ ಹೊಂದಿರುವುದಲ್ಲದೆ ಆಮದು ಸುಂಕದೊಂದಿಗೆ ಮತ್ತಷ್ಟು ದುಬಾರಿಯಾಗಿರಲಿವೆ. ಹೀಗಾಗಿ ಐಷಾರಾಮಿ ಇವಿ ವಾಹನ ವಾಹನ ಮಾರಾಟವು ಸಾಕಷ್ಟು ದುಬಾರಿಯಾಗಿದ್ದು, ಇದೇ ಕಾರಣಕ್ಕೆ ಆರಂಭದಲ್ಲಿ ಇವಿ ವಾಹನ ಅಳವಡಿಕೆ ಸಹಕಾರಿಯಾಗುವಂತೆ ಆಡಿ ಕಂಪನಿಯು ವಿನಾಯ್ತಿ ಕೋರಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ತೆರಿಗೆ ವಿನಾಯ್ತಿ ಕೋರಿಯ ಕುರಿತಂತೆ ಮಾತನಾಡಿರುವ ಆಡಿ ಇಂಡಿಯಾ ಎಂಡಿ ಬಲ್ಬೀರ್ ಸಿಂಗ್ ಮಾತನಾಡಿದ್ದು, ನಾವು ಸರ್ಕಾರದ "ಸ್ಥಳೀಕರಣವನ್ನು ಉತ್ತೇಜಿಸುವ ಪ್ರಯತ್ನವನ್ನು ಕಂಪನಿಯು ಗೌರವಿಸುತ್ತದೆ. ಆದರೆ ಉದ್ಯಮ ಬೆಳವಣಿಗೆ ತಾತ್ಕಾಲಿಕ ಪರಿಹಾರಗಳು ಅಗತ್ಯವಾಗಿದ್ದು, ಹಾಗೆಂದು ನಾವು ಶಾಶ್ವತ ರಿಯಾಯಿತಿಗಳನ್ನು ಬಯಸುತ್ತಿಲ್ಲವೆಂದು ರಿಯಾಯ್ತಿ ಕೋರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ತಾತ್ಕಾಲಿಕ ಪರಿಹಾರಗಳೊಂದಿಗೆ ಭವಿಷ್ಯದಲ್ಲಿ ಸ್ಥಳೀಯವಾಗಿಯೇ ಹೊಸ ಇವಿ ಮಾದರಿಗಳನ್ನು ಉತ್ಪಾದನೆ ಕೈಗೊಳ್ಳಲು ಕಂಪನಿಯು ಯೋಜಿಸುತ್ತಿರುವುದಾಗಿ ಸ್ಪಷ್ಟಪಡಿಸಿರುವ ಆಡಿ ಕಂಪನಿಯು ಸರ್ಕಾರಕ್ಕೆ ಮನವಿ ಮಾಡಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಭಾರತದಲ್ಲಿ ಇವಿ ಕಾರುಗಳ ಮೇಲಿನ ತೆರಿಗೆ ವಿನಾಯ್ತಿಗಾಗಿ ಈಗಾಗಲೇ ಟೆಸ್ಲಾ ಕಂಪನಿಯು ಕೂಡಾ ಮನವಿ ಮಾಡಿತ್ತು. ಆದರೆ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರವು ಸ್ಥಳೀಯವಾಗಿ ಉತ್ಪಾದನೆ ಮಾಡಿದಲ್ಲಿ ಮಾತ್ರ ವಿನಾಯ್ತಿ ನೀಡುವುದಾಗಿ ಸ್ಪಷ್ಟಪಡಿಸಿತ್ತು.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಇದೀಗ ಆಡಿ ಕಂಪನಿಯು ಕೂಡಾ ಆರಂಭದಲ್ಲಿ ಇವಿ ವಾಹನಗಳ ಪೂರಕವಾದ ವಾತಾವರಣ ನಿರ್ಮಿಸಲು ತೆರಿಗೆ ವಿನಾಯ್ತಿ ಕೋರಿದ್ದು, ಆಡಿ ಕಂಪನಿಯ ಮನವಿಗೆ ಕೇಂದ್ರ ಸರ್ಕಾರವು ಹೇಗೆ ಪ್ರತಿಕ್ರಿಯೆಸುತ್ತದೆ ಎಂಬುವುದನ್ನು ಕಾಯ್ದುನೋಡಬೇಕಾಗಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಸದ್ಯ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯು ನಂತರ ಐಷಾರಾಮಿ ಕಾರು ಮಾರಾಟದಲ್ಲಿ ಆಡಿ ಮೂರನೇ ಸ್ಥಾನದಲ್ಲಿದ್ದು, ಈ ವರ್ಷದ ಮೊದಲಾರ್ಧದಲ್ಲಿ ಶೇ. 49 ರಷ್ಟು ಬೆಳವಣಿಗೆಯೊಂದಿಗೆ 1,765 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಎರಡನ್ನೂ ಒಳಗೊಂಡಿರುವ ಹೊಸ ಕಾರು ಮಾರಾಟದಲ್ಲಿ ಆಡಿ ಕಂಪನಿಯು ಭವಿಷ್ಯ ಮಾದರಿಗಳ ಮೇಲೂ ಹೆಚ್ಚಿನ ನೀರಿಕ್ಷೆಯಿಟ್ಟುಕೊಂಡಿದ್ದು, ತೆರಿಗೆ ವಿನಾಯ್ತಿಯು ಹೆಚ್ಚಿನ ಮಟ್ಟದ ಇವಿ ಮಾದರಿಗಳನ್ನು ಬಿಡುಗಡೆಗೊಳಿಸುವ ಸಹಕಾರಿಯಾಗಲಿದೆ ಎಂದಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಇನ್ನು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಗ್ರಾಹಕರಿಗೆ ನೆರವಾಗುವಂತೆ ಇವಿ ಪಾಲಿಸಿ ಅಳವಡಿಸಿಕೊಂಡ ದೆಹಲಿ ಸರ್ಕಾರವು ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಜೊತೆಗೆ ಹೆಚ್ಚಿನ ಮಟ್ಟದ ಸಬ್ಸಡಿ ನೀಡುತ್ತಿದ್ದು, ಹೊಸ ಇವಿ ನೀತಿಯು ಜಾರಿಯಾದ 2 ವರ್ಷಗಳಲ್ಲಿ ಇವಿ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯ್ತಿ ಕೋರಿದ ಆಡಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

Most Read Articles

Kannada
English summary
Audi india seeking import duty cut on luxury electric cars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X