ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ವಾನಹಗಳ ಮುಖ್ಯ ತಾಂತ್ರಿಕ ಅಂಶವಾಗಿ ಟೈರ್ ಉತ್ಪಾದನೆಯಲ್ಲಿ ಕಳೆದ ಒಂದು ದಶಕದಲ್ಲಿ ಹಲವಾರು ಬದಲಾವಣೆಗಳೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಟೈರ್ ತಂತ್ರಜ್ಞಾನವು ಇದೀಗ ಭವಿಷ್ಯದ ವಾಹನಗಳಿಗೆ ಪೂರಕವಾಗಿ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಟೈರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮೂಲದ ಬ್ರಿಡ್ಜ್‌ಸ್ಟೋನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಮಾದರಿಯ ಟೈರ್ ಉತ್ಪಾದಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ತನ್ನ ಹೊಸ ಟೈರ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಕಂಪನಿಯ ಹೊಸ ಡ್ರೈವ್ ಗಾರ್ಡ್ ಪ್ಲಸ್ ಕಾರ್ ಟೈರ್‌ಗಳು ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ದು, ಟ್ಯೂಬ್ ಲೆಸ್ ವೈಶಿಷ್ಟ್ಯತೆಯೊಂದಿಗೆ ಪಂಚರ್ ಆದ ನಂತರವೂ ಸುಮಾರು 80 ಕಿಲೋ ಮೀಟರ್ ವರೆಗೆ ಯಾವುದೇ ತೊಂದರೆ ಇಲ್ಲದೆ ಕಾರು ಚಾಲನೆ ಮಾಡಬಹುದಾಗಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಬ್ರಿಡ್ಜ್‌ಸ್ಟೋನ್ ಕಂಪನಿಯು ಹೊಸ ಟೈರ್‌ ಅನ್ನು ಪಂಚರ್ ಗಾರ್ಡ್ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಿದ್ದು, ಎಲ್ಲಾ ರೀತಿಯ ರಸ್ತೆಗಳಲ್ಲೂ ಮತ್ತು ಹವಾಮಾನದಲ್ಲೂ ಇದು ಚಾಲನೆಗೆ ಸೂಕ್ತವಾಗಿದೆ ಎಂದಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಪಂಚರ್ ಗಾರ್ಡ್ ತಂತ್ರಜ್ಞಾನದೊಂದಿಗೆ ಈ ಟೈರ್ ಪಂಚರ್ ಆದ ನಂತರವೂ ಕಾರನ್ನು 80 ಕಿಲೋ ಮೀಟರ್ ಓಡಿಸಬಹುದಲ್ಲದೆ ಕಾರನ್ನು ಗಂಟೆಗೆ ಸುಮಾರು 130 ಕಿಲೋ ಮೀಟರ್ ವೇಗದಲ್ಲಿ ಓಡಿಸಬಹುದೆಂದು ಹೇಳಿಕೊಂಡಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಹೊಸ ಟೈರ್ ಇತರೆ ಕಾರಿನ ಟೈರ್‌ಗಳಿಗಿಂತಲೂ ಕಡಿಮೆ ಶಬ್ದದೊಂದಿಗೆ ಹೆಚ್ಚು ರೋಡ್ ಗ್ರಿಪ್ ಹೊಂದಿದ್ದು, ಇದರಿಂದಾಗಿ ಕಾರಿನ ಸಮತೋಲನವೂ ಕೂಡಾ ಉತ್ತಮವಾಗಿದೆ ಎನ್ನಬಹುದು.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಸದ್ಯ ಬ್ರಿಡ್ಜ್‌ಸ್ಟೋನ್ ಕಂಪನಿಯು ಹೊಸ ಡ್ರೈವ್ ಗಾರ್ಡ್ ಪ್ಲಸ್ ಟೈರ್ ಅನ್ನು ಜನಪ್ರಿಯ ಸೆಡಾನ್‌ಗಳು ಮತ್ತು ಕ್ರಾಸ್‌ಒವರ್‌ ಎಸ್‌ಯುವಿ ಮಾದರಿಗಳಿಗಾಗಿ ಪರಿಚಯಿಸಿದ್ದು, ಪ್ರಸ್ತುತ ಈ ಹೊಸ ಟೈರ್ ಯುಎಸ್ ಮತ್ತು ಕೆನಡಾದಲ್ಲಿ ಗ್ರಾಹಕರಿಗೆ ಮಾತ್ರ ಖರೀದಿಗೆ ಲಭ್ಯವಾಗಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಕಂಪನಿಯು ತನ್ನ ಪಾಲುದಾರ ಕಂಪನಿಗಳ ಪ್ರಮುಖ ಕಾರು ಮಾದರಿಗಳಿಗೆ ಹೊಸ ಟೈರ್ ಜೋಡಣೆ ಮಾಡುತ್ತಿದ್ದು, ಆಡಿ ಕ್ಯೂ3, ಬಿಎಂಡಬ್ಲ್ಯು 3 ಸೀರಿಸ್, ಇನ್ಫಿನಿಟಿ ಕ್ಯೂ50, ಲೆಕ್ಸಸ್ ಎನ್ಎಕ್ಸ್, ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್, ಮರ್ಸಿಡಿಸ್ ಜಿಎಲ್ಎ ಮತ್ತು ಜಿಎಲ್‌ಬಿ ಕ್ರಾಸ್ಓವರ್ ಮಾದರಿಗಳಲ್ಲಿ ಅಳವಡಿಸಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಬ್ರಿಡ್ಜ್‌ಸ್ಟೋನ್ ಕಂಪನಿಯು ಶೀಘ್ರದಲ್ಲಿಯೇ ಹೊಸ ಟೈರ್ ಮಾದರಿಯನ್ನು ವಿಶ್ವಾದ್ಯಂತ ಮಾರಾಟ ಆರಂಭಿಸುವ ಯೋಜನೆಯಲ್ಲಿದ್ದು, ಕಂಪನಿಯು ಭಾರತದಲ್ಲೂ ಪ್ರಮುಖ ಕಾರು ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಹೀಗಾಗಿ ಬ್ರಿಡ್ಜ್‌ಸ್ಟೋನ್ ಕಂಪನಿಯ ಹೊಸ ಪಂಚರ್ ಗಾರ್ಡ್ ಟೈರ್ ಉತ್ಪನ್ನವು ಮುಂದಿನ ಕೆಲವೇ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಟೈರ್ ಮಾದರಿಯು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಾಮಾನ್ಯ ಟೈರ್‌ಗಿಂತಲೂ ತುಸು ದುಬಾರಿಯಾಗಿರಲಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಭಾರತದಲ್ಲಿ ಈಗಾಗಲೇ ಹಲವಾರು ಜನಪ್ರಿಯ ಟೈರ್ ಉತ್ಪಾದಕರಿದ್ದು, ಈ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಬ್ರಿಡ್ಜ್‌ಸ್ಟೋನ್ ಭಾರತದಲ್ಲೂ ಪೂರ್ಣ ಪ್ರಮಾಣದ ಕಾರ್ಯಚರಣೆಯೊಂದಿಗೆ ದೇಶಿಯವಾಗಿ ಉತ್ಪಾದನೆ ಕೈಗೊಳ್ಳುತ್ತಿದೆ.

ಪಂಚರ್ ಆದ ನಂತರವೂ ಸುಮಾರು 80 ಕಿ.ಮೀ ಚಲಿಸಬಲ್ಲ ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್

ಇಂಧೋರ್ ಮತ್ತು ಪುಣೆಯಲ್ಲಿ ಪ್ರತಿದಿನ 15 ಸಾವಿರ ಟೈರ್‌ಗಳನ್ನು ಉತ್ಪಾದನಾ ಸಾಮರ್ಥ್ಯದ ಎರಡು ಉತ್ಪಾದನಾ ಘಟಕಗಳನ್ನು ತೆರೆದಿರುವ ಬ್ರಿಡ್ಜ್‌ಸ್ಟೋನ್ ಕಂಪನಿಯು ಇದಕ್ಕಾಗಿ 2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, 2022ರ ಅಂತ್ಯಕ್ಕೆ ಪ್ರತಿದಿನ 41 ಸಾವಿರ ಟೈರ್ ಉತ್ಪಾದನೆ ಮಾಡುವ ಗುರಿ ಹೊಂದಿದೆ.

Most Read Articles

Kannada
English summary
Bridgestone launches new puncture free tyre details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X