ಚೀನಾ ಕಾರಿಗೆ ಭರ್ಜರಿ ಪ್ರತಿಕ್ರಿಯೆ: ದಾಖಲೆಯ ಬುಕಿಂಗ್ಸ್ ಪಡೆದ BYD Atto 3...ಜನವರಿಯಲ್ಲಿ ವಿತರಣೆ

ಚೈನೀಸ್ ಬ್ರಾಂಡ್ ಕಾರುಗಳ ಬಗ್ಗೆ ಅನೇಕ ಜನರು ಅನೇಕ ಅನುಮಾನಗಳನ್ನು ಹೊಂದಿದ್ದಾರೆ, ಇತ್ತೀಚಿನ ವೈಶಿಷ್ಟ್ಯಗಳು ಲಭ್ಯವಿದ್ದರೂ, ಸುರಕ್ಷತೆಯ ವಿಷಯದಲ್ಲಿ ಅವು ವಿಶ್ವಾಸಾರ್ಹವಲ್ಲ ಎಂಬುದು ಹಲವರ ವಾದ. ಇಂತಹ ಅನುಮಾನಗಳಿಗೆ ಉತ್ತರವೆಂಬಂತೆ BYD ಕಂಪನಿ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತವಾದ SUVಯನ್ನು ಬಿಡುಗಡೆ ಮಾಡಿದೆ.

BYD ಕಳೆದ ತಿಂಗಳು ತನ್ನ Atto 3 EV SUV ಯ ಬೆಲೆಗಳನ್ನು ಘೋಷಿಸಿದೆ, ಅದರಂತೆ ಈ ಹೊಸ ಕಾರಿನ ಬೆಲೆಯು 33.99 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುವ ಮಾದರಿಯು ಹಲವು ಅತ್ಯಾಧುನಿಕ ಫೀಚರ್‌ಗಳೊಂದಿಗೆ ಸಂಪೂರ್ಣ ಲೋಡ್ ಮಾಡಲಾದ ರೂಪಾಂತರದಲ್ಲಿ ಲಭ್ಯವಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡಿದಿರುವ ಈ ಕಂಪನಿಯ ಕಾರುಗಳು, ಇದೀಗ ನಿಧಾನವಾಗಿ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಪಡಿಯುತ್ತಿವೆ.

ಚೀನಾ ಕಾರಿಗೆ ಭರ್ಜರಿ ಪ್ರತಿಕ್ರಿಯೆ: ದಾಖಲೆಯ ಬುಕಿಂಗ್ಸ್ ಪಡೆದ BYD Atto 3...ಜನವರಿಯಲ್ಲಿ ವಿತರಣೆ

ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ BYD ಕಂಪನಿ ಇದೀಗ ಬಹಿರಂಗಪಡಿಸಿದ ಮಾಹಿತಿ ಸಾಕ್ಷಿಯಾಗಿದೆ. BYD ಅಟ್ಟೊ 3 ಗಾಗಿ ಬರೋಬ್ಬರಿ 1,500 ಬುಕಿಂಗ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಹೊಸ ಕಂಪನಿಯೊಂದರ ಕಾರಿಗೆ ಈ ಮಟ್ಟದ ಬುಕ್ಕಿಂಗ್‌ಗಳು ದಾಖಲೆಯೆಂದೇ ಹೇಳಬಹುದು. ಇನ್ನು ವಿತರಣೆಗಳು ಜನವರಿ 2023 ರಲ್ಲಿ ಪ್ರಾರಂಭವಾಗಲಿವೆ. BYD Atto 3 ಇವಿ ಕಾರು 60.48kWh ಬ್ಯಾಟರಿ ಪ್ಯಾಕ್‌ನೊಂದಿಗೆ 201bhp ಮತ್ತು 310Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಈ ಹೊಸ BYD Atto 3 ಎಸ್‌ಯುವಿ ಇವಿ, 7.3 ಸೆಕೆಂಡ್‌ಗಳಲ್ಲಿ 0-100kmph ವೇಗವನ್ನು ತಲುಪಬಲ್ಲದು. ಒಂದೇ ಚಾರ್ಜ್‌ನಲ್ಲಿ 521km ವ್ಯಾಪ್ತಿಯನ್ನು ಹಿಂದಿರುಗಿಸುತ್ತದೆ ಎಂದು ಹೇಳಲಾಗುತ್ತಿದೆ. BYD Atto 3 ನ ಪ್ರಮುಖ ವೈಶಿಷ್ಟ್ಯಗಳನ್ನು ನೋಡುವುದಾದರೆ ಸಂಪೂರ್ಣ LED ಲೈಟಿಂಗ್, 18-ಇಂಚಿನ ಅಲಾಯ್ ವೀಲ್‌ಗಳು, 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನಾರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ರನ್ನಿಂಗ್ ಫ್ರಂಟ್ ಸೀಟ್ಸ್ ಮತ್ತು ಐದು ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು:
ಇದು ಬಹು ಏರ್‌ಬ್ಯಾಗ್‌ಗಳು, ಬೆಲ್ಟ್ ಪ್ರಿಟೆನ್ಷನರ್, ಬೆಲ್ಟ್ ಲೋಡ್ ಲಿಮಿಟರ್, ಐಸೊಫಿಕ್ಸ್, ಸೀಟ್‌ಬೆಲ್ಟ್ ರಿಮೈಂಡರ್, ಆಟೋ ಎಮರ್ಜನ್ಸಿ ಬ್ರೇಕಿಂಗ್, ಸ್ಪೀಡ್ ಅಸಿಸ್ಟ್ ಮತ್ತು ಲೇನ್ ಅಸಿಸ್ಟ್ ಸಿಸ್ಟಮ್ ಇತ್ಯಾದಿಗಳನ್ನು ಒಳಗೊಂಡಿದೆ. ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ ಇತ್ತೀಚೆಗೆ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಆದ್ದರಿಂದ ಇದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಚಾರ್ಜಿಂಗ್ ವಿಷಯಕ್ಕೆ ಬಂದರೆ, BYD Atto 3 ಎಲೆಕ್ಟ್ರಿಕ್ ಕಾರ್ 80 kW DC ಫಾಸ್ಟ್ ಚಾರ್ಜರ್ ಸಹಾಯದಿಂದ ಕೇವಲ 50 ನಿಮಿಷಗಳಲ್ಲಿ ಶೇಕಡ 80 ರಷ್ಟು ಚಾರ್ಜ್ ಆಗುತ್ತದೆ. ಅದೇ ಸಮಯದಲ್ಲಿ ಟೈಪ್ 2 ಎಸಿ ಚಾರ್ಜರ್ ಅನ್ನು ಬಳಸಿದರೆ, ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಸುಮಾರು 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕಂಪನಿಯು ಈ SUV ಯ ಖರೀದಿದಾರರಿಗೆ 7kW AC ಹೋಮ್ ಚಾರ್ಜರ್ ಮತ್ತು 3kW AC ಪೋರ್ಟಬಲ್ ಚಾರ್ಜಿಂಗ್ ಬಾಕ್ಸ್ ಅನ್ನು ಸಹ ನೀಡುತ್ತದೆ.

ಬೆಲೆ ಮತ್ತು ಬುಕಿಂಗ್:
ಬಿವೈಡಿ ಕಂಪನಿ ಬಿಡುಗಡೆ ಮಾಡಿರುವ ಅಟ್ಟೊ 3 ಎಲೆಕ್ಟ್ರಿಕ್ ಎಸ್‌ಯುವಿ ಬೆಲೆ ರೂ. 33.99 ಲಕ್ಷ (ಎಕ್ಸ್ ಶೋ ರೂಂ, ಭಾರತ) ಈ ಬೆಲೆಯು ಅದರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿದ್ದರೂ, ಬೆಲೆಗೆ ಲಭ್ಯವಿರುವ ವೈಶಿಷ್ಟ್ಯಗಳನ್ನು ಹೊಂದಿದೆ. ಕಂಪನಿಯು ಈ SUV ಗಾಗಿ ಬುಕಿಂಗ್ ಅನ್ನು ಸಹ ಸ್ವೀಕರಿಸುತ್ತಿದೆ. ಆಸಕ್ತ ಗ್ರಾಹಕರು ರೂ. 50,000 ಪಾವತಿಸಿ ಬುಕ್ ಮಾಡಬಹುದು. ವಿತರಣೆಗಳು ಜನವರಿ 2023 ರಿಂದ ಪ್ರಾರಂಭವಾಗುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಬಿವೈಡಿ byd
English summary
Byd atto 3 gets record bookings delivery in january
Story first published: Friday, December 9, 2022, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X