ಸೌರಶಕ್ತಿ ಚಾಲಿತ ಮೊದಲ ಇ-ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ದೇಶಾದ್ಯಂತ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಚಾರ್ಜಿಂಗ್ ನಿಲ್ದಾಣಗಳು ಆರಂಭಗೊಳ್ಳುತ್ತಿದ್ದು, ಇತ್ತೀಚೆಗೆ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್ ನಿಲ್ದಾಣ ಆರಂಭಿಸಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳಿಗಾಗಿ ಮೊದಲ ಬಾರಿಗೆ ಸೌರಶಕ್ತಿ ಚಾಲಿತ ಇ-ವಾಹನ ಚಾರ್ಜಿಂಗ್ ನಿಲ್ದಾಣವನ್ನು ತೆರೆದಿದ್ದು, ಇದು ಸೌರಶಕ್ತಿಯೊಂದಿಗೆ ಚಾರ್ಜಿಂಗ್ ಸೇವೆಗಳನ್ನು ಒದಗಿಸುತ್ತಿರುವ ದೇಶದ ಮೊದಲ ಚಾರ್ಜಿಂಗ್ ನಿಲ್ದಾಣವಾಗಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಮಾಲಿನ್ಯ ಮುಕ್ತ ರಾಷ್ಟ್ರ ಪರಿಕಲ್ಪನೆ ಅಡಿಯಲ್ಲಿ ಇವಿ ವಾಹನಗಳ ಅಳವಡಿಕೆ ಮತ್ತು ಚಾರ್ಜಿಂಗ್ ನಿಲ್ದಾಣ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಚಾರ್ಜಿಂಗ್ ನಿಲ್ದಾಣ ಸೌಲಭ್ಯಕ್ಕಾಗಿ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಜಮ್ಮು-ಕಾಶ್ಮೀರದ ಲಡಾಕ್‌ನಲ್ಲಿ ದೇಶದ ಮೊದಲ ಸೌರಶಕ್ತಿ ಚಾಲಿತ ಇ-ವಾಹನ ಚಾರ್ಜಿಂಗ್ ನಿಲ್ದಾಣವು ಆರಂಭವಾಗಿದ್ದು, ಈ ಚಾರ್ಜಿಂಗ್ ನಿಲ್ದಾಣದ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಸೌರ ವಿದ್ಯುತ್ ಬಳಕೆ ಮಾಡಲಾಗುತ್ತದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಹವಾಮಾನವು ಉತ್ತಮವಾಗಿದ್ದಾಗ ಈ ಚಾರ್ಜಿಂಗ್‌ಗೆ ನಿಲ್ದಾಣಕ್ಕೆ ವಿದ್ಯುತ್ ಪೂರೈಕೆ ಅಗತ್ಯವಿರುವುದಿಲ್ಲ ಎಂದಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ಒಂದೇ ಬಾರಿಗೆ ಹತ್ತಾರು ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜಿಂಗ್ ಮಾಡಬಹುದಾದ ಸೌಲಭ್ಯ ಒದಗಿಸಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದು, ಇದಲ್ಲದೆ ಇದು ದೇಶದ ವಿವಿಧ ರಾಜ್ಯಗಳಲ್ಲಿನ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಸಿಇಎಸ್ಎಲ್ ಸಂಸ್ಥೆಯು ಮುಂದಿನ ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ 50,000 ಎಲೆಕ್ಟ್ರಿಕ್ ಬಸ್‌ಗಳನ್ನು ವಿವಿಧ ನಗರ ಸಾರಿಗೆ ಸಂಸ್ಥೆಗಳಿಗೆ ಒದಗಿಸಲು ಸಿದ್ದವಾಗುತ್ತಿದ್ದು, ಒಟ್ಟು 80 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಯೋಜನೆ ಸಿದ್ದಪಡಿಸುತ್ತಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಹೊಸ ಯೋಜನೆಯಡಿ ಸಿಇಎಸ್ಎಲ್ ಸಂಸ್ಥೆಯು ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಕೋಲ್ಕತ್ತಾ, ಅಹಮದಾಬಾದ್, ಪುಣೆಯಂತಹ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸುತ್ತಿದ್ದು, ಇ-ಬಸ್‌ಗಳ ಖರೀದಿಗೆ ವಿಶ್ವದ ಅತಿದೊಡ್ಡ ಟೆಂಡರ್ ಕರೆದಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

2030 ರ ವೇಳೆಗೆ ದೇಶದ 25 ರಾಜ್ಯಗಳಲ್ಲಿ 50,000 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಯೋಜನೆಯಲ್ಲಿರುವ ಸಿಇಎಸ್‌ಎನ್ ಕಂಪನಿಯು 30 ಸಾವಿರಕ್ಕೂ ಹೆಚ್ಚು ಹಳೆಯ ಡೀಸೆಲ್ ಬಸ್‌ಗಳನ್ನು ಸ್ಕ್ರಾರ್ಪಿಂಗ್ ಪಾಲಿಸಿ ಅಡಿಯಲ್ಲಿ ಗುಜುರಿ ಸೇರಿಸುತ್ತಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಭಾರತವು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಲಿದ್ದು, ಕಳೆದ ಕೆಲ ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಭಾರೀ ಪ್ರಮಾಣದ ಉತ್ಪಾದನೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯದ ಕಾರಣಕ್ಕೆ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ವೆಚ್ಚದಾಯಕವಾಗಿರುವ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವಂತೆ ಇವಿ ವಾಹನ ನೋಂದಣಿ ಸಂಖ್ಯೆ ಕೂಡಾ ಸಾಕಷ್ಟು ಸುಧಾರಣೆ ಕಂಡಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಅದರಲ್ಲೂ ಇವಿ ದ್ವಿಚಕ್ರ ವಾಹನಗಳು ಮುಂಬರುವ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳಲಿವೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಮತ್ತು ಹೆಚ್ಚಿನ ಶ್ರೇಣಿ ಹೊಂದಿರುವ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುವುದು ಅವಶ್ಯವಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮಾರಾಟ ದರವು ಹಾಗೆಯೇ ಮುಂದುವರಿದರೆ 2030ರಲ್ಲಿ ಶೇ.100 ರಷ್ಟು ದ್ವಿಚಕ್ರ ವಾಹನಗಳಲ್ಲಿ ಶೇ.78 ರಷ್ಟು ಇವಿ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ ಎನ್ನಲಾಗಿದ್ದು, ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕಿದೆ.

ಸೌರಶಕ್ತಿ ಚಾಲಿತ ಮೊದಲ ಇ ವಾಹನ ಚಾರ್ಜಿಂಗ್ ನಿಲ್ದಾಣ ಆರಂಭ

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆಯನ್ನು ಆರಂಭಿಸುತ್ತಿವೆ.

Most Read Articles

Kannada
English summary
Cesl launches first solar powered ev charging station in ladakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X