Just In
Don't Miss!
- Lifestyle
ಆಯುರ್ವೇದ ಔಷಧಿ ಸೇವಿಸುವ ಮುನ್ನ ಈ ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಲೇಬೇಕು
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಟೆಸ್ಲಾ ಕಾರುಗಳ ಉತ್ಪಾದನೆಯಿಂದ ದೇಶ ಮತ್ತು ಕಂಪನಿಗೆ ಲಾಭವಾಗಲಿದೆ: ಸಚಿವ ನಿತಿನ್ ಗಡ್ಕರಿ
ಭಾರತದಲ್ಲಿ ಟೆಸ್ಲಾ ಕಾರುಗಳ ಉತ್ಪಾದನೆಯ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ತಿಳಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಎಲಾನ್ ಮಸ್ಕ್ ದೇಶಕ್ಕೆ ಬಂದು ಟೆಸ್ಲಾ ಕಾರುಗಳನ್ನು ಇಲ್ಲಿ ತಯಾರಿಸಿದರೆ, ಅದು ಅವರ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಗೂ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ಟೆಸ್ಲಾ ತನ್ನ ಕಾರುಗಳನ್ನು ಭಾರತದಲ್ಲಿ ತಯಾರಿಸಲು ಒಪ್ಪಿದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯುತ್ತದೆ ಎಂಬುದರ ಬಗ್ಗೆ ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಶೀಘ್ರದಲ್ಲೇ ದೇಶದ ಪೆಟ್ರೋಲ್ ವಾಹನಗಳಿಗಿಂತ ಕಡಿಮೆ ಇರಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ದೇಶದಲ್ಲಿ ತಯಾರಿಸಿದರೆ, ಕಂಪನಿಯು ಸಹ ಪ್ರಯೋಜನ ಪಡೆಯುತ್ತದೆ. ಇದರಿಂದ ನಮ್ಮ ದೇಶದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗಲಿವೆ. ದೇಶದಲ್ಲಿ ಕಾರ್ಖಾನೆ ತೆರೆಯಲು ಮುಂದಾದಲ್ಲಿ ಇದರ ಬಗ್ಗೆ ಕೂಲಂಕುಶವಾಗಿ ಚರ್ಚಿಸಬಹುದು ಎಂದರು.

ಏಪ್ರಿಲ್ 26 ರಂದು ನಿತಿನ್ ಗಡ್ಕರಿ ಅವರು, ಎಲಾನ್ ಮಸ್ಕ್ ಅವರು ತಮ್ಮ ಟೆಸ್ಲಾ ಕಾರುಗಳನ್ನು ಭಾರತದಲ್ಲಿ ತಯಾರಿಸಬೇಕು, ಚೀನಾದಲ್ಲಿ ಅಲ್ಲ. ಅವರು ದೇಶಕ್ಕೆ ವಾಹನಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡಲು ಬಯಸಿದರೆ ಅದು ಎಂದಿಗೂ ಸಾಧ್ಯವಾಗದು. ಚೀನಾದಲ್ಲಿ ಉತ್ಪಾದಿಸಿ ಇಲ್ಲಿ ಮಾರಾಟ ಮಾಡಲು ಬಯಸಿದರೆ, ಅದು ಭಾರತಕ್ಕೆ ಉತ್ತಮ ಪ್ರಸ್ತಾಪವಲ್ಲ ಎಂದು ಸ್ಪಷ್ಟಪಡಿಸಿದ್ದರು.

ಭಾರತಕ್ಕೆ ಬಂದು ನಿಮ್ಮ ಉತ್ಪನ್ನಗಳಿಗಾಗಿ ಕಾರ್ಖಾನೆಯನ್ನು ಇಲ್ಲಿ ನಿರ್ಮಿಸಿ ಎಂದು ಅವರಿಗೆ ಈಗಾಗಲೇ ವಿನಂತಿ ಮಾಡಿದ್ದೇವೆ. ನಮಗೆ ಯಾವುದೇ ಸಮಸ್ಯೆ ಇಲ್ಲ. ಮಾರಾಟಗಾರರು ಲಭ್ಯವಿದ್ದಾರೆ, ನಾವು ಎಲ್ಲಾ ರೀತಿಯ ತಂತ್ರಜ್ಞಾನವನ್ನು ನೀಡುತ್ತೇವೆ. ಈ ಎಲ್ಲಾ ಕಾರಣಗಳಿಂದಾಗಿ ಎಲಾನ್ ಮಸ್ಕ್ ಅವರಿಗೆ ವೆಚ್ಚವನ್ನು ಕಡಿಮೆ ಮಾಡಬಹುದು.

ಭಾರತವು ಒಂದು ದೊಡ್ಡ ಮಾರುಕಟ್ಟೆಯಾಗಿದೆ ಮತ್ತು ಉತ್ತಮ ರಫ್ತು ಅವಕಾಶಗಳನ್ನು ಸಹ ಒದಗಿಸುತ್ತದೆ. ಎಲಾನ್ ಮಸ್ಕ್ ಭಾರತದಿಂದ ಟೆಸ್ಲಾ ಕಾರುಗಳನ್ನು ರಫ್ತು ಮಾಡಬಹುದು. ಟೆಸ್ಲಾ ಕಾರುಗಳನ್ನು ರಸ್ತೆಗಿಳಿಸಲು ಎಲಾನ್ ಮಸ್ಕ್ ಮೊದಲು ಭಾರತದಲ್ಲಿ ತಯಾರಿಸಬೇಕು ಎಂದು ಗಡ್ಕರಿ ಫೆಬ್ರವರಿಯಲ್ಲೇ ಹೇಳಿದ್ದರು.

ಎಲೆಕ್ಟ್ರಿಕ್ ಕಾರುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಬೇಕೆಂಬ ಟೆಸ್ಲಾ ಬೇಡಿಕೆಯ ಬಗ್ಗೆ ಕೇಳಿದಾಗ, ದೇಶವು ಆಟೋಮೊಬೈಲ್ ಕಂಪನಿಯನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅದರ ನಂತರ ಎಲಾನ್ ಮಸ್ಕ್ ಅವರು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸರ್ಕಾರದಿಂದ ಸವಾಲುಗಳನ್ನು ಎದುರಿಸುತ್ತಿರುವುದಾಗಿ ಮಸ್ಕ್ ಟ್ವೀಟ್ ಮಾಡಿದ್ದರು.

ಸರ್ಕಾರದೊಂದಿಗಿನ ಸವಾಲುಗಳಿಂದಾಗಿ ಟೆಸ್ಲಾ ಇನ್ನೂ ಭಾರತದಲ್ಲಿಲ್ಲ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದರು. ಪ್ರಸ್ತುತ, ಭಾರತವು ವಿಮೆ ಮತ್ತು ಹಡಗು ವೆಚ್ಚಗಳು ಸೇರಿದಂತೆ 40,000 ಡಾಲರ್ (30 ಲಕ್ಷ ರೂ.) ಗಿಂತ ಹೆಚ್ಚಿನ ಮೌಲ್ಯದ ಆಮದು ಕಾರುಗಳ ಮೇಲೆ ಶೇಕಡಾ 100 ರಷ್ಟು ತೆರಿಗೆ ಮತ್ತು 40,000 ಡಾಲರ್‌ಗಿಂತ ಕಡಿಮೆ ಬೆಲೆಯ ಕಾರುಗಳ ಮೇಲೆ ಶೇಕಡಾ 60 ರಷ್ಟು ಆಮದು ತೆರಿಗೆಯನ್ನು ವಿಧಿಸುತ್ತದೆ.

40,000 ಡಾಲರ್ (30 ಲಕ್ಷ ರೂ.ಗಳಿಗೂ ಹೆಚ್ಚು) ಬೆಲೆಯೊಂದಿಗೆ, ಟೆಸ್ಲಾ ಮಾಡೆಲ್ 3 ಯುಎಸ್‌ನಲ್ಲಿ ಕೈಗೆಟುಕುವ ಮಾದರಿ ಎಂದು ಕರೆಯಲ್ಪಡುತ್ತದೆ, ಆದರೆ ಆಮದು ಸುಂಕದೊಂದಿಗೆ, ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 60 ಲಕ್ಷ ರೂ.ಗಳ ಅಂದಾಜು ಬೆಲೆಯೊಂದಿಗೆ ಮಾರಾಟ ಮಾಡಲಾಗುತ್ತದೆ.

ಬುಕಿಂಗ್ ಮೊತ್ತವನ್ನು ಹಿಂತಿರುಗಿಸಲು ಗ್ರಾಹಕರ ಆಗ್ರಹ
2016 ರಲ್ಲಿ ಟೆಸ್ಲಾ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರ್ ಟೆಸ್ಲಾ ಮಾಡೆಲ್ 3 ಗಾಗಿ ಭಾರತದಿಂದ ಮತ್ತು ಪ್ರಪಂಚದ ಇತರ ಭಾಗಗಳಿಂದ ಬುಕಿಂಗ್‌ಗಳನ್ನು ಪಡೆದುಕೊಂಡಿತ್ತು. ಆ ಸಮಯದಲ್ಲಿ ಟೆಸ್ಲಾ ಮಾಡೆಲ್ 3 ಗಾಗಿ ಕೇವಲ $ 1000 (ಅಂದಾಜು ರೂ. 60-65 ಸಾವಿರ) ಗೆ ಬುಕಿಂಗ್ ತೆರೆಯಿತು. ಆ ಸಮಯದಲ್ಲಿ ಭಾರತದ ಕೆಲವು ಉತ್ಸಾಹಿಗಳು ಟೆಸ್ಲಾ ಮಾಡೆಲ್ 3 ಕಾರನ್ನು ಬುಕ್ ಮಾಡಿದರು.

ಅಮೆರಿಕದ ಈ ಕಂಪನಿ ಭಾರತೀಯ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ. ಭಾರತದಲ್ಲಿ ಟೆಸ್ಲಾ ಕಾರುಗಳ ಬಿಡುಗಡೆ ಅಥವಾ ವಿತರಣೆಯ ಬಗ್ಗೆ ಕಂಪನಿಯು ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದರ ಹಿನ್ನೆಲೆಯಲ್ಲಿ ಗ್ರಾಹಕರು ಕಳೆದ ಆರು ವರ್ಷಗಳಿಂದ ಟೆಸ್ಲಾಗೆ ಮರುಪಾವತಿಗಾಗಿ ಪದೇ ಪದೇ ಕೇಳುತ್ತಿದ್ದರೂ ಕಂಪನಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ನಿರಾಶೆಗೊಂಡಿದ್ದಾರೆ.

ವಾಸ್ತವವಾಗಿ ಭಾರತದಲ್ಲಿ ಟೆಸ್ಲಾಗೆ ಯಶಸ್ಸಿನ ಸಾಧ್ಯತೆಗಳು ತುಂಬಾ ಹೆಚ್ಚು. ಆದರೆ ನಮ್ಮ ದೇಶವು ಪ್ರಸ್ತುತ ಅನುಸರಿಸುತ್ತಿರುವ ಆಮದು ಸುಂಕಗಳ ಬಗ್ಗೆ ಟೆಸ್ಲಾಗೆ ಅಸಂತೃಪ್ತಿಯಿದೆ. ಹೀಗಾಗಿ ಇಲ್ಲಿನ ಮಾರುಕಟ್ಟೆಗೆ ತಮ್ಮ ಕಾರುಗಳನ್ನು ಬಿಡುಗಡೆ ಮಾಡುವ ಕುರಿತು ಕಂಪನಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.