ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಭಾರತದಲ್ಲಿ SUV ಕಾರುಗಳ ಪ್ರಮುಖ ತಯಾರಕ ಕಂಪನಿಯಾದ ಮಹೀಂದ್ರಾ ಶೀಘ್ರದಲ್ಲೇ XUV300 ನ ಹೊಸ 'ಸ್ಪೋರ್ಟ್ಸ್' ಟ್ರಿಮ್ ಅನ್ನು ಬಿಡುಗಡೆ ಮಾಡಲಿದೆ. ಮಾಹಿತಿಯ ಪ್ರಕಾರ, ಮುಂದಿನ ಕೆಲವು ವಾರಗಳಲ್ಲಿ ಸ್ಪೋರ್ಟ್ಸ್ ಟ್ರಿಮ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಕಂಪನಿಯು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ XUV300 ನ ಸ್ಪೋರ್ಟ್ಜ್ ರೂಪಾಂತರವನ್ನು ಬಹಿರಂಗಪಡಿಸಿತ್ತು. ಈ XUV300 Sportz ಟ್ರಿಮ್ ಅನ್ನು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಲ್ಲಿ ಬಿಡುಗಡೆ ಮಾಡಲಿದ್ದು, ಇದು 128 Bhp ಪವರ್ ಉತ್ಪಾದಿಸುತ್ತದೆ. ಜೊತೆಗೆ ಇದರ ಎಂಜಿನ್‌ನಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

XUV300 Sportz ಅನ್ನು W4, W6, W8 ಮತ್ತು W8(O) ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆ ಮಾಡಬಹುದು. Sportz ಟ್ರಿಮ್ ಎಂಜಿನ್ XUV300 ನ ಪ್ರಸ್ತುತ ರೂಪಾಂತರಕ್ಕಿಂತ 20 Bhp ಪವರ್ ಮತ್ತು 30 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಮುಂಬರುವ XUV300 Sportz ನ ವಿನ್ಯಾಸವು ಅಸ್ತಿತ್ವದಲ್ಲಿರುವ XUV300 ನಂತೆಯೇ ಇರಲಿದೆ. ಆದರೆ ಅದರ ಹೊರಭಾಗಕ್ಕೆ ಕೆಲವು ಹೊಸ ಅಂಶಗಳನ್ನು ಸೇರಿಸಲಾಗಿದೆ. ಇದು ಹೊಸ ಬಾಡಿ ಡೆಕಾಲ್, ಸ್ಪೋರ್ಟ್ಜ್ ಬ್ಯಾಡ್ಜಿಂಗ್ ಸೇರಿದಂತೆ ಇತರ ಮುಖ್ಯಾಂಶಗಳನ್ನು ಒಳಗೊಂಡಿರುತ್ತದೆ. ಇದರ ಕ್ಯಾಬಿನ್‌ಗೆ ಹೊಸ ಸ್ಪೋರ್ಟಿ ಲುಕ್ ಸಹ ನೀಡುವ ನಿರೀಕ್ಷೆಯಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಕೆಂಪು ಬಣ್ಣದೊಂದಿಗೆ ಒಳಾಂಗಣವು ಕಪ್ಪು ಬಣ್ಣದ ಥೀಮ್ ಅನ್ನು ಪಡೆಯಲಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಕಾರಿನಲ್ಲಿ Apple CarPlay ಮತ್ತು Android Auto ಸಪೋರ್ಟ್ ಮಾಡುವ ಸಿಸ್ಟಮ್ ಒಳಗೊಂಡಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, XUV300 Sportz ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಟೈರ್ ಪ್ರಷರ್ ಮಾನಿಟರಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇದು ಹವಾಮಾನ ನಿಯಂತ್ರಣ ವೈಶಿಷ್ಟ್ಯವನ್ನು ಸಹ ಹೊಂದಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

XUV300 Sportz ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಸ್ಪೋರ್ಟ್ ಟ್ರಿಮ್ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ. ಹ್ಯುಂಡೈ ವೆನ್ಯೂ 1.0L ಟರ್ಬೊ ಮತ್ತು ಕಿಯಾ ಸಾನೆಟ್ 1.0L ಟರ್ಬೊ ಸ್ಪೋರ್ಟ್ಸ್ ಟ್ರಿಮ್‌ನಲ್ಲಿ ಲಭ್ಯವಿದೆ. ಪ್ರಸ್ತುತ, ಮಹೀಂದ್ರಾ XUV300 ಅನ್ನು 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಮಾರುಕಟ್ಟೆಯಲ್ಲಿ XUV300 ನ ಪೆಟ್ರೋಲ್ ಮಾದರಿಯ ಬೆಲೆ 8.41 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಸ್ಪೋರ್ಟ್ಜ್ ಟ್ರಿಮ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.ಗಳಷ್ಟು ಹೆಚ್ಚಿರಬಹುದು ಎನ್ನಲಾಗಿದೆ. XUV300 ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಇತ್ತೀಚೆಗೆ ಮಹೀಂದ್ರಾ ಅಧಿಕೃತವಾಗಿ ಬಹಿರಂಗಪಡಿಸಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಕಂಪನಿಯು XUV300 ನ ಎಲೆಕ್ಟ್ರಿಕ್ ಆವೃತ್ತಿಯನ್ನು 2023 ರ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಹೀಂದ್ರಾ ತನ್ನ ಎಲೆಕ್ಟ್ರಿಕ್ ಕಾರ್ ವಿಷನ್ "ಬಾರ್ನ್ ಎಲೆಕ್ಟ್ರಿಕ್ ವಿಷನ್" ಅನ್ನು ಬಹಿರಂಗಪಡಿಸಿತ್ತು, ಇದರಲ್ಲಿ ಕಂಪನಿಯು ಮೂರು ಎಲೆಕ್ಟ್ರಿಕ್ ಕಾರುಗಳನ್ನು ತರಲು ಯೋಜಿಸಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಎಲೆಕ್ಟ್ರಿಕ್ ಆವೃತ್ತಿಯಲ್ಲಿ, XUV300 ನಾಲ್ಕು ಮೀಟರ್‌ಗಳಿಗಿಂತ ಚಿಕ್ಕದಾದ SUV ಆಗಿರುವುದಿಲ್ಲ, ಆದರೆ 4.2 ಮೀಟರ್ ಗಾತ್ರದಲ್ಲಿರುತ್ತದೆ. ಈ ಕಾರಣದಿಂದಾಗಿ, ಮಹೀಂದ್ರಾ XUV300 ಎಲೆಕ್ಟ್ರಿಕ್‌ಗೆ ಸರ್ಕಾರದ ಸಬ್ಸಿಡಿಗಳು ಮತ್ತು ರಿಯಾಯಿತಿಗಳು ಅನ್ವಯಿಸುವುದಿಲ್ಲ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಪ್ರಸ್ತುತ, ಭಾರತ ಸರ್ಕಾರವು ನಾಲ್ಕು ಮೀಟರ್‌ಗಿಂತ ಕಡಿಮೆ ಗಾತ್ರದ ಎಲೆಕ್ಟ್ರಿಕ್ ಕಾರುಗಳ ಮೇಲೆ FAME-2 ಯೋಜನೆಯಡಿಯಲ್ಲಿ ಸಬ್ಸಿಡಿ ಮತ್ತು ವಾಹನ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ನೀಡುತ್ತಿದೆ. ಮಹೀಂದ್ರಾ ಪ್ರಸ್ತುತ ಹೊಸ ಸ್ಕಾರ್ಪಿಯೋ-ಎನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ಹೊಸ ತಲೆಮಾರಿನ ಸ್ಕಾರ್ಪಿಯೊವನ್ನು ಜೂನ್ 27 ರಂದು ಬಿಡುಗಡೆ ಮಾಡಲಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಮಹೀಂದ್ರ ಸ್ಕಾರ್ಪಿಯೊ-ಎನ್‌ನ ಬಾಹ್ಯ ವಿನ್ಯಾಸವನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಸ್ಕಾರ್ಪಿಯೋ-ಎನ್ ಬಿಡುಗಡೆಯಾದ ನಂತರ ಹಳೆಯ ಸ್ಕಾರ್ಪಿಯೊವನ್ನು ಸ್ಥಗಿತಗೊಳಿಸುವುದಿಲ್ಲ, ಆದರೆ ಕಂಪನಿಯು ಹಳೆಯ ಸ್ಕಾರ್ಪಿಯೊವನ್ನು 'ಸ್ಕಾರ್ಪಿಯೋ ಕ್ಲಾಸಿಕ್' ಹೆಸರಿನಲ್ಲಿ ಮಾರಾಟ ಮಾಡಲಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಹೊಸ ಮಹೀಂದ್ರಾ ಸ್ಕಾರ್ಪಿಯೊ-ಎನ್ ಲ್ಯಾಡರ್-ಆನ್-ಫ್ರೇಮ್ ಚಾಸಿಸ್‌ನಲ್ಲಿ ನಿರ್ಮಿಸಲಾಗುವುದು ಮತ್ತು ಸುಧಾರಿತ ಪೆಂಟಾ ಲಿಂಕ್ ಸಸ್ಪೆನ್ಷನ್ ಸೆಟಪ್ ಅನ್ನು ಸಹ ಹೊಂದಿರುತ್ತದೆ. ಹೆಚ್ಚುವರಿಯಾಗಿ, ಸೋರಿಕೆಯಾದ ಮಾಹಿತಿಯು ಹೊಸ 2022 ಮಹೀಂದ್ರಾ ಸ್ಕಾರ್ಪಿಯೊ-ಎನ್ ಐಚ್ಛಿಕ 4-ಮೋಡ್ ಫೋರ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಬರಲಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಬೆಲೆಗೆ ಸಂಬಂಧಿಸಿದಂತೆ, ಮಹೀಂದ್ರಾ ತನ್ನ ಹೊಸ ಸ್ಕಾರ್ಪಿಯೋ-ಎನ್ ಮಾದರಿಯನ್ನು ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸುಮಾರು ರೂ. ಅಂದಾಜು 12 ಲಕ್ಷ (ಎಕ್ಸ್ ಶೋ ರೂಂ) ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಎಸ್ ಯುವಿಗಳ ಬಿಗ್ ಡ್ಯಾಡಿ ಎಂದೇ ಬಣ್ಣಿಸಲಾಗಿರುವ ಮಹೀಂದ್ರಾ ಸ್ಕಾರ್ಪಿಯೊದಲ್ಲಿನ ಹೊಸ ಮಾದರಿಯೂ ಇದೇ ರೀತಿಯಲ್ಲಿ ಯಶಸ್ವಿಯಾಗಲಿದೆ ಎಂದು ಕಂಪನಿ ಆಶಿಸಿದೆ.

ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ XUV300 'ಸ್ಪೋರ್ಟ್ಸ್ ಟ್ರಿಮ್'ನ ವೈಶಿಷ್ಟ್ಯಗಳಿವು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಂಪನಿಯು XUV300 ನ ಎಲೆಕ್ಟ್ರಿಕ್ ಆವೃತ್ತಿಯನ್ನು 2023 ರ ಮೊದಲ ತ್ರೈಮಾಸಿಕದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಈ ಮೂಲಕ XUV ವಿಭಾಗದಲ್ಲೂ ಮಹೀಂದ್ರಾ ಪಾರುಪತ್ಯ ಸಾಧಿಸಲು ಹೊರಟಿದೆ. ಬಿಡುಗಡೆಯ ನಂತರ XUV300 ಇವಿ ಮಾದರಿ ಎಷ್ಟರ ಮಟ್ಟಿಗೆ ಹಿಟ್ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Mahindra xuv300 sportz trim to launch soon features details
Story first published: Wednesday, June 8, 2022, 18:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X