Just In
- 8 min ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 1 hr ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 1 hr ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
- 2 hrs ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
Don't Miss!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Movies
Paaru: ತಾಯಿ ಆಗುತ್ತಿರುವ ವಿಚಾರವನ್ನು ಆದಿ ಬಳಿ ಹೇಳಿಯೇ ಬಿಡುತ್ತಾಳಾ ಪಾರು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇದೇ ತಿಂಗಳು 8ರಂದು ಬಿಡುಗಡೆಯಾಗಲಿರುವ ಮಹೀಂದ್ರಾ ಹೊಸ ಎಕ್ಸ್‌ಯುವಿ400 ಟೀಸರ್ ಪ್ರಕಟ
ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳು 8ರಂದು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಟೀಸರ್ ಪ್ರಕಟಿಸಿದೆ.

ಹೊಸ ತಲೆಮಾರಿನ ಇವಿ ಕಾರುಗಳ ಬಿಡುಗಡೆಗೂ ಮುನ್ನ ಎಕ್ಸ್‌ಯುವಿ400 ಇವಿ ಮತ್ತು ಇಕೆಯುವಿ100 ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ400 ಇವಿ ಮಾದರಿಯನ್ನು ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ಭವಿಷ್ಯದ ಕಾರು ಮಾದರಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ತಲೆಮಾರಿನ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿರುವ ಮಹೀಂದ್ರಾ ಕಂಪನಿಯು ಸೆಪ್ಟೆಂಬರ್ 8ರಂದು ಹೊಸ ಕಾರಿನ ಬೆಲೆ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆಗಳಿವೆ.

ಹೊಸ ಎಕ್ಸ್‌ಯುವಿ400 ಮತ್ತು ಇಕೆಯುವಿ100 ಮಾದರಿಗಳು ಸಾಮಾನ್ಯ ಇವಿ ಕಾರು ಮಾದರಿಗಳಾದರೆ ಬಾರ್ನ್ ಇವಿ ಕಾನ್ಸೆಪ್ಟ್ ಮಾದರಿಗಳು ತುಸು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿವೆ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಕಾನ್ಸೆಪ್ಟ್ ಆಧರಿಸಿ ಒಟ್ಟು ಐದು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ.

ಹೊಸ ಇವಿ ಕಾರು ಮಾದರಿಗಳನ್ನು ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದ್ದು, ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿವೆ.

ಮಹೀಂದ್ರಾ ಕಂಪನಿಯು ಮೊದಲ ಹಂತದಲ್ಲಿ ಎಕ್ಸ್‌ಯುವಿ.ಇ ಬ್ರಾಂಡ್ ಕಾರುಗಳನ್ನು ಮಾರಾಟಗೊಳಿಸಲಿದ್ದು, ತದನಂತರವಷ್ಟೇ ಬಿಇ ಬ್ರಾಂಡ್ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದು, ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿದೆ.

ಎಕ್ಸ್‌ಯುವಿ.ಇ ಮತ್ತು ಬಿಇ ಬ್ರಾಂಡ್ ಇವಿ ಕಾರುಗಳ ಬಿಡುಗಡೆಗೂ ಮುನ್ನ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ400 ಮತ್ತು ಇಕೆಯುವಿ100 ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಈ ಎರಡು ಕಾರು ಮಾದರಿಗಳು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿರಲಿವೆ.

ಆದರೆ ಹೊಸ ಎಕ್ಸ್‌ಯುವಿ.ಇ ಮತ್ತು ಬಿಇ ಬ್ರಾಂಡ್ ಇವಿ ಕಾರುಗಳ ನಿರ್ಮಾಣಕ್ಕಾಗಿ ಕಂಪನಿಯು ಪ್ರತ್ಯೇಕವಾದ ಇನ್‌ಗ್ಲೊ(INGLO) ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಇವಿ ಕಾರುಗಳು 60 ರಿಂದ 80 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ. ಹಾಗೆಯೇ ಹೊಸ ಕಾರುಗಳು 175kW ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80ರಷ್ಟು ರೀಚಾರ್ಜ್ ವೈಶಿಷ್ಟ್ಯತೆ ಹೊಂದಿವೆ.

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣಗೊಳಿಸಿದ ಐದು ಇವಿ ಕಾರು ಮಾದರಿಗಳಿಗೂ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದು, ಇವುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಮಾದರಿಗಳನ್ನು ಒಳಗೊಂಡಿದೆ.

ಈ ಮೂಲಕ ಹೊಸ ಮಾದರಿಗಳು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯಲ್ ವ್ಹೀಲ್ ಮಾದರಿಗಳು 231 ಬಿಎಚ್‌ಪಿಯಿಂದ 285 ಬಿಎಚ್‌ಪಿ ಉತ್ಪಾದಿಸಲಿದ್ದರೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಗಳು 340 ಬಿಎಚ್‌ಪಿಯಿಂದ 394 ಬಿಎಚ್‌ಪಿ ಉತ್ಪಾದಿಸಬಲ್ಲವು.

ವೈಶಿಷ್ಟ್ಯತೆಗಳ ವಿಷಯದಲ್ಲಿ ಹೊಸ ಇವಿ ಕಾರು ಮಾದರಿಗಳು ಐಷಾರಾಮಿ ಕಾರುಗಳಲ್ಲೂ ಇಲ್ಲದ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಲೆವಲ್ 2 ಎಡಿಎಎಸ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತಿದೆ.

ಹೀಗಾಗಿ ಹೊಸ ಮಾದರಿಗಳಿಗೆ ಪೂರಕವಾಗಿ ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಇಎಕ್ಸ್‌ಯುವಿ300 ಮಾದರಿಯನ್ನೇ ಕಂಪನಿಯು ಇದೀಗ ಎಕ್ಸ್‌ಯುವಿ400 ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಸಾಮಾನ್ಯ ಎಕ್ಸ್‌ಯುವಿ300 ಮಾದರಿಗಿಂತಲೂ ಇವಿ ಕಾರು ಮಾದರಿಯು ವಿಭಿನ್ನವಾದ ವಿನ್ಯಾಸ ಹೊಂದಿರಲಿದೆ.

ಹೊಸ ಎಕ್ಸ್‌ಯುವಿ400 ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಎರಡು ರೀತಿಯ ಬ್ಯಾಟರಿ ಆಯ್ಕೆ ಪೆಡೆದುಕೊಳ್ಳಲಿದ್ದು, ಇದು ಪ್ರತಿ ಚಾರ್ಜ್‌ಗೆ ಕನಿಷ್ಠ 350 ಕಿ.ಮೀ ನಿಂದ 480 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರಲಿದೆ.

ಇದು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 20 ಲಕ್ಷ ಬೆಲೆ ಹೊಂದಬಹುದಾಗಿದ್ದು, ಸ್ಟ್ಯಾಂಡರ್ಡ್ ಮತ್ತು ಎಕ್ಸ್ಸೆಂಡ್ ಮಾದರಿಗಳೊಂದಿಗೆ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಗಳಿಗೆ ಪೈಪೋಟಿಯಾಗಿದೆ.