Just In
- 50 min ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 1 hr ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 1 hr ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- 2 hrs ago
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್‍ಯುವಿ
Don't Miss!
- News
ಗ್ರಾಮೀಣ ರಸ್ತೆ ದುರಸ್ತಿ; ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಗೋಪಾಲಯ್ಯ ಗರಂ
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Sports
Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?
- Movies
ದಿವ್ಯಾಗೆ ಸತ್ಯ ಹೇಳಿ ಸಿಕ್ಕಿ ಬಿದ್ದ ಬಾಲ!
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಆಕರ್ಷಕ ವಿನ್ಯಾಸದಲ್ಲಿ ಹೊಸ ಹ್ಯುಂಡೈ ಪಾಲಿಸೇಡ್ ಎಸ್‍ಯುವಿ ಅನಾವರಣ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನವೀಕರಿಸಿದ ಪಾಲಿಸೇಡ್ ಎಸ್‍ಯುವಿಯನ್ನು 2022ರ ನ್ಯೂಯಾರ್ಕ್ ಇಂಟರ್‌ನ್ಯಾಷನಲ್ ಆಟೋ ಶೋನಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿದೆ. ಹೊಸ ಹ್ಯುಂಡೈ ಪಾಲಿಸೇಡ್ ಮೂರು-ಸಾಲಿನ ಎಸ್‍ಯುವಿ ಗಮನಾರ್ಹ ವಿನ್ಯಾಸ ಬದಲಾವಣೆಗಳನ್ನು ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆಯುತ್ತದೆ.

ಹೊಸ ಹ್ಯುಂಡೈ ಪಾಲಿಸೇಡ್ ಎಸ್‍ಯುವಿಯನ್ನು ದೈನಂದಿನ ಬಳಕೆಗೆ, ದೂರದ ಪ್ರಾವಾಸಕ್ಕೆ ಮತ್ತು ಫ್ಯಾಮಿಲಿ ಕಾರ್ ಆಗಿಯು ಬಳಸಬಹುದು ಎಂದು ಕಂಪನಿ ಹೇಳಿದೆ, ಈ ಹೊಸ ಎಸ್‍ಯುವಿಯಲ್ಲಿ ಅದೇ 3.8 ಲೀಟರ್ ವಿ6 ಅಟ್ಕಿನ್ಸನ್ ಸೈಕಲ್ ಡಿಐ, ಡ್ಯುಯಲ್ ಸಿಸಿಟಿವಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 291 ಬಿಹೆಚ್‍ಪಿ ಪವರ್ ಮತ್ತು 355 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಲ್ಟಿ-ಡಿಸ್ಕ್ ಟಾರ್ಕ್ ಪರಿವರ್ತಕವನ್ನು ಒಳಗೊಂಡಿರುವ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಪಾಲಿಸೇಡ್ ಎಸ್‍ಯುವಿಯು 2 ವ್ಹೀಲ್ ಡ್ರೈವ್ ಮತ್ತು 4 ವ್ಹೀಲ್ ಡ್ರೈವ್ ಸಿಸ್ಟಂ ಆಯ್ಕೆಗಳೊಂದಿಗೆ ಬರುತ್ತದೆ. ವಿನ್ಯಾಸ ಬದಲಾವಣೆಗಳ ಕುರಿತು ಹೇಳುವುದಾದರೆ, ಹೊಸ ಪಾಲಿಸೇಡ್ ಪ್ಯಾರಾಮೆಟ್ರಿಕ್ ಶೀಲ್ಡ್ ಅಂಶಗಳೊಂದಿಗೆ ಹೊಸ, ವಿಶಾಲವಾದ ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಮುಂಭಾಗದ ತುದಿಯಲ್ಲಿ ಹೊಸ ಲಂಬವಾಗಿ-ಸಂಪರ್ಕಿತ ಎಲ್ಇಡಿ ಸಂಯೋಜಿತ ಲ್ಯಾಂಪ್ ಗಳನ್ನು ಒಳಗೊಂಡಿದೆ.

ಈ ಹೊಸ ಎಸ್‍ಯುವಿ ಹೊಸದಾಗಿ ವಿನ್ಯಾಸಗೊಳಿಸಲಾದ 20-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳು, ಪನೋರಮಿಕ್ ಸೈಡ್ ಗ್ಲಾಸ್ ಗ್ರಾಫಿಕ್ಸ್, ಕೆಳಗಿನ ಮುಂಭಾಗದ ಸ್ಕಿಡ್ ಪ್ಲೇಟ್ ಅಂಶಗಳ ಮೇಲೆ ಹೊಸ ಸ್ಟ್ರೇಕ್ ವಿವರಗಳೊಂದಿಗೆ ಬರುತ್ತದೆ.

ಇನ್ನು ಈ ಹೊಸ ಹ್ಯುಂಡೈ ಪಾಲಿಸೇಡ್ ಎಸ್‍ಯುವಿಯ ಹಿಂಬದಿಯ ಪ್ರೊಫೈಲ್‌ನಲ್ಲಿ, ಮೂರು-ಸಾಲಿನ ಎಸ್‍ಯುವಿ ಲಂಬವಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಮತ್ತು ಲೋವರ್ ಫಾಸಿಯಾ ಸ್ಕಿಡ್ ಪ್ಲೇಟ್ ವಿವರಗಳನ್ನು ಪಡೆಯುತ್ತದೆ.

ಹೊಸ 2023ರ ಹ್ಯುಂಡೈ ಪಾಲಿಸೇಡ್‌ನ ಒಳಭಾಗವನ್ನು ಹೊಸದಾಗಿ ವಿನ್ಯಾಸಗೊಳಿಸಿದ ಡ್ಯಾಶ್‌ಬೋರ್ಡ್, ಹೊಸ ಸ್ಟೀರಿಂಗ್ ವೀಲ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಪ್ಯಾನಲ್‌ಗಳು ಮತ್ತು ಹೊಸ ಲೈಟಿಂಗ್ ನೊಂದಿಗೆ ಪರಿಷ್ಕರಿಸಲಾಗಿದೆ.

ಇದರೊಂದಿಗೆ ಆಡಿಯೊ ಕಂಟ್ರೋಲ್ ಗಳನ್ನು ಸ್ವಲ್ಪಮಟ್ಟಿಗೆ ಮರು-ಸ್ಥಾನಗೊಳಿಸಲಾಗಿದೆ ಮತ್ತು HVAC ವೆಂಟ್ ಗಳು ಇನ್ಸ್ ಟ್ರೂಮೆಂಟ್ ಪ್ರಯಾಣಿಕ ಡೋರಿಗೆ ಸ್ಟ್ರೀಪ್ ಅನ್ನು ಹೊಂದಿವೆ. ಪೂರ್ಣ ಡಿಸ್ ಪ್ಲೇ ಡಿಜಿಟಲ್ ರಿಯರ್‌ವ್ಯೂ ಮಿರರ್, ಹೊಸ ಎರ್ಗೋ-ಮೋಷನ್ ಸೀಟ್, ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಮ್, ಹಿಟಡ್ ಮೂರನೇ ಸಾಲಿನ ಸೀಟುಗಳು ಮತ್ತು ಎರಡನೇ ಸಾಲಿನ ಸೀಟುಗಳು ಮತ್ತು ವಿಂಗ್-ಔಟ್ ಹೆಡ್‌ರೆಸ್ಟ್‌ಗಳಂತಹ ವೈಶಿಷ್ಟ್ಯಗಳು ಸಹ ಕೊಡುಗೆಯಲ್ಲಿವೆ.

ಹೊಸ 2023ರ ಹ್ಯುಂಡೈ ಪಾಲಿಸೇಡ್ 12-ಇಂಚಿನ ನ್ಯಾವಿಗೇಷನ್ ಡಿಸ್ ಪ್ಲೇ, ಬ್ಲೂಲಿಂಕ್ ಸಂಪರ್ಕಿತ ಸರ್ವಿಸ್ ತ್ತೀಚಿನ ಆವೃತ್ತಿ, ವೈಫೈ ಹಾಟ್‌ಸ್ಪಾಟ್ ಮತ್ತು ನವೀಕರಿಸಿದ USB-C ಪೋರ್ಟ್‌ಗಳೊಂದಿಗೆ ಬರುತ್ತದೆ. ಐಫೋನ್ ಮತ್ತು ಆಂಡ್ರಾಯ್ಡ್ ವೈರ್‌ಲೆಸ್ ಸಾಧನಗಳನ್ನು ಬೆಂಬಲಿಸುವ ಡಿಜಿಟಲ್ ಕೀ 2 ಟಚ್ ಸಿಸ್ಟಮ್‌ನೊಂದಿಗೆ ಬಿಡುಗಡೆಯಾಗಲಿದೆ.

ಹ್ಯುಂಡೈ ಪಾಲಿಸೇಡ್ ಎಸ್‍ಯುವಿಯ ಸುರಕ್ಷತೆಗಾಗಿ, ಹಿಂಭಾಗದ ಸೈಡ್-ಇಂಪ್ಯಾಕ್ಟ್ ಏರ್‌ಬ್ಯಾಗ್‌ಗಳು ಈಗ ಮಾದರಿ ಶ್ರೇಣಿಯಾದ್ಯಂತ ಸ್ಟ್ಯಾಂಡರ್ಡ್ ಆಗಿದೆ. ಇದು ರಿವರ್ಸ್ ಕೊಲಿಷನ್ ಅಸಿಸ್ಟ್, ಫಾರ್ವರ್ಡ್ ಕೊಲಿಷನ್ ಕೊಲಿಷನ್ ಅವೈಡನ್ಸ್, ರಿಮೋಟ್ ಪಾರ್ಕಿಂಗ್, ನ್ಯಾವಿ-ಆಧಾರಿತ ಸ್ಮಾರ್ಟ್ ಕ್ರೂಸ್ ಮತ್ತು ಹೈವೇ ಡ್ರೈವಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುವ ಡ್ರೈವರ್ ಅಸಿಸ್ಟ್ ಸೂಟ್ ಅನ್ನು ನೀಡುತ್ತದೆ.

ನವೀಕರಿಸಿದ ಎಸ್‍ಯುವಿ ಮಾದರಿಯ ಶ್ರೇಣಿಯು ಹೊಸ, ಡಾರ್ಕ್-ಥೀಮಿನ XRT ರೂಪಾಂತರವನ್ನು ಪಡೆಯುತ್ತದೆ, ಇದು ಡಾರ್ಕ್ ಫಿನಿಶ್‌ನೊಂದಿಗೆ ಒರಟಾದ 20-ಇಂಚಿನ ಅಲಾಯ್ ವ್ಹೀಲ್ ಗಳು, ಸ್ಕಿಡ್ ಪ್ಲೇಟ್ ವಿನ್ಯಾಸದ ಅಂಶಗಳೊಂದಿಗೆ ಒರಟಾದ ಮುಂಭಾಗ ಮತ್ತು ಹಿಂಭಾಗದ ಫಾಸಿಕ, ಬ್ಲ್ಯಾಕ್ ರೂಫ್ ರೈಲ್ ಮತ್ತು ಪವರ್ ಸನ್‌ರೂಫ್ ಅನ್ನು ಹೊಂದಿದೆ.

ಇನ್ನು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ 2022ರ ಮಾರ್ಚ್ ತಿಂಗಳ ಕಾರು ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ವರದಿಗಳ ಪ್ರಕಾರ, ಕಳೆದ ತಿಂಗಳು ಹ್ಯುಂಡೈ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 44,600 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 52,600 ಯುನಿಟ್‌ಗಳನ್ನು ಹ್ಯುಂಡೈ ಕಂಪನಿಯು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 15.20 ರಷ್ಟು ಕುಸಿತವನ್ನು ಕಂಡಿದೆ,

ಕಂಪನಿಯು ಕಳೆದ ತಿಂಗಳು ಭಾರತದಿಂದ 10,687 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ರಫ್ತು ಮಾಡಿದ 12,021 ಯುನಿಟ್‌ಗಳಾಗಿತ್ತು. ಇದನ್ನು ಕಳೆದ ತಿಂಗಳ ಕಂಪನಿಯ ರಫ್ತಿಗೆ ಹೋಲಿಸಿದರೆ ಶೇ.11.09 ರಷ್ಟು ಇಳಿಕೆ ಕಂಡಿದೆ. ಇನ್ನ್ನು ಹಣಕಾಸು ವರ್ಷ 2022 ಮಾರಾಟಕ್ಕೆ ಬಂದರೆ, ಕಂಪನಿಯು ಶೇಕಡಾ 2.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಒಂದು ವರ್ಷದ ಹಿಂದಿನ ಅವಧಿಯಲ್ಲಿ ಮಾರಾಟವಾದ 4,71,535 ಯುನಿಟ್‌ಗಳಿಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ 4,81,500 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ತನ್ನ ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ಈ ವರ್ಷದ ಅವಧಿಯಲ್ಲಿ ಹೊಸ ಮಾದರಿಗಳನ್ನು ತರುವ ಸಾಧ್ಯತೆಯಿದೆ .ಹುಂಡೈ ಮುಂಬರುವ ತಿಂಗಳುಗಳಲ್ಲಿ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.