ಹೆಚ್ಚಿನ ಮೈಲೇಜ್, ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ 2020ರ ಆಟೋ ಎಕ್ಸ್‌ಪೋದಲ್ಲಿ ಆಟಮ್ ಕ್ವಾಡ್ರಿಸೈಕಲ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಅನಾವರಣಗೊಳಿಸಿತು. ಇದೀಗ ಸುಮಾರು ಎರಡು ವರ್ಷಗಳ ನಂತರ, ಮಹೀಂದ್ರಾ ಕಂಪನಿಯು ಈ ಆಟಮ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದಾಗ ಅದೇ ವರ್ಷದಲ್ಲೇ ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕಾರೋನಾ ಕಾರಣದಿಂದ ಈ ಆಟಮ್ ಕ್ವಾಡ್ರಿಸೈಕಲ್ ಬಿಡುಗಡೆಯಾನ್ನು ಮುಂದೂಡಿದರು. ಮಹೀಂದ್ರಾ ಆಟಮ್ ಭಾರತದ ಮೊದಲ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಆಗಲಿದೆ. ಇದರ ಬಿಡುಗಡೆಯ ಮುಂಚಿತವಾಗಿ, ಮಹೀಂದ್ರಾ ಆಟಮ್ ಬಗ್ಗೆ ವಿವರಗಳನ್ನು ಟೈಪ್ ಅಪ್ರೂವಲ್ ಸರ್ಟಿಫಿಕೇಟ್ ಮೂಲಕ ಬಹಿರಂಗವಾಗಿದೆ. ಇತ್ತೀಚಿನ ಪ್ರಮಾಣಪತ್ರವನ್ನು 'ಸಾರಿಗೆ' ವರ್ಗದ ಅಡಿಯಲ್ಲಿ ನೀಡಲಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಮಹೀಂದ್ರಾ ಆಟಮ್ K1, K2, K3 ಮತ್ತು K4 ಎಂಬ ಒಟ್ಟು ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. K2 ರೂಪಾಂತರವು 7.4 kWh, 144 Ah ಬ್ಯಾಟರಿ ಪ್ಯಾಕ್ ಹೊಂದಿದ್ದರೆ, ಆಟಮ್ K3 ಮತ್ತು K4 ರೂಪಾಂತರಗಳು 11.1 kWh, 216 Ah ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಬ್ಯಾಟರಿ ತಂತ್ರಜ್ಞಾನವೆಂದರೆ ಲಿಥಿಯಂ ಐರನ್ ಫಾಸ್ಫೇಟ್ (LiFePO4 ಅಥವಾ LFP), ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ದೀರ್ಘಾವಧಿಯ ಜೀವಿತಾವಧಿ, ಹಗುರವಾದ, ಸುರಕ್ಷಿತ ಕಾರ್ಯಾಚರಣೆಗಳು, ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ, ಕನಿಷ್ಠ ನಿರ್ವಹಣೆ ಮತ್ತು ಸುಧಾರಿತ ಡಿಸ್ಚಾರ್ಜ್ ಮತ್ತು ಚಾರ್ಜ್ ದಕ್ಷತೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಚಿಕ್ಕ ಬ್ಯಾಟರಿ ಪ್ಯಾಕ್ 98 ಕೆಜಿ ತೂಕವನ್ನು ಹೊಂದಿದ್ದರೆ, ದೊಡ್ಡ ಯುನಿಟ್ 47 ಕೆಜಿ ತೂಕವನ್ನು ಹೊಂದಿರುತ್ತದೆ. ಬ್ಯಾಟರಿ ತಂತ್ರಜ್ಞಾನವೆಂದರೆ ಲಿಥಿಯಂ ಐರನ್ ಫಾಸ್ಫೇಟ್ (LiFePO4 ಅಥವಾ LFP), ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಪ್ರಯೋಜನಗಳಲ್ಲಿ ಪ್ರಮುಖವಾದವುಗಳೆಂದರೆ ದೀರ್ಘಾವಧಿಯ ಜೀವಿತಾವಧಿ, ಹಗುರವಾದ, ಸುರಕ್ಷಿತ ಕಾರ್ಯಾಚರಣೆಗಳು, ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ, ಕನಿಷ್ಠ ನಿರ್ವಹಣೆ ಮತ್ತು ಸುಧಾರಿತ ಡಿಸ್ಚಾರ್ಜ್ ಮತ್ತು ಚಾರ್ಜ್ ದಕ್ಷತೆ ಆಗಿದೆ,

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಮಹೀಂದ್ರಾ ಆಟಮ್‌ನ ಗರಿಷ್ಠ ಮೋಟಾರ್ ಪವರ್ ಅನ್ನು 3,950 rpm ನಲ್ಲಿ 8 kW ನಲ್ಲಿ ರೇಟ್ ಮಾಡಲಾಗಿದೆ. AIS-039 ಮಾನದಂಡಗಳ ಪ್ರಕಾರ ಎಲೆಕ್ಟ್ರಿಕಲ್ ಎನರ್ಜಿ ಬಳಕೆಯು K1 ಮತ್ತು K2 ಗೆ ಪ್ರತಿ ಕಿಮೀಗೆ 90 Wh ಮತ್ತು K3 ಮತ್ತು K4 ಗೆ 106 Wh. K1 ಮತ್ತು K2 ಮತ್ತು ಅಂದಾಜು 80 ಕಿಮೀ ರೇಂಕ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಕೆ3 ಮತ್ತು ಕೆ4 ರೂಪಾಂತರಗಳು 100 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಈ ರೇಂಜ್ ಗಳು ಎಸಿ ಅಲ್ಲದ ರೂಪಾಂತರಗಳು ಪೂರ್ಣ ಚಾರ್ಜ್‌ನಲ್ಲಿ ಹೆಚ್ಚಿನ ಮೈಲುಗಳನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಈ ಮಹೀಂದ್ರಾ ಆಟಮ್ ವಿಶಿಷ್ಟವಾದ ಗ್ರಿಲ್ ವಿನ್ಯಾಸ, ಪ್ರಮುಖ ಹೆಡ್‌ಲ್ಯಾಂಪ್‌ಗಳು, ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ವೀಂಡೋಗಳನ್ನು ಹೊಂದಿದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಈ ಕ್ವಾಡ್ರಿಸೈಕಲ್ ಮೊನೊಕಾಕ್ ಚಾಸಿಸ್ ಅನ್ನು ಬಳಸುತ್ತದೆ ಮತ್ತು ನೇರವಾದ, ಬಾಕ್ಸ್ ವಿನ್ಯಾಸವನ್ನು ಹೊಂದಿದೆ. ವ್ಹೀಲ್ ಗಳನ್ನು ತೀವ್ರ ತುದಿಗಳಲ್ಲಿ ಇರಿಸಲಾಗುತ್ತದೆ, ಇದು ಕ್ವಾಡ್ರಿಸೈಕಲ್‌ಗೆ ಭವಿಷ್ಯದ ನೋಟ ಮತ್ತು ಭಾವನೆಯನ್ನು ಖಾತ್ರಿಗೊಳಿಸುತ್ತದೆ. ಒಳಭಾಗದಲ್ಲಿ, ಆಟಮ್ ಪ್ರಯೋಜನಕಾರಿ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಫ್ಲೀಟ್ ಕಾರ್ಯಾಚರಣೆಗಳಿಗೆ ಬಳಸಿದಾಗ ಬುಕಿಂಗ್ ಮತ್ತು ಪಾವತಿಗಳ ತ್ವರಿತ ಪ್ರಕ್ರಿಯೆಗಾಗಿ ಇದು 4G ಸಂಪರ್ಕವನ್ನು ಹೊಂದಿರುತ್ತದೆ. ಆಯಾಮದಲ್ಲಿ, ಮಹೀಂದ್ರಾ ಆಟಮ್ 2,728 ಮಿಮೀ ಉದ್ದ, 1,452 ಎಂಎಂ ಅಗಲ ಮತ್ತು 1,576 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಮಾದರಿಯು 1,885 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇದರ ಕಾಂಪ್ಯಾಕ್ಟ್ ಗಾತ್ರದ ಹೊರತಾಗಿಯೂ, ಮಹೀಂದ್ರಾ ಆಟಮ್‌ ವಿಶಾಲವಾದ ಒಳಾಂಗಣವನ್ನು ಹೊಂದಿರುತ್ತದೆ. ಬ್ಯಾಟರಿ ಪ್ಯಾಕ್ ಮತ್ತು ಎಸಿ, ನಾನ್ ಎಸಿ ರೂಪಾಂತರಗಳಲ್ಲಿನ ವ್ಯತ್ಯಾಸದಿಂದಾಗಿ, ಎಲ್ಲಾ ನಾಲ್ಕು ರೂಪಾಂತರಗಳು ವಿಭಿನ್ನ ಕರ್ಬ್ ತೂಕ ಮತ್ತು ಗ್ರಾಸ್ ವೆಹಿಕಲ್ ವೇಟ್ (ಜಿವಿಡಬ್ಲ್ಯು) ಹೊಂದಿವೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಇನ್ನು ಕೋವಿಡ್ ಪರಿಣಾಮ ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನುು ತಾತ್ಕಾಲಿಕವಾಗಿ ಮುಂಡೂಡಿಕೆ ಮಾಡುತ್ತಾ ಬಂದಿದ್ದ ಮಹೀಂದ್ರಾ ಕಂಪನಿಯು ಇತ್ತೀಚೆಗೆ ಹೊಸ ವಾಹನಗಳ ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಮರುಚಾಲನೆ ನೀಡಿತು. ಆಟಮ್‌ ಕ್ವಾರ್ಡ್ರಿಸೈಕಲ್ ಮಾದರಿಯು ಉತ್ಪಾದನಾ ಮಾದರಿಯೊಂದಿಗೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಹೊಸ ವಾಹನವು ಕೆ1, ಕೆ2, ಕೆ3 ಮತ್ತು ಕೆ4 ವೆರಿಯೆಂಟ್‌ಗಳೊಂದಿಗೆ ಬಿಡುಗಡೆಗೊಳ್ಳಲಿದೆ.

ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹೀಂದ್ರಾ ಆಟಮ್

ಮಹೀಂದ್ರಾ ಆಟಮ್ ಅನ್ನು ಆರಂಭಿಕ ಆಫರ್ ಬೆಲೆ ಸುಮಾರು 3 ಲಕ್ಷ ರೂಪಾಯಿಗಳಲ್ಲಿ ಬಿಡುಗಡೆ ಮಾಡಬಹುದು. ಬಿಡುಗಡೆಯ ಸಮಯದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುದಿಲ್ಲ. ಭವಿಷ್ಯದಲ್ಲಿ, ಇದು ಮುಂಬರುವ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್‌ನಿಂದ ಸ್ಪರ್ಧೆಯನ್ನು ಎದುರಿಸಬಹುದು. ಬಜಾಜ್ ಕ್ಯೂಟ್ ಎಲೆಕ್ಟ್ರಿಕ್ ಮಾದರಿಯಲ್ಲಿಯೂ ಬಿಡುಗಡೆಯಾಗಬಹುದು.

Most Read Articles

Kannada
English summary
New mahindra atom quadricycle range variants battery range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X