ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಜಪಾನ್ ಕಾರು ಉತ್ಪಾದನಾ ಕಂಪನಿಯಾಗಿರುವ ನಿಸ್ಸಾನ್ ಭಾರತದಲ್ಲಿನ ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಿದ್ದು, ಕಂಪನಿಯು ಭಾರತದಿಂದ ಇದುವರೆಗೆ 1 ಮಿಲಿಯನ್ ಕಾರುಗಳನ್ನು ರಫ್ತು ಮಾಡುವ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

2010ರಲ್ಲಿ ಮೊದಲ ಬಾರಿಗೆ ಭಾರತದಿಂದ ಪ್ರಮುಖ ಜಾಗತಿಕ ಮಾರುಕಟ್ಟೆಗಳಿಗೆ ಕಾರು ರಫ್ತು ಆರಂಭಿಸಿದ್ದ ನಿಸ್ಸಾನ್ ಕಂಪನಿಯು ಮೇಕ್ ಇನ್ ಇಂಡಿಯಾ ಯೋಜನೆ ಜಾರಿ ನಂತರ ರಫ್ತು ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಮೂಲಕ 1 ಮಿಲಿಯನ್ ಗುರಿಸಾಧನೆ ತಲುಪಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಭಾರತದಿಂದ ಸುಮಾರು 108 ರಾಷ್ಟ್ರಗಳಿಗೆ ವಿವಿಧ ಕಾರು ಮಾದರಿಗಳನ್ನು ರಫ್ತು ಕೈಗೊಳ್ಳುತ್ತಿರುವ ನಿಸ್ಸಾನ್ ಕಂಪನಿಯು ಚೆನ್ನೈ ಹೊರವಲಯದಲ್ಲಿರುವ ಉತ್ಪಾದನಾ ಘಟಕದಲ್ಲಿ ಕಾರುಗಳನ್ನು ಸಿದ್ದಪಡಿಸುತ್ತಿದ್ದು, ಇದು ನಿಸ್ಸಾನ್ ಕಂಪನಿಯ ಪ್ರಮುಖ ಬಿಡಿಭಾಗಗಳ ಪೂರೈಕೆಯ ಪ್ರಮುಖ ಕೇಂದ್ರವೆಂದು ಕೂಡಾ ಜನಪ್ರಿಯತೆ ಹೊಂದಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ನಿಸ್ಸಾನ್ ಇಂಡಿಯಾ ಕಂಪನಿಯು ಚೆನ್ನೈನ ಕಾಮರಾಜರ್ ಬಂದರಿನಿಂದ ಮಧ್ಯಪ್ರಾಚ್ಯ, ಯುರೋಪ್, ಲ್ಯಾಟಿನ್ ಅಮೆರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ಸಾರ್ಕ್ ದೇಶಗಳು, ಉಪ-ಸಹಾರನ್ ಮತ್ತು ಆಫ್ರಿಕಾದ ಪ್ರಮುಖ ರಾಷ್ಟ್ರಗಳಿಗೆ ವಾಹನಗಳನ್ನು ರಫ್ತು ಮಾಡಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಇತ್ತೀಚಿನ ವರ್ಷಗಳಲ್ಲಿ, ನಿಸ್ಸಾನ್ ಇಂಡಿಯಾ ತನ್ನ ಪ್ರಾಥಮಿಕ ರಫ್ತು ಮಾರುಕಟ್ಟೆಯನ್ನು ಯುರೋಪ್‌ನಿಂದ ಮಧ್ಯಪ್ರಾಚ್ಯ ದೇಶಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಓಮನ್, ಕತಾರ್, ಬಹ್ರೇನ್ ಮತ್ತು ಕುವೈತ್‌ಗೆ ವರ್ಗಾಯಿಸಿದ್ದು, ಭಾರತದಿಂದ ರಫ್ತಾಗುವ ಪ್ರಮುಖ ಮಾದರಿಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಅಗ್ರಸ್ಥಾನ ಪಡೆದುಕೊಂಡಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಕಾರು ಉತ್ಪಾದನ ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ ಹೊಸ ಕಾರು ಸ್ಥಾವರವು ಭಾರತೀಯ ಆರ್ಥಿಕತೆಗೆ 1.5 ಶತಕೋಟಿಗೂ ಯುಎಸ್ಎ ಡಾಲರ್‌ನಷ್ಟು ಕೊಡುಗೆ ನೀಡಿದ್ದು, 40,000 ಕ್ಕೂ ಹೆಚ್ಚು ಕಾರ್ಮಿಕರಿಗೆ (ನೇರ ಮತ್ತು ಪರೋಕ್ಷ) ಉದ್ಯೋಗ ಮತ್ತು ಕೌಶಲ್ಯ ಅವಕಾಶಗಳನ್ನು ಸೃಷ್ಟಿಸಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಇತ್ತೀಚಿನ ಕೆಲ ತಿಂಗಳುಗಳಲ್ಲಿ ಭಾರತೀಯ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್‌ ಕಾರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನಾ ಪ್ರಮಾಣವನ್ನು ನಿರಂತವಾಗಿ ಹೆಚ್ಚಿಸಲಾಗಿದ್ದು, ಮ್ಯಾಗ್ನೈಟ್ ಕಾರು ಮಾದರಿಯು ಕಂಪನಿಗೆ ಭಾರೀ ಲಾಭ ತಂದುಕೊಡುತ್ತಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

2020ರ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ನಿಸ್ಸಾನ್ ಮಾಗ್ನೈಟ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಫೀಚರ್ಸ್ ಮತ್ತು ಬಜೆಟ್ ಬೆಲೆಯೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಹೊಸ ಕಾರು ವಿನೂತನ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯತೆಗಳೊಂದಿಗೆ ಕಂಪಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆಯುತ್ತಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ನಿಸ್ಸಾನ್ ಇಂಡಿಯಾ ಕಂಪನಿಗೆ ಮ್ಯಾಗ್ನೈಟ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಡುತ್ತಿದ್ದು, ಹೊಸ ಕಾರು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಹೊಸ ಕಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10.56 ಲಕ್ಷ ಬೆಲೆ ಪಡೆದುಕೊಂಡಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಬಿಡಿಭಾಗಗಳ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ಹೊಸ ಕಾರು ಬಿಡುಗಡೆಯ ನಂತರ ಹಲವು ಬಾರಿ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಬೆಲೆ ಹೆಚ್ಚಳ ನಂತರವು ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ದರದಲ್ಲಿ ಮಾರಾಟಗೊಳ್ಳುತ್ತಿರುವುದೇ ಈ ಕಾರಿನ ಪ್ರಮುಖ ವೈಶಿಷ್ಟ್ಯತೆಯಾಗಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರುಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ನಂತರ ಹೊಸ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಳವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರು ಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

ಹೊಸ ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದೆ.

ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ಕಾರು ಗಳ ರಫ್ತಿನಲ್ಲಿ ನಿಸ್ಸಾನ್ ಹೊಸ ಮೈಲಿಗಲ್ಲು

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಈ ಮೂಲಕ ಹೊಸ ಕಾರು ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ. ಮ್ಯಾಗ್ನೈಟ್ ಮಾದರಿಯಲ್ಲಿ ವಿಶೇಷ ಆವೃತ್ತಿ ಬಿಡುಗಡೆ ಮಾಡಲಾಗಿದ್ದು, ಮ್ನಾಗ್ನೈಟ್ ರೆಡ್ ಎಡಿಷನ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7,86,500 ಬೆಲೆ ಹೊಂದಿದೆ.

Most Read Articles

Kannada
English summary
Nissan exports 1 million cars from india
Story first published: Saturday, July 30, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X