1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಗ

ಕಸ್ಟಮ್ ಎಲೆಕ್ಟ್ರಿಕ್ ವಾಹನ ತಯಾರಕ ಓವರ್‌ಲ್ಯಾಂಡ್-ಇ ಇತ್ತೀಚೆಗೆ ತನ್ನ ಮುಂಬರುವ ಜನರೇಷನ್-2 ಎಲೆಕ್ಟ್ರಿಕ್ ಕಾರ್ ಅನ್ನು ಬಹಿರಂಗಪಡಿಸಿದೆ. ಇದು ಆಫ್ ರೋಡರ್ ಎಲೆಕ್ಟ್ರಿಕ್ ಕಾರಾಗಿದ್ದು, ಇದರ ವಿನ್ಯಾಸ ಸಾಮಾನ್ಯ ಎಲೆಕ್ಟ್ರಿಕ್ ಕಾರುಗಳಿಗಿಂತ ಭಿನ್ನವಾಗಿದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಜನರೇಷನ್-2 ಎಲೆಕ್ಟ್ರಿಕ್ ಕಾರನ್ನು ಎರಡು ಮಾದರಿಗಳಲ್ಲಿ ನೀಡುವುದಾಗಿ ಕಂಪನಿ ಹೇಳಿದೆ. ಮೊದಲ ಮಾದರಿಯು ನಗರದ ಚಾಲನೆಗಾಗಿ ವಿನ್ಯಾಸಗೊಳಿಸಲಾದ ಸ್ಟ್ರೀಟ್ ಕಾರ್ ಆಗಿದ್ದು, ಇದು ಆಕರ್ಷಕ ಒಳಾಂಗಣ ಮತ್ತು ಕ್ಯಾಬಿನ್ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಜನರೇಷನ್ 2 ಸಂಪೂರ್ಣ ಚಾರ್ಜ್‌ನಲ್ಲಿ 1,207 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಎರಡನೇ ಮಾದರಿಯು ಆಫ್-ರೋಡ್ ಕೇಂದ್ರೀಕೃತ ಮಾದರಿಯಾಗಿರುತ್ತದೆ, ಇದು ಒರಟು ವಿನ್ಯಾಸ ಮತ್ತು ಆಫ್-ರೋಡಿಂಗ್ ವೈಶಿಷ್ಟ್ಯಗಳೊಂದಿಗೆ ನೀಡಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡೂ ಪೀಳಿಗೆಯ 2 ಮಾದರಿಗಳು ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಓವರ್‌ಲ್ಯಾಂಡ್-ಇ ಹೇಳಿಕೊಂಡಿದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಓವರ್‌ಲ್ಯಾಂಡ್-ಇ ಎಂಬುದು 2017ರಲ್ಲಿ ಮರುಭೂಮಿ ಗಸ್ತು ವಾಹನವನ್ನು ನಿರ್ಮಿಸುವ ಮೂಲಕ ಹೊರಹೊಮ್ಮಿದ ಕಸ್ಟಮ್ ಕಂಪನಿಯಾಗಿದೆ. ಈ ಕಂಪನಿಯು ಇತರ ವಾಹನಗಳಿಂದ ಬಿಡಿಭಾಗಗಳನ್ನು ಸಂಗ್ರಹಿಸಿ ನಂತರ ತನ್ನದೇ ಆದ ಆಯ್ಕೆಯ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವುದರಿಂದ ಇದನ್ನು ಕಸ್ಟಮ್ ಕಂಪನಿ ಎಂದು ಕರೆಯಲಾಗುತ್ತದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಜನರೇಷನ್-2 ಎಲೆಕ್ಟ್ರಿಕ್ ಕಾರುಗಳ ವಿನ್ಯಾಸವು ಭವಿಷ್ಯದ ಪರಿಕಲ್ಪನೆಯ ಕಾರುಗಳಿಗೆ ಹೋಲುತ್ತದೆ. ಕಾರಿನ ಮುಂಭಾಗ ಕಪ್ಪು ಗ್ರಿಲ್, ಎಲ್ಇಡಿ ಹೆಡ್ಲೈಟ್, ಎಲ್ಇಡಿ ಟೈಲ್ ಲೈಟ್ ಮತ್ತು ಬಾನೆಟ್ ಕರ್ವ್ ಆಕಾರದಲ್ಲಿ ನೀಡಲಾಗಿದೆ. ಅಲ್ಲದೇ ಕಾರಿಗೆ ಬಹಳ ಉದ್ದವಾದ ವೀಲ್‌ಬೇಸ್ ಮತ್ತು ಫ್ಯೂಚರಿಸ್ಟಿಕ್‌ ಆಗಿ ಕಾಣಲು ಆಫ್ ರೋಡ್ ಟೈರ್‌ಗಳನ್ನು ನೀಡಲಾಗಿದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಕಾರಿನಲ್ಲಿ ಕಡಿಮೆ ವಿನ್ಯಾಸ ಮತ್ತು ಕರ್ವ್‌ಗಳನ್ನು ಬಳಸಲಾಗಿದೆ. ಕಾರಿನ ಸೈಡ್ ಪ್ರೊಫೈಲ್ ಕೂಡ ಸರಳವಾಗಿದೆ. ಇಲ್ಲಿಯವರೆಗೆ ಕೇವಲ ಎರಡು ಎಲೆಕ್ಟ್ರಿಕ್ ವಾಹನಗಳಾದ MK1 ಮತ್ತು ಜನರೇಷನ್ 2 ಅನ್ನು ಓವರ್‌ಲ್ಯಾಂಡ್-ಇ ತಂಡವು ವಿನ್ಯಾಸಗೊಳಿಸಿದೆ. ಹೊಸ ಜನರೇಷನ್ 2 ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಆಫ್ ರೋಡ್ ವಾಹನವಾಗಿದೆ. ಪ್ರಮುಖ ಹೈಲೈಟ್ ಎಂದರೆ ಈ ಎಲೆಕ್ಟ್ರಿಕ್ ವಾಹನವನ್ನು ಸುಮಾರು 1,207 ಕಿ.ಮೀ ವ್ಯಾಪ್ತಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಕಾರಿನ ಡ್ಯಾಶ್‌ಬೋರ್ಡ್ ಹೆಚ್ಚು ವಿನ್ಯಾಸವನ್ನು ಹೊಂದಿದೆ ಸರಳವಾಗಿ ಕಾಣುತ್ತದೆ. ಕಾರಿನ ಹಿಂಭಾಗದಲ್ಲಿ ಎರಡು ಇಂಧನ ಕಂಟೈನರ್‌ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ ಇಂಧನವನ್ನು ಸಾಗಿಸಬಹುದಾಗಿದೆ. ಕಾರಿನ ಮೇಲ್ಛಾವಣಿಯಲ್ಲಿ ಗ್ರಾಬ್ ರೈಲ್‌ಗಳು ಮತ್ತು ಎಲ್‌ಇಡಿ ಡಿಪ್ಪರ್‌ಗಳನ್ನು ಅಳವಡಿಸಲಾಗಿದೆ. ಕಾರು ಹಿಂಭಾಗದ ಡೆಕ್ ಅನ್ನು ಸಹ ಪಡೆದುಕೊಂಡಿದ್ದು, ಇದು 4 ದೊಡ್ಡ ಟೈರ್‌ಗಳಿಗೆ ಅವಕಾಶ ಕಲ್ಪಿಸುತ್ತದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಅಂದರೆ ಜನರೇಷನ್ 2 ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಯಲ್ಲಿ ಗರಿಷ್ಠ 1,207 ಕಿ.ಮೀ ಪ್ರಯಾಣಿಸಬಲ್ಲದು. ಇದರ ಜೊತೆಗೆ ಆಫ್-ರೋಡ್ ವಾಹನವಾಗಿ ಜನರೇಷನ್ 2 ಅನ್ನು ದೂರದ ಪ್ರಯಾಣಗಳಿಗೆ ಯಾವುದೇ ಭಯವಿಲ್ಲದೇ ಕೊಂಡೊಯ್ಯಬಹುದು. ಇದು ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವಲ್ಲ, ಇದಕ್ಕೂ ಮೊದಲು ಕಂಪನಿಯು ಫೋಕ್ಸ್‌ವ್ಯಾಗನ್ ಬೀಟಲ್ ವಿನ್ಯಾಸವನ್ನು ಆಧರಿಸಿದ MK1 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತ್ತು.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಓವರ್‌ಲ್ಯಾಂಡ್-ಇ ತನ್ನ ಜನರೇಷನ್ 2 ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯನ್ನು ಜೂನ್ 2023 ರಲ್ಲಿ ಪ್ರಾರಂಭಿಸಲಿದೆ. ಇದನ್ನು ಯುನೈಟೆಡ್ ಕಿಂಗ್‌ಡಮ್ ಮತ್ತು ಯುಎಸ್‌ನ ಕಾರ್ಖಾನೆಗಳಲ್ಲಿ ತಯಾರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಕೆಲವು ವಿಶೇಷ ಗ್ರಾಹಕರಿಗೆ ಮೊದಲು ಜನರೇಷನ್-2 ಎಲೆಕ್ಟ್ರಿಕ್ ಕಾರನ್ನು ಲಭ್ಯವಾಗುವಂತೆ ಮಾಡುವುದಾಗಿ ಕಂಪನಿ ಹೇಳಿದೆ. ಕಂಪನಿಯ ಯೋಜನೆಯ ಪ್ರಕಾರ, ಈ ಎಲೆಕ್ಟ್ರಿಕ್ ಕಾರನ್ನು ಮೊದಲು ಸೇನೆಗಾಗಿ ಉತ್ಪಾದಿಸಲಾಗುತ್ತದೆ. ಬಳಿಕ ಈ ಕಾರಿನ ಪ್ರಮುಖ ಗ್ರಾಹಕರಾದ ರೇಸಿಂಗ್ ಮತ್ತು ಮೋಟಾರ್‌ಸ್ಪೋರ್ಟ್ ಈವೆಂಟ್‌ಗಳನ್ನು ಆಯೋಜಿಸುವ ಕಂಪನಿಗಳಿಗೆ ನೀಡುವುದಾಗಿ ತಿಳಿಸಿದೆ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಈ ಕಾರನ್ನು ಮೊದಲು ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುವುದು. ಈ ದೇಶಗಳಲ್ಲಿ ಮರುಭೂಮಿಯ ರೇಸಿಂಗ್‌ಗಳು ಅತ್ಯಂತ ಜನಪ್ರಿಯ ಮೋಟಾರ್‌ಸ್ಪೋರ್ಟ್ ಆಗಿದೆ. ಇಂತಹ ರೇಸಿಂಗ್ ಈವೆಂಟ್‌ಗಳಲ್ಲಿ ಆಫ್-ರೋಡ್ ಕಾರುಗಳನ್ನು ಬಳಸಲಾಗುತ್ತದೆ ಎಂದು ಕಂಪನಿ ಹೇಳಿದೆ. ಪ್ರಸ್ತುತ, ಕಂಪನಿಯು ಜನರೇಷನ್-2 ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿಯನ್ನು ಹಂಚಿಕೊಂಡಿಲ್ಲ.

1,207 ಕಿ.ಮೀ ಮೈಲೇಜ್: ಓವರ್‌ಲ್ಯಾಂಡ್-ಇ ಜನರೇಷನ್-2 ಕಾರಿನ ಶ್ರೇಣಿ, ವೈಶಿಷ್ಟ್ಯಗಳು ಬಹಿರಂಹಗ

ಈ ವಾಹನದ ವೀಲ್ ಬೇಸ್ ಗಾತ್ರ (ಮುಂಭಾಗ ಮತ್ತು ಹಿಂಬದಿ ಚಕ್ರಗಳ ನಡುವಿನ ಅಂತರ) ಹೆಚ್ಚಾಗಿರುತ್ತದೆ. ಅದರಂತೆ ಈ ಎಲೆಕ್ಟ್ರಿಕ್ ಕಾರಿನಲ್ಲಿ ಅಳವಡಿಸಲಾಗಿರುವ ಟೈರ್‌ಗಳು ಜನರೇಷನ್ 2 ವಾಹನವು ಯಾವುದೇ ರಸ್ತೆಯಲ್ಲಿ ಮುನ್ನುಗ್ಗುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಕಾರಿನ ಸೈಡ್ ಭಾಗವು ಸರಳವಾಗಿ ಕಾಣುತ್ತದೆ. ರೂಫ್‌ ಅನ್ನು ಆಫ್-ರೋಡ್ ವಾಹನ ಎಂದು ಸಮರ್ಥಿಸಲು 4 LED ಸ್ಪಾಟರ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಕಾರ್ ಆಗಿದ್ದರೂ, ಈ ಜನರೇಷನ್ 2 ವಾಹನದ ಹಿಂಭಾಗಕ್ಕೆ 2 ಜೆರಿಕಾನ್‌ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Overland e generation 2 electric off road car unveiled range features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X