ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ 2022ರ ಫೆಬ್ರವರಿ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಸ್ಕೋಡಾ ಕಂಪನಿಯು ಕಳೆದ ತಿಂಗಳಿನಲ್ಲಿ ಒಟ್ಟು 4,503 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

2022ರ ಜನವರಿ ತಿಂಗಳಿನಲ್ಲಿ ಸ್ಕೋಡಾ ಕಂಪನಿಯು 3,009 ವಾಹನಗಳನ್ನು ಮಾರಾಟ ಮಾಡಿತ್ತು. ಇದನ್ನು ತಿಂಗಳಿನಿಂದ ತಿಂಗಳಿಗೆ ಸುಮಾರು 50 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿತು. ಇನ್ನು 2021ರ ಫೆಬ್ರವರಿ ತಿಂಗಳಿನಲ್ಲಿ ಸ್ಕೋಡಾ ಕಂಪನಿಯು 853 ವಾಹನಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಐದು ಪಟ್ಟು ಹೆಚ್ಚು ಅಥವಾ 428 ಶೇಕಡಾ ಬೆಳವಣಿಗೆಯನ್ನು ಕಂಡಿದೆ. 2022ರ ಫೆಬ್ರವರಿ ತಿಂಗಳ ಮಾರಾಟದಲ್ಲಿ ಸ್ಕೋಡಾ ಕಂಪನಿಯ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿ ಕುಶಾಕ್ ಕಾಂಪ್ಯಾಕ್ಟ್ ಆಗಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಕಳೆದ ವರ್ಷ ಈ ಅವಧಿಯಲ್ಲಿ, ಸ್ಕೋಡಾದ ಟಾಪ್-ಸೆಲ್ಲರ್ ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿ ಭಾರತದಲ್ಲಿ ಬಿಡುಗಡೆಯಾಗಿತ್ತಿಲ್ಲ. ಹೊಸ ಜನರೇಷನ್ ಆಕ್ಟೀವಿಯಾ ಮತ್ತು ಹೊಸ ಕೊಡಿಯಾಕ್ ಎಸ್‍ಯುವಿ ಕೂಡ ಬಿಡುಗಡೆ ಆಗಿರಲಿಲ್ಲ ಎಂಬ ಅಂಶವನ್ನು ನಾವು ಪರಿಗಣಿಸಬೇಕಾಗಿದೆ. ಆದ್ದರಿಂದ, ಈ ಬೃಹತ್ ಏರಿಕೆಯ ನಿಜವಾದ ಬೆಳವಣಿಗೆ ಎಂದು ಪರಿಗಣಿಸಲಾಗುವುದಿಲ್ಲ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಝಾಕ್ ಹೋಲಿಸ್ ಅವರು ಮಾತನಾಡಿ, 2022 ರಲ್ಲಿ ನಾವು ನೋಡುತ್ತಿರುವ ಧನಾತ್ಮಕ ಬೆಳವಣಿಗೆಯ ನಾನು ಸಂತೋಷಗೊಂಡಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ಕೇವಲ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವ ಬಗ್ಗೆ ಅಲ್ಲ, ಇದು ಸ್ಕೋಡಾ ಆಟೋದ ಹೆಚ್ಚು ಸಂತೋಷದ ಗ್ರಾಹಕರು ಮತ್ತು ಅಭಿಮಾನಿಗಳನ್ನು ಹೊಂದಿರುವುದು.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಇದು ನಮ್ಮ ಕುಟುಂಬದ ಹೊಸ ಸದಸ್ಯರಾದ ಸ್ಲಾವಿಯಾ 1.0 TSI ಮತ್ತು ಸ್ಲಾವಿಯಾ 1.5 TSI ಸೆಡಾನ್‌ಗಳು ಆಗಮಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಪರಿಪೂರ್ಣ ವೇದಿಕೆಯಾಗಿದೆ ಎಂದು ಹೇಳಿದರು.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಫೆಬ್ರವರಿ 28 ರಂದು, ತಿಂಗಳ ಕೊನೆಯ ದಿನ, ಸ್ಕೋಡಾ ಆಟೋ ಸಹ ಹೊಸ ಸ್ಲಾವಿಯಾ ಕಾಂಪ್ಯಾಕ್ಟ್ ಸೆಡಾನ್ ಅನ್ನು ಬಿಡುಗಡೆ ಮಾಡಿತು. ಕುಶಾಕ್‌ನಂತೆಯೇ ಅದೇ MQB A0 IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಹೊಸ ಸೆಡಾನ್ ಸ್ಕೋಡಾ ರಾಪಿಡ್ ಅನ್ನು ಬದಲಿಸಿದೆ ಮತ್ತು ಈಗ ಜೆಕ್ ಆಟೋ ಬ್ರಾಂಡ್‌ನಿಂದ ಅತ್ಯಂತ ಕೈಗೆಟುಕುವ ಕೊಡುಗೆಯಾಗಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಸ್ಕೋಡಾ ಸ್ಲಾವಿಯಾ ಸಹ 1.0-ಲೀಟರ್ TSI ಮತ್ತು 1.5-ಲೀಟರ್ TSI ಎಂಜಿನ್‌ನೊಂದಿಗೆ ನೀಡಲಾಗುವುದು. ಮೊದಲನೆಯದನ್ನು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ರೂಪಾಂತರಗಳಲ್ಲಿ ನೀಡಲಾಗುತ್ತದೆ ಮತ್ತು ಇದರ ಬೆಲೆಯು ರೂ.10.69 ಲಕ್ಷವಾಗಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಇನ್ನು ಇನ್ನು ಸ್ಕೋಡಾ ಕುಶಾಕ್ ಎಸ್‌ಯುವಿ ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕ ಮಿಡ್ ಸೈಜ್ ಎಸ್‍ಯುವಿ ವಿಭಾಗ ಮಾದರಿಯಾಗಿದೆ. ಸ್ಕೋಡಾ ಕುಶಾಕ್ ಕಳೆದ ತಿಂಗಳು ಕಂಪನಿಯ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಈ ಫೋಕ್ಸ್‌ವ್ಯಾಗನ್ ಗ್ರೂಪ್ ಭಾರತದಲ್ಲಿ ತಯಾರಿಸಿದ ಮೊದಲ ಎಸ್‍ಯುವಿ ಸ್ಕೋಡಾ ಕುಶಾಕ್ ಕುಶಾಕ್ ಆಗಿ, ಇಂಡಿಯಾ 2.0 ಯೋಜನೆಯಡಿ ಉತ್ಪಾದಿಸಲ್ಪಟ್ಟ ಮೊದಲ ವಾಹನ ಇದಾಗಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಪ್ರೀಮಿಯಂ ಮತ್ತು ಕೈಗೆಟುಕುವ ಕಾರು ಬ್ರ್ಯಾಂಡ್ ಆಗಿ ಮಾಡಲು ಕುಶಾಕ್ ಸಹಾಯ ಮಾಡುತ್ತದೆ. ಈ ಕುಶಾಕ್ ಎಸ್‍ಯುವಿಯು 2,651 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಇದು ತನ್ನ ವಿಭಾಗದಲ್ಲಿ ದೊಡ್ಡದಾಗಿದೆ. ಈ ಹೊಸ ಸ್ಕೋಡಾ ಎಸ್‍ಯುವಿಯು ಒಟ್ಟಾರೆ ಆಯಾಮಗಳ ದೃಷ್ಟಿಯಿಂದ ತನ್ನ ಪ್ರತಿಸ್ಪರ್ಧಿಗಳಿಗಿಂತ ಚಿಕ್ಕದಾಗಿದೆ; ಇದರ ಉದ್ದ 4,221 ಎಂಎಂ, ಅಗಲ 1,760 ಎಂಎಂ ಮತ್ತು 1,612 ಎಂಎಂ ಎತ್ತರವನ್ನು ಹೊದಿದೆ. ಇನ್ನು 188 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಇನ್ನು 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಯಾದ ಮೊದಲ 20 ದಿನಗಳಲ್ಲಿ ಈ ವರ್ಷ ಸ್ಕೋಡಾ ಮಾರಾಟ ಮಾಡಲು ಉದ್ದೇಶಿಸಿರುವ ಎಲ್ಲಾ ಯುನಿಟ್ ಗಳು ಮಾರಾಟವಾಗಿವೆ ಎಂದು ಸ್ಕೋಡಾ ಆಟೋ ಇಂಡಿಯಾ ಘೋಷಿಸಿದೆ. ಜನವರಿ 10 ರಂದು ಬಿಡುಗಡೆಯಾದಾಗಿನಿಂದ ಮಾರಾಟವಾದ ಕೊಡಿಯಾಕ್‌ನ ನಿಖರವಾದ ಸಂಖ್ಯೆಯನ್ನು ಕಾರು ತಯಾರಕರು ಬಹಿರಂಗಪಡಿಸಿಲ್ಲ. ಇನ್ನು ಸ್ಕೋಡಾ ಕಂಪನಿಯು ಈ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿಯ ಬೆಲೆಯನ್ನು ಹೆಚ್ಚಿಸಿದೆ.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿಯ ಮೂರೂ ರೂಪಾಂತರಗಳ ಬೆಲೆಯನ್ನು ರೂ.1 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ತಯಾರಕರು ಕೊಡಿಯಾಕ್ ಅನ್ನು ಪ್ರಿ-ಫೇಸ್‌ಲಿಫ್ಟ್ ಮಾದರಿಯಿಂದ ಪ್ರತ್ಯೇಕಿಸಲು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದಾರೆ. ಬಿಎಸ್6 ಮಾಲಿನ್ಯ ನಿಯಮದ ಕಾರಣದಿಂದಾಗಿ ಹಿಂದಿನ ಮಾದರಿಯನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಯಿತು. 2022ರ ಆವೃತ್ತಿಯು ಪ್ರಸ್ತುತ ಸುರಕ್ಷತೆ ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ಇತ್ತೀಚೆಗೆ ಸ್ಕೋಡಾ ಕಂಪನಿಯು ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಗಾಗಿ ಹೊಸ ಟಿವಿಸಿಯನ್ನು ಬಿಡುಗಡೆಗೊಳಿಸಿತ್ತು.

ಫೆಬ್ರವರಿ ತಿಂಗಳ ಕಾರು ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಸ್ಕೋಡಾ

ಈ 7-ಸೀಟುಗಳ ಈ ಎಸ್‍ಯುವಿಯ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಘಟಕವಾಗಿ ನೀಡಲಾಗುತ್ತದೆ ಮತ್ತು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾದ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತಿದೆ, ಇನ್ನು ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda auto india sells 4503 units in february 2022 details
Story first published: Saturday, March 5, 2022, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X