Just In
- 46 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
- News
BBC ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂ ನೋಟೀಸ್
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ಸೆಪ್ಟೆಂಬರ್ ಅವಧಿಯಲ್ಲಿನ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ್ದು, ಕಂಪನಿಯು ಶೇ. 85.21 ರಷ್ಟು ಬೆಳವಣಿಗೆಯೊಂದಿಗೆ 47,654 ಕಾರುಗಳನ್ನು ಮಾರಾಟ ಮಾಡಿದೆ.

ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ಕೊರತೆ ನಡುವೆಯೂ ಕಳೆದ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 25,730 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ 47,654 ಯುನಿಟ್ ಕಾರುಗಳ ಮಾರಾಟದ ಮೂಲಕ ಶೇ. 85.21 ರಷ್ಟು ಬೆಳವಣಿಗೆ ಸಾಧಿಸಿದೆ.

ಕಾರು ಮಾರಾಟ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ಕಾರು ಮಾರಾಟದಲ್ಲಿ ಮಾತ್ರವಲ್ಲದೆ ವಾಣಿಜ್ಯ ವಾಹನಗಳ ಮಾರಾಟದಲ್ಲೂ ಉತ್ತಮ ಬೆಳವಣಿಗೆ ಸಾಧಿಸಿದೆ.

2022ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ವಾಹನ ಮಾರಾಟದಲ್ಲಿ ಶೇ. 69.58 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು 1,42,330 ಯುನಿಟ್ ಪ್ರಯಾಣಿಕರ ಕಾರುಗಳನ್ನು ಮಾರಾಟ ಮಾಡಿದ್ದು,ಇದು ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿನ 83,931 ಯುನಿಟ್ ಕಾರುಗಳ ಮಾರಾಟಕ್ಕಿಂತ ಶೇ. 69.58 ರಷ್ಟು ಹೆಚ್ಚಳವಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಎರಡೂವರೆ ವರ್ಷಗಳಿಂದ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಹೊಸ ಕಾರುಗಳಲ್ಲಿ ನಿರಂತರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳ ಉನ್ನತೀಕರಣದೊಂದಿಗೆ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವಾರವಷ್ಟೇ ತನ್ನ ಪ್ರಮುಖ ಕಾರು ಮಾದರಿಗಳಿಗಾಗಿ ಜೆಟ್ ಎಡಿಷನ್ ಜೊತೆಗೆ ಪಂಚ್ ಕ್ಯಾಮೋ ಎಡಿಷನ್ ಬಿಡುಗಡೆ ಮಾಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಪಂಚ್ ಮೈಕ್ರೊ ಎಸ್‌ಯುವಿಗಾಗಿ ಕ್ಯಾಮೋ ಎಡಿಷನ್ ಪರಿಚಯಿಸಿದ್ದು, ಹೊಸ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಪಂಚ್ ಕ್ಯಾಮೋ ಎಡಿಷನ್ ಮಧ್ಯಮ ಕ್ರಮಾಂಕದ ಸ್ಟ್ಯಾಂಡರ್ಡ್ ಮಾದರಿಗಳನ್ನು ಆಧರಿಸಿ ಬಿಡುಗಡೆಗೊಂಡಿದ್ದು, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶೆಡ್ ಮತ್ತು ಅಕಾಂಪ್ಲಿಶೆಡ್ ರಿದಮ್ ವೆರಿಯೆಂಟ್‌ಗಳನ್ನು ಹೊಂದಿದೆ. ಇದರಲ್ಲಿ ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 6.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.63 ಲಕ್ಷ ಬೆಲೆ ಹೊಂದಿದೆ.

ಪಂಚ್ ಕ್ಯಾಮೋ ಎಡಿಷನ್‌ನಲ್ಲಿರುವ ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶೆಡ್ ಮತ್ತು ಅಕಾಂಪ್ಲಿಶೆಡ್ ರಿದಮ್ ವೆರಿಯೆಂಟ್‌ಗಳು ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಮಾದರಿಗಳನ್ನು ಸಹ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತ ಹೊಸ ಕ್ಯಾಮೋ ಎಡಿಷನ್ ರೂ. 15 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿವೆ.

ಆಕರ್ಷಕ ಫಾಲಿಯೆಜ್ ಗ್ರೀನ್ ಬಣ್ಣದೊಂದಿಗೆ ಕೆಲವು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರುವ ಕ್ಯಾಮೋ ಎಡಿಷನ್ ಡ್ಯುಯಲ್ ಟೋನ್ ಆಯ್ಕೆ ಹೊಂದಿದ್ದು, ಫಿಯಾನೋ ಬ್ಲ್ಯಾಕ್ ಮತ್ತು ಪ್ರಿಸ್ಟೈನ್ ವೈಟ್ ಟಾಪ್ ರೂಫ್ ಪಡೆದುಕೊಂಡಿದೆ.

ಫಾಲಿಯೆಜ್ ಗ್ರೀನ್ ಬಣ್ಣದೊಂದಿಗೆ ಹೊಸ ಕಾರು ಮಾದರಿಯು ಮುಂಭಾಗದಲ್ಲಿ ಕ್ರೋಮ್ ಸೌಲಭ್ಯ ಹೊಂದಿದ್ದು, ಹೊಸದಾಗಿ ಸಿಲ್ವರ್ ಸ್ಕೀಡ್ ಪ್ಲೇಟ್ ಪಡೆದುಕೊಂಡಿದೆ. ಜೊತೆಗೆ ಕಾರಿನ ಎರಡು ಬದಿಯಲ್ಲಿ ಕ್ಯಾಮೋ ಬ್ಯಾಡ್ಜ್ ನೀಡಲಾಗಿದ್ದು, 16 ಇಂಚಿನ ಬ್ಲ್ಯಾಕ್ ಔಟ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ನೀಡಲಾಗಿದ್ದು, ಮಿಲಟರಿ ಗ್ರೀನ್ ಶೇಡ್ ಹೊಂದಿರುವ ಡ್ಯಾಶ್‌ಬೋರ್ಡ್ ಸ್ಪೋರ್ಟಿ ಲುಕ್ ನೀಡುತ್ತದೆ. ಹೊಸ ಮಾದರಿಯ ಆಸನಗಳು ಕೂಡಾ ಗ್ರೀನ್ ಶೇಡ್ ಪಡೆದುಕೊಂಡಿದ್ದು, ಇನ್ನುಳಿದ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದೆ.

ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಕ್ಯಾಮೋ ಎಡಿಷನ್‌ನಲ್ಲೂ 7 ಇಂಚಿನ ಹರ್ಮನ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಿಕ್ ಪವರ್ಡ್ ರಿಯರ್ ವ್ಯೂ ಕ್ಯಾಮೆರಾ, ಆಟೋ ಫ್ಲೊಡಿಂಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಸೇರಿಸಲಾಗಿದೆ.

ಪಂಚ್ ಕಾರು ಕ್ಯಾಮೋ ಎಡಿಷನ್ ಹೊರತುಪಡಿಸಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ಸ್ಟ್ಯಾಂಡರ್ಡ್ ವೆರಿಯೆಂಟ್‌ಗಳೊಂದಿಗೆ ಈ ಹಿಂದಿನಂತೆ ಮಾರಾಟಗೊಳ್ಳಲಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.93 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದೆ.