ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಕಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಟಾಋಆ ಕಾರುಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ, ಇದೀಗ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

Recommended Video

India’s First Commercial EV With A Manual Gearbox — ಎಕ್ಸ್‌ಕ್ಲೂಸಿವ್ ಡ್ರೈವ್ | Log9 & Northway

ಯಾವ ಹೊಸ ಕಾರಿನ ಟೀಸರ್ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಈ ಟೀಸರ್ ನಲ್ಲಿ ಅತಿ ಶೀಘ್ರದಲ್ಲೇ ಬರಲಿದೆ ಎಂದು ತಿಳಿಸಿದೆ. ಟೀಸರ್ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಫೇಸ್‌ಲಿಫ್ಟೆಡ್ ಸಫಾರಿ ಅಥವಾ ನವೀಕರಿಸಿದ ಹ್ಯಾರಿಯರ್‌ನ ಮೊದಲ ಅಧಿಕೃತ ಟೀಸರ್ ವಿಡಿಯೋ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಎರಡೂ ಒಂದೇ ಸಮಯದಲ್ಲಿ ಪ್ರಾರಂಭಿಸಬಹುದೇ? ನಮ್ಮ ಇತ್ತೀಚಿನ ವರದಿಯ ಪ್ರಕಾರ ಸ್ವದೇಶಿ ಆಟೋ ಮೇಜರ್ ತನ್ನ ಜನಪ್ರಿಯ ಮಧ್ಯಮ ಗಾತ್ರದ ಎಸ್‍ಯುವಿ ಜೋಡಿಯ ನವೀಕರಿಸಿದ ಆವೃತ್ತಿಗಳನ್ನು ದೇಶದಲ್ಲಿ ಶೀಘ್ರದಲ್ಲೇ ಪರಿಚಯಿಸಲು ತಯಾರಿ ನಡೆಸುತ್ತಿದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಕೆಲವೇ ದಿನಗಳ ಹಿಂದೆ, ನವೀಕರಿಸಿದ ಸಫಾರಿಯನ್ನು ಪರೀಕ್ಷಿಸುವ ಚಿತ್ರಗಳು ಬಹಿರಂಗವಾಗಿತ್ತು. ಇನ್ನು ಈ ಹಿಂದೆ ಹೊಸ ಹ್ಯಾರಿಯರ್‌ನ ಸ್ಪೈ ಚಿತ್ರಗಳು ಕೂಡ ಬಹಿರಂಗವಾಗಿತ್ತು. ಸಫಾರಿ ಹ್ಯಾರಿಯರ್‌ನ ಮೂರು-ಸಾಲಿನ ಆವೃತ್ತಿಯಾಗಿದೆ ಮತ್ತು ಪ್ರಸ್ತುತ ಆರು ಮತ್ತು ಏಳು-ಸೀಟುಗಳ ಸಂರಚನೆಗಳಲ್ಲಿ ಮಾರಾಟವಾಗುತ್ತಿದೆ. ಟೀಸರ್ ಎಸ್‌ಯುವಿ ಟಾರ್ಗೆಟಿಂಗ್ ಎಕ್ಸಿಕ್ಯೂಟಿವ್‌ಗಳ ಸೌಕರ್ಯ-ಆಧಾರಿತ ವೈಶಿಷ್ಟ್ಯಗಳ ಕಡೆಗೆ ವಾಲುತ್ತದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಸಫಾರಿಯು ಈಗಾಗಲೇ ಮಧ್ಯದ -ಸಾಲಿನ ಕ್ಯಾಪ್ಟನ್ ಸೀಟ್ ವ್ಯವಸ್ಥೆ ಮತ್ತು ಮುಂಭಾಗದ ಪ್ರಯಾಣಿಕರ ಸೀಟ್ ಅನ್ನು ಹಿಂಬದಿಯಿಂದ ಚಲಿಸಬಹುದಾದ ಜಾಗವನ್ನು ಮುಕ್ತಗೊಳಿಸುವ ಬಾಸ್ ಮೋಡ್ ಅನ್ನು ಹೊಂದಿದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಪ್ರಸ್ತುತ, ಹ್ಯಾರಿಯರ್ ಮತ್ತು ಸಫಾರಿ ಎಸ್‍ಯುವಿಗಳಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್, ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಇದು ಆ ಶ್ರೇಣಿಯನ್ನು ಇನ್ನಷ್ಟು ವಿಸ್ತರಿಸಲು ನೆಕ್ಸಾನ್‌ನ 1.2 ಲೀಟರ್ ರೆವೊಟ್ರಾನ್ ಟರ್ಬೊ ಮಿಲ್‌ನಿಂದ ಪಡೆದ ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಟಾಟಾ ತರಬಹುದು ಎಂದು ವದಂತಿಗಳು ಸೂಚಿಸುತ್ತವೆ. 2022ರ ಟಾಟಾ ಸಫಾರಿಯು ಸಿಲ್ವರ್ ಅಸ್ಸೆಟ್ ಅನ್ನು ಹೊಂದಿರುವ ಆಯತಾಕಾರದ ಅಂಶಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನಂತಹ ಸಣ್ಣ ಬಾಹ್ಯ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಹಿಂಭಾಗವು ಬ್ಲ್ಯಾಕ್ ಫಿನಿಶಿಂಗ್ ಬಂಪರ್ ಇನ್ಸರ್ಟ್ ಅನ್ನು ಪಡೆಯಬಹುದು ಮತ್ತು ಒಳಭಾಗವು ಸೂಕ್ಷ್ಮವಾದ ಪರಿಷ್ಕರಣೆಗಳನ್ನು ಹೊಂದಿರಬಹುದು. ಎಸ್‍ಯುವಿ ಜೋಡಿಯು ವೈರ್‌ಲೆಸ್ Apple CarPlay ಮತ್ತು Android Auto ಹೊಂದಾಣಿಕೆಯೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇತ್ತೀಚಿನ iRA ಸಂಪರ್ಕ, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಇತ್ಯಾದಿಗಳೊಂದಿಗೆ ಸಜ್ಜುಗೊಂಡಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಇನ್ನು ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಇತ್ಯಾದಿಗಳಂತಹ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಆಧಾರಿತ ವೈಶಿಷ್ಟ್ಯಗಳನ್ನು ಸೇರಿಸುವುದು ಈ ಮಿಡ್-ಲೈಫ್ ಅಪ್‌ಡೇಟ್‌ನ ಪ್ರಮುಖ ಸೇರ್ಪಡೆಗಳಲ್ಲಿ ಒಂದಾಗಿದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಈ ಟಾಟಾ ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಿಂದ ಸಿ-ಪಿಲ್ಲರ್ ವರೆಗೆ, ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎರಡೂ ಬಹುತೇಕ ಒಂದೇ ರೀತಿ ಇದೆ. ಅವುಗಳ ನಡುವೆ ಇರುವ ಏಕೈಕ ಬದಲಾವಣೆಯೆಂದರೆ ಸಫಾರಿಗಳಲ್ಲಿ ಕಂಡುಬರುವ ಹೊಸ ಟ್ರೈ-ಏರೋ ಮೆಷ್ ಗ್ರಿಲ್ ಆಗಿದೆ.

ಟಾಟಾ ಸಫಾರಿ ಎಸ್‌ಯುವಿ ಹ್ಯಾರಿಯರ್‌ನಂತೆಯೇ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಇದರೊಂದಿಗೆ ಇಂಟಿಗ್ರೇಟೆಡ್ ಟರ್ನ್ ಇಂಡೀಗೆಟರ್ ಗಳೊಂದಿಗೆ ಮೇಲಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಒಳಗೊಂಡಿದೆ, ಅದರ ಕೆಳಗೆ ಮುಖ್ಯ ಕ್ಸೆನಾನ್ ಎಚ್‌ಐಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಗಳನ್ನು ಹೊಂದಿವೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಈ ಟಾಟಾ ಸಫಾರಿ ತನ್ನ ಫಾಗ್ ಲ್ಯಾಂಪ್ ಗಳನ್ನು ಅದೇ ಹೌಸಿಂಗ್‌ನಲ್ಲಿ ಹೆಡ್‌ಲ್ಯಾಂಪ್ ಯುನಿಟ್ ಗಿಂತ ಸ್ವಲ್ಪ ಕೆಳಗೆ ಹೊಂದಿದೆ. ಮುಂಭಾಗದ ಬಂಪರ್‌ಗಳಲ್ಲಿ ಸಫಾರಿ ಕ್ಲಾಡಿಂಗ್ ಹೊಂದಿದ್ದು, ಇದು ಸೆಂಟ್ರಲ್ ಇನ್ ಟೆಕ್ ಅನ್ನು ಹೊಂದಿದೆ. ಜೊತೆಗೆ ಕೆಳಭಾಗದಲ್ಲಿ ಸಿಲ್ವರ್ ಫಿನಿಶಿಂಗ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿರುತ್ತದೆ. ಹಿಂಭಾಗದ ಮಧ್ಯಭಾಗದಲ್ಲಿ ಎಲ್ಇಡಿ ಸ್ಟಾಪ್ ಲೈಟ್ ಹೊಂದಿರುವ ರೂಫ್-ಮೌಂಟಡ್ ಸ್ಪಾಯ್ಲರ್ ಅನ್ನು ಒಳಗೊಂಡಿದೆ. ಆದರೆ ಬೂಟ್ ನಂಬರ್ ಪ್ಲೇಟ್ ಕೆಳಗೆ ಸಫಾರಿ' ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ.

ಹೊಸ ಟೀಸರ್ ಬಿಡುಗಡೆಗೊಳಿಸಿ ನಿರೀಕ್ಷೆ ಹೆಚ್ಚಿಸಿದ ಟಾಟಾ ಮೋಟಾರ್ಸ್

ಇದರಲ್ಲಿ ಸಫಾರಿ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಬರುತ್ತದೆ, ಮತ್ತೆ ಮಾರ್ಮಲ್, ರಫ್ ಮತ್ತು ವೆಟ್ ಎಂಬ ಮೋಡ್ ಗಳನ್ನು ಹೊಂದಿದೆ. ಇದು ಇದು ಕಠಿಣವಾದ ಭೂಪ್ರದೇಶಗಳಲ್ಲಿ ಸುಲಭವಾಗಿ ಚಲಿಸಲು ನೆರವಾಗಲಿದೆ. ಇನ್ನು ಈ ಸಫಾರಿ ಎಸ್‍ಯುವಿಯಲ್ಲಿ 2741 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಪನೋರಮಿಕ್ ಸನ್ ರೂಫ್, ಸಿಗ್ನೇಚರ್ ಆಸ್ಟರ್ ವೈಟ್ ಇಂಟೀರಿಯರ್ಸ್ ಜೊತೆಗೆ ಆಶ್‌ವುಡ್ ಫಿನಿಶ್ ಡ್ಯಾಶ್‌ಬೋರ್ಡ್ ಮತ್ತು 8.8 ಇಂಚಿನ ಫ್ಲೋಟಿಂಗ್ ಐಲ್ಯಾಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ.

Most Read Articles

Kannada
English summary
Tata motors released new teaser video harrier safari models to be get facelift
Story first published: Wednesday, August 24, 2022, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X