ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಹೊಸ ಕಾರನ್ನು ಖರೀದಿಸುವ ಗ್ರಾಹಕರು ಹೆಚ್ಚಾಗಿ ಎಸ್‌ಯುವಿ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಯುವಿ ಮಾದರಿಗಳು ಅತ್ಯುತ್ತಮ ಪೀಚರ್ಸ್, ಪ್ರಾಯೋಗಿಕತೆ, ಕಾರ್ಯಕ್ಷಮತೆ ಮತ್ತು ಹೆಚ್ಚಿನ ಸ್ಪೇಸ್ ನಿಂದ ಕೂಡಿರುತ್ತದೆ. ಈ ಕಾರಣದಿಂದ ಎಸ್‌ಯುವಿ ಮಾದರಿಗಳು ಹೆಚ್ಚು ಜನಪ್ರಿಯತೆಗಳಿಸುತ್ತಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಕಾರನ್ನು ಖರೀದಿಸುವಾಗ ಹೆಚ್ಚಿನ ಜನರು ನಿರೀಕ್ಷಿಸುವುದು ದೊಡ್ಡ ಬೂಟ್ ಸ್ಪೇಸ್. ದೀರ್ಘ ಪ್ರಯಾಣದ ಸಮಯದಲ್ಲಿ ಸಾಮಾನುಗಳನ್ನು ಸರಿಹೊಂದಿಸಲು ಇದು ನಿಜವಾಗಿಯೂ ಸಹಾಯ ಮಾಡುವ ಒಂದು ವಿಷಯವಾಗಿದೆ. ಹೆಚ್ಚಾಗಿ ಫ್ಯಾಮಿಲಿಯಾಗಿ ಪ್ರಯಾಣ ಮಾಡುವಾಗ ಲಗೇಜ್ ಗಳಿರುತ್ತದೆ. ಇದರಿಂದ ಉತ್ತಮ ಬೂಟ್ ಸ್ಪೇಸ್ ಹೊಂದಿರುವ ಮಾದರಿಗಳ ಅವಶ್ಯಕತೆ ಇರುತ್ತದೆ, ಇದರಿಂದ ಭಾರತದಲ್ಲಿ ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಎಸ್‍ಯುವಿಗಳ ಮಾಹಿತಿ ಇಲ್ಲಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಎಸ್‍ಯುವಿಯ ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆಯು ರೂ,13.94 ಲಕ್ಷವಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಸಲು ಉತ್ತಮವಾದ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹೆಕ್ಟರ್ ಎಸ್‍ಯುವಿಯು 587 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ಎಲ್ಲಾ ಲಗೇಜ್‌ಗಳಿಗೆ ಸಾಕಷ್ಟು ಸಂಗ್ರಹಣೆಯನ್ನು ಖಾತ್ರಿಗೊಳಿಸುತ್ತದೆ. ಹೆಕ್ಟರ್ ತನ್ನದೇ ಆದ ಇಂಟರ್ನೆಟ್‌ನಿಂದ ಚಾಲಿತವಾಗಿರುವ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಹೆಸರುವಾಸಿಯಾಗಿದೆ

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಈ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಇನ್ನು ಈ ಎಸ್‍ಯುವಿಯಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿ ಹೆಕ್ಟರ್ ಉತ್ತಮ ಸ್ಪೇಸ್ ಅನ್ನು ಮತ್ತು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಟಾಟಾ ಹ್ಯಾರಿಯರ್

ಈ ಟಾಟಾ ಹ್ಯಾರಿಯರ್ ಎಸ್‍ಯುವಿಯು ಉತ್ತಮ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಎಸ್‍ಯುವಿಯು 425-ಲೀಟರ್ ಹಿಂಭಾಗದ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಅದ್ಭುತವಾಗಿದೆ. ಈ ಎಸ್‍ಯುವಿಯ ಆರಂಬಿಕ ಬೆಲೆಯು ರೂ,14.49 ಲಕ್ಷವಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಟಾಟಾ ಹ್ಯಾರಿಯರ್ ಎಸ್‍ಯುವಿಯು ಒಮೆಗಾ (ಆಪ್ಟಿಮಲ್ ಮಾಡ್ಯುಲರ್ ಎಫಿಶಿಯಂಟ್ ಗ್ಲೋಬಲ್ ಅಡ್ವಾನ್ಸ್ಡ್) ಪ್ಲಾಟ್‌ಫಾರ್ಮ್‌ನಿಂದ ಅಭಿವೃದ್ದಿ ಪಡಿಸಲಾಗಿದೆ. ಈ ಟಾಟಾ ಹ್ಯಾರಿಯರ್ ಮಿಡ್ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯು ಪ್ರೀಮಿಯಂ ಇಂಟಿರಿಯರ್ ಅನ್ನು ಹೊಂದಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಹುಂಡೈ ಕ್ರೆಟಾ

ಭಾರತದಲ್ಲಿ ಎಸ್‍ಯುವಿ ಗಳಿಗೆ ಬಂದಾಗ ಹುಂಡೈ ಕ್ರೆಟಾ ಹಣಕ್ಕೆ ತಕ್ಕ ಮೌಲ್ಯವಾಗಿದೆ. ಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ನೀಡಲಾಗುವ ಈ ಕಾರಿನ ಬೆಲೆಯು ರೂ.10.23 ಲಕ್ಷವಾಗಿದೆ. ಈ ಎಸ್‍ಯುವಿಯು 433-ಲೀಟರ್ ನಷ್ಟು ಅತ್ಯುತ್ತಮ ಬೂಟ್ ಸ್ಪೇಸ್‌ ಅನ್ನು ಹೊಂದಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಹುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಸನ್‌ರೂಫ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಪ್ಯಾಡಲ್ ಶಿಫ್ಟರ್‌ಗಳು, ಆಟೋಮ್ಯಾಟಿಕ್ ಏರ್ ಪ್ಯೂರಿಫೈಯರ್ ಮತ್ತು ಇನ್ನೂ ಹೆಚ್ಚಿನ ಗುಣಲಕ್ಷಣಗಳೊಂದಿಗೆ, ಇದು ತನ್ನ ವರ್ಗದಲ್ಲಿ ಹೆಚ್ಚು ವೈಶಿಷ್ಟ್ಯ-ಪ್ಯಾಕ್ ಮಾಡಲಾದ ಮಾದರಿಯಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಕಿಯಾ ಸೆಲ್ಟೋಸ್

ಕಿಯಾ ಸೆಲ್ಟೋಸ್ ಎಸ್‍ಯುವಿಯು ಅತ್ಯುತ್ತಮ ಬೂಟ್ ಸ್ಥಳಾವಕಾಶವನ್ನು ಹೊಂದಿದೆ. 15 ಲಕ್ಷಕ್ಕಿಂತ ಕಡಿಮೆ ಬೆಲೆಯ ವಾಹನಕ್ಕೆ, ಖಂಡಿತವಾಗಿಯೂ 433 ಲೀಟರ್ ಬೂಟ್ ಸ್ಪೇಸ್ ಉತ್ತಮವಾಗಿದೆ ಜನಪ್ರಿಯ ಕಾರು ತಯಾರಕರಾದ ಕಿಯಾ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಈ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಅಲ್ಲದೇ ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಭಾರತದ ಗ್ರಾಹಕರು ಈ ಕಿಯಾ ಸೆಲ್ಟೋಸ್ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ರೆನಾಲ್ಟ್ ಕಿಗರ್

ರೆನಾಲ್ಟ್ ಕಿಗರ್ ಕಾರು 405 ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು ಉತ್ತಮ ಪ್ರಮಾಣದ ಲಗೇಜ್‌ಗೆ ಅವಕಾಶ ಕಲ್ಪಿಸುತ್ತದೆ. ಕಿಗರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯ ಬೆಲೆಯು ಈಗ ಅದರ ಎಂಟ್ರಿ ಲೆವೆಲ್ RXE ಮ್ಯಾನುವಲ್ ರೂಪಾಂತರಕ್ಕಾಗಿ ದೆಹಲಿ ಎಕ್ಸ್-ಶೋರೂಂ ಪ್ರಕಾರ ರೂ,5.79 ಲಕ್ಷವಾಗಿದೆ.

ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಹೆಚ್ಚು ಬೂಟ್ ಸ್ಪೇಸ್ ಹೊಂದಿರುವ ಎಸ್‍ಯುವಿಗಳಿವು

ಈ ಕಿಗರ್ ಕಾರಿನಲ್ಲಿ 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಸಾಮಾನ್ಯ ಪೆಟ್ರೋಲ್ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಜೆಚ್‍ಪಿ ಪವರ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

Most Read Articles

Kannada
English summary
The top suv models that offer best boot space in india under rs 15 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X