ಹೊಸ ವರ್ಷಕ್ಕೆ ಮಾರುಕಟ್ಟೆಗೆ ಬರಲಿರುವ ಟಾಪ್ 4 ಬಹುನಿರೀಕ್ಷಿತ ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಇತ್ತೀಚೆಗೆ ಭಾರತದಲ್ಲಿ ಬಹುನಿರೀಕ್ಷಿತ ಟಿಯಾಗೊ EVಯನ್ನು ಬಿಡುಗಡೆ ಮಾಡಿದೆ. ಹೊಸ ವರ್ಷ (2023)ಕ್ಕೆ ಕಂಪನಿಯು ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಲು ನೂತನ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಇದರಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿಗಳು ಹಾಗೂ ಕೆಲವು ಎಲೆಕ್ಟ್ರಿಕ್ ವಾಹನಗಳು ಸೇರಿವೆ.

ಟಾಟಾ ಆಲ್ಟ್ರೋಜ್ (EV):
2019ರಲ್ಲಿ ಟಾಟಾ ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ರೂಪಾಂತರವನ್ನು ಜಿನೀವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಟಾಟಾ ಆಲ್ಟ್ರೊಜ್ EVಯು ALFA ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ. ಎಲೆಕ್ಟ್ರಿಕ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್ 2023ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ನೂತನ ಟಾಟಾ ಆಲ್ಟ್ರೊಜ್ EV ಬೆಲೆ ಸುಮಾರು 12- 15 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಟಾಟಾ ಆಲ್ಟ್ರೋಜ್ ಇವಿ ಈಗಾಗಲೇ ಬಿಡುಗಡೆಯಾಗಿರುವ Nexon EVಯಂತೆ ಅದೇ ಎಲೆಕ್ಟ್ರಿಕ್ ಪವರ್‌ಟ್ರೇನ್, PDU (ಪವರ್ ಡಿಸ್ಟ್ರಿಬ್ಯೂಷನ್ ಯೂನಿಟ್) ಮತ್ತು ಬ್ಯಾಟರಿ ಪ್ಯಾಕ್‌ನಂತಹ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. ಕನೆಕ್ಟ್ದ್ ಕಾರ್ ಟೆಕ್ನಲಾಜಿಯೊಂದಿಗೆ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದು ಉಳಿದಿರುವ ಬ್ಯಾಟರಿ ಮತ್ತು ಚಾರ್ಜಿಂಗ್ ಹಿಸ್ಟರಿಯಂತಹ ಕಾರಿನ ಅಂಕಿಅಂಶಗಳನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಹತ್ತಿರದ ಚಾರ್ಜಿಂಗ್ ಸ್ಟೇಷನ್‌ ಕುರಿತಂತೆಯು ಮಾಹಿತಿಯನ್ನು ಒದಗಿಸುತ್ತದೆ.

ಟಾಟಾ ಪಂಚ್ (EV):
ಟಾಟಾ ಮೋಟಾರ್ಸ್ ಭಾರತದಲ್ಲಿ ಪಂಚ್ ಕಾರನ್ನು ಅಕ್ಟೋಬರ್ 18, 2021ರಲ್ಲಿ ಬಿಡುಗಡೆ ಮಾಡಿತು. ಅಂದಿನಿಂದ, ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2023 ರಲ್ಲಿ ಬ್ರ್ಯಾಂಡ್ ಪಂಚ್ EV ಅನ್ನು ಲಾಂಚ್ ಮಾಡಬಹುದು. ಟಿಯಾಗೊ ಮತ್ತು ಟಿಗೂರ್ EV ಒಳಗೊಂಡಿರುವ Ziptron ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಪಂಚ್ EV ಚಾಲಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ ಪಂಚ್ EV ಸುಮಾರು 300-350 ಕಿ.ಮೀ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

ಟಾಟಾ ಹ್ಯಾರಿಯರ್:
ಬಹುನಿರಿಕ್ಷಿತ ಟಾಟಾ ಹ್ಯಾರಿಯರ್ ಕಾರನ್ನು 2019ರಲ್ಲಿ ಚೊಚ್ಚಲ ಬಾರಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಅದು ಹಲವಾರು ಬಣ್ಣಗಳು ಮತ್ತು ಆವೃತ್ತಿಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದೀಗ ನವೀಕರಿಸಿದ ಟಾಟಾ ಹ್ಯಾರಿಯರ್ ಇತ್ತೀಚೆಗೆ ದೇಶದ ರಸ್ತೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು. ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆಯಂತೆ. ಹ್ಯಾರಿಯರ್, ಹೊಸ ಗ್ರಿಲ್ ಮತ್ತು ಏರ್ ಡ್ಯಾಮ್‌ಗಳೊಂದಿಗೆ ಮರುವಿನ್ಯಾಸವನ್ನು ಮಾಡಲಾದ ಫ್ರಂಟ್ ಅನ್ನು ಹೊಂದಿದೆ ಎಂದು ಹೇಳಲಾಗಿದೆ.

ಎಲ್ಲಾ ಪ್ರಮುಖ ADAS ವೈಶಿಷ್ಟ್ಯಗಳನ್ನು ಇರಿಸಲು ಮುಂಭಾಗದಲ್ಲಿ ರಾಡಾರ್ ಅನ್ನು ನೋಡಬಹುದಾಗಿದ್ದು, ಹೊಸ ಎಲ್ಇಡಿ ಹೆಡ್ ಲೈಟ್ಸ್ ಮತ್ತು ಎಲ್ಇಡಿ ಡಿಆರ್ಎಲ್ ಸೆಟ್ ಹೊಂದಿದೆ. ನವೀಕರಿಸಿದ ಹ್ಯಾರಿಯರ್ ಅದೇ ಫಿಯೆಟ್-ಸೌರ್ಸ್ಡ್ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದು 170 bhp ಪವರ್ ಮತ್ತು 350 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಟಾಟಾ ಹ್ಯಾರಿಯರ್ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ನಿರೀಕ್ಷೆಯಿದೆ.

ಟಾಟಾ ಸಫಾರಿ:
ಇತ್ತೀಚೆಗೆ ಟಾಟಾ ಸಫಾರಿ ಪೆಟ್ರೋಲ್ ಮಾದರಿಯನ್ನು ದೇಶದ ರಸ್ತೆಯಲ್ಲಿ ಪರೀಕ್ಷಿಸಲಾಯಿತು. ಇದು 2023 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಮಾದರಿಯು 1.5L ಟರ್ಬೋಚಾರ್ಜ್ಡ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸುಮಾರು 160 bhp ಪವರ್ ಮತ್ತು 250Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಡೀಸೆಲ್ ಆವೃತ್ತಿಯಂತೆಯೇ, ಸಫಾರಿ ಪೆಟ್ರೋಲ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಖರೀದಿಗೆ ಸಿಗಲಿದೆ.

ಟಾಟಾ ಸಫಾರಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಯಾವುದೇ ಬದಲಾವಣೆಗಳನ್ನು ಈಗಾಗಲೇ ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ. ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 8.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಐಆರ್‌ಎ-ಸಂಪರ್ಕಿತ ಕಾರ್ ಟೆಕ್, ಪನೋರಮಿಕ್ ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಕ್ರಿಯೇಚರ್ ಕಂಫರ್ಟ್ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಮಧ್ಯಮ ವರ್ಗದ ಜನರಿಗೆ ಕೈಗೆಟುವ ಟಾಟಾ ಕಾರುಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

Most Read Articles

Kannada
English summary
Top four most awaited tata cars to hit market in new year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X