Just In
- 10 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 12 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 14 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- Movies
ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಬಹುಭಾಷಾ ನಟ ನಾಸಿರ್! ಕಾರಣವೇನು?
- Sports
ಐರ್ಲೆಂಡ್-ಭಾರತ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ಗೆದ್ದಿರುವ ಟೀಂ ಇಂಡಿಯಾ
- News
ಮಹಾ ಬಂಡಾಯ: ಸುಪ್ರೀಂಕೋರ್ಟ್ ಅಂಗಳಕ್ಕೆ 16 ಶಾಸಕರ ಅನರ್ಹತೆ ಚೆಂಡು!
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಿಯಾ ಇವಿ6 ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು...
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಅಲ್ಲದೇ ದೇಶದಲ್ಲಿ ಇಂಧನ ಬೆಲೆಯು ಕೂಡ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ.

ಇದರಿಂದ ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಜನಪ್ರಿಯ ವಾಹನ ತಯಾರಕ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. ಇದರ ನಡುವೆ ಕಿಯಾ ಇಂಡಿಯಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ, ಕಿಯಾ ಇಂಡಿಯಾವು ಈ ಹೊಸ ವರ್ಷದಲ್ಲಿ ಕೈಗೆಟುಕವ ದರಲ್ಲಿ ಕ್ಯಾರೆನ್ಸ್ ಮೂರು-ಸಾಲಿನ ಯುವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಹೊಸ ಸಂಚಲವನ್ನು ಮೂಡಿಸಿತ್ತು.

ಇದೀಗ ದಕ್ಷಿಣ ಕೊರಿಯಾದ ಆಟೋ ಮೇಜರ್ ಮುಂಬರುವ ತಿಂಗಳುಗಳಲ್ಲಿ ಫೇಸ್‌ಲಿಫ್ಟೆಡ್ ಸೆಲ್ಟೋಸ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಇವಿ6 ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಈ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಕಿಯಾ ಇಂಡಿಯಾ ಕಂಪನಿಯು ಇವಿ6 ಹೆಸರನ್ನು ಈಗ ಭಾರತದಲ್ಲಿ ಟ್ರೇಡ್‌ಮಾರ್ಕ್ ಮಾಡಲಾಗಿದೆ,

ಈ ಇವಿ6 ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ವರದಿಗಳ ಪ್ರಕಾರ, ಈ ಹೊಸ ಎಲೆಕ್ಟ್ರಿಕ್ ಕಾರು ಈ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಯಾಗಬಹುದು. 2021ರ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಯುರೋಪ್ ನಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಈ ಇವಿ6 E-GMP ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಅನ್ನು ಆಧರಿಸಿದ ಮೊದಲ BEV ಆಗಿದೆ ಮತ್ತು ಇದು ಹ್ಯುಂಡೈ Ioniq 5 ನೊಂದಿಗೆ ಸಾಕಷ್ಟು ಸಾಮಾನ್ಯವಾಗಿದೆ. ಫೇಸ್‌ಲಿಫ್ಟೆಡ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಈ ವರ್ಷದ ನಂತರ ಬಿಡುಗಡೆಯಾಗಲಿದೆ ಮತ್ತು ಅದರ ಸೋದರಸಂಬಂಧಿ, ಕಿಯಾ ನಿರೋ ಇವಿ ಕೂಡ 2023ಕ್ಕೆ ಬಿಡುಗಡೆಯಾಗಬಹುದು.

ಕಿಯಾ ಇವಿ6 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟೆಸ್ಲಾ ಮಾಡೆಲ್ ವೈ, ಫೋರ್ಡ್ ಮಸ್ಟಾಂಗ್ ಮ್ಯಾಕ್-ಇ ಮತ್ತು ವಿಡಬ್ಲ್ಯೂ ಐಡಿ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಕಿಯಾ ಇವಿ6 ಎಲೆಕ್ಟ್ರಿಕ್ ಕಾರು 4 ಟ್ರಿಮ್ ಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಆದರೆ ಕಿಯಾ ಕೇವಲ ಟಾಪ್-ಎಂಡ್ ರೂಪಾಂತರವನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ ಮತ್ತು ಎಲೆಕ್ಟ್ರಿಕ್ ಕ್ರಾಸ್‌ಒವರ್‌ನ ಸ್ಥಳೀಯ ಜೋಡಣೆಯನ್ನು ಪ್ರಾರಂಭಿಸಿದ ನಂತರ ಕಡಿಮೆ ರೂಪಾಂತರಗಳನ್ನು ಪರಿಚಯಿಸುವ ಸಾಧ್ಯತೆಯಿದೆ.

ಫೈಲಿಂಗ್‌ಗಳ ಪ್ರಕಾರ, ಕಂಪನಿಯು ಟ್ರೇಡ್‌ಮಾರ್ಕ್‌ಗಳಾದ ಇವಿ6, ಇವಿ6 ಏರ್, ಇವಿ6 ವಾಟರ್, ಇವಿ6 ಅರ್ಥ್ ಮತ್ತು ಇವಿ6 ಲೈಟ್‌ಗಾಗಿ ಸಲ್ಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮುಂಬರುವ ಇವಿ6 ಕ್ರಾಸ್ಒವರ್ ಎಲೆಕ್ಟ್ರಿಕ್ ವಾಹನಕ್ಕಾಗಿ ಕಿಯಾ ಕೇವಲ ಮೂರು ಟ್ರಿಮ್ ಗಳಲ್ಲಿ ಲಭ್ಯವಿದೆ,

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿರುವ ಕಿಯಾ ಇವಿ6 ಕ್ರಾಸ್‌ಒವರ್ ಲೈಟ್, ವಿಂಡ್ ಮತ್ತು ಜಿಟಿ-ಲೈನ್ ಮೂರು ಟ್ರಿಮ್ ಆಗಿದೆ. ಈ ಎಂಟ್ರಿ ಲೆವೆಲ್ ಮಾದರಿ 58 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು 167 ಬಿಹೆಚ್‍ಪಿ ಪವರ್ ಮತ್ತು 349 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲು ಸಹಾಯ ಮಾಡುವ ಹಿಂಭಾಗದಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಮೋಟರ್.

ಇದು ಕೇವಲ 8 ಸೆಕೆಂಡುಗಳಲ್ಲಿ ಶೂನ್ಯದಿಂದ 96 ಕಿಮೀ ವೇಗವನ್ನು ಪಡೆಯುತ್ತದೆ ಮತ್ತು 185 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಕಿಯಾ ಕಾರು ಕ್ಲೈಮ್ ಮಾಡಲಾದ ಡ್ರೈವಿಂಗ್ ರೇಂಜ್ 373 ಕಿಮೀಗಳಷ್ಟಿದೆ ಮತ್ತು ವೈಶಿಷ್ಟ್ಯಗಳ ಪಟ್ಟಿಯು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು 19-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಇದರೊಂದಿಗೆ ಹೊಂದಾಣಿಕೆ ಮಾಡಬಹುದಾದ ಡ್ರೈವಿಂಗ್ ಸೀಟ್, ವೈರ್‌ಲೆಸ್ ಅನ್ನು ಹೊಂದಿದೆ. ಚಾರ್ಜಿಂಗ್ ಸೌಲಭ್ಯ, ಲೆದರ್ ಸುತ್ತುವ ಸ್ಟೀಯರಿಂಗ್ ವ್ಹೀಲ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿರಲಿವೆ. ಕಿಯಾ ಇವಿ6 ಎಲೆಕ್ಟ್ರಿಕ್ ಕಾರಿನಲ್ಲಿ ದೊಡ್ಡದಾದ 77.4 kWh ಬ್ಯಾಟರಿಯನ್ನು ಹೊಂದಿದೆ. ಇದು 7.2 ಸೆಕೆಂಡುಗಳಲ್ಲಿ 0-96 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಮಾದರಿಯು 185 ಕಿ,ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.

ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರು ಸಹಾಯ ಮಾಡುತ್ತದೆ.ಇನ್ನು ಈ ಕಾರಿನಲ್ಲಿ ಟ್ವಿನ್ ಮೋಟಾರ್ 320 ಬಿಹೆಚ್‍ಪಿ ಪವರ್ ಮತ್ತು 604 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾದರಿಯು 188 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಇದು ಕೇವಲ 5.1 ಸೆಕೆಂಡುಗಳಲ್ಲಿ ಶೂನ್ಯದಿಂದ 96 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. RWD ಮತ್ತು AWD ಯು ಯುಎಸ್‌ನಲ್ಲಿ ಕ್ರಮವಾಗಿ 500 ಕಿ.ಮೀ ಮತ್ತು 441 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾದಾಗ, ಸಿಬಿಯು ಮೂಲಕ ತರಲಾದ ಕಿಯಾ ಇವಿ6 ಜಿಟಿ ಲೈನ್ ಬೆಲೆಯು ರೂ,50 ಲಕ್ಷಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ. ಆದರೆ ಈ ಮಾದರಿಗಳು ಎಲ್ಲಾ ಆಯ್ಜೆಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಪ್ಯಾಕ್ ಮಾಡಲ್ಪಡುತ್ತವೆ.

ಕಿಯಾ ಇವಿ6 ಬಿಡುಗಡೆಯು ಭಾರತದಲ್ಲಿ ಎಲೆಕ್ಟ್ರಿಕ್ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅದರ ಜೊತೆಗೆ, ಜಾಗ್ವಾರ್, ಮರ್ಸಿಡಿಸ್-ಬೆಂಝ್, ಬಿಎಂಡಬ್ಲ್ಯು, ಆಡಿ, ಇತ್ಯಾದಿ ಪ್ರೀಮಿಯಂ ಕಾರ್ ಬ್ರಾಂಡ್‌ಗಳು ನೀಡುವ ಪ್ರಸ್ತುತ ಇವಿಗಳಿಗೆ ಹೋಲಿಸಿದರೆ ಕಿಯಾ ಇವಿ6 ಪ್ರೀಮಿಯಂ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭಿಸಬಹುದು.