ಕಾರ್ ಬ್ಯಾಟರಿ ಲೈಫ್ ಹೆಚ್ಚಿಸಬೇಕೆ? ತುಂಬಾ ಸಿಂಪಲ್‌ ಆಗಿ ಈ 5 ಟಿಪ್ಸ್ ಫಾಲೋ ಮಾಡಿ ಸಾಕು...

ವಾಹನದಲ್ಲಿನ ತಾಂತ್ರಿಕ ವೈಶಿಷ್ಟ್ಯಗಳು ಕೆಲಸಮಾಡಬೇಕಾದರೆ ಬ್ಯಾಟರಿ ಉತ್ತಮವಾಗಿರಬೇಕು, ಇಲ್ಲದಿದ್ದರೆ ಕಾರಿಗೆ ಸಮಸ್ಯೆಗಳು ತಪ್ಪಿದ್ದಲ್ಲ. ಇಂತಹ ಪ್ರಮುಖ್ಯತೆ ಪಡೆದುಕೊಂಡಿರುವ ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಸಲು ಹಲವು ಮಾರ್ಗಗಳಿವೆ. ಈ ಲೇಖನದಲ್ಲಿ ಕಾರ್ ಬ್ಯಾಟರಿ ಜೀವಿತಾವಧಿಯನ್ನು ಹೆಚ್ಚಿಸಲು ಅನುಸರಿಸಬೇಕಾದ ಸರಳ ವಿಧಾನಗಳನ್ನು ತಿಳಿಸಿದ್ದೇವೆ. ಪ್ರತಿಯೊಂದನ್ನು ತಪ್ಪದೇ ಪಾಲಸುವುದರಿಂದ ಸಂಭಾವ್ಯ ಖರ್ಚುಗಳನ್ನು ತಪ್ಪಿಸಬಹುದು.

ಎಂಜಿನ್ ಸ್ಟಾರ್ಟ್ ಮಾಡದೆ ಲೈಟ್ ಆನ್ ಮಾಡಬೇಡಿ
ಎಂಜಿನ್ ಚಾಲನೆಯಲ್ಲಿಲ್ಲದಿದ್ದಾಗ ಯಾವುದೇ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬಳಸಬೇಡಿ. ಏಕೆಂದರೆ ಎಂಜಿನ್ ಆನ್‌ ಮಾಡದೇ ಹೆಡ್‌ಲೈಟ್‌ಗಳು ಅಥವಾ ಇಂಟೀರಿಯರ್ ಲೈಟ್‌ಗಳನ್ನು ಆನ್ ಮಾಡಿದರೆ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಮೂಲ ಕಾರಣ ಎಂಜಿನ್ ಸ್ವಿಚ್ ಆಫ್ ಆಗಿರುವಾಗ ನಿಮ್ಮ ಕಾರ್ ಆಲ್ಟರ್ನೇಟರ್ ಶಟ್ ಡೌನ್ ಆಗುತ್ತದೆ. ನೀವು ಕಾರನ್ನು ನಿಲ್ಲಿಸಿದಾಗಲೆಲ್ಲಾ ಎಲ್ಲವೂ ಸ್ವಿಚ್ ಆಫ್ ಆಗಿದೆಯೇ? ಪರಿಶೀಲಿಸುವ ಅಭ್ಯಾಸವನ್ನು ಮಾಡಿಕೊಳ್ಳಿ (ಅತ್ಯಂತ ಮುಖ್ಯವಾಗಿ ಲೈಟ್‌ಗಳು).

ಕಾರ್ ಬ್ಯಾಟರಿ ಲೈಫ್ ಹೆಚ್ಚಿಸಬೇಕೆ? ತುಂಬಾ ಸಿಂಪಲ್‌ ಆಗಿ ಈ 5 ಟಿಪ್ಸ್ ಫಾಲೋ ಮಾಡಿ ಸಾಕು...

ಇದು ಕಾರ್ ಬ್ಯಾಟರಿಯು ವ್ಯರ್ಥವಾಗಿ ಒಣಗುವುದನ್ನು ತಡೆಯುತ್ತದೆ. ಅಂತೆಯೇ ಕಾರನ್ನು ಬಿಡುವಾಗ ಲಾಕ್ ಮಾಡುವುದನ್ನು ಮರೆಯಬೇಡಿ. ಒಂದು ವೇಳೆ ಮರೆತರೂ ನೆನಪಾದ ಕೂಡಲೆ ಎಷ್ಟೇ ದೂರದಲ್ಲಿದ್ದರೂ ಕಾರ್ ಬಳಿ ಹೋಗೊ ಆಫ್ ಮಾಡಿ. ಇದನ್ನು ಕೇವಲ ಭದ್ರತೆಗಾಗಿ ಹೇಳುತ್ತಿಲ್ಲ. ಬದಲಾಗಿ ಇದರ ಹಿಂದೆ ಇನ್ನೊಂದು ಕಾರಣವೂ ಇದೆ. ನಿಮ್ಮ ಕಾರನ್ನು ನೀವು 'ತೆರೆದು' ಅದನ್ನು ಮೆಮೊರಿಯಲ್ಲಿಟ್ಟರೆ, ಕಾರಿನ 'ಕಂಪ್ಯೂಟರ್ ಸಿಸ್ಟಮ್' ಚಾಲನೆಯಲ್ಲಿ ಮುಂದುವರಿಯಬಹುದು. ಇದು ನಿಮಗೆ ತಿಳಿಯದಂತೆ ನಿಮ್ಮ ಕಾರಿನ ಬ್ಯಾಟರಿ ಒಣಗಲು ಕಾರಣವಾಗುತ್ತದೆ.

ಕಾರಿಗೆ ಧೀರ್ಘ ವಿರಾಮ ಬೇಡ
ನಿಮ್ಮ ಕಾರನ್ನು ದೀರ್ಘಕಾಲದವರೆಗೆ ಬಳಸದಿದ್ದರೆ ಬ್ಯಾಟರಿಯನ್ನು 'ರೀಚಾರ್ಜ್' ಮಾಡಲು ಕಷ್ಟವಾಗಬಹುದು. ಹಾಗಾಗಿ ಕಾರನ್ನು ಬಹಳ ದಿನಗಳ ಕಾಲ ಬಳಸದೇ ಇಡಬೇಡಿ. ನಿಮ್ಮ ಕಾರು ನಿರಂತರ ಬಳಕೆಯಲ್ಲಿದ್ದಾಗ ಮಾತ್ರ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಾರಕ್ಕೊಮ್ಮೆಯಾದರೂ ಕನಿಷ್ಠ 30 ನಿಮಿಷಗಳ ಕಾಲ ವಾಹನ ಚಲಾಯಿಸಿ. ಇದು ನಿಮ್ಮ ಕಾರ್ ಎಂಜಿನ್ ಅನ್ನು ವಾರ್ಮ್-ಅಪ್ ಮಾಡುತ್ತದೆ. ಕಾರಿನಲ್ಲಿ ಬಳಸಿರುವ ಕೆಲವು ದ್ರವಗಳು ಉತ್ತಮವಾಗಿ ಪರಿಚಲನೆಗೊಳ್ಳುವಂತೆ ಮಾಡುತ್ತದೆ. ನೀವು ವಾರಗಟ್ಟಲೆ ಕಾರನ್ನು ಬಳಸದಿದ್ದರೆ, ಮುಂದಿನ ಬಾರಿ ನೀವು ಕಾರನ್ನು ಓಡಿಸುವಾಗ ಬ್ಯಾಟರಿ ಸಮಸ್ಯೆ ಎದುರಾಗಬಹುದು.

ಕಾರ್ ಬ್ಯಾಟರಿ ಲೈಫ್ ಹೆಚ್ಚಿಸಬೇಕೆ? ತುಂಬಾ ಸಿಂಪಲ್‌ ಆಗಿ ಈ 5 ಟಿಪ್ಸ್ ಫಾಲೋ ಮಾಡಿ ಸಾಕು...

ಬ್ಯಾಟರಿಯನ್ನು ಆಗಾಗ್ಗೆ ಸ್ವಚ್ಛಗೊಳಿಸಿ
ಕೊಳಕು ಮತ್ತು ತೇವಾಂಶವು ಸೋರಿಕೆಗೆ ಕಾರಣವಾಗಬಹುದು. ಅವು 'ಶಾರ್ಟ್ ಸರ್ಕ್ಯೂಟ್'ಗಳಿಗೂ ಕಾರಣವಾಗಬಹುದು. ಹಾಗಾಗಿ ತಿಂಗಳಿಗೊಮ್ಮೆಯಾದರೂ ಕಾರಿನ ಬ್ಯಾಟರಿಯನ್ನು ಸ್ವಚ್ಛಗೊಳಿಸಿ. ಸ್ಪಾಂಜ್ ಅಥವಾ ಒಣ ಬಟ್ಟೆಯಿಂದ ಬ್ಯಾಟರಿಯನ್ನು ಸ್ವಚ್ಛಗೊಳಿಸುವುದು ಉತ್ತಮ. ಇದರಿಂದ ಬ್ಯಾಟರಿಯ ಹೊರಭಾಗದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳನ್ನು ತಡಿಯಬಹುದು. ಹಾಗಾಗಿ ಬಿಡುವು ಇದ್ದಾಗ ಬ್ಯಾಟರಿ ಸ್ವಚ್ಚಗೊಳಿಸುವುದನ್ನು ರೂಏಇಸಿಕೊಳ್ಳುವುದು ಉತ್ತಮ.

ಕಡಿಮೆ ದೂರದ ಪ್ರಯಾಣಕ್ಕೆ ಕಾರು ಬೇಡ
ಪ್ರತಿ ಬಾರಿ ನೀವು ಕಾರನ್ನು ಸ್ಟಾರ್ಟ್ ಮಾಡಿದಾಗ, ಬ್ಯಾಟರಿ ಕೆಲಸ ಮಾಡಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಎಂಜಿನ್ ನಿಂದ ರೀಚಾರ್ಜ್ ಆಗುತ್ತದೆ. ಹಾಗಾಗಿ ಕಡಿಮೆ ದೂರದವರೆಗೆ ಮಾತ್ರ ಕಾರನ್ನು ಓಡಿಸಿದರೆ, ಬ್ಯಾಟರಿಯಿಂದ ಖರ್ಚಾದ ವಿದ್ಯುತ್ ಅನ್ನು ಮರುಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿರಂತರವಾಗಿ ಹತ್ತಿರದ ಸ್ಥಳಗಳಿಗೆ ಕೊಂಡೊಯ್ಯುವುದರಿಂದ ಬ್ಯಾಟರಿ ವೋಲ್ಟೇಜ್ ತೀವ್ರವಾಗಿ ಕಡಿಮೆಯಾಗುತ್ತದೆ. ಕೆಲವು ಹಂತದಲ್ಲಿ ಕಾರು ಸ್ರಾರ್ಟ್ ಆಗಲು ಹೆಣಗಾಡುತ್ತದೆ. ಹಾಗಾಗಿ ಕಡಿಮೆ ದೂರದ ಪ್ರಯಾಣಕ್ಕೆ ಕಾರನ್ನು ತೆಗೆದುಕೊಳ್ಳಬೇಡಿ.

ನಿಯಮಿತ ಸರ್ವಿಸ್ ಮುಖ್ಯ
ನಿಯಮಿತವಾಗಿ ಕಾರನ್ನು ಸರ್ವಿಸ್ ಮಾಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ನೀವು ಅವಸರದಲ್ಲಿ ಪ್ರಯಾಣಿಸುವ ವೇಳೆ ಕಾರು ಇದ್ದಕ್ಕಿದ್ದಂತೆ ಬ್ರೇಕ್‌ಡೌನ್ ಆಗುವುದನ್ನು ತಡೆಯಲು ಬಯಸಿದರೆ, ಬ್ಯಾಟರಿಯನ್ನು 'ಟೆಸ್ಟ್' ಮಾಡುವುದು ಒಳ್ಳೆಯದು. ಮುಂದಿನ ಬಾರಿ ನೀವು ಸರ್ವಿಸ್‌ಗಾಗಿ ಕಾರನ್ನು ಬಿಟ್ಟಾಗ, ಬ್ಯಾಟರಿಯು ಉತ್ತಮವಾಗಿದೆಯೇ? ಬ್ಯಾಟರಿ ಸರಿಯಾಗಿ 'ರೀಚಾರ್ಜ್' ಆಗಿದೆಯೇ? ಮೆಕ್ಯಾನಿಕ್ ಅನ್ನು ಪರಿಶೀಲಿಸಲು ಕೇಳಿ. ಈ ಮೂಲಕ ನಿಮ್ಮ ಕಾರಿನ ಕಂಡಿಷನ್ ತಿಳಿದು ಮುಂದಿನ ಪ್ರಕ್ರಿಯೆ ಮಾಡಿಕೊಳ್ಳಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಎಷ್ಟೋ ಜನರು ಕಾರನ್ನು ಬಳಸುತ್ತಾರೆಯೇ ಹೊರತು ಬ್ಯಾಟರಿ ಬಗ್ಗೆ ಗಮನವಿರುವುದಿಲ್ಲ. ಆದರೆ ಕಾರಿಗೆ ಬ್ಯಾಟರಿ ಎಷ್ಟು ಮುಖ್ಯ ಎಂಬುದನ್ನು ಬ್ಯಾಟರಿ ನಿಷ್ಕ್ರಿಯಗೊಂಡಾಗ ಮಾತ್ರ ಅರಿವಾಗುತ್ತದೆ. ಹಾಗಾಗಿ ಮುಂಚಿತವಾಗಿ ಬ್ಯಾಟರಿ ಬಗ್ಗೆ ಕಾಳಜಿ ತೋರಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಲೇಖನದಲ್ಲಿ ನೀಡಲಾದ ಸರಳ ಸಲಹೆಗಳನ್ನು ಪಾಲಿಸುವುದರಿಂದ ನಿಮ್ಮ ಕಾರಿನ ಬ್ಯಾಟರಿ ಹೆಚ್ಚು ಕಾಲ ಉಳಿಯುತ್ತದೆ. ಹಾಗಾಗಿ ಈ ಸರಳ ವಿಧಾನಗಳನ್ನು ಅನುಸರಿಸಲು ಬೇಜವಾಬ್ದಾರಿ ತೋರಿದರೆ ಬ್ಯಾಟರಿ ಅಯುಷ್ಯ ಮುಗಿಯುವದರ ಜೊತೆಗೆ ಸಾವಿರಾರು ರೂ. ಖರ್ಚು ಮಾಡುವ ಅನಿವಾರ್ಯತೆ ಎದುರಾಗುತ್ತದೆ.

Most Read Articles

Kannada
English summary
5 simple ways to increase the car battery life
Story first published: Monday, January 23, 2023, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X