ಶೀಘ್ರ ವೈಯಕ್ತಿಕ ಬಳಕೆಗೆ ಸಿಗಲಿದೆ ಬಜಾಜ್ ಕ್ಯೂಟ್: ಅದು ಬೈಕ್ ದರದಲ್ಲಿಯೇ...!

ನೀವು ಕಡಿಮೆ ಬೆಲೆಯಲ್ಲಿ ಹೊಸ ಕಾರನ್ನು ಖರೀದಿಸಲು ಯೋಚಿಸುತ್ತಿದ್ದೀರಾ... ಹಾಗಾದರೆ ಕೆಲವು ದಿನ ಕಾಯುವುದು ಒಳ್ಳೆಯದು. ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಬಜಾಜ್ ಆಟೋ, ಶೀಘ್ರದಲ್ಲೇ ಸಿಹಿಸುದ್ದಿ ನೀಡಲು ಮುಂದಾಗಿದೆ. ಅಷ್ಟಕ್ಕೂ ಬಜಾಜ್ ಅದೆಂತಹ ವಾಹನವನ್ನು ಲಾಂಚ್ ಮಾಡಲು ಸಿದ್ಧವಾಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋದ ಪ್ರಮುಖ ವಾಹನವಾಗಿರುವ ಕ್ಯೂಟ್ (Bajaj Qute) ಕೇವಲ ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಖರೀದಿಸಲು ಸಿಗುತ್ತಿದೆ. ಮೂಲಗಳ ಪ್ರಕಾರ, ಶೀಘ್ರದಲ್ಲೇ ಇದನ್ನು ವೈಯಕ್ತಿಕ ಬಳಕೆಗೆ ಗ್ರಾಹಕರು ಕೊಂಡುಕೊಳ್ಳಬಹುದು. ನೂತನ ಕ್ಯೂಟ್ ಈ ವರ್ಷ ಮತ್ತಷ್ಟು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ, 17 kg ಹೆಚ್ಚಿನ ತೂಕವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ, ಇದರ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಬಹುತೇಕ ಅತಿ ಕಡಿಮೆ ದರದಲ್ಲಿ ಖರೀದಿದಾರರಿಗೆ ಸಿಗಲಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, 'ಬಜಾಜ್ ಕ್ಯೂಟ್' ಕಾರಲ್ಲ. ಇದನ್ನು 'ಕ್ವಾಡ್ರಿಸೈಕಲ್' ಪರಿಕಲ್ಪನೆ (concept) ಅಡಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಆದರೆ, ಕ್ವಾಡ್ರಿಸೈಕಲ್ ಪದವನ್ನು ಬಹುತೇಕರು ಕೇಳಿಲ್ಲ. ಇಂತಹ ವಾಹನಗಳನ್ನು, ಮೂರು ಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ಆಧರಿಸಿ ರೆಡಿ ಮಾಡಲಾಗುತ್ತದೆ. ಕಾರು ಹಾಗೂ ಆಟೋರಿಕ್ಷಾಗಳು ಹೊಂದಿರುವ ವೈಶಿಷ್ಟ್ಯವನ್ನು ಪಡೆದಿರುತ್ತವೆ ಎಂದು ಹೇಳಬಹುದು. ಬಜಾಜ್, ಈ ಕ್ಯೂಟ್ ಅನ್ನು 2018ರಲ್ಲಿ ಖರೀದಿಗೆ ನೀಡಿತು.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಜಾಜ್ ಕ್ಯೂಟ್ ರೂ.2.48 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಆದರೆ, ಆನ್-ರೋಡ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಇದು ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಹಾರ್ಡ್‌ ಟಾಪ್ ರೂಫ್ (ಕಠಿಣ ಮೇಲ್ಚಾವಣಿ), ಆಕರ್ಷಕ ಬಾಗಿಲು, ಸ್ಟೀರಿಂಗ್ ವೀಲ್ಸ್ ಮತ್ತು 2+2 ಸೀಟ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಅಗ್ಗದ ಬೆಲೆ ಇರುವುದರಿಂದ ಟ್ಯಾಕ್ಸಿ ಸೇವೆಗಳಿಗೆ ಇದನ್ನು ಉಪಯೋಗ ಮಾಡಲಾಗುತ್ತಿದೆ.

ಬಜಾಜ್ ಕ್ಯೂಟ್ ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು 216.6 ಸಿಸಿ, ಲಿಕ್ವಿಡ್ ಕೂಲ್ಡ್ DTS-i ಎಂಜಿನ್ ಹೊಂದಿದೆ. ಪೆಟ್ರೋಲ್ ಆವೃತ್ತಿಯು 13.1 PS ಗರಿಷ್ಠ ಪವರ್ ಹಾಗೂ 18.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು,CNG ಆವೃತ್ತಿಯು 10.98 PS ಗರಿಷ್ಠ ಪವರ್ 16.1 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದರ ಬೆಲೆಗೆ ಸರಿಹೊಂದುವಂತೆ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ.

ಮಾರುಕಟ್ಟೆಯಲ್ಲಿ ಸಿಗುವ ಬಜಾಜ್ ಕ್ಯೂಟ್ ಇಂಧನ ದಕ್ಷತೆ ಹಾಗೂ ಮೈಲೇಜ್ ಕುರಿತು ಮಾತನಾಡುವುದಾದರೆ, ಇದರ ಪೆಟ್ರೋಲ್ ಆವೃತ್ತಿ 35kmpl ಮೈಲೇಜ್ ನೀಡಿದರೇ, CNG ಆವೃತ್ತಿ 43km/kg ಇಂಧನ ದಕ್ಷತೆಯನ್ನು ಹೊಂದಿದೆ. ಕೇವಲ 7.20 ಸೆಕೆಂಡುಗಳಲ್ಲಿ 40 kmph ವೇಗವನ್ನು ಪಡೆಯಲಿದ್ದು, 34 ಸೆಕೆಂಡುಗಳಲ್ಲಿಯೇ 70 kmph ಟಾಪ್ ಸ್ವೀಡ್ ತಲುಪಲಿದೆ. ಹೊಸ ಜಾಜ್ ಕ್ಯೂಟ್ ಬರೋಬ್ಬರಿ 400 kg ತೂಕವಿದ್ದು, ಭಾರತದಂತಹ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲಿದೆ.

ಭಾರತದ ಬಹುತೇಕ ಮಧ್ಯಮ ವರ್ಗದ ಜನರು ಸಂಚರಿಸುವ ವಾಹನವೆಂದರೇ ಅದು ಆಟೋರಿಕ್ಷಾ. ಇದು ಬಹುತೇಕ ಮಂದಿಯ ಜೀವನಾಧಾರವೂ ಆಗಿದೆ. ಬಜಾಜ್ ಕಾಂಪ್ಯಾಕ್ಟ್ RE ರೂ.2.34 - ರೂ.2.36 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 35-40 kmpl ಇಂಧನ ದಕ್ಷತೆಯನ್ನು ಹೊಂದಿದೆ. ಕಂಪನಿಯು ಈ ಆಟೋರಿಕ್ಷಾವನ್ನು ದುಡಿಯುವ ವರ್ಗಕ್ಕೆ 1,00,00 km ವಾರಂಟಿಯೊಂದಿಗೆ ನೀಡುತ್ತಿದೆ.

ಇನ್ನು, ಬಜಾಜ್ ಕ್ಯೂಟ್ ಅನ್ನು ಶೀಘ್ರದಲ್ಲೇ ವೈಯಕ್ತಿಕ ಬಳಕೆಗೆ ಖರೀದಿ ಮಾಡಬಹುದಾಗಿವುದರಿಂದ ಎಷ್ಟೋ ಮಂದಿಯ ಕಾರು ಖರೀದಿಸುವ ಆಸೆ ಈಡೇರುತ್ತದೆ. ಸಣ್ಣ ಕುಟುಂಬಗಳು ಈ ಕಾರಿನಲ್ಲಿ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಬೆಲೆಯು ತೀರಾ ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಇದು ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಯಲಿದೆ.

Most Read Articles

Kannada
English summary
Bajaj qute will now be sold for personal use details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X