ಸಚಿನ್ ಅದೃಷ್ಟ ಹಸ್ತಗಳಿಂದ ಬಿಎಂಡಬ್ಲ್ಯು 1 ಸಿರೀಸ್ ಎಂಟ್ರಿ

Posted By:

ಭಾರತ ಕ್ರಿಕೆಟ್ ತಂಡದ ಆರಾಧ್ಯ ದೈವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಉತ್ತಮ ವಾಹನ ಪ್ರೇಮಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಬ್ರಾಂಡ್ ಅಂಬಾಸಿಡರೂ ಆಗಿರುವ ಸಚಿನ್, ಅತಿ ನೂತನ 1 ಸಿರೀಸ್ ಲಾಂಚ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನೂತನ ಬಿಎಂಡಬ್ಲ್ಯು 1 ಸಿರೀಸ್, ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶ ಪಡೆದಿರುವ ಆಡಿ ಕ್ಯೂ3 ಎಸ್, ಮರ್ಸಿಡಿಸ್ ಎ ಹಾಗೂ ಬಿ ಕ್ಲಾಸ್ ಮತ್ತು ವೋಲ್ವೋ ವಿ40 ಕ್ರಾಸ್ ಕಂಟ್ರಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲಿದೆ. ಬಿಎಂಡಬ್ಲ್ಯು 1 ಸಿರೀಸ್ ಬೇಸ್ ವೆರಿಯಂಟ್ ದರ 20.9 ಲಕ್ಷ ರು.ಗಳಾಗಿವೆ. ಇದು ಬಿಎಂಡಬ್ಲ್ಯು‌ನಿಂದ ದೇಶಕ್ಕೆ ಪರಿಚಯವಾಗಿರುವ ಅತಿ ಅಗ್ಗದ ಕಾರು ಕೂಡಾ ಆಗಿದೆ.

To Follow DriveSpark On Facebook, Click The Like Button
ವೆರಿಯಂಟ್ ಹಾಗೂ ದರ ಮಾಹಿತಿ

ವೆರಿಯಂಟ್ ಹಾಗೂ ದರ ಮಾಹಿತಿ

* 116ಐ (ಪೆಟ್ರೋಲ್) 20.9 ಲಕ್ಷ ರು.

* 118ಡಿ (ಡೀಸೆಲ್) 22.9 ಲಕ್ಷ ರು.

* 118ಡಿ ಸ್ಪೋರ್ಟ್ ಲೈನ್ (ಡೀಸೆಲ್) 25.9 ಲಕ್ಷ ರು.

* 118ಡಿ ಸ್ಪೋರ್ಟ್ ಪ್ಲಸ್ (ಡೀಸೆಲ್) 29.9 ಲಕ್ಷ ರು.

ಪೆಟ್ರೋಲ್ ಎಂಜಿನ್

ಪೆಟ್ರೋಲ್ ಎಂಜಿನ್

ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಬಿಎಂಡಬ್ಲ್ಯು 1 ಸಿರೀಸ್ ಆಗಮನವಾಗಿದೆ. ಇದು 1.6 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 136 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಡೀಸೆಲ್ ಎಂಜಿನ್

ಡೀಸೆಲ್ ಎಂಜಿನ್

ಹಾಗೆಯೇ 143 ಅಶ್ವಶಕ್ತಿ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದು ಝಡ್‌ಟಿ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಮೈಲೇಜ್

ಮೈಲೇಜ್

ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ಪ್ರಕಾರ ಬಿಎಂಡಬ್ಲ್ಯು ಪೆಟ್ರೋಲ್ ವರ್ಷನ್ ಪ್ರತಿ ಲೀಟರ್‌ಗೆ 16.28 ಕೀ.ಮೀ. ಹಾಗೂ ಡೀಸೆಲ್ ವರ್ಷನ್ ಪ್ರತಿ ಲೀಟರ್‌ಗೆ 20.58 ಕೀ.ಮೀ. ಮೈಲೇಜ್ ನೀಡಲಿದೆ.

ಡ್ರೈವಿಂಗ್ ಮೋಡ್

ಡ್ರೈವಿಂಗ್ ಮೋಡ್

ಒಟ್ಟು ನಾಲ್ಕು ಡ್ರೈವಿಂಗ್ ಮೋಡ್‌ಗಳಲ್ಲಿ ಬಿಎಂಡಬ್ಲ್ಯು 2 ಸಿರೀಸ್ ಆಗಮನವಾಗಿದೆ. ಅವುಗಳೆಂದರೆ

ಕಂಫರ್ಟ್,

ಸ್ಪೋರ್ಟ್,

ಸ್ಪೋರ್ಟ್ ಪ್ಲಸ್ ಮತ್ತು

ಇಕೊ ಪ್ರೊ.

ವೆರಿಯಂಟ್, ವೈಶಿಷ್ಟ್ಯ

ವೆರಿಯಂಟ್, ವೈಶಿಷ್ಟ್ಯ

116ಐ ಪೆಟ್ರೋಲ್: ಬೇಸ್ ವೆರಿಯಂಟ್, ಫಾಗ್ ಲ್ಯಾಂಪ್, ಆಟೋಮ್ಯಾಟಿಕ್ ಹೆಡ್ ಲೈಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, 16 ಇಂಚು ಅಲಾಯ್ ವೀಲ್, ಎಬಿಎಸ್, ಆರು ಏರ್ ಬ್ಯಾಗ್, ಸ್ಟಾರ್ಟ್/ಸ್ಟಾಪ್ ಕ್ರಿಯಾತ್ಮಕತೆ ಮತ್ತು ಇಕೊ ಮೋಡ್ ಜೊತೆಗೆ ಬಿಎಂಡಬ್ಲ್ಯು ಬ್ರೇಕ್ ಎನರ್ಜಿ ರಿಜನರೇಷನ್ ಸಿಸ್ಟಂ, ಸ್ಟಾಂಡರ್ಡ್ ಚಕ್ರಗಳು.

ವೆರಿಯಂಟ್, ವೈಶಿಷ್ಟ್ಯ

ವೆರಿಯಂಟ್, ವೈಶಿಷ್ಟ್ಯ

180ಡಿ (ಡೀಸೆಲ್): ಬೇಸ್ ಡೀಸೆಲ್ ವೆರಿಯಂಟ್, ಬೇಸ್ ಪೆಟ್ರೋಲ್ ವೆರಿಯಂಟ್‌ನಲ್ಲಿರುವ ಎಲ್ಲ ಸ್ಟಾಂಡರ್ಡ್ ಫಿಚರ್ಸ್‌ಗಳು ಲಭ್ಯ.

ವೆರಿಯಂಟ್, ವೈಶಿಷ್ಟ್ಯ

ವೆರಿಯಂಟ್, ವೈಶಿಷ್ಟ್ಯ

180ಡಿ ಸ್ಪೋರ್ಟ್ ಲೈನ್ (ಡೀಸೆಲ್): ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟಿನ ಜತೆಗೆ ಮೆಮರಿ ನಿರ್ವಹಣೆ, ಬಿಎಂಡಬ್ಲ್ಯು ಐ ಡ್ರೈವ್ ಮಾಹಿತಿ ವ್ಯವಸ್ಥೆ ಜತೆಗೆ ಕೈಗಳು ಮುಕ್ತ ನಿಯಂತ್ರಣ ಸೌಲಭ್ಯ ಮತ್ತು ಸ್ಲೈಡಿಂಗ್ ಫ್ರಂಟ್ ಆರ್ಮ್ ರೆಸ್ಟ್.

ವೆರಿಯಂಟ್, ವೈಶಿಷ್ಟ್ಯ

ವೆರಿಯಂಟ್, ವೈಶಿಷ್ಟ್ಯ

180ಡಿ ಸ್ಪೋರ್ಟ್ ಪ್ಲಸ್ (ಡೀಸೆಲ್): ಟಾಪ್ ವೆರಿಯಂಟ್, ಕಿಲೆಸ್ ಇಗ್ನಿಷನ್, ರಿಯರ್ ಎಸಿ ವೆಂಟ್ಸ್, 17 ಇಂಚು ಅಲಾಯ್ ವೀಲ್, ಸನ್ ರೂಫ್.

ಬಿಎಂಡಬ್ಲ್ಯು ಕನೆಕ್ಟಡ್ ಡ್ರೈವ್ ಆಪ್ಷನಲ್ ಪ್ಯಾಕೇಜ್

ಬಿಎಂಡಬ್ಲ್ಯು ಕನೆಕ್ಟಡ್ ಡ್ರೈವ್ ಆಪ್ಷನಲ್ ಪ್ಯಾಕೇಜ್

ಬಿಎಂಡಬ್ಲ್ಯು ಐ ಡ್ರೈವ್ ಮಾಹಿತಿ ಸಿಸ್ಟಂ ಜತೆಗೆ 16.5 ಇಂಚು ಹೈ ರೆಸೊಲ್ಯೂಷನ್ ಡಿಸ್‌ಪ್ಲೇ, ಬ್ಲೂಟೂತ್ ಮುಖಾಂತರ ಕನೆಕ್ಟಿವಿಟಿ, ಯುಎಸ್‌ಬಿ. ಹೈಫೈ ಲೌಡ್ ಸ್ಪೀಕರ್ ಸಿಸ್ಟಂ ಮತ್ತು ರೆಡಿಯೊ ಬಿಎಂಡಬ್ಲ್ಯು.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಎಂಟು ವರ್ಣಗಳಲ್ಲಿ ನೂತನ ಬಿಎಂಡಬ್ಲ್ಯು 1 ಸಿರೀಸ್ ಲಭ್ಯವಿರಲಿದೆ.

White (non metallic),

Black Sapphire,

Crimson red,

Deep sea blue,

Glacier silver,

Midnight Blue,

Mineral grey, ಮತ್ತು

Valencia Orange

ಶಕ್ತಿಶಾಲಿ

ಶಕ್ತಿಶಾಲಿ

ಪೆಟ್ರೋಲ್ ವೆರಿಯಂಟ್ ಅಗ್ಗದ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಿರುವುದಲ್ಲದೆ ತನ್ನ ನಿಕಟ ಎದುರಾಳಿಯಾದ ಮರ್ಸಿಡಿಸ್ ಬೆಂಝ್ ಎ ಹಾಗೂ ಬಿ ಕ್ಲಾಸ್‌ಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ.

ಸಿಕೆಯು

ಸಿಕೆಯು

ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಮುಖಾಂತರ ಚೆನ್ನೈನ ಕೇಂದ್ರದಲ್ಲಿ ಜೋಡಣೆಯಾಗಲಿರುವ ಬಿಎಂಡಬ್ಲ್ಯು ನೂತನ 1 ಸಿರೀಸ್, ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡುವಲ್ಲಿ ಯಶಸ್ವಿಯಾಗಿದೆ. ಚೆನ್ನೈನ ಇದೇ ಘಟಕದಲ್ಲಿ ಬಿಎಂಡಬ್ಲ್ಯು 3 ಸಿರೀಸ್, 5 ಸಿರೀಸ್, 7 ಸಿರೀಸ್, ಎಕ್ಸ್ ಹಾಗೂ ಎಕ್ಸ್3 ಡೀಸೆಲ್ ಕಾರುಗಳು ಸಹ ಜೋಡಣೆಯಾಗುತ್ತಿದೆ.

English summary
After months of promotional events and social media campaigns BMW India has finally launched the 1 Series. The luxury BMW hatchback was unveiled by non other than BMW India brand ambassador Sachin Tendulkar in a launch event held in Mumbai.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark