2.29 ಕೋಟಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

Written By:

ಕಳೆದ ಕೆಲವು ಸಮಯಗಳಿಂದ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇದು ದೇಶದ್ಯಾಂತ ಸಮಾನವಾದ 2.29 ಕೋಟಿ ರು.ಗಳ ಎಕ್ಸ್ ಶೋ ರೂಂ ಬೆಲೆ ಹೊಂದಿರಲಿದೆ.

ಬೆಲೆ: 2.29 ಕೋಟಿ ರು. (ಎಕ್ಸ್ ಶೋ ರೂಂ ಬೆಲೆ)

ಕ್ರಿಕೆಟ್‌ನ ಜೀವಂತ ದಂತಕಥೆ ಮಾಜಿ ಕ್ರಿಕೆಟಿಗ ಹಾಗೂ ಬಿಎಂಡಬ್ಲ್ಯು ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ಸಚಿನ್ ತೆಂಡೂಲ್ಕರ್ ಅವರು ನೂತನ ಐ8 ಮಾದರಿಯನ್ನು ದೇಶಕ್ಕೆ ಪರಿಚಯಿಸಿದರು. 2014 ದೆಹಲಿ ಆಟೋ ಎಕ್ಸ್ ಪೋದಲ್ಲೂ ಸಚಿನ್ ಅವರೇ ಬಿಎಂಡಬ್ಲ್ಯು ಐ8 ಕಾರನ್ನು ಮೊತ್ತ ಮೊದಲ ಬಾರಿಗೆ ದೇಶಕ್ಕೆ ಬರ ಮಾಡಿಕೊಂಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು 2.29 ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ. ಜಾಗತಿಕವಾಗಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಂಖಾಂತರ ಸೀಮಿತ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆ.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಫೆರಾರಿ, ಲಂಬೋರ್ಗಿನಿಗಳಂತಹ ಸೂಪರ್ ಕಾರುಗಳನ್ನೇ ಮೀರಿಸುವಂತಹ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಬಿಎಂಡಬ್ಲ್ಯು ಐ8 ಪ್ಲಗಿನ್ ಹೈಬ್ರಡ್ ಮಾದರಿಲ್ಲಿ 1.5 ಲೀಟರ್ ಟರ್ಬೊ ತ್ರಿ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಇವೆರಡು ಸೇರಿ ಗರಿಷ್ಠ 370 ಅಶ್ವಶಕ್ತಿ ಉತ್ಪಾದಿಸಲಿದ್ದು, 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಅಂತೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗವನ್ನು ಪಡೆಯಲಿದೆ.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಐ8 ನಿರ್ಮಾಣದಲ್ಲಿ ಅತಿ ಹೆಚ್ಚು ಕಾರ್ಬನ್ ಫೈಬರ್ ಬಳಕೆ ಮಾಡಲಾಗಿದೆ. ಇದು ಕಾರಿನ ಒಟ್ಟಾರೆ ತೂಕ ಕಡಿತ ಮಾಡುವಲ್ಲಿ ನೆರವಾಗಿದೆ. ಅತ್ಯಂತ ಕಡಿಮೆ ಗುರುತ್ವವನ್ನು ಹೊಂದಿರುವ ಬಿಎಂಡಬ್ಲ್ಯು ಐ8 1490 ಕೆ.ಜಿ ತೂಕವನ್ನಷ್ಟೇ ಹೊಂದಿದೆ.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಮಧ್ಯದಲ್ಲಿ ಜೋಡಣೆಯಾದ ಈ ಸ್ಪೋರ್ಟ್ಸ್ ಕಾರಿನ ಹಿಂದಿನ ಚಕ್ರಗಳು ಪೆಟ್ರೋಲ್ ಎಂಜಿನ್ ಹಾಗೂ ಮುಂದಿನ ಚಕ್ರಗಳು ಎಲೆಕ್ಟ್ರಿಕ್ ಮೋಟಾರಿನಿಂದ ಚಾಲನೆಯಾಗಲಿದೆ. ಅಲ್ಲದೆ ಕೀ.ಮೀ. 59 ಗ್ರಾಂ ಕಾರ್ಬನ್ ಡೈಓಕ್ಸೈಡ್ ಹೊರ ಸೂಸುತ್ತಿದೆ.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಐ8 ಪ್ಲಗ್ ಇನ್ ಹೈಬ್ರಿಡ್ ಮಾದರಿಯು ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 37 ಕೀ.ಮೀ. ವೆರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 120 ಕೀ.ಮೀ. ಆಗಿರಲಿದೆ.

2.29 ಕೋಟಿ ದುಬಾರಿಯ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಬಿಡುಗಡೆ

ಜಾಗತಿಕ ಮಾರುಕಟ್ಟೆಯಲ್ಲಿ ಪೋರ್ಷೆ 911, ಆಡಿ ಆರ್8 ಹಾಗೂ ಜಾಗ್ವಾರ್ ಎಫ್-ಟೈಪ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತದಲ್ಲೂ ಮೋಡಿ ಮಾಡುವ ನಿರೀಕ್ಷೆಯಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

 • ಚಾಲಕ ಕೇಂದ್ರಿತ ಡ್ಯಾಶ್ ಬೋರ್ಡ್,
 • ಲೆಥರ್ ಹೋದಿಕೆ,
 • 8.8 ಇಂಚಿನ ಐಡ್ರೈವ್ ಮಾಹಿತಿ ಮನರಂಜನಾ ವ್ಯವಸ್ಥೆ,
 • ಡಿಜಿಟಲ್ ಸ್ಕ್ರೀನ್,
 • ಅಡಾಪ್ಟಿವ್ ಕ್ರೂಸ್ ಕಂಟ್ರೋಲ್,
 • ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್,
 • ನೇವಿಗೇಷನ್ ಸಿಸ್ಟಂ,
 • ಢಿಕ್ಕಿ ಎಚ್ಚರಿಕೆ,
 • ಆಟೋಮ್ಯಾಟಿಕ್ ಬ್ರೇಕ್,
 • ಹೈ ಬೀಮ್ ಅಸಿಸ್ಟನ್ಸ್,
 • ಪರಿಪೂರ್ಣ 50/50 ಭಾರ ವಿಭಜನೆ
ಸುರಕ್ಷತೆ

ಸುರಕ್ಷತೆ

 • ಡ್ಯುಯಲ್ ಫ್ರಂಟ್, ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
 • ಲಿಥಿಯಂ ಇಯಾನ್ ಬ್ಯಾಟರಿ,
 • ಎಬಿಎಸ್,
 • ಕಾರ್ನರಿಂಗ್ ಬ್ರೇಕಿಂಗ್ ಕಂಟ್ರೋಲ್ (ಸಿಬಿಸಿ),
 • ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ)

 

Read in English: BMW i8 Launched In India
English summary
The BMW i8 has been launched in India. This plug in hybrid sports car from the German manufacturer has been a very anticipated launch.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark