ಬೆಂಗ್ಳೂರಲ್ಲೂ ಮಹೀಂದ್ರ ರೇವಾ ಎಲೆಕ್ಟ್ರಿಕ್ ಕಾರು ಬಾಡಿಗೆಗೆ!
ಮಹೀಂದ್ರ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಹೀಂದ್ರ ರೇವಾ ಜತೆ ಸೇರಿಕೊಂಡು ದೇಶದ ನಂ.1 ವೈಯಕ್ತಿಕ ಸಾರಿಗೆ ಸೇವೆ ಒದಗಿಸುವ ಸಂಸ್ಥೆಯಾಗಿರುವ ಕಾರ್‌ಜೋನ್‌ರೆಂಟ್, ವಿನೂತನ ಯೋಜನೆಯೊಂದನ್ನು ಜಾರಿಗೊಳಿಸುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ಮೂರು ಪ್ರಮುಖ ನಗರಗಳಲ್ಲಿ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಮಹೀಂದ್ರ ರೇವಾ ಇ2ಒ ಎಲೆಕ್ಟ್ರಿಕ್ ಕಾರನ್ನು ಬಾಡಿಗೆಗೆ ಒದಗಿಸಲು ನಿರ್ಧರಿಸಿದೆ.
ಕಾರ್‌ಜೋನ್‌ರೆಂಟ್ ಪ್ರಸ್ತುತಪಡಿಸುತ್ತಿರುವ ಈ ಯೋಜನೆಯು ಅಕ್ಟೋಬರ್ 1ರಂದು ಬೆಂಗಳೂರು ಸೇರಿದಂತೆ, ನವದೆಹಲಿ ಹಾಗೂ ಮುಂಬೈನಲ್ಲಿ ಆರಂಭವಾಗಲಿದೆ. ಈ 24 ಗಂಟೆಗಳ ಸೇವೆಗಾಗಿ ಗ್ರಾಹಕರು 800 ರುಪಾಯಿ ಪಾವತಿಸಬೇಕಾಗಿದೆ.
ಒಟ್ಟಿನಲ್ಲಿ ಕಾರ್‌ಜೋನ್‌ರೆಂಟ್ ಹಮ್ಮಿಕೊಂಡಿರುವ ಈ ಯೋಜನೆಯಿಂದಾಗಿ ಮಹೀಂದ್ರ ರೇವಾ ವಿದ್ಯುತ್ ಚಾಲಿತ ವಾಹನಕ್ಕೆ ಹೆಚ್ಚು ಪ್ರೋತ್ಸಾಹ ಲಭಿಸುವ ನಿರೀಕ್ಷೆಯಿದ್ದು, ರೇವಾ ಎಲೆಕ್ಟ್ರಿಕ್ ವಾಹನಗಳನ್ನು ಓಡಿಸಲು ಹಿಂಜರಿಯುವ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ಮೂಲಕ ತಮಗಿಷ್ಟವಾದ್ಧಲ್ಲಿ ಶಾಶ್ವತವಾಗಿ ರೇವಾ ಎಲೆಕ್ಟ್ರಿಕ್ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಷರತ್ತುಗಳು
- ವೆಬ್‌ಸೈಟ್‌ಗೆ ಲಾಗಿನ್ ಆಗಿ ಸಮಯ ಹಾಗೂ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿರಿ.
- ಕ್ರೆಡಿಟ್ ಕಾರ್ಡ್ ವಿವರಗಳನ್ನು ದಾಖಲಿಸಿ.
- ಮರುಪಾವತಿಸಬಹುದಾದ ಭದ್ರತಾ ಮೊತ್ತ 5,000 ರು. ಪಾವತಿಸಿ
ಶುಲ್ಕ
- 2 ಗಂಟೆಗಳಿಗೆ ರು. 200
- 4 ಗಂಟೆಗಳಿಗೆ ರು. 300
- 6 ಗಂಟೆಗಳಿಗೆ ರು. 400
- 12 ಗಂಟೆಗಳಿಗೆ ರು. 500
- 24 ಗಂಟೆಗಳಿಗೆ ರು. 800
ಇವನ್ನೂ ಓದಿ: ಬೆಂಗಳೂರಿನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಹೀಂದ್ರ 'ಇ2ಒ'

ದಿನಕ್ಕೆ ರು. 800
ಮೇಲೆ ತಿಳಿಸಲಾದ ಎಲ್ಲ ಮೂರು ನಗರಗಳು ಐದು ಮಹೀಂದ್ರ ರೇವಾ ಎಲೆಕ್ಟ್ರಿಕ್ ರೇವಾ ಕಾರುಗಳನ್ನು ಪಡೆಯಲಿದೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಇತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ ಸಿಇಒ ಚೇತನ್ ಮೈನಿ, ಕಾರ್‌ಜೋನ್‌ರೆಂಟ್ ಜತೆ ಸೇರಿಕೊಂಡು, ಹೊಸ ಸೇವೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈ ಮೂಲಕ ಮಹೀಂದ್ರ ವಿದ್ಯುತ್ ಚಾಲಿತ ಕಾರುಗಳ ಕೊನೆಗೊಳ್ಳದ ಪ್ರಯೋಜನಗಳನ್ನು ನಿಕಟವಾಗಿ ಅರಿಯಬಹುದಾಗಿದೆ ಎಂದಿದ್ದಾರೆ.

ಮಹೀಂದ್ರ ಇ2ಒ ಮಹೀಂದ್ರ ಸಮೂಹದ ಫ್ಯೂಚರ್ ಆಫ್ ಮೊಬಿಲಿಟಿ ಧ್ಯೇಯದ ಭಾಗವಾಗಿದ್ದು, 'ಐದು ಸಿ' ಗಳ ಸಿದ್ಧಾಂತವನ್ನು (ಕ್ಲೀನ್, ಕನ್‌ವಿನಿಯಂಟ್, ಕೆನೆಕ್ಟಡ್, ಕ್ಲೆವರ್ ಮತ್ತು ಕಾಸ್ಟ್ ಎಫೆಕ್ಟಿವ್) ಆಧರಿಸಿದೆ.

ಭವಿಷ್ಯದ ಸಂಚಾರ ವ್ಯವಸ್ಥೆಗೆ ಮಹೀಂದ್ರ ಇ2ಒ ಉತ್ತಮ ಉದಾಹರಣೆಯಾಗಿದ್ದು, ಪೂರ್ಣ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಈ ಎಲೆಕ್ಟ್ರಿಕ್ ಕಾರು 100 ಕೀ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲಕರವಾಗಲಿದೆ.

ಎಲ್ಲ ಮನೆಗಳಲ್ಲಿ ಲಭ್ಯವಿರುವ 15ಎ ಸಾಕೆಟ್ ಮೂಲಕವು ಮಹೀಂದ್ರ ಇ2ಒ ಚಾರ್ಜ್ ಮಾಡಬಹುದು. ವಿಶೇಷವಾದ ಕಾರು ತಂತ್ರಜ್ಞಾನವು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕವು (ಎಸಿ ಚಾಲನೆ, ಲಾಕ್ ಮಾಡುವುದು, ಅನ್‌ಲಾಕ್ ಮಾಡುವುದು ಇತ್ಯಾದಿ) ನಿರ್ವಹಣೆ ಮಾಡಬಹುದು. ರೇವಾ REVive ಪ್ರಥಮ ದೂರ ನಿಯಂತ್ರಿತ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಅನ್ನು ಹೊಂದಿದೆ.

ಸಮಕಾಲೀನ ಪರಿಸ್ಥಿತಿಯಲ್ಲಿ ಇಂಧನ ಬೆಲೆಯು ದಿನದಿಂದ ದಿನಕ್ಕೆ ವರ್ಧಿಸುತ್ತಿರುವಂತೆಯೇ ಗ್ರಾಹಕರಿಗೆ ಇ2ಒ ಉತ್ತಮ ಆಯ್ಕೆಯಾಗಿರಲಿದೆ. ಇದು ಗ್ರಾಹಕರಿಗೆ ಶುದ್ಧ, ಸ್ಮಾರ್ಟ್ ಹಾಗೂ ಆರ್ಥಿಕವಾಗಿಯೂ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ.

ಮಹೀಂದ್ರ ಇ2ಒ ಮುಂದಿನ ಜನಾಂಗದ ಇಥಿಯಂ ಇಯಾನ್ ಬ್ಯಾಟರಿಗಳಿಂದ ನಿಯಂತ್ರಿಸಲ್ಪಟ್ಟಿದ್ದು, 3 ಫೇಸ್ ಇಂಡಕ್ಷನ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ.

ಮಹೀಂದ್ರ ಇ2ಒ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ನಗರ ಪ್ರದೇಶದ ಚಾಲನೆಯನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ. ಅಂದರೆ ಟ್ರಾಫಿಕ್‌ಗಳಲ್ಲಿ ಪದೇ ಪದೇ ಗೇರ್ ಬದಲಾಯಿಸುವ ಅಗತ್ಯವಿರುವುದಿಲ್ಲ.

ಇನ್ನು ಕಾರಿನ ಒಳಭಾಗದ ಬಗ್ಗೆ ಚರ್ಚಿಸುವುದಾದರೆ ನಾಲ್ಕು ಜನರಿಗೆ ಕುಳಿತುಕೊಳ್ಳಬಹುದಾದ ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ.

ನಿಮ್ಮ ಮನೆಯಲ್ಲಿ ಲಭ್ಯವಿರುವ 15A ಪವರ್ ಸೊಕೆಟ್‌ನಿಂದ ಚಾರ್ಜ್ ಮಾಡಿಸಬಹುದಾಗಿದೆ. ಕೇವಲ ಐದು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಿಸಬಹುದಾಗಿದೆ. ಈ ಮೂಲಕ 100 ಕೀ.ಮೀ. ತನಕ ಸಂಚರಿಸಲು ನೆರವಾಗಲಿದೆ. ಇದು ನಿಮ್ಮ ದೈನಂದಿನ ಸಂಚಾರಕ್ಕೆ ಸಾಕಾಷ್ಟಾಗಿದೆ.


Click it and Unblock the Notifications








